School Text Book: ಟಿಪ್ಪು ಸುಲ್ತಾನ್ ವೈಭವೀಕರಿಸಿರೋ ಅಂಶಗಳನ್ನ ತೆಗೆದುಹಾಕಬಹುದು, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಶಿಫಾರಸು

ಬಿಜೆಪಿ ನಾಯಕರು ಪಠ್ಯ ಪುಸ್ತಕಗಳಲ್ಲಿ ‘ಮೈಸೂರಿನ ಹುಲಿ’ ಎಂದು ಕರೆಯಲ್ಪಡುವ ಟಿಪ್ಪು ಸುಲ್ತಾನ್‍ಗೆ ಸಂಬಂಧಿಸಿದ ವಿಭಾಗಗಳನ್ನು ಬದಲಾಯಿಸಲು ಅಥವಾ ಅದನ್ನು ತೆಗೆದು ಹಾಕಲು ಶಿಕ್ಷಣ ಇಲಾಖೆಯ ಮೇಲೆ ಒತ್ತಡ ಹೇರಿದ್ದರು.

ಟಿಪ್ಪು ಸುಲ್ತಾನ್​

ಟಿಪ್ಪು ಸುಲ್ತಾನ್​

  • Share this:
ಶಾಲಾ ಪಠ್ಯಪುಸ್ತಕದಲ್ಲಿ(School Text Book) , 18 ನೇ ಶತಮಾನದ ವಿವಾದಿತ ದೊರೆ ಟಿಪ್ಪು ಸುಲ್ತಾನ್​ ನನ್ನು (Tipu Sultana) ಅತಿಯಾಗಿ ವೈಭವೀಕರಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರಕಾರವು (Karnataka Government), ಶಾಲಾ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನನನ್ನು ಚಿತ್ರಿಸಿರುವುದರ ಕುರಿತಂತೆ ಶೀಘ್ರದಲ್ಲಿಯೇ ಒಂದು ನಿರ್ಧಾರಕ್ಕೆ ಬರಲಿದೆ. ಲೇಖಕ ರೋಹಿತ್ ಚಕ್ರತೀರ್ಥ (Rohith Chakrathirtha) ಅವರ ನೇತೃತ್ವದ ಶಾಲಾ ಪಠ್ಯ ಪುಸ್ತಕ ಸಮಿತಿಗೆ, ರಾಜ್ಯದಲ್ಲಿ ಶಾಲಾ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುವ ಕಾರ್ಯವನ್ನು ವಹಿಸಲಾಗಿದೆ. ವರದಿಗಳು ತಿಳಿಸಿರುವ ಪ್ರಕಾರ, ಈ ಸಮಿತಿಯು ತನ್ನ ವರದಿಯನ್ನು ಕರ್ನಾಟಕ ಸರಕಾರಕ್ಕೆ ಈಗಾಗಲೇ ಸಲ್ಲಿಸಿದ್ದು, ಅದರಲ್ಲಿ ಮಾಡಲಾಗಿರುವ ಕೆಲವು ಶಿಫಾರಸ್ಸುಗಳಲ್ಲಿ, ಟಿಪ್ಪುವಿಗೆ ಸಂಬಂಧಿಸಿದ ಅಧ್ಯಾಯಗಳಲ್ಲಿ ಕೆಲವು ಸಂಗತಿಗಳನ್ನು ತೆಗೆದು ಹಾಕುವುದು ಕೂಡ ಒಂದಾಗಿದೆ.

ಈ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು ಶಿಫಾರಸ್ಸು ಮಾಡಿರುವ ಬದಲಾವಣೆಗಳನ್ನು, 2022-23 ನೇ ಶೈಕ್ಷಣಿಕ ವರ್ಷದಿಂದ 6 ರಿಂದ 10 ನೇ ತರಗತಿಗಳ ವರೆಗಿನ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಅಳವಡಿಸಲಾಗುವುದು ಎಂದು ಕರ್ನಾಟಕ ಸರಕಾರ ತಿಳಿಸಿದೆ.'

‘ಟಿಪ್ಪುವನ್ನು ವೈಭವೀಕರಿಸಿರುವ ಅಂಶ ಕೈಬಿಡಬಹುದು’

“ನಮ್ಮ ವಿದ್ಯಾರ್ಥಿಗಳಿಗೆ ಇತಿಹಾಸವನ್ನು ಬೋಧಿಸುವುದಕ್ಕೆ ಸಂಬಂಧಿಸಿದಂತೆ, ಅನಾವಶ್ಯಕ ವೈಭವೀಕರಣ, ವಾಸ್ತವಿಕ ದೋಷಗಳು ಮತ್ತು ವಿಷಯಾಂತರಗಳನ್ನು ತೆಗೆದು ಹಾಕುವ ಮೂಲಕ, ನಾವು ಒಂದು ತಟಸ್ಥ ಧ್ವನಿಯನ್ನು ಅಳವಡಿಸಿಕೊಳ್ಳಲು ಶಿಫಾರಸ್ಸು ಮಾಡಿದ್ದೇವೆ.ಇದು ಕೇವಲ ಟಿಪ್ಪುವಿನ ವಿಷಯದಲ್ಲಿ ಮಾತ್ರವಲ್ಲ, ಇತರ ಐತಿಹಾಸಿಕ ಘಟನೆಗಳು ಮತ್ತು ವ್ಯಕ್ತಿಗಳ ವಿಷಯದಲ್ಲೂ ಆಗಿದೆ” ಎಂಬ ರೋಹಿತ್ ಚಕ್ರತೀರ್ಥ ಅವರ ಹೇಳಿಕೆಯನ್ನು ಮಾಧ್ಯವೊಂದು ಉಲ್ಲೇಖಿಸಿದೆ.

ಇದನ್ನೂ ಓದಿ: Halal Controversy: ಯುಗಾದಿ ವರ್ಷತೊಡಕಿಗೆ ಹಲಾಲ್ ಮಾಂಸ ಖರೀದಿ ಮಾಡ್ಬೇಡಿ, ಹಿಂದೂ ಜನ ಜಾಗೃತಿ ಸಮಿತಿ ಕರೆ

“1857 ಸಿಪಾಯಿ ದಂಗೆ” ಎಂಬುದರ ಬದಲಿಗೆ “ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ” ಎಂಬ ಪದಪುಂಜವನ್ನು ಬಳಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು, ಈಶಾನ್ಯದ ಅಹೋಮ್ ಸಾಮ್ರಾಜ್ಯ ಮತ್ತು ಕಾಶ್ಮೀರದ ಕಾರ್ಕೋಟ ರಾಜವಂಶದ ಅಧ್ಯಾಯಗಳನ್ನು ಪಠ್ಯ ಪುಸ್ತಕಗಳಿಗೆ ಸೇರಿಸಲು ಶಿಫಾರಸ್ಸು ಮಾಡಿದೆ. ಟಿಪ್ಪು ಸುಲ್ತಾನನಿಗೆ ಸಂಬಂಧಿಸಿದ ಅಧ್ಯಾಯಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗುವುದಿಲ್ಲ, ಆದರೆ ಅದರಲ್ಲಿ ವಾಸ್ತವಿಕವಾಗಿ ನಿಖರವಾದ ಮಾಹಿತಿಗಳನ್ನು ಸೇರಿಸಲು ಕೆಲವು ಬದಲಾವಣೆಗಳನ್ನು ಮಾಡಲಾಗುವುದು ಎಂದು ಮಾಧ್ಯಮವೊಂದಕ್ಕೆ ಮೂಲಗಳು ತಿಳಿಸಿವೆ.

“ನಾವು ಅಸಮತೋಲನವನ್ನು ನಿವಾರಿಸಿದ್ದೇವೆ. ಹಿಂದಿನ ಕಾಂಗ್ರೆಸ್ ಸರಕಾರದ ಅಡಿಯಲ್ಲಿ, ಪ್ರೋ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ರಚಿಸಿದ್ದ ಪುಸ್ತಕಗಳಲ್ಲಿ ಅತೀ ಹೆಚ್ಚಿನ ವೈಭವೀಕರಣ ಮಾಡಲಾಗಿದೆ. ಅದನ್ನು ತೆಗೆದುಹಾಕಲಾಗಿದೆ ಮತ್ತು ನಾವು ತಟಸ್ಥ ಸ್ವರೂಪವನ್ನು ಕಾಯ್ದುಕೊಂಡಿದ್ದೇವೆ” ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಮೂಲಗಳು ತಿಳಿಸಿವೆ.

ಪಠ್ಯಪುಸ್ತಕ ಸಮಿತಿಯಿಂದ ಶಿಫಾರಸ್ಸು

ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿಯು, ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಂದ ರಚಿಸಲ್ಪಟ್ಟಿತು ಮತ್ತು 2021 ರಲ್ಲಿ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಟಿಪ್ಪು ಸುಲ್ತಾನ್ ಒಬ್ಬ ಧರ್ಮಾಂಧ ದೊರೆಯಾಗಿದ್ದ ಮತ್ತು ಆತ ಕೊಡಗು ಹಾಗೂ ಮಂಗಳೂರಿನ ಸಾವಿರಾರು ಜನರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿಸಿದ್ದಾನೆ ಎಂದು ಆರೋಪಿಸಿ, ಭಾರತೀಯ ಜನತಾ ಪಾರ್ಟಿಯ ಹಲವಾರು ನಾಯಕರು ಈ ಹಿಂದೆ, ಪಠ್ಯ ಪುಸ್ತಕಗಳಲ್ಲಿ ‘ಮೈಸೂರಿನ ಹುಲಿ’ ಎಂದು ಕರೆಯಲ್ಪಡುವ ಟಿಪ್ಪು ಸುಲ್ತಾನ್‍ಗೆ ಸಂಬಂಧಿಸಿದ ವಿಭಾಗಗಳನ್ನು ಬದಲಾಯಿಸಲು ಅಥವಾ ಅದನ್ನು ತೆಗೆದು ಹಾಕಲು ಶಿಕ್ಷಣ ಇಲಾಖೆಯ ಮೇಲೆ ಒತ್ತಡ ಹೇರಿದ್ದರು.

ಇದನ್ನೂ ಓದಿ: Padma Awards 2022: ಕನ್ನಡಿಗ ಅಬ್ದುಲ್ ಖಾದರ್, ನೀರಜ್​ ಚೋಪ್ರಾ ಸೇರಿದಂತೆ ಹಲವರಿಗೆ ಪದ್ಮ ಪ್ರಶಸ್ತಿ ಪ್ರದಾನ

ಅದಲ್ಲದೆ, ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಗಲಾಟೆ ಕೂಡ ನಡೆದಿತ್ತು. ಇಷ್ಟೆಲ್ಲಾ ಸಂಗತಿಗಳು ನಡೆದಿದ್ದರೂ, ಟಿಪ್ಪು ಜಯಂತಿಯ ಆಚರಣೆಯಲ್ಲಿ ಸ್ವತಃ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಆರ್ .ಆಶೊಕ್, ಜಗದೀಶ್ ಶೆಟ್ಟರ್ ಸೇರಿದಂತೆ ಕೆಲವು ಬಿಜೆಪಿ ನಾಯಕರು ಪಾಲ್ಗೊಂಡಿರುವ ಚಿತ್ರಗಳು ಕೂಡ ಲಭ್ಯವಿವೆ.
Published by:Pavana HS
First published: