ಲೋಕಸಭಾ ಚುನಾವಣೆ 2019: ರಾಜ್ಯದ 14 ಕ್ಷೇತ್ರಗಳ ಪೈಕಿ ಟಾಪ್ 5 ಜಿದ್ದಾಜಿದ್ದಿ ಕಣದ ಮಾಹಿತಿ ಇಲ್ಲಿದೆ..!

Lok Sabha Elections 2019: ಎರಡನೇ ಹಂತದ ಚುನಾವಣೆ ನಡೆಯಲಿರುವ ರಾಜ್ಯದ 14 ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳು ಮಾತ್ರ ಕಳೆದ ಕೆಲ ತಿಂಗಳಿನಿಂದ ನಾನಾ ಕಾರಣಗಳಿಗಾಗಿ ಸುದ್ದಿ ಕೇಂದ್ರದಲ್ಲಿದೆ. ಈ ಕ್ಷೇತ್ರಗಳಲ್ಲಿ 241 ಜನ ಅಭ್ಯರ್ಥಿಗಳು ಕಣಗಳಿದ್ದರು ಸಹ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ನಡುವೆ ನೇರಾನೇರ ಫೈಟ್ ಇರುವುದು ಸ್ಪಷ್ಟ. ಈ ಪೈಕಿ ಟಾಪ್ 05 ಕ್ಷೇತ್ರಗಳ ಮಾಹಿತಿ ಇಲ್ಲಿದೆ.

MAshok Kumar | news18
Updated:April 22, 2019, 2:00 PM IST
ಲೋಕಸಭಾ ಚುನಾವಣೆ 2019: ರಾಜ್ಯದ 14 ಕ್ಷೇತ್ರಗಳ ಪೈಕಿ ಟಾಪ್ 5 ಜಿದ್ದಾಜಿದ್ದಿ ಕಣದ ಮಾಹಿತಿ ಇಲ್ಲಿದೆ..!
ದೇವೇಗೌಡ, ಸುಮಲತಾ, ನಿಖಿಲ್, ಪ್ರಕಾಶ್ ರೈ.
MAshok Kumar | news18
Updated: April 22, 2019, 2:00 PM IST
ದೇಶದಲ್ಲಿ ಎರಡನೇ ಹಂತದ ಮತದಾನ ಚಾಲ್ತಿಯಲ್ಲಿದ್ದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಬೆಂಗಳೂರು ಕೇಂದ್ರ, ಬೆಂ.ದಕ್ಷಣ, ಬೆಂ.ಉತ್ತರ, ಮಂಡ್ಯ, ಮೈಸೂರು-ಕೊಡಗು, ಹಾಸನ, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 14 ಕ್ಷೇತ್ರಗಳಿಗೆ ಇಂದು ಮತದಾನ ಆರಂಭಗೊಂಡಿದೆ.

ಈ 14 ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳು ಮಾತ್ರ ಕಳೆದ ಕೆಲ ತಿಂಗಳಿನಿಂದ ನಾನಾ ಕಾರಣಗಳಿಗಾಗಿ ಸುದ್ದಿ ಕೇಂದ್ರದಲ್ಲಿದೆ. ಈ ಕ್ಷೇತ್ರಗಳಲ್ಲಿ 241 ಜನ ಅಭ್ಯರ್ಥಿಗಳು ಕಣಗಳಿದ್ದರು ಸಹ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ನಡುವೆ ನೇರಾನೇರ ಫೈಟ್ ಇರುವುದು ಸ್ಪಷ್ಟ. ಈ ಪೈಕಿ ಟಾಪ್ 05 ಕ್ಷೇತ್ರಗಳ ಮಾಹಿತಿ ಇಲ್ಲಿದೆ.

1, ಸುಮಲತಾ v/s ನಿಖಿಲ್ ( ಮಂಡ್ಯ) :  ರಾಜ್ಯದ ಜಿದ್ದಾಜಿದ್ದಿ ಕಣಗಳಲ್ಲಿ ಮಂಡ್ಯ ಸಹ ಒಂದು. ಸುಮಲತಾ ಪಾಲಿಗೆ ಇದು ಸ್ವಾಭಿಮಾನದ ಕಣವಾದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಾಲಿಗೆ ಇದು ಪ್ರತಿಷ್ಠೆಯ ಕಣ. ಇದೇ ಕಾರಣಕ್ಕೆ ಈ ಕ್ಷೇತ್ರದ ಆಗುಹೋಗುಗಳು ಇಡೀ ರಾಜ್ಯವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಇದನ್ನೂ ಓದಿ : ಚುನಾವಣೆ 2019: ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮತದಾನ; ನೀವು ಗಮನಿಸಬೇಕಾದ ವಿಷಯಗಳು

ರಾಜ್ಯದಲ್ಲೆ ಅತಿಹೆಚ್ಚು ರಾಜಕೀಯ ಕುತೂಹಲಗಳನ್ನು ಹೊಂದಿರುವ ಹಾಗೂ ಅತಿಹೆಚ್ಚು ಮತದಾನವಾಗುವ ಈ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ಚಿತ್ರನಟ ನಿಖಿಲ್ ಸ್ಪರ್ಧಿಸುತ್ತಿದ್ದರೆ, ಸ್ವತಂತ್ರ್ಯ ಮಹಿಳಾ ಅಭ್ಯರ್ಥಿಯಾಗಿ ದಿವಂಗತ ಅಂಬರೀಶ್ ಪತ್ನಿ ಸುಮಲತಾ ಸ್ಪರ್ಧಿಸುತ್ತಿದ್ದಾರೆ. ​ರಾಜಕೀಯವಾಗಿ ಇಬ್ಬರೂ ಅನನುಭವಿಗಳು ಎಂಬುದು ಉಲ್ಲೇಖಾರ್ಹ.

ಕಳೆದ ಒಂದು ತಿಂಗಳಿನಿಂದ ಅಬ್ಬರದ ಚುನಾವಣಾ ಪ್ರಚಾರಕ್ಕೆ ಸಾಕ್ಷಿಯಾದ ಈ ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಇಬ್ಬರ ಹಣೆಬರಹವನ್ನು ಮತದಾರ ನಿರ್ಣಯಿಸಲಿದ್ದಾನೆ.
Loading...

2.ಪ್ರಕಾಶ್, ಪಿ.ಸಿ. ಮೋಹನ್, ರಿಜ್ವಾನ್ (ಬೆಂ.ಕೇಂದ್ರ ): ರಾಜ್ಯದಲ್ಲೇ ತ್ರಿಕೋನ  ಸ್ಪರ್ಧೆಗೆ ಸಾಕ್ಷಿಯಾಗಿರುವ ಏಕೈಕ ಕ್ಷೇತ್ರ ಎಂದರೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ. ಚಿತ್ರನಟ ಹಾಗೂ #JustAsking ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ರೈ ಪ್ರವೇಶದೊಂದಿಗೆ ಈ ಕಣ ಇಂದು ಇಡೀ ರಾಷ್ಟ್ರದ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ : lok sabha elections 2019: ಒಡಿಶಾದಲ್ಲಿ ನಕ್ಸಲರ ಅಟ್ಟಹಾಸ; ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ

ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ. ಮೋಹನ್ ಕಾಂಗ್ರೆಸ್​ನಿಂದ ರಿಜ್ವಾನ್ ಅರ್ಷದ್ ಸ್ಪರ್ಧಿಸುತ್ತಿದ್ದಾರೆ.  ಕಳೆದ ಎರಡು ತಿಂಗಳ ಅವಧಿಯಲ್ಲಿ ಕ್ಷೇತ್ರದ ಎಲ್ಲಾ ಸ್ಲಂ ಭಾಗಗಳಿಗೆ ತೆರಳಿರುವ ನಟ ಪ್ರಕಾಶ್ ರೈ ರಾಜಕಾರಣಿಗಳಿಗಿಂತ ತಾವೇನು ಕಮ್ಮಿ ಇಲ್ಲ ಎಂಬಂತೆ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಈ ಕ್ಷೇತ್ರ ಅನಿರೀಕ್ಷಿತ ಫಲಿತಾಂಶಕ್ಕೆ ಸಾಕ್ಷಿಯಾದರೂ ಅಚ್ಚರಿಪಡುವಂತಿಲ್ಲ.

3. ಎಚ್​.ಡಿ. ದೇವೇಗೌಡ v/s ಜಿ.ಎಸ್. ಬಸವರಾಜು (ತುಮಕೂರು) : ಮೊಮ್ಮೊಗ ಪ್ರಜ್ವಲ್​ ರೇವಣ್ಣನಿಗಾಗಿ ಹಾಸನ ಜಿಲ್ಲೆಯನ್ನು ಬಿಟ್ಟುಕೊಟ್ಟಿರುವ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ವಿರುದ್ಧ ಬಿಜೆಪಿಯ ಹಿರಿಯ ನಾಯಕ ಜಿ.ಎಸ್​. ಬಸವರಾಜು ಸ್ಪರ್ಧೆ ನಡೆಸುತ್ತಿರುವುದು ವಿಶೇಷ.

ಒಂದೆಡೆ ತುಮಕೂರಿನಲ್ಲಿ ದೊಡ್ಡ ಗೌಡರನ್ನು ಸೋಲಿಸಲೇಬೇಕು ಎಂದು ಬಿಜೆಪಿ ಪಣ ತೊಟ್ಟಿದ್ದರೆ, ,ಮತ್ತೊಂದೆಡೆ ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಸಾಕಷ್ಟು ಅಂತಃಕಲಹಗಳು ಕಾಣಿಸಿಕೊಂಡಿರುವುದು ಹಾಗೂ ಕಾಂಗ್ರೆಸ್ ಪಕ್ಷದೊಳಗಿನ ಒಳಬೇಗುದಿಯಿಂದಾಗಿ ಮೈತ್ರಿ ಪಕ್ಷಗಳು ಅಕ್ಷರಶಃ ಹೈರಾಣಾಗಿದ್ದವು. ಆದರೆ ಇದನ್ನು ನಿಭಾಯಿಸುವಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕೊನೆಗೂ ಯಶಸ್ವಿಯಾದ ಕಾರಣ ದೇವೇಗೌಡರು ನಿರಾತಂಕವಾಗಿ ಸ್ಪರ್ಧೆ ನಡೆಸುವಂತಾಗಿದೆ.

ಇದನ್ನೂ ಓದಿ : ರಾತ್ರಿ ಕಂಡ ಬಾವಿಗೆ, ಹಗಲು ಯಾರೂ ಬೀಳಲ್ಲ, ಶೋಭಾ ಕರಂದ್ಲಾಜೆಗೆ ಜನ ಮತಹಾಕಲ್ಲ; ಮಧ್ವರಾಜ್​

ಒಟ್ಟಾರೆ ಎರಡು ಪಕ್ಷಗಳಿಗೂ ತುಮಕೂರು ಪ್ರತಿಷ್ಠೆಯ ಕಣವಾಗಿದ್ದು ಗೆಲ್ಲುವವರಾರು ಎಂಬುದು ಮಾತ್ರ ಅಂಕೆಗೆ ನಿಲುಕದ ಪ್ರಶ್ನೆಯಾಗಿದೆ ಎಂಬುದೇ ಸತ್ಯ.

4.ಪ್ರಜ್ವಲ್ ರೇವಣ್ಣ v/s ಎ. ಮಂಜು(ಹಾಸನ) : ರಾಜಕೀಯ ಅನುಭವಿ ಹಾಗೂ ಅನನುಭವಿಗಳ ನಡುವಿನ ಕಣ ಎಂದೇ ಖ್ಯಾತಿ ಪಡೆದಿರುವ ಹಾಸನದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸಚಿವ ಎಚ್​.ಡಿ. ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ಎ. ಮಂಜು ಸ್ಪರ್ಧಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹಾಸನದಲ್ಲಿ  ತಾತ ಮೊಮ್ಮಕ್ಕಳ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡುತ್ತೇನೆ ಎಂದು ಬಿಜೆಪಿಗೆ ಪಕ್ಷಾಂತರ ಮಾಡಿ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಎ. ಮಂಜು ಚುನಾವಣಾ ಪ್ರಚಾರದ ಉದ್ದಕ್ಕೂ ಎಚ್​.ಡಿ ರೇವಣ್ಣ, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಲೇ ಬಂದಿದ್ದಾರೆ.

ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಮತ್ತು ಕುಟುಂಬಕ್ಕೆ ಹಾಸನ ರಾಜಕೀಯ ತವರಾಗಿದ್ದು ಕ್ಷೇತ್ರವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಆದರೆ, ಒಂದು ಕಾಲದಲ್ಲಿ ದೊಡ್ಡ ಗೌಡರ ಕುಟುಂಬದ ಹಿತೈಷಿಯಾಗಿದ್ದ ಎ. ಮಂಜು ಖುದ್ದು ಅವರ ಎದುರೆ ತೊಡೆ ತಟ್ಟಿ ನಿಂತಿರುವುದು ಜೆಡಿಎಸ್​ಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಜಿದ್ದಾಜಿದ್ದಿ ಕಣ ಎಂದೇ ಬಿಂಬಿಸಲಾಗಿರುವ ಈ ಕ್ಷೇತ್ರದ ಫಲಿತಾಂಶದ ಮೇಲೆ ಸಾಮಾನ್ಯವಾಗಿ ರಾಜ್ಯದ ಜನ ಕುತೂಹಲಿಗಳಾಗಿದ್ದಾರೆ.

ಇದನ್ನೂ ಓದಿ : lok sabha elections 2019: ಸ್ವಾಭಿಮಾನ ಹಾಗೂ ದೇಶದ ಉಳಿವಿಗಾಗಿ ಮತಚಲಾಯಿಸಿ; ಪಿ.ಚಿದಂಬರಂ ಕರೆ

5.ಬಿ.ಕೆ. ಹರಿಪ್ರಸಾದ್ v/s ತೇಜಸ್ವಿ ಸೂರ್ಯ (ಬೆಂ. ದಕ್ಷಿಣ) :  ಮಾಜಿ ಸಚಿವ ದಿವಂಗತ ಅನಂತಕುಮಾರ್ ಸತತ 6 ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಕ್ಷೇತ್ರ ಬೆಂಗಳೂರು ದಕ್ಷಿಣಲ್ಲಿ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡಲಾಗುವುದು ಎಂದೇ ಊಹಿಸಲಾಗಿತ್ತು. ಆದರೆ, ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದ್ದ ಬಿಜೆಪಿ 28ರ ಹರೆಯದ ಯುವಕ ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಿತ್ತು.

ಕ್ಷೇತ್ರಕ್ಕೆ ತೇಜ್ವಸಿ ಸೂರ್ಯನ ಪ್ರವೇಶದ ಬೆನ್ನಿಗೆ ವಿರೋಧಗಳು ಹಾಗೂ ಹತ್ತಾರು ವಿವಾದಗಳು ಸಹ ಹಿಂಬಾಲಿಸಿದ್ದವು. ಇವರ ವಿರುದ್ಧವಾಗಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಸ್ಪರ್ಧಿಸುತ್ತಿದ್ದಾರೆ. ಈ ಕಣವೂ ಸಹ ರಾಜಕೀಯ ಅನುಭವಿ ಹಾಗೂ ಅನನುಭವಿಗಳ ಕಣ ಎಂದೇ ಬಿಂಬಿಸಲಾಗಿದ್ದು. ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯದ ಗಮನ ಸೆಳೆದ ಕಣಗಳಲ್ಲೊಂದಾಗಿದೆ. ಅಲ್ಲದೆ ಇಲ್ಲಿ ಗೆಲ್ಲುವವರಾರು ಎಂಬ ಪ್ರಶ್ನೆಯೂ ಸಹ ಕುತೂಹಲಕ್ಕೆ ಕಾರಣವಾಗಿದೆ.

First published:April 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626