681 ಕೋಟಿ ರೂ. ಬೆಳೆ ಪರಿಹಾರ ಬಿಡುಗಡೆ; 10 ಲಕ್ಷ ಜನರ ಖಾತೆಗೆ ಹಣ ವರ್ಗಾವಣೆ; Minister R Ashok

ಈಗಾಗಲೇ ರೈತರ ಖಾತೆಗೆ ಜಮಾ ಕೂಡ ಆಗಿದೆ. ಕಾಂಗ್ರೆಸ್ ಸುಳ್ಳು ಹೇಳ್ತಾ ಇದೆ. ಒಬ್ಬರಿಗೆ ಅಲ್ಲ ನಾವು 106237 ಜನರಿಗೆ ಹೋಗಿದೆ. ನಮಗೂ ಕಾಂಗ್ರೆಸ್ ಗೂ ಇರೋ ವ್ಯತ್ಯಾಸ ಇದೆ. ಒಬ್ಬರಿಗೆ ಅಲ್ಲ 10 ಲಕ್ಷ ಜನರಿಗೆ ಪರಿಹಾರ ನೀಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಅಶೋಕ್

ಅಶೋಕ್

 • Share this:
  ಬೆಂಗಳೂರು: ನಿಂತಿರುವವರು ಎಲ್ಲ ಪಕ್ಷದ ಮತ ಕೇಳುತ್ತೇನೆ ಅಂತ ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ಅವರ ಮತಗಳ‌ ಮೇಲೆ ಅವರಿಗೆ ನಂಬಿಕೆ ಇಲ್ಲ ಅಂತಾಯ್ತು. ನಮಗೆ ಪರಿಷತ್ ನಲ್ಲಿ ಬಹುಮತ ಇರಲಿಲ್ಲ. ಈ ಚುನಾವಣೆಯಲ್ಲಿ ನಮಗೆ ಬಹುಮತ ಸಿಗುತ್ತೆ. ಆ ರೀತಿಯ ತಂತ್ರಗಾರಿಕೆ ‌ನಾವು‌ ಮಾಡಿದ್ದೇವೆ. ಗೆಲುವು ನಮ್ಮದೆ ಕಾಂಗ್ರೆಸ್ ಚುನಾವಣೆ ‌ಮುಂಚೆ ಸೋಲೊಪ್ಪಿಕೊಂಡಿದೆ ಎಂದು ಡಿಕೆಶಿಗೆ ಸಚಿವ ಆರ್ ಅಶೋಕ್ ಅವರು ತಿರುಗೇಟು ನೀಡಿದರು.

  ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್ ಅವರು, ಬೆಳಗಾವಿ ಅಧಿವೇಶನ ಒಂದು ವಾರಕ್ಕೆ ಮೊಟಕು ವಿಚಾರವಾಗಿ ಪ್ರತಿಕ್ರಿಯಿಸಿದರು. ನಿಗದಿಯಂತೆ ಎರಡು ವಾರ ಅಧಿವೇಶನ ನಡೆಯುತ್ತೆ. ಒಂದು‌ ವಾರಕ್ಕೆ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ಎರಡು ಡೋಸ್ ‌ಲಸಿಕೆ ಕಡ್ಡಾಯ ಮಾಡಿದ್ದೇವೆ ಎಂದರು. ನೆರೆ ಹಾನಿ ಪರಿಹಾರವಾಗಿ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರತಿಭಟನೆ ವಿಷಯವಾಗಿ ಮಾತನಾಡಿ, ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಹಾಗಾಗಿ ಪ್ರತಿಭಟನೆ ‌ಮಾಡ್ತಾರೆ. ಬೆಳೆ ಪರಿಹಾರಕ್ಕೆ ಕರ್ನಾಟಕ ಇತಿಹಾದಲ್ಲಿ 600 ಕೋಟಿ‌ ರೂ. ನೀಡಿದ್ದೇವೆ. ಕೇವಲ ಇಪ್ಪತ್ತು ದಿನದಲ್ಲಿ ಐನೂರು ಕೋಟಿ ರೂಪಾಯಿ ನೀಡಿದ್ದೇವೆ. ರೈತರಿಗೆ ಬ್ಯಾಂಕ್ ಅಕೌಂಟ್​ಗೆ ಹಣ ಹಾಕಿದ್ದೇವೆ. ಭ್ರಷ್ಟಾಚಾರ ಆಗದ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.

  ಎರಡು ವಾರ ಬೆಳಗಾವಿ ಅಧಿವೇಶನ

  ನಾವು ಎರಡು ವಾರ ಅಧಿವೇಶನ ಮಾಡ್ತಾ ಇದ್ದೇವೆ. ಪೂರ್ಣ ಪ್ರಮಾಣದಲ್ಲಿ ಅಧಿವೇಶನ  ನಡೆಯುತ್ತೆ. ಪ್ರತಿಭಟನೆ ಮಾಡಬೇಕು ಅಂತಾನೆ ಮಾಡ್ತೀದೆ ಅಷ್ಟೇ. ಬೆಳೆ ಪರಿಹಾರ ನೀಡಲು ಕಾಂಗ್ರೆಸ್ ಸರ್ಕಾರ ಮೂರು ತಿಂಗಳು ಆರು ತಿಂಗಳು ತೆಗೆದುಕೊಂಡಿದೆ. ಆದರೆ ನಾವು 600 ಕೋಟಿಗೂ ಅಧಿಕ ಹಣ ನೀಡಿದ್ದೇವೆ. ಕೇವಲ 21 ದಿನದಲ್ಲಿ 10 ಲಕ್ಷ ರೈತರಿಗೆ ಪರಿಹಾರ ಸಿಕ್ಕಿದೆ. ಅವರ ಖಾತೆಗೆ ನೇರವಾಗಿ ಹೋಗ್ತಾ ಇದೆ. ಕಾಂಗ್ರೆಸ್ ಇದ್ದಾಗ ಭ್ರಷ್ಟಾಚಾರ ಇರ್ತಿತ್ತು. ರೈತರ ಬೆಳೆ ಪರಿಹಾರ ನೇರವಾಗಿ ನೀಡ್ತಾ ಇದೆ. ಯಾವುದೇ ಭ್ರಷ್ಟಾಚಾರ ಇದರಲ್ಲಿ ಇಲ್ಲ. 681 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಈಗಾಗಲೇ ರೈತರ ಖಾತೆಗೆ ಜಮಾ ಕೂಡ ಆಗಿದೆ. ಕಾಂಗ್ರೆಸ್ ಸುಳ್ಳು ಹೇಳ್ತಾ ಇದೆ. ಒಬ್ಬರಿಗೆ ಅಲ್ಲ ನಾವು 106237 ಜನರಿಗೆ ಹೋಗಿದೆ. ನಮಗೂ ಕಾಂಗ್ರೆಸ್ ಗೂ ಇರೋ ವ್ಯತ್ಯಾಸ ಇದೆ. ಒಬ್ಬರಿಗೆ ಅಲ್ಲ 10 ಲಕ್ಷ ಜನರಿಗೆ ಪರಿಹಾರ ನೀಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

  ಮತಾಂತರ ನಿಷೇಧ ಕಾಯ್ದೆ ಅತ್ಯವಶ್ಯಕ; ಆರ್ ಅಶೋಕ್

  ಮತಾಂತರ ನಿಷೇಧ ಕಾಯ್ದೆ ವಿಷಯವಾಗಿ ಮಾತನಾಡಿ, ಕಾಂಗ್ರೆಸ್ ಬಿಲ್ ಗೆ ವಿರೋಧಿಸುತ್ತಿದೆ. ಕಾಂಗ್ರೆಸ್ ಗೆ ದೇಶದ ಬಗ್ಗೆ ನಾಡಿನ ಬಗ್ಗೆ ಪ್ರೀತಿ ಇಲ್ಲ. ಬ್ರಿಟಿಷ್ ಸ್ಥಾಪನೆ ಮಾಡಿದ ಕಾಂಗ್ರೆಸ್ ನಲ್ಲಿ ಅವರು ಕಂಟಿನ್ಯೂ ಮಾಡ್ತಾ ಇದ್ದಾರೆ. ಮಹಾತ್ಮ ಗಾಂಧಿಯೇ ಹೇಳಿದ್ದರು, ಕಾಂಗ್ರೆಸ್ ನ ಡಿಸಾಲ್ಡ್ ಮಾಡಿ ಅಂತ. ಇಷ್ಟಾದರೂ ಇವರಿಗೆ ಬುದ್ದಿ ಬಂದಿಲ್ಲ. ವೋಟ್ ಬ್ಯಾಂಕಿಗೋಸ್ಕರ ಮಾಡ್ತಾ ಇದ್ದಾರೆ. ದೇಶ ಉಳಿಸಬೇಕು ಅಂತ ಅವರಿಗೆ ಇಲ್ಲ. ಅನೇಕ ಮಠಾಧೀಶರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಕೆಲವು ಲಿಂಗಾಯತರು ಕೂಡ ಮತಾಂತರ ಆಗಿದ್ದಾರೆ ಎಂದು ಹೇಳಿದ್ದಾರೆ. ಬೋವಿ ಸಮಾಜದ ಸ್ವಾಮೀಜಿ ಕೂಡ ಧ್ವನಿ ಎತ್ತಿದ್ದಾರೆ. ಹಣದ ಆಸೆಗೆ ಆಮಿಷಕ್ಕೆ ಒಳಗಾಗಿ ಮತಾಂತರ ಆಗ್ತಾ ಇದ್ದಾರೆ ಅಂತ. ಇದು ಕಾನೂನಿನಲ್ಲಿ ಅಪರಾಧ. ಸ್ವಯಂ ಪ್ರೇರಿತರಾಗಿ ಒಂದು ಪರ್ಸೆಂಟ್ ಜನ ಮತಾಂತರ ಆಗ್ತಾ ಇದ್ದಾರೆ ಅಷ್ಟೇ. ಉಳಿದವರು ಆಮಿಷಕ್ಕೆ ಒಳಗಾಗಿ ಮತಾಂತರ ಆಗ್ತಾ ಇದ್ದಾರೆ. ಇದನ್ನು ಮಟ್ಟ ಹಾಕಬೇಕು. ಅಂತಹ ವ್ಯಕ್ತಿಗಳನ್ನು ಗುರುತು ಮಾಡಬೇಕು ಎಂದರು.

  ಇದನ್ನು ಓದಿ: Karnataka MLC Election 2021 LIVE: ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ, ಸತೀಶ್ ಜಾರಕಿಹೊಳಿ ಮುಖಾಮುಖಿ

  ಜಾತೀ ಸಮೀಕರಣ ಮಾಡಿ ಒಡೆದು ಹಾಕುವುದನ್ನು ಮಾಡ್ತಾ ಇದ್ದಾರೆ. ಬೇರೆ ಸಮುದಾಯದವರು ಈ ಬಗ್ಗೆ ಮಾತಾಡ್ತಾ ಇದ್ದಾರೆ. ತಪ್ಪು ಮಾಡಿದವರಿಗೆ ಮಾತ್ರ ಇದು ಅನ್ವಯ ಆಗುತ್ತೆ. ಯಾರು ಮಾಡ್ತಾ ಇದ್ದಾರೋ ಅವರಿಗೆ ಅನ್ವಯ ಅಷ್ಟೇ. ತಪ್ಪು ಮಾಡಿದ್ರೆ ಭಯ ಬೀಳಿ. ತಪ್ಪು ಮಾಡದೇ ಇದ್ದರೆ ಭಯ ಯಾಕೆ? ಎಂದು ಪ್ರಶ್ನೆ ಮಾಡಿದರು.
  Published by:HR Ramesh
  First published: