HOME » NEWS » State » TORTURE FOR DAUGHTER WHO QUESTIONED MOTHERS IMMORAL RELATIONSHIP 13 YEAR OLD GIRL STEPS INTO THE STATION MAK

Crime News: ತಾಯಿಯ ಅನೈತಿಕ ಸಂಬಂಧ ಪ್ರಶ್ನಿಸಿದ ಮಗಳಿಗೆ ಟಾರ್ಚರ್; ಠಾಣೆ ಮೆಟ್ಟಿಲೇರಿದ 13 ವರ್ಷದ ಬಾಲಕಿ!

ಗಂಡ ಮನೆ ಬಿಟ್ಟು ಹೋಗುತ್ತಿದ್ದಂತೆ ರವಿ ಯಾವಾಗಲೂ ಕಾವ್ಯಾಳ ಮನೆಯಲ್ಲೇ ಇರುತ್ತಿದ್ದ. ಆತ ಮನೆಯಲ್ಲಿಲ್ಲದಾಗ ಕಾವ್ಯಾ ಸದಾ ಆತನಿಗೆ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದಳು. ತಾಯಿಯ ಈ ವರ್ತನೆಯಿಂದ ಮಕ್ಕಳು ರೋಸಿ ಹೋಗಿದ್ದರು.

news18-kannada
Updated:April 18, 2021, 6:55 PM IST
Crime News: ತಾಯಿಯ ಅನೈತಿಕ ಸಂಬಂಧ ಪ್ರಶ್ನಿಸಿದ ಮಗಳಿಗೆ ಟಾರ್ಚರ್; ಠಾಣೆ ಮೆಟ್ಟಿಲೇರಿದ 13 ವರ್ಷದ ಬಾಲಕಿ!
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು: ಪರ ಪುರುಷನ ಮೋಹಕ್ಕೆ ಬಿದ್ದ ಹೆಂಗಸು ತನ್ನ ಇಬ್ಬರು ಹೆಣ್ಣು ಮಕ್ಕಳ ಪಾಲಿಗೆ ರಾಕ್ಷಸಿಯಾಗಿದ್ದಾಳೆ. ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಹೆತ್ತ ತಾಯಿಯೇ ತನ್ನ ಹೆಣ್ಣು ಮಕ್ಕಳನ್ನು ನಿಂದಿಸಿ-ಹೊಡೆದು ಕಾಟ ಕೊಟ್ಟಿರುವ ಘಟನೆ ನಗರದ ಕೆಂಚೇನಹಳ್ಳಿಯಲ್ಲಿ ನಡೆದಿದೆ. ತಾಯಿಯ ಟಾರ್ಚರ್ ತಾಳಲಾರದೆ 13 ವರ್ಷದ ಮಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ತನಗೂ ಹಾಗೂ ತನ್ನ 9 ವರ್ಷದ ತಂಗಿಗೆ ರಕ್ಷಣೆ ಕೊಡಿ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪೊಲೀಸರ ಎದುರು ಕಣ್ಣೀರಾಕಿದ್ದಾರೆ.

ಕೆಂಚೇನಹಳ್ಳಿಯಲ್ಲಿ ತಾಯಿ ಕಾವ್ಯಾಶ್ರೀ ಜೊತೆ ಇಬ್ಬರು ಮಕ್ಕಳ ವಾಸಿಸುತ್ತಿದ್ದರು. 6 ತಿಂಗಳಿಂದ ಪತಿ ಬೇರೆಯಾಗಿ ವಾಸಿಸುತ್ತಿದ್ದರು. ಇದಕ್ಕೆ ಕಾರಣವಾಗಿದ್ದು ಕಾವ್ಯಾಳ ಅನೈತಿಕ ಸಂಬಂಧ. ಚನ್ನಾಗಿದ್ದ ಕುಟುಂಬಕ್ಕೆ ವಿಲನ್ ಆಗಿ ಎಂಟ್ರಿ ಕೊಟ್ಟವರು ರವಿ ಎಂಬಾತ. ಈತನೊಂದಿಗೆ ಕಾವ್ಯಾಳ ಸಲುಗೆ ಬೆಳೆದಂತೆಲ್ಲಾ ಗಂಡ-ಹೆಂಡತಿ ಮಧ್ಯೆ ಜಗಳ ಹೆಚ್ಚಾಗ ತೊಡಗಿತು. ಕೊನೆಗೊಂದು ದಿನ ರವಿ ಜೊತೆ ಕಾವ್ಯಾ ಅನೈತಿಕ ಸಂಬಂಧ ಹೊಂದಿರುವ ಗೊತ್ತಾದ ಬಳಿಕ ಪತಿ ಮನೆ ತೊರೆದಿದ್ದ. ತಂದೆ-ತಾಯಿ ಬೇರೆಯಾಗಿದ್ದರಿಂದ ಇಬ್ಬರು ಹೆಣ್ಣು ಮಕ್ಕಳು ತುಂಬಾನೇ ನೊಂದಿದ್ದರು.

ಗಂಡ ಮನೆ ಬಿಟ್ಟು ಹೋಗುತ್ತಿದ್ದಂತೆ ರವಿ ಯಾವಾಗಲೂ ಕಾವ್ಯಾಳ ಮನೆಯಲ್ಲೇ ಇರುತ್ತಿದ್ದ. ಆತ ಮನೆಯಲ್ಲಿಲ್ಲದಾಗ ಕಾವ್ಯಾ ಸದಾ ಆತನಿಗೆ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದಳು. ತಾಯಿಯ ಈ ವರ್ತನೆಯಿಂದ ಮಕ್ಕಳು ರೋಸಿ ಹೋಗಿದ್ದರು. ಈ ಬಗ್ಗೆ ದೊಡ್ಡ ಮಗಳು ತಾಯಿಯನ್ನು ಪ್ರಶ್ನಿಸಿದ್ದಾಳೆ. ರವಿ ಮನೆಗೆ ಏಕೆ ಬರುತ್ತಾನೆ? ಆತ ಬರುವುದು ನಮಗೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ತಾಯಿ ಕಾವ್ಯಾ ಕರುಣೆಯಿಲ್ಲದೇ ಹೆತ್ತ ಮಗಳ ಮೇಲೆಯೇ ಹಲ್ಲೆ ಮಾಡಿದ್ದಾಳೆ. ಇಬ್ಬರು ಮಕ್ಕಳ ಕೈ-ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಹಲ್ಲೆ ಮಾಡಿದ್ದಾಳೆ.

ಇದನ್ನೂ ಓದಿ: CoronaVirus: ಕೊರೋನಾ ಎರಡನೇ ಅಲೆಗೆ ತತ್ತರಿಸಿದ್ದ ದೇಶಗಳಿಂದ ಭಾರತ ಸರ್ಕಾರ ಪಾಠ ಕಲಿಯಲಿಲ್ಲ; ಛತ್ತೀಸ್​​ಗಢ ಸಿಎಂ ಬೇಸರ!

ಅಮ್ಮ ಎನಿಸಿಕೊಂಡವಳೇ ರಾಕ್ಷಸಿಯಂತೆ ವರ್ತಿಸಿದ್ದರಿಂದ ನೊಂದ ಇಬ್ಬರು ಹೆಣ್ಣು ಮಕ್ಕಳು ತಂದೆಗೆ ಕರೆ ಮಾಡಿದ್ದಾರೆ. ನಮ್ಮನ್ನು ನಿನ್ನೊಂದಿಗೆ ಕರೆದುಕೊಂಡು ಹೋಗಿ, ಇಲ್ಲವೇ ನಾವು ರೈಲ್ವೆ ಹಳಿಗೆ ತಲೆ ಕೊಡುತ್ತೇವೆ ಎಂದು ತಂದೆಯ ಬಳಿ ಗೊಗರೆದಿದ್ದಾರೆ. ಪತ್ನಿಯ ಕೃತ್ಯದಿಂದ ಬೇಸತ್ತಿದ್ದ ಪತಿಯೂ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿ ಚೇತರಿಸಿಕೊಳ್ಳುತ್ತಿದ್ದರು. ಹೀಗಾಗಿ ಮಕ್ಕಳನ್ನು ಕರೆದೊಯ್ದಿರಲಿಲ್ಲ.
Youtube Video

ನಿತ್ಯ ಮನೆಯಲ್ಲಿ ನರಕ ಅನುಭವಿಸುತ್ತಿದ್ದ ಹೆಣ್ಣು ಮಕ್ಕಳು ಕೊನೆಗೊಂದು ದಿನ ಪೊಲೀಸರ ಮೊರೆ ಹೋಗಿದ್ದಾರೆ. ತಂಗಿಯೊಂದಿಗೆ ಠಾಣೆಗೆ ತೆರಳಿದ 13 ವರ್ಷದ ಬಾಲಕಿ ಪೊಲೀಸರಿಗೆ ಎಲ್ಲವನ್ನು ವಿವರಿಸಿದ್ದಾಳೆ. ಕೂಡಲೇ ತಂದೆಯನ್ನು ಠಾಣೆಗೆ ಕರೆಸಿದ ಪೊಲೀಸರು ಮಕ್ಕಳನ್ನು ತಂದೆಯೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಮಕ್ಕಳಿಗೇ ಟಾರ್ಚರ್ ಕೊಟ್ಟ ಪತ್ನಿಯ ವಿರುದ್ಧ ಪೊಲೀಸ್ ಕಮಿಷನರ್ ಕಚೇರಿಗೆ ಪತಿ ದೂರು ನೀಡಿದ್ದಾರೆ.
Published by: MAshok Kumar
First published: April 18, 2021, 6:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories