HOME » NEWS » State » TOMORROW PORTFOLIO ALLOCATION LIST WILL BE RELEASED SAYS CM BS YEDIYURAPPA RHHSN

ಖಾತೆ ಹಂಚಿಕೆ ಅಂತಿಮ, ನಾಳೆ ಬೆಳಗ್ಗೆ 8 ಗಂಟೆಯೊಳಗೆ ಪಟ್ಟಿ ಪ್ರಕಟಿಸುತ್ತೇನೆ ಎಂದ ಸಿಎಂ ಯಡಿಯೂರಪ್ಪ

ಮನೆ ಮನೆಗೆ ನಲ್ಲಿ ಸಂಪರ್ಕ ನೀಡುವ ಜಲ ಜೀವನ್ ಮಿಷನ್ ನಡಿ ಕಾಮಗಾರಿಗಳನ್ನು ಚುರುಕುಗೊಳಿಸಿ. ಶಾಲೆಗಳು ಮತ್ತು ಅಂಗನವಾಡಿಗಳಿಗೆ ಆದ್ಯತೆಯ ಮೇರೆಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಿ. ಮುಂದಿನ 2 ತಿಂಗಳೊಳಗೆ ಇದನ್ನು ಪೂರ್ಣಗೊಳಿಸಿ. ರಾಜ್ಯದಲ್ಲಿ 42 ಸಾವಿರ ಶಾಲೆಗಳ ಪೈಕಿ 16 ಸಾವಿರ ಶಾಲೆಗಳಿಗೆ ಕುಡಿಯುವ ನೀರು ಒದಗಿಸಲು ಕಾರ್ಯಾದೇಶ ನೀಡಲಾಗಿದೆ.

news18-kannada
Updated:January 20, 2021, 9:02 PM IST
ಖಾತೆ ಹಂಚಿಕೆ ಅಂತಿಮ, ನಾಳೆ ಬೆಳಗ್ಗೆ 8 ಗಂಟೆಯೊಳಗೆ ಪಟ್ಟಿ ಪ್ರಕಟಿಸುತ್ತೇನೆ ಎಂದ ಸಿಎಂ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
  • Share this:
ಬೆಂಗಳೂರು; ಖಾತೆ ಹಂಚಿಕೆ ವಿಚಾರವಾಗಿ ಎಲ್ಲವೂ ರೆಡಿ ಇದೆ. ನಾಳೆ ಬೆಳಿಗ್ಗೆ 8 ಗಂಟೆ ಒಳಗೆ ಪಟ್ಟಿ ಬಿಡುಗಡೆ ಮಾಡುತ್ತನೆ. ನಾಳೆ ಸಂಜೆ ಮಂತ್ರಿ ಮಂಡಲ ಸಭೆ ಇದೆ. ಅಷ್ಟರೊಳಗೆ ಖಾತೆ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕಂದಾಯ ಗ್ರಾಮವಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳು ಒಟ್ಟು 2741 ದಾಖಲೆರಹಿತ ಜನವಸತಿಗಳನ್ನು ಗುರುತಿಸಿದ್ದಾರೆ. 1419 ಗ್ರಾಮಗಳ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 803 ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಉಳಿದವುಗಳ ಅಂತಿಮ ಅಧಿಸೂಚನೆಯನ್ನು ಒಂದು ತಿಂಗಳೊಳಗೆ ಹೊರಡಿಸಲು ಸೂಚನೆ ಕೊಡಲಾಗಿದೆ ಎಂದರು.

ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಖಾಸಗಿ ಜಮೀನಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಬದಲು ಕೆರೆಗಳ ಹೂಳೆತ್ತುವುದು ಹಾಗೂ ಕಾಲುವೆಗಳನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಹೆಚ್ಚಿನ ಪ್ರಗತಿ ಆಗಬೇಕಿದೆ. ಜೊತೆಗೆ ನೀರಿನ ವ್ಯವಸ್ಥೆಯನ್ನೂ ಖಾತರಿಪಡಿಸುವಂತೆ ಸೂಚಿಸಲಾಗಿದೆ. ಎಲ್ಲ ಯೋಜನೆಗಳು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಿ ಎಂದು ತಿಳಿಸಲಾಗಿದೆ ಎಂದರು.

ಸಮ್ಮೇಳನದ ಮುಖ್ಯಾಂಶಗಳು

1. ಇಂದು ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ  ಈ ಸಭೆಯಲ್ಲಿ ಎಂಟೂವರೆ ಗಂಟೆಗಳ ಕಾಲ ಹಲವು ವಿಷಯಗಳ ಕುರಿತು ಗಹನವಾದ ಚರ್ಚೆ ನಡೆಸಲಾಯಿತು.

2. ಈ ಸಭೆಯಲ್ಲಿ ನಾನು, ನನ್ನ ಸಚಿವ ಸಂಪುಟದ ಸದಸ್ಯರು, ಮುಖ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ನೀಡಿದ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಂಡು ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದ್ದೇನೆ.

3. ಕೋವಿಡ್ ಕಾರಣಕ್ಕೆ ಸುಮಾರು 10 ತಿಂಗಳ ಕಾಲ ನಷ್ಟವಾಗಿದ್ದು, ಈಗ ಅಭಿವೃದ್ಧಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಯೋಜನೆಗಳ ಅನುಷ್ಠಾನದ ಫಲಿತಾಂಶ ಕಣ್ಣಿಗೆ ಕಾಣುವಂತೆ ಸಾಧನೆ ಮಾಡಬೇಕಾಗಿದೆ.

4. ಇದೀಗ ಕೋವಿಡ್ ಲಸಿಕೆ ಅಭಿಯಾನ, ಕೃಷಿ ಇನ್ ಪುಟ್ ಸಬ್ಸಿಡಿ ವಿತರಣೆ, ಪ್ರವಾಹ ಪೀಡಿತರಿಗೆ ವಸತಿ ಸೌಕರ್ಯ, ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರಿನ ಯೋಜನೆಗಳು, ಕೇಂದ್ರ ಸರ್ಕಾರದ ಯೋಜನೆಗಳ ತ್ವರಿತ ಅನುಷ್ಠಾನ ಇತ್ಯಾದಿ ಆದ್ಯತೆಯ ವಿಷಯಗಳತ್ತ ತೀವ್ರ ಗಮನ ಹರಿಸಿ ಕೆಲಸ ಮಾಡುವಂತೆ ಸೂಚನೆ ಕೊಟ್ಟಿದ್ದೇನೆ.5. ಕೃಷಿ ಇನ್ ಪುಟ್ ಸಬ್ಸಿಡಿ ಪಾವತಿ ಅಂತಿಮಗೊಳಿಸಲು ಪರಿಹಾರ ತಂತ್ರಾಂಶದಲ್ಲಿ ರೈತರ ನೋಂದಣಿ ಪ್ರಕ್ರಿಯೆ ಬೇಗನೆ ಪೂರ್ಣಗೊಳಿಸಬೇಕು. ಜೊತೆಗೆ ನಷ್ಟದ ಪ್ರಮಾಣದಲ್ಲಿ ವ್ಯತ್ಯಾಸ ಇದ್ದಲ್ಲಿ ಈ ಕುರಿತು ಈಗಾಗಲೇ ತಿಳಿಸಿದಂತೆ ಪ್ರಮಾಣ ಪತ್ರ ನೀಡಿ. ಬೇಗನೆ ಪರಿಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

6. ರಾಜ್ಯದಲ್ಲಿ 12.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಸಂಭವಿಸಿರುವ ಬಗ್ಗೆ 12.02 ಲಕ್ಷ ರೈತರ ವಿವರ ನೋಂದಣಿ ಆಗಿದೆ. 9.22 ಲಕ್ಷ ರೈತರಿಗೆ 709.67 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. ಎನ್ ಡಿ ಆರ್ ಎಫ್ ಬಿಡುಗಡೆ ಮಾಡಿರುವ ಮೊತ್ತಕ್ಕಿಂತ ಇದು ಹೆಚ್ಚಿನದಾಗಿದೆ.

7. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಎರಡು ವರ್ಷ ಮೇಲ್ಪಟ್ಟ ಯೋಜನೆಗಳನ್ನು ಪೂರ್ಣಗೊಳಿಸಿ. ಕ್ರಿಯಾ ಯೋಜನೆಗಳನ್ನು ತ್ವರಿತವಾಗಿ ಮಂಜೂರು ಮಾಡಬೇಕು. ಇವುಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಪ್ರಕ್ರಿಯೆ ಸರಳಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು.

8. ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.

9. ಸಾಮಾಜಿಕ ಭದ್ರತಾ ಯೋಜನೆಗಳಡಿ ಮೃತಪಟ್ಟ ಫಲಾನುಭವಿಗಳಿಗೆ ಪಿಂಚಣಿ ಪಾವತಿಯಾಗುತ್ತಿದೆ ಹಾಗೂ ಪಡಿತರ ವಿತರಣೆಯಾಗುತ್ತಿದೆ. ಒಂದು ತಿಂಗಳೊಳಗೆ ಇದನ್ನು ತಡೆಯಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಈಗ ಬಹುತೇಕ ಎಲ್ಲ ಫಲಾನುಭವಿಗಳ ಆಧಾರ್ ಸಂಯೋಜನೆ ಮಾಡಲಾಗಿದ್ದು, ಇ-ಜನ್ಮ ಪೋರ್ಟಲ್ ನಲ್ಲಿ ಮೃತಪಟ್ಟವರ ಮಾಹಿತಿ ದಾಖಲಾಗಿದೆ. ಈ ಮೂಲಕ ಪರಿಶೀಲನೆ ನಡೆಸಿ ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

10. ಕಂದಾಯ ಗ್ರಾಮವಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳು ಒಟ್ಟು 2741 ದಾಖಲೆರಹಿತ ಜನವಸತಿಗಳನ್ನು ಗುರುತಿಸಿದ್ದು, 1419 ಗ್ರಾಮಗಳ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 803 ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಉಳಿದವುಗಳ ಅಂತಿಮ ಅಧಿಸೂಚನೆಯನ್ನು ಒಂದು ತಿಂಗಳೊಳಗೆ ಹೊರಡಿಸಲು ಸೂಚನೆ ನೀಡಲಾಯಿತು.

11. ರಾಜ್ಯದಲ್ಲಿ ಸುಮಾರು 14.18 ಲಕ್ಷ  ಸರ್ಕಾರಿ  ಜಮೀನಿನ ಪೈಕಿ 2.7 ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿಯಷ್ಟೇ ತೆರವು ಗೊಳಿಸಲಾಗಿದೆ. ಒತ್ತುವರಿಯನ್ನು ಶೀಘ್ರವೇ ತೆರವುಗೊಳಿಸಲು ಕ್ರಮ ವಹಿಸಿ. ಒತ್ತುವರಿ ತೆರವಾದ ಜಮೀನು ಸಂರಕ್ಷಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿ ಒತ್ತುವರಿ ತೆರವು ಗೊಳಿಸಿ ಹರಾಜು ಹಾಕುವಂತೆ ಸೂಚಿಸಿದೆ.

12. ಆಯಾ ಪ್ರಾದೇಶಿಕ ಆಯುಕ್ತರು ತಮ್ಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕೂಡಲೇ ಪರಿಶೀಲನೆ ನಡೆಸಿ, ಒತ್ತುವರಿ ಜಮೀನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.

13. ಗ್ರಾಮಗಳು/ ಜನವಸತಿಗಳಲ್ಲಿ ಸ್ಮಶಾನ ಭೂಮಿ ಲಭ್ಯವಿಲ್ಲದ ಕಡೆಗಳಲ್ಲಿ ಆದ್ದರಿಂದ ಸೂಕ್ತ ಜಮೀನನ್ನು ಗುರುತಿಸಿ ಅಗತ್ಯವಾದರೆ ಖಾಸಗಿಯವರಿಂದ ಪಡೆದು ಒದಗಿಸಲು ಸೂಚಿಸಲಾಗಿದೆ.

ಇದನ್ನು ಓದಿ: ಸಿದ್ದರಾಮಯ್ಯನವರೇ ನಿಮ್ಮನ್ನು ಕುರುಬ ಸಮಾಜದಿಂದ ಬಹಿಷ್ಕಾರ ಹಾಕಬೇಕಾಗುತ್ತದೆ ಎಚ್ಚರಿಕೆ..!; ಹೆಚ್​‌. ವಿಶ್ವನಾಥ್ ಕಿಡಿನುಡಿ

14. ಮನೆ ಮನೆಗೆ ನಲ್ಲಿ ಸಂಪರ್ಕ ನೀಡುವ ಜಲ ಜೀವನ್ ಮಿಷನ್ ನಡಿ ಕಾಮಗಾರಿಗಳನ್ನು ಚುರುಕುಗೊಳಿಸಿ. ಶಾಲೆಗಳು ಮತ್ತು ಅಂಗನವಾಡಿಗಳಿಗೆ ಆದ್ಯತೆಯ ಮೇರೆಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಿ. ಮುಂದಿನ 2 ತಿಂಗಳೊಳಗೆ ಇದನ್ನು ಪೂರ್ಣಗೊಳಿಸಿ. ರಾಜ್ಯದಲ್ಲಿ 42 ಸಾವಿರ ಶಾಲೆಗಳ ಪೈಕಿ 16 ಸಾವಿರ ಶಾಲೆಗಳಿಗೆ ಕುಡಿಯುವ ನೀರು ಒದಗಿಸಲು ಕಾರ್ಯಾದೇಶ ನೀಡಲಾಗಿದೆ.

15. ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಖಾಸಗಿ ಜಮೀನಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಬದಲು ಕೆರೆಗಳ ಹೂಳೆತ್ತುವುದು ಹಾಗೂ ಕಾಲುವೆಗಳನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡುವಂತೆ ಸೂಚಿಸಲಾಗಿದೆ.

16. ಕಲ್ಯಾಣ ಕರ್ನಾಟಕ ಭಾಗದಲ್ಲಿ  ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಹೆಚ್ಚಿನ ಪ್ರಗತಿ ಆಗಬೇಕಿದೆ. ಜೊತೆಗೆ ನೀರಿನ ವ್ಯವಸ್ಥೆಯನ್ನೂ ಖಾತರಿಪಡಿಸುವಂತೆ ಸೂಚನೆ ನೀಡಲಾಗಿದೆ.

17. ಗ್ರಾಮೀಣ ಪ್ರದೇಶದ ಘನತ್ಯಾಜ್ಯ ಮತ್ತು ದ್ರವತ್ಯಾಜ್ಯ ನಿರ್ವಹಣೆಗೆ ಜಮೀನು ಗುರುತಿಸಿ, ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

18. ಪ್ರಧಾನ ಮಂತ್ರಿಗಳ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭಾರ್ ನಿಧಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ರಾಜ್ಯಮಟ್ಟದ ಬ್ಯಾಂಕರುಗಳ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

19. ವಸತಿ ಯೋಜನೆಗಳ ಪ್ರಗತಿಯ ಮಾಹಿತಿಯನ್ನು ವಿಜಿಲ್ ಆಪ್ ಮತ್ತು ಜಿ.ಪಿ.ಎಸ್. ತಂತ್ರಾಂಶದಲ್ಲಿ ಕಾಲಕಾಲಕ್ಕೆ ದಾಖಲಿಸಿ, ಅನುದಾನ ಬಿಡುಗಡೆಗೆ ಅನುವು ಮಾಡಿಕೊಡಬೇಕು  ಎಂದು ಸೂಚಿಸಲಾಯಿತು.

20. ಎಲ್ಲ ಯೋಜನೆಗಳು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಲಾಗಿದೆ.

21. ಜಿಲ್ಲಾಧಿಕಾರಿಗಳಿಂದ ಆದ್ಯತೆ ಮೇರೆಗೆ ನಡೆಯಬೇಕಾದ ಕೆಲಸಗಳ ಬಗ್ಗೆ ಮಾಹಿತಿ ಪಡೆಯಲಾಯಿತು.
Published by: HR Ramesh
First published: January 20, 2021, 9:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories