ನಾಳೆ ಗಣಿನಾಡಿನಲ್ಲಿ ದೋಸ್ತಿ ಸರ್ಕಾರದ ಶಕ್ತಿಪ್ರದರ್ಶನ ; ಕೃತಜ್ಞತಾ ಸಮಾವೇಶದಲ್ಲಿ ದಿಗ್ಗಜರು

ರಾಷ್ಟ್ರ ರಾಜಕಾರಣವೇ ಬಳ್ಳಾರಿಯತ್ತ ತಿರುಗಿ ನೋಡುವಂತೆ ಮಾಡಿದ ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ಮೈತ್ರಿಕೂಟದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ 2 ಲಕ್ಷದ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ ಇತಿಹಾಸ ಬರೆದಿದ್ದಾರೆ. ಈ ಕಾರಣಕ್ಕೆ ಬಳ್ಳಾರಿಯಲ್ಲಿ ಬೃಹತ್ ಕೃತಜ್ಞತಾ ಸಮಾವೇಶವನ್ನು ಸಮ್ಮಿಶ್ರ ಸರ್ಕಾರ ನಾಳೆ ಮಾಡುತ್ತಿದ್ದಾರೆ.

G Hareeshkumar | news18
Updated:November 21, 2018, 7:31 PM IST
ನಾಳೆ ಗಣಿನಾಡಿನಲ್ಲಿ ದೋಸ್ತಿ ಸರ್ಕಾರದ ಶಕ್ತಿಪ್ರದರ್ಶನ ; ಕೃತಜ್ಞತಾ ಸಮಾವೇಶದಲ್ಲಿ ದಿಗ್ಗಜರು
ಕಾಂಗ್ರೆಸ್ ಮುಖಂಡರು
  • News18
  • Last Updated: November 21, 2018, 7:31 PM IST
  • Share this:
- ಶರಣು ಹಂಪಿ

ಬಳ್ಳಾರಿ (ನ.21):  ಲೋಕಸಭೆ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಉಗ್ರಪ್ಪ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ, ದೋಸ್ತಿ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ನಾಳೆ ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಕಾಂಗ್ರೆಸ್ ,ಜೆಡಿಎಸ್ ನಿಂದ ಕೃತಜ್ಞತಾ ಸಮಾವೇಶದ ಹೆಸರಿನಲ್ಲಿ ಮತ್ತೆ ಶಕ್ತಿ ಪ್ರದರ್ಶನ ನಡೆಯಲಿದೆ.

ಇದನ್ನು ಓದಿ :  ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್​ಗೆ 'ಐದು ವರ್ಷ' ಬರೆದು ಕೊಟ್ಟಿದ್ದೇವೆ; ಪರಂ ಆಸೆಗೆ ಡಿಕೆಶಿ ಗರಂ..!

ರಾಷ್ಟ್ರ ರಾಜಕಾರಣವೇ ಬಳ್ಳಾರಿಯತ್ತ ತಿರುಗಿ ನೋಡುವಂತೆ ಮಾಡಿದ ಬಳ್ಳಾರಿ ಲೋಕಸಭೆ ಉಪಚುನವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ಮೈತ್ರಿಕೂಟದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ 2 ಲಕ್ಷದ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ ಇತಿಹಾಸ ಬರೆದಿದ್ದಾರೆ. ಈ ಕಾರಣಕ್ಕೆ ಬಳ್ಳಾರಿಯಲ್ಲಿ ಬೃಹತ್ ಕೃತಜ್ಞತಾ ಸಮಾವೇಶವನ್ನು ಸಮ್ಮಿಶ್ರ ಸರ್ಕಾರ ನಾಳೆ ಮಾಡುತ್ತಿದ್ದಾರೆ.

ನಾವೆಲ್ಲಾ ಒಟ್ಟಾಗಿದ್ದೇವೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಾರಲು ನಾಳೆ ಬಳ್ಳಾರಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಜಂಟಿ ಕೃತಜ್ಞತಾ ಸಮಾವೇಶ ಆಯೋಜನೆ ಮಾಡಲಾಗಿದೆ. ಈ ಹಿನ್ನೆಲೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದ್ದು , ಮತ್ತೊಮ್ಮೆ ಗುರು-ಶಿಷ್ಯರು, ಹಾಲಿ, ಮಾಜಿ ಸಿಎಂ ಗಳು ಸಮಾಗಮವಾಗಲಿದ್ದಾರೆ. ಈ ನಿಟ್ಟಿನಲ್ಲಿ ಬಳ್ಳಾರಿ ಮತ್ತೆ ಶಕ್ತಿ ಪ್ರದರ್ಶನದ ವೇದಿಕೆಯಾಗುತ್ತಿದೆ.

ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಾಳೆ ಸಂಜೆ 5 ಗಂಟೆಗೆ ನಡೆಯಲಿರುವ ಕೃತಜ್ಞತಾ ಸಮಾವೇಶಕ್ಕೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ , ಸಚಿವ ಡಿಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಸಂಸದರ ದಂಡೇ ನಾಳೆ ಭಾಗಿಯಾಗಲಿದೆ. ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜಿಲ್ಲೆಯ ಜನತೆ ನಿರೀಕ್ಷೆಗೂ ಮೀರಿ ಮತ ನೀಡುವ ಮೂಲಕ ಜಯಗಳಿಸಿದ್ದಾರೆ. ಇನ್ನು ಭದ್ರತೆಯ ಹಿತದೃಷ್ಠಿಯಿಂದ ಸಮಾರಂಭಕ್ಕೆ ಸಿಎಂ ಆಗಮನ ಹಿನ್ನೆಲೆಯಲ್ಲಿ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 5 ಡಿವೈಎಸ್ಪಿ, 15 ಸಿಪಿಐ, 42 ಪಿಎಸ್ ಐ, 100 ಎಎಸ್ ಐ, 400 ಸಿಬ್ಬಂದಿ ನಿಯೋಜಿಸಲಾಗಿದೆ.ಪಾರ್ಕಿಂಗ್ ಗಾಗಿ ಪ್ರವಾಸಿ ಮಂದಿರ, ಮುನ್ಸಿಪಲ್ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಒಟ್ಟು ನಾಲ್ಕು ಪ್ರವೇಶ ದ್ವಾರ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಎಸ್ಪಿ ಅರುಣ್ ರಂಗರಾಜನ್ ತಿಳಿಸಿದ್ದಾರೆ.

ಬಳ್ಳಾರಿ ಜನರಿಗೆ ಕೃತಜ್ಞತೆ ಹೇಳುವ ನೆಪದಲ್ಲಿ ಮತ್ತೊಮ್ಮೆ ದೋಸ್ತಿಗಳ ಸರ್ಕಾರ ರೆಡ್ಡಿರಾಮುಲು ಪ್ರಾಬಲ್ಯವಿರುವ ಗಣಿನಾಡಿನಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುವ ಮೂಲಕ ತಮ್ಮ ಮುಂಬರುವ ಲೋಕಸಭಾ ಚುನಾವಣೆಗೆ ರೆಡಿಯಾಗುತ್ತಿದ್ದಾರೆ.

ಇದನ್ನು ಓದಿ : ಬಿಜೆಪಿ ಸೋಲೋದು ಗ್ಯಾರಂಟಿ, ರಾಹುಲ್ ಪ್ರಧಾನಿ ಆಗೋದು
ಗ್ಯಾರೆಂಟಿ - ಸಿದ್ದರಾಮಯ್ಯ
 

 

 
First published: November 21, 2018, 7:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading