ಬೆಂಗಳೂರಿನಲ್ಲಿ ಗಗನಕ್ಕೇರಿದ ಟೊಮ್ಯಾಟೊ ಬೆಲೆ; ನೂರರ ಸನಿಹದತ್ತ ಕೆ.ಜಿ. ದರ

ತೀವ್ರವಾದ ಚಳಿಯ ಕಾರಣದಿಂದ ಟೊಮ್ಯಾಟೊ ಬೆಲೆಯು ಏಕಾಏಕಿ ಏರಿಕೆಯಾಗಲು ಕಾರಣವಾಗಿದೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ದೊರಕುತ್ತಿದ್ದ ಟೊಮ್ಯಾಟೊ ಚಳಿಗೆ ಕಾಯಿ ಕಟ್ಟದೆ ಇಳುವರಿ ಕುಸಿತಗೊಂಡಿರುವುದೇ ಬೆಲೆ ಏರಿಕೆಗೆ ಮೂಲ ಕಾರಣವಾಗಿದೆ. ಶೇ.40ರಷ್ಟು ಇಳುವರಿ ಶೇ. 40ರಷ್ಟು ಕುಂಠಿತವಾಗಿದೆ.

Harshith AS | news18
Updated:January 10, 2019, 10:26 AM IST
ಬೆಂಗಳೂರಿನಲ್ಲಿ ಗಗನಕ್ಕೇರಿದ ಟೊಮ್ಯಾಟೊ ಬೆಲೆ; ನೂರರ ಸನಿಹದತ್ತ ಕೆ.ಜಿ. ದರ
ಸಾಂದರ್ಭಿಕ ಚಿತ್ರ
Harshith AS | news18
Updated: January 10, 2019, 10:26 AM IST
ಬೆಂಗಳೂರು (ಜ.10): ಕಳೆದ 4 ದಿನಗಳಿಂದ ಕುಸಿತಗೊಂಡಿದ್ದ ಟೊಮ್ಯಾಟೊ ಬೆಲೆ ದಿಢೀರನೆ ಏರಿಕೆ ಕಂಡಿದೆ. ಬೆಲೆ ಗಗನಕ್ಕೇರಿರುವುದರಿಂದ ಗ್ರಾಹಕರು ಟೊಮ್ಯಾಟೊ ಖರೀದಿಸಬೇಕೋ..? ಬೇಡವೋ..? ಎಂಬ ಗೊಂದಲದಲ್ಲಿದ್ದಾರೆ.

4 ದಿನಗಳ ಹಿಂದೆ​ ಟೊಮ್ಯಾಟೊ ಬೆಲೆ 20 ರೂ ಇತ್ತು. ಇದೀಗ ದಿಢೀರನೆ ಕೆಜಿಗೆ 70 ರಿಂದ 80 ರೂ.ಗೆ ಏರಿಕೆಯಾಗಿದೆ.

ತೀವ್ರವಾದ ಚಳಿಯ ಕಾರಣದಿಂದ ಟೊಮ್ಯಾಟೊ ಬೆಲೆಯು ಏಕಾಏಕಿ ಏರಿಕೆಯಾಗಲು ಕಾರಣವಾಗಿದೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ದೊರಕುತ್ತಿದ್ದ ಟೊಮ್ಯಾಟೊ ಚಳಿಗೆ ಕಾಯಿ ಕಟ್ಟದೆ ಇಳುವರಿ ಕುಸಿತಗೊಂಡಿರುವುದೇ ಬೆಲೆ ಏರಿಕೆಗೆ ಮೂಲ ಕಾರಣವಾಗಿದೆ. ಶೇ.40ರಷ್ಟು ಇಳುವರಿ ಶೇ. 40ರಷ್ಟು ಕುಂಠಿತವಾಗಿದೆ.

ಕಳೆದ ಜೂನ್​ ತಿಂಗಳಲ್ಲಿ ಟೊಮ್ಯಾಟೊ ಬೆಲೆ ಕೆ.ಜಿಗೆ 15 ರಿಂದ 20ರೂ ಇತ್ತು. ಆನಂತರದ ದಿನಗಳಲ್ಲಿ ಬೆಲೆಯಲ್ಲಿ ಇನ್ನಷ್ಟು ಕುಸಿತ ಕಂಡು ಕೆ.ಜಿ ಗೆ 8 ರಿಂದ 10 ರೂ ಬೆಲೆಯನ್ನು ಹೊಂದಿತ್ತು. ಇದರಿಂದಾಗಿ ಟೊಮ್ಯಾಟೊ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಡಿಸೆಂಬರ್​ ತಿಂಗಳಿನಲ್ಲಿ ಚೇತರಿಕೆ ಕಂಡ ಟೊಮ್ಯಾಟೊ ಬೆಲೆಯು ಕೆ.ಜಿ ಗೆ 17 ರಿಂದ 20 ರೂ ಗೆ ಏರಿಕೆಯಾಗಿ 24 ರೂಗೆ ಮಾರಾಟವಾಗುತ್ತಿತ್ತು.

ಇದನ್ನು ಓದಿ: ರೈತನೆಂದು ಮೂಗು ಮುರಿಯಬೇಡಿ; ಉತ್ತರಪ್ರದೇಶದ ಈ ಕೃಷಿಕನ ಸಾಧನೆ ಕೇಳಿದ್ರೆ ದಂಗಾಗ್ತೀರ!

ಚಳಿಯ ತೀವ್ರತೆ ಹೆಚ್ಚಾಗಿದ್ದು, ಶೀತಕ್ಕೆ  ಟೊಮ್ಯಾಟ ಹಣ್ಣಾಗುತ್ತಿಲ್ಲ. ಇದರಿಂದಾಗಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಪೂರೈಕೆಯು ಅರ್ಧದಷ್ಟು ಇಳಿಕೆಯಾಗಿದ್ದು, ಬೆಲೆಯಲ್ಲಿ ದಿಢೀರನೇ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಈ ದರ  ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಟೊಮ್ಯಾಟೊ ಇಳುವರಿ ಕುಂಠಿತಗೊಂಡಿರುವುದರಿಂದ ಬೇರೆ ರಾಜ್ಯದಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ