Karnataka PUC Result: ನಾಳೆ ದ್ವಿತೀಯ ಪಿಯು ಫಲಿತಾಂಶ, ರಿಸಲ್ಟ್ ನೋಡೋಕೆ ಹೀಗೆ ಮಾಡಿ

2nd PUC Result:  ಮೊದಲ ಬಾರಿ ನೀಡಿದ ಹತ್ತನೇ ತರಗತಿಯಲ್ಲಿ ವಿಷಯವಾರು ಪಡೆದಿದ್ದ ಅಂಕಗಳ ಶೇ.45ರಷ್ಟು ಅಂಕ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಗಳಿಸರುವ ಅಂಕದಲ್ಲಿ ಶೇ.45ರಷ್ಟು ಅಂಕವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ (Coronavirus) ಕಾರಣ ದ್ವಿತೀಯ ಪಿಯು ಪರೀಕ್ಷೆ (2nd PUC)ರದ್ದಾಗಿದ್ದ ಕಾರಣ ಪಿಯುಸಿ ಫಲಿತಾಂಶವನ್ನು  ಪ್ರಥಮ ಪಿಯುಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂಕ ನಿಗದಿಗೊಳಿಸಲು ತೀರ್ಮಾನಿಸಲಾಗಿತ್ತು.  ಜತೆಗೆ ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕಗಳು ಮತ್ತು ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಿ  ಫಲಿತಾಂಶವನ್ನು ಘೋಷಣೆ ಮಾಡಲಾಗಿತ್ತು.  ಆದರೆ ಹಲವಾರು ವಿದ್ಯಾರ್ಥಿಗಳು ಆ ಫಲಿತಾಂಶವನ್ನು  ಒಪ್ಪಿರಲಿಲ್ಲ. ಅದನ್ನು ತಿರಸ್ಕರಿಸಿ ಪರೀಕ್ಷೆ ಬರೆದಿದ್ದರು. ಅದರ ಫಲಿತಾಂಶ ನಾಳೆ ಘೋಷಣೆಯಾಗಲಿದೆ.

ಸೆಪ್ಟೆಂಬರ್ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಪರೀಕ್ಷೆ ನಡೆದಿತ್ತು. ಅದರ ಫಲಿತಾಂಶವನ್ನು ನಾಳೆ 10. 30-ರ ಸುಮಾರಿಗೆ ಪ್ರಕಟ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನಾಳೆ  ಅಂದರೆ ಸೆಪ್ಟೆಂಬರ್ 10ರಂದು2021 ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಘೋಷಣೆಯಾಗಲಿದ್ದು, ಪಿಯು ಬೋರ್ಡ್ ಫಲಿತಾಂಶದಲ್ಲಿ ಲಭ್ಯವಾಗಲಿದೆ. ನಾಳೆ ವಿಧಾನಸೌಧದಲ್ಲಿ 10.30ಕ್ಕೆ ಪಿಯುಸಿ ಫಲಿತಾಂಶ ಕುರಿತು ಶಿಕ್ಷಣ ಸಚಿವ ಬಿ ಸಿ ನಾಗೇಶ್  ಸುದ್ದಿಗೋಷ್ಟಿ ನಡೆಸಲಿದ್ದು,  ಪಿಯು ಬೋರ್ಡ್ ನಿರ್ದೇಶಕಿ ಡಾ ಆರ್ ಸ್ನೇಹಲ್ ಉಪಸ್ಥಿತಿ ಇರಲಿದ್ದಾರೆ.

ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಅನ್ನು  ಇಟ್ಟುಕೊಂಡು http://karresults.nic.in ವೆಬ್​ಸೈಟ್​ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ಇದಲ್ಲದೆ ವಿದ್ಯಾರ್ಥಿಗಳಿಗೆ ಎಸ್ಎಂಎಸ್ ಮೂಲಕ ದ್ವಿತೀಯ ಪಿಯುಸಿಯ ಫಲಿತಾಂಶ ಲಭ್ಯವಾಗಲಿದೆ .

ಕೊರೊನಾ ಕಾರಣಕ್ಕೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಗಿತ್ತು. ಈ ಫಲಿತಾಂಶ ಚಾಲೆಂಜ್ ಮಾಡಿ ಪರೀಕ್ಷೆ ಬರೆದಿದ್ದ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ.  ದ್ವಿತೀಯ ಪಿಯುಸಿ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಸಹ ಬರೆದಿದ್ದರು. ಖಾಸಗಿ ಅಭ್ಯರ್ಥಿಗಳು 17,470 , ಚಾಲೆಂಜ್ ಮಾಡಿ ಪರೀಕ್ಷೆ ಬರೆದಿದ್ದ 592 ವಿದ್ಯಾರ್ಥಿಗಳು ಹಾಗೂ  351 ವಿದ್ಯಾರ್ಥಿಗಳು ರಿಪಿಟರ್ಸ್ ಚಾಲೆಂಜ್ ಪರೀಕ್ಷೆ ಬರೆದಿದ್ದರು. ಒಟ್ಟು 18,413 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ರು ಎಂದು ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಚಿಕ್ಕಮಗಳೂರು, ಮಂಡ್ಯದಲ್ಲಿ ಏರಿಕೆ ಕಂಡ ಪೆಟ್ರೋಲ್. ಬೆಂಗಳೂರು ನಗರದಲ್ಲಿ ಯಥಾಸ್ಥಿತಿ ..

ಮೊದಲ ಬಾರಿ ನೀಡಿದ ಹತ್ತನೇ ತರಗತಿಯಲ್ಲಿ ವಿಷಯವಾರು ಪಡೆದಿದ್ದ ಅಂಕಗಳ ಶೇ.45ರಷ್ಟು ಅಂಕ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಗಳಿಸರುವ ಅಂಕದಲ್ಲಿ ಶೇ.45ರಷ್ಟು ಅಂಕವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು..

ಅಲ್ಲದೇ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಶೇ.10ರಷ್ಟು ಅಂಕ ಜೊತೆಗೆ ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳಿಗೆ ಶೇ.5ರಷ್ಟು ಅಂಕಗಳನ್ನು ಪರಿಗಣನೆಗೆ ತೆಗೆದುಕೊಂಡು ಫಲಿತಾಂಶ ನೀಡಲಾಗಿತ್ತು.

ಇನ್ನು ಕಳೆದ ಬಾರಿ 6,66,497 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು ಹಾಗೂ 3,35,138 ವಿದ್ಯಾರ್ಥಿಗಳು, 3,31,359 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. ಅದರಲ್ಲಿ 1,95,650 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್​ನಲ್ಲಿ ತೇರ್ಗಡೆ ಆಗಿದ್ದರು.

ಪುನರಾವರ್ತಿತ ಅಭ್ಯರ್ಥಿಗಳನ್ನು ಕೂಡ ಪಾಸ್ ಮಾಡಲಾಗಿತ್ತು, ಕನಿಷ್ಠ ಉತ್ತೀರ್ಣ ಅಂಕ ನೀಡಲಾಗಿತ್ತು. 4,50,706 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಡಿಸ್ಟಿಂಕ್ಷನ್ ಮತ್ತು ಫಸ್ಟ್ ಕ್ಲಾಸ್ - 1,95,650 , ದ್ವಿತೀಯ ದರ್ಜೆ , 1,47, 055ಯಲ್ಲಿ ಉತ್ತೀರ್ಣರಾಗಿದ್ದರು.

ಇದನ್ನೂ ಓದಿ:  ನಾಳೆ ಸಂಜೆ 4 ಗಂಟೆಗೆ ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಇಲ್ಲಿ ಕ್ಲಿಕ್ ಮಾಡಿ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Sandhya M
First published: