HOME » NEWS » State » TOTAL 62 PERCENT CORONAVIRUS VACCINATION ACROSS THE STATE SAYS HEALTH MINISTER K SUDHAKAR RHHSN

ರಾಜ್ಯದಲ್ಲಿ ಶೇ.62 ಲಸಿಕೆ ವಿತರಣೆ; ಕೊಡಗು ಜಿಲ್ಲೆಯಲ್ಲಿ ಅತಿಹೆಚ್ಚು, ದಕ್ಷಿಣ ಕನ್ನಡ ಕೊನೆ; ಸಚಿವ ಸುಧಾಕರ್

ಮೊದಲ ದಿನ ಆದ್ದರಿಂದ ಕೋ ಮಾರ್ಬಿಡಿಟಿಸ್ ಇದ್ದವರಿಗೆ ಲಸಿಕೆ ನೀಡಿಲ್ಲ. ಮಣಿಪಾಲ್ ಆಸ್ಪತ್ರೆಯಲ್ಲಿ ನಾಳೆಯಿಂದ ಲಸಿಕೆ ಆರಂಭವಾಗಲಿದೆ. ಒಂದೇ ದಿನದಲ್ಲಿ 4 ಸಾವಿರ ಜನರಿಗೆ ಲಸಿಕೆ ಕೊಡೋದಾಗಿ ಮಣಿಪಾಲ್ ಆಸ್ಪತ್ರೆ ತಿಳಿಸಿದೆ. ಆಸ್ಪತ್ರೆಗಳೇ ಉತ್ಸಾಹದಿಂದ ಲಸಿಕೆ ಪಡೆಯಲು ಮುಂದೆ ಬಂದಿವೆ ಎಂದು ಸಚಿವ ಸುಧಾಕರ್ ಹೇಳಿದರು.

news18-kannada
Updated:January 16, 2021, 8:16 PM IST
ರಾಜ್ಯದಲ್ಲಿ ಶೇ.62 ಲಸಿಕೆ ವಿತರಣೆ; ಕೊಡಗು ಜಿಲ್ಲೆಯಲ್ಲಿ ಅತಿಹೆಚ್ಚು, ದಕ್ಷಿಣ ಕನ್ನಡ ಕೊನೆ; ಸಚಿವ ಸುಧಾಕರ್
ಕೊರೋನಾ ಲಸಿಕೆ ಪಡೆಯುತ್ತಿರುವ ಫಲಾನುಭವಿ. ಸಚಿವ ಕೆ.ಸುಧಾಕರ್ ಇದ್ದಾರೆ.
  • Share this:
ಬೆಂಗಳೂರು; ಇಂದು ಐತಿಹಾಸಿಕ ದಿನ. ಕೋವಿಡ್​ನಿಂದ ತತ್ತರಿಸಿ ಹೋಗಿದ್ದ ಜನರಿಗೆ ತೃಪ್ತಿ ಮತ್ತು ಸಂತೋಷವಾಗಿದೆ. ಇದಕ್ಕೆ ಕಾರಣ ಪ್ರಧಾನಿ ಮೋದಿಯ ನಾಯಕತ್ವದಲ್ಲಿ ಲಸಿಕೆ ದಾಖಲೆ ಸಮಯದಲ್ಲಿ ತಯಾರಾಗಿ ನೀಡುತ್ತಿರುವುದು. ಲಸಿಕೆ ಹತ್ತು ತಿಂಗಳಲ್ಲಿ ಬಂದಿರೋದು ವಿಶೇಷ. ಇಡೀ ವಿಶ್ವದಲ್ಲೇ ಅತ್ಯಂತ ಅಗ್ಗದ ದರದಲ್ಲಿ 210 ರೂ.ಗೆ ಕೊಡುತ್ತಿರುವುದು ಮತ್ತೊಂದು ವಿಶೇಷ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಗ್ರೂಪ್ ಡಿ ನೌಕರರು ಮೊದಲನೇ ಫಲಾನುಭವಿಗಳಾಗಲಿ ಎನ್ನುವುದು ಪ್ರಧಾನಿ ಆಶಯ. ರಾಜ್ಯದಲ್ಲಿ ನಾಗರತ್ನ ಮೊದಲ ಫಲಾನುಭವಿ. ಇದು ನವಭಾರತದ ಆಲೋಚನೆ, ಕಲ್ಪನೆ. ಇಂದು 30 ಜಿಲ್ಲೆಯ 243 ಕೇಂದ್ರಗಳಲ್ಲಿ ಲಸಿಕೆ ನೀಡಲಾಗಿದೆ. ಕೆಲವು ಕಡೆ 11,30, 12ಗಂಟೆಗೆ ಶುರುವಾಗಿದೆ. ಇನ್ನು ಮುಂದೆ ಪ್ರತಿದಿನ 9ರಿಂದ 5 ಗಂಟೆಯವರೆಗೆ ಮಾಡ್ತೀವಿ. ಇಂದು ಶೇ.62 ಜನ ಲಸಿಕೆ ಪಡೆದಿದ್ದಾರೆ. 21,658 ಜನ ಲಸಿಕೆ ಪಡೆಯಲು ನಿಗದಿಯಾಗಿತ್ತು. 13,408 ಜನ ಲಸಿಕೆ ಪಡೆದಿದ್ದಾರೆ. ಎಲ್ಲೂ ಗಂಭೀರ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಕೆಲವರಿಗೆ ಸಣ್ಣ ಪ್ರಮಾಣದಲ್ಲಿ ಇಂಜೆಕ್ಷನ್ ಕೊಟ್ಟ ಸ್ಥಳದಲ್ಲಿ ನೋವು, ಊತ ಕಂಡುಬಂದಿದೆ. ಅದು ಚಿಕಿತ್ಸೆ ಇಲ್ಲದೆ ಗುಣವಾಗಿ ಮನೆಗೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದರು.

ಇಂದು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆ ನೀಡಲಾಗಿದೆ. ಸರ್ಕಾರಿ ವ್ಯವಸ್ಥೆಗಳಲ್ಲಿ ಸೋಮವಾರದಿಂದ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತೆ. ನಾಳೆ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಆರಂಭವಾಗಲಿದೆ. ಕೊಡಗಿ ಜಿಲ್ಲೆಯಲ್ಲಿ ಶೇ.84 ರಷ್ಟು ಲಸಿಕೆ ನೀಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಜನ ಲಸಿಕೆ ಪಡೆದ ಜಿಲ್ಲೆಯಾಗಿದೆ. ಉಳಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.80 ಲಸಿಕೆ ನೀಡಲಾಗಿದೆ. ದಕ್ಷಿಣ ಜಿಲ್ಲೆಯಲ್ಲಿ ಅತಿ ಕಡಿಮೆ ಲಸಿಕೆ ಹಾಕಲಾಗಿದೆ. ಇಲ್ಲಿ ಶೇ.37ರಷ್ಟು ಲಸಿಕೆ ಹಂಚಿಕೆ ನಡೆದಿದೆ. ಹೆಚ್ಚು ವಿದ್ಯಾವಂತರು ಇರುವ ಜಿಲ್ಲೆ ದಕ್ಷಿಣ ಕನ್ನಡ. ಇಲ್ಲಿ ಯಾಕೆ ಕಡಿಮೆಯಾಯಿತು ಎಂಬುದಕ್ಕೆ ಕಾರಣ ಗೊತ್ತಿಲ್ಲ ಎಂದು ಸಚಿವ ಸುಧಾಕರ್ ಹೇಳಿದರು.

ಇದನ್ನು ಓದಿ: ಬಕೆಟ್ ಹಿಡಿಯುವವರಿಗೆ ಸಚಿವ ಸ್ಥಾನ; ಮಡಿಕೇರಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ

7,43,000 ಜನರನ್ನು ಮೊದಲ ಹಂತದಲ್ಲಿ ಗುರುತಿಸಿದ್ದೇವೆ. ಈಗ ಬಂದಿರುವ 8 ಲಕ್ಷ ಡೋಸ್ ಲಸಿಕೆ ಅರ್ಧದಷ್ಟು ಜನರಿಗೆ ಆಗುತ್ತದೆ. ಆದಷ್ಟು ಬೇಗ ಅಗತ್ಯ ಪ್ರಮಾಣದ ಲಸಿಕೆ ಕಳಿಸಿಕೊಡುವುದಾಗಿ ತಿಳಿಸಿದ್ದಾರೆ. ಕೆ ಆರ್ ಪುರಂನಲ್ಲಿ ವೈದ್ಯರೇ ಕೋವಿಡ್ ನಿಂದ ಬಳಲಿದ್ದರು. ಪ್ಲಾಸ್ಮಾ ಕೂಡ ದಾನ ಮಾಡಿದ್ರು. ಅವರು ನನ್ನ ಎದುರೇ ಲಸಿಕೆ ಪಡೆದು ಖುಷಿಪಟ್ಟಿದ್ದಾರೆ. ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಈ ಬಗ್ಗೆ ನಿರಂತರ ಮಾಹಿತಿ ಪಡೆಯುತ್ತೇನೆ. ಆರೋಗ್ಯ ಇಲಾಖೆಯ ವೆಬ್ ಸೈಟ್ ನಲ್ಲಿ ಕಾಲಕಾಲಕ್ಕೆ ಮಾಹಿತಿ ನೀಡುತ್ತೇವೆ. ಸರ್ಕಾರಿ ಮಾಹಿತಿಯನ್ನು ಮಾತ್ರ ಜನಸಾಮಾನ್ಯರು ನಂಬಬೇಕು. ಉಳಿದಂತೆ ಸಾಮಾಜಿಕ ಜಾಲತಾಣದಲ್ಲಿ ಬರುವ ಸುಳ್ಳು ವಿಚಾರಗಳನ್ನು ನಂಬಬಾರದು, ನಂಬಿ ಹೆದರಬಾರದು ಎಂದು ಹೇಳಿದರು.

ಮೊದಲ ದಿನ ಆದ್ದರಿಂದ ಕೋ ಮಾರ್ಬಿಡಿಟಿಸ್ ಇದ್ದವರಿಗೆ ಲಸಿಕೆ ನೀಡಿಲ್ಲ. ಮಣಿಪಾಲ್ ಆಸ್ಪತ್ರೆಯಲ್ಲಿ ನಾಳೆಯಿಂದ ಲಸಿಕೆ ಆರಂಭವಾಗಲಿದೆ. ಒಂದೇ ದಿನದಲ್ಲಿ 4 ಸಾವಿರ ಜನರಿಗೆ ಲಸಿಕೆ ಕೊಡೋದಾಗಿ ಮಣಿಪಾಲ್ ಆಸ್ಪತ್ರೆ ತಿಳಿಸಿದೆ. ಆಸ್ಪತ್ರೆಗಳೇ ಉತ್ಸಾಹದಿಂದ ಲಸಿಕೆ ಪಡೆಯಲು ಮುಂದೆ ಬಂದಿವೆ ಎಂದು ಸಚಿವ ಸುಧಾಕರ್ ಹೇಳಿದರು.
Published by: HR Ramesh
First published: January 16, 2021, 8:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories