15 ಕ್ಷೇತ್ರಗಳಲ್ಲಿ ಶೇ.62.50 ರಷ್ಟು ಮತದಾನ; ಚಿಕ್ಕಬಳ್ಳಾಪುರದಲ್ಲಿ ಅಧಿಕ, ಕೆ.ಆರ್.ಪುರಂನಲ್ಲಿ ಅತಿ ಕಡಿಮೆ ಮತ ಚಲಾವಣೆ

ಅಥಣಿ, ಯಲ್ಲಾಪುರ, ಹಿರೇಕೆರೂರು, ಚಿಕ್ಕಬಳ್ಳಾಪುರ, ಹೊಸಕೋಟೆ, ಕೆ.ಆರ್.ಪೇಟೆ ಹಾಗೂ ಹುಣಸೂರಿನಲ್ಲಿ ಶೇ.70ಕ್ಕಿಂತ ಅಧಿಕ ಮತದಾನವಾಗಿದೆ. ಉಳಿದಂತೆ ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಮತದಾನವಾಗಿಲ್ಲ. 

HR Ramesh | news18-kannada
Updated:December 5, 2019, 8:51 PM IST
15 ಕ್ಷೇತ್ರಗಳಲ್ಲಿ ಶೇ.62.50 ರಷ್ಟು ಮತದಾನ; ಚಿಕ್ಕಬಳ್ಳಾಪುರದಲ್ಲಿ ಅಧಿಕ, ಕೆ.ಆರ್.ಪುರಂನಲ್ಲಿ ಅತಿ ಕಡಿಮೆ ಮತ ಚಲಾವಣೆ
ಪ್ರಾತಿನಿಧಿಕ ಚಿತ್ರ
 • Share this:
ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನವಾಗಿದೆ. ಈ ಉಪಚುನಾವಣೆ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ನಿಂತಿರುವುದರಿಂದ ಬಹಳ ಮಹತ್ವದ್ದಾಗಿದೆ. ಗುರುವಾರ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನಕ್ಕೆ ಮತದಾರರು ಹೆಚ್ಚಾಗಿ ಆಸಕ್ತಿ ತೋರಿಸಿದಂತಿಲ್ಲ. ಅದರಲ್ಲೂ ಬೆಂಗಳೂರಿನ ನಾಲ್ಕು ಕ್ಷೇತ್ರಗಳಂತೂ ತೀರಾ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಸಂಜೆ ಆರು ಗಂಟೆಗೆ ಮತದಾನ ಮುಕ್ತಾಯಗೊಂಡಿದ್ದು, ಒಟ್ಟಾರೆ 15 ಕ್ಷೇತ್ರಗಳಲ್ಲಿ (ಐದು ಗಂಟೆಯ ಮಾಹಿತಿ ಪ್ರಕಾರ)  ಶೇ.62.50ರಷ್ಟು ಮತದಾನವಾಗಿದೆ.

ಅಥಣಿ, ಯಲ್ಲಾಪುರ, ಹಿರೇಕೆರೂರು, ಚಿಕ್ಕಬಳ್ಳಾಪುರ, ಹೊಸಕೋಟೆ, ಕೆ.ಆರ್.ಪೇಟೆ ಹಾಗೂ ಹುಣಸೂರಿನಲ್ಲಿ ಶೇ.70ಕ್ಕಿಂತ ಅಧಿಕ ಮತದಾನವಾಗಿದೆ. ಉಳಿದಂತೆ ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಮತದಾನವಾಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ಶೇ.86.04 ಅತ್ಯಧಿಕ ಪ್ರಮಾಣದಲ್ಲಿ ಮತದಾನವಾಗಿದ್ದರೆ, ಕೆ.ಆರ್.ಪುರಂನಲ್ಲಿ ಶೇ.37.05 ಕಡಿಮೆ ಪ್ರಮಾಣದ ಮತದಾನವಾಗಿದೆ.

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? (ಸಂಜೆ 5 ಗಂಟೆವರೆಗೆ)


 1. ಅಥಣಿ- ಶೇ.75.23

 2. ಕಾಗವಾಡ- ಶೇ.76.27

 3. ಗೋಕಾಕ್- ಶೇ.73.08
 4. ಯಲ್ಲಾಪುರ- ಶೇ.77.52

 5. ಹಿರೇಕೆರೂರು- ಶೇ.78.63

 6. ರಾಣೇಬೆನ್ನೂರು- ಶೇ.73.53

 7. ವಿಜಯನಗರ- ಶೇ.64.95

 8. ಚಿಕ್ಕಬಳ್ಳಾಪುರ- ಶೇ.86.04

 9. ಕೆ.ಆರ್ ಪುರಂ- ಶೇ.37.05

 10. ಯಶವಂತಪುರ- ಶೇ.48.34

 11. ಮಹಾಲಕ್ಷ್ಮಿ ಲೇಔಟ್- ಶೇ.50.92

 12. ಶಿವಾಜಿನಗರ- ಶೇ.41.13

 13. ಹೊಸಕೋಟೆ- ಶೇ.90.44

 14. ಕೆ.ಆರ್ ಪೇಟೆ- ಶೇ.80.00

 15. ಹುಣಸೂರು- ಶೇ.80.62


ಇದನ್ನು ಓದಿ: Karnataka By-Election Voting Live: ಕರ್ನಾಟಕ ಉಪಚುನಾವಣೆ ಮತದಾನ ಅಂತ್ಯ; ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆಯಲ್ಲಿ ಭದ್ರ
First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading