ಕೋಲಾರ: ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ (Tomato Market) ಎಂಬ ಹೆಗ್ಗಳಿಕೆ ಪಡೆದಿರುವ ಕೋಲಾರ (Kolar) ಎಪಿಎಂಸಿ (APMC) ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಟೊಮೆಟೊ ಬೆಲೆ 1 ಸಾವಿರ ಗಡಿದಾಟಿದೆ, ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ 15 ಕೆಜಿ ತೂಕದ ಬಾಕ್ಸ್, 1 ಸಾವಿರ ರೂಪಾಯಿ ಗಡಿದಾಟಿದ್ದು, ಟೊಮೆಟೊ ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ. ಆದರೆ ಈ ಸಂತಸ ಕೋಲಾರ ರೈತರ (Kolar Farmers) ಪಾಲಿಗೆ ಇಲ್ಲದಂತಾಗಿದೆ. ಕೋಲಾರ ಜಿಲ್ಲೆಯಲ್ಲೀಗ ಟೊಮೆಟೊ ಬೆಳೆಯೇ ಇಲ್ಲ, ನೆರೆಯ ಆಂದ್ರದಿಂದ ಶೇಕಡಾ 70 ರಷ್ಟು ಟೊಮೆಟೊ ಮಾರುಕಟ್ಟೆಗೆ ಆವಕವಾಗುತ್ತಿದ್ದು, ಕೋಲಾರದ ಮಾರುಕಟ್ಟೆಯಲ್ಲಿ ಆಂಧ್ರದ ರೈತರಿಗೆ (Andhra Pradesh) ಭರ್ಜರಿ ಬೆಲೆ ಸಿಕ್ಕಿ ಲಾಟರಿ ಹೊಡೆದಂತಾಗಿದೆ. ಕಳೆದ ಒಂದೂವರೆ ವರ್ಷದಿಂದ ಸಾಲು ಸಾಲು ನಷ್ಟ ಅನುಭವಿಸಿರೊ ಕೋಲಾರದ ರೈತರು, ಈ ಸಲ ಟೊಮೆಟೊ ಬೆಳೆಯೋ ಸಾಹಸಕ್ಕೆ ಕೈ ಹಾಕಿಲ್ಲ, ದೇಶಾದ್ಯಂತ ಟೊಮೆಟೊಗೆ ಬೇಡಿಕೆ ಹೆಚ್ಚಿದ್ದು ಸಹಜವಾಗಿಯೇ ಎಲ್ಲೆಡೆ ಬೆಲೆ ಏರಿಕೆಯಾಗಿದೆ.
ಟೊಮೆಟೊ ಗುಣಟಮಟ್ಟ ಇಳಿಕೆ
ಇನ್ನು ಕೋಲಾರದ ಕೆಲ ಕಡೆ ಟೊಮೆಟೊಗೆ ಕೀಟ ಭಾದೆ ಕಾಡುತ್ತಿದ್ದು, ಅದರಿಂದ ಟೊಮೆಟೊ ಗುಣಮಟ್ಟ ಇಳಿಕೆಯಾಗಿ, ಹೊರ ರಾಜ್ಯಗಳಿಗೆ ಟೊಮೆಟೊ ರಪ್ತು ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಟೊಮೆಟೊ ಸೇರಿದಂತೆ ಕೆಲ ತರಕಾರಿಗಳಿಗೂ ಹೊರ ರಾಜ್ಯದಲ್ಲಿ ಬೇಡಿಕೆ ಇಳಿಕೆಯಾಗಿದ್ದು, ಈ ಬಗ್ಗೆ ಮಾತನಾಡಿರುವ ಕೋಲಾರ ಜೆಡಿಎಸ್ ಎಮ್ಎಲ್ಸಿ ಗೋವಿಂದರಾಜು(MLC Govindaraju), ಬೆಂಗಳೂರಿನ ಕೊಳಚೆ ನೀರನ್ನ ಮೂರನೇ ಬಾರಿಗೆ ಸಂಸ್ಕರಿಸದೆ, ಹರಿಸುತ್ತಿರುವುದೇ ಇದಕ್ಕೆ ಕಾರಣವೆಂದು ಆರೋಪಿಸಿದ್ದಾರೆ, ಕೆಸಿ ವ್ಯಾಲಿ ನೀರು (KC Valley Project)ಕೃಷಿ ಬಳಕೆಗೆ ಜಿಲ್ಲಾಡಳಿತ ನಿಷೇಧ ಹೇರಿದ್ದರು, ಹಳ್ಳಿಗಳಲ್ಲಿ ಕೆಲ ರೈತರು ನೇರವಾಗಿ ಕೆಸಿ ವ್ಯಾಲಿ ನೀರನ್ನ ಕೃಷಿಗೆ ಬಳಸುತ್ತಿರುವುದು ರೋಗಬಾದೆಗೆ ಕಾರಣವೆಂಬ ಅನುಮಾನ ವ್ಯಕ್ತವಾಗಿದೆ, ಇದರ ಜೊತೆಗೆ ಕೆಸಿ ವ್ಯಾಲಿ ನೀರು ಹರಿಯುವ ಕೆರೆಗಳ ಪಕ್ಕದಲ್ಲಿರೊ ಬೋರ್ ವೆಲ್ ರೀಚಾರ್ಜ್ ಆಗಿದ್ದು, ಅಲ್ಲಿ ಬೆಳೆಯುವ ಟೊಮೆಟೊ ಸೇರಿದಂತೆ ವಿವಿಧ ತರಕಾರಿಗಳಲ್ಲು ಗುಣಮಟ್ಟ ಇಳಿಕೆಯಾಗಿ, ಬೇಡಿಕೆ ಕುಸಿದಿದೆ ಎಂದು ಗೊವಿಂದರಾಜು ಹಾಗು ಜಿಲ್ಲೆಯ ತರಕಾರಿ ವ್ಯಾಪಾರಿಗಳು ಆರೋಪಿಸಿದ್ದಾರೆ. ಆದರೆ ಈ ವಿಚಾರಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯೆ ನೀಡಲು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ಗಾಯತ್ರಿ ನಿರಾಕರಿಸಿದ್ದು, ಪ್ರತಿಕ್ರಿಯೆ ನೀಡಲು ಹಿರಿಯ ಅಧಿಕಾರಿಗಳ ಅನುಮತಿ ಬೇಕೆಂಬ ಸಬೂಬು ನೀಡಿದ್ದಾರೆ.
ಇದನ್ನೂ ಓದಿ: Onion Price: ಗಗನಕ್ಕೇರಿದ ಈರುಳ್ಳಿ ಬೆಲೆ; ಶೀಘ್ರವೇ 150 ರೂಪಾಯಿ ದಾಟಲಿದೆ ದರ?
ರೋಗದ ಜೊತೆ ಕ್ರಿಮಿನಾಶಕ ಬಳಕೆ
ಜಿಲ್ಲೆಯಲ್ಲಿ ನೀರಿನ ಲಭ್ಯತೆ ಹೆಚ್ಚಿದ್ದರಿಂದ ಇಷ್ಟುದಿನ ಜಿಲ್ಲೆಯ ಟೊಮೆಟೊ ಮಾರುಕಟ್ಟೆಗೆ ಯಥೇಚ್ಛವಾಗಿ ಆವಕ ಆಗುತ್ತಿತ್ತು, ನಷ್ಟದ ಭೀತಿಯುಂದ ಟೊಮೆಟೊ ಬೆಳೆಯಲು ಜಿಲ್ಲೆಯ ರೈತರು ಮುಂದಾಗದ, ಸಮಯದಲ್ಲಿ ಹೊರ ರಾಜ್ಯದ ಟೊಮೆಟೊ ಗೆ ಭರ್ಜರಿ ಬೇಡಿಕೆ ದೊರೆತಿದೆ. ಒಟ್ಟಿನಲ್ಲಿ, ಬರಗಾಲದಲ್ಲಿದ್ದ ಕೋಲಾರ ಜಿಲ್ಲೆಯ ರೈತರಿಗೆ ವರುಣದೇವ ಕರುಣಿಸಿದ್ದು ಜಿಲ್ಲೆಯಲ್ಲಿ ಬಹುತೇಕ ಕೆರೆ ಗಳು ತುಂಬಿ ಹರಿಯುತ್ತಿದೆ, ಆದರೆ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಬೆಳೆಗಳಿಗೆ ಕೀಟಬಾದೆ ಹೆಚ್ಚಿಗೆ ಬಾದಿಸುತ್ತಿದ್ದು, ರಾಸಾಯನಿಕಗಳನ್ನ ಸಿಂಪಡಿಸಿದರು. ರೋಗಬಾದೆಯ ಪ್ರಮಾಣ ಇಳಿಕೆಯಾಗುತ್ತಿಲ್ಲ.
ಇನ್ನೂ ಒಂದು ತಿಂಗಳು ಬೆಲೆ ಏರಿಕೆ ಬಿಸಿ
ಒಟ್ಟಿನಲ್ಲಿ ಕೋಲಾರದ ರೈತರ ಪಾಡು ಹೇಳತೀರದ್ದಾಗಿದೆ, ಟೊಮೆಟೊ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗು ಕತ್ತರಿ ಬೀಳುತ್ತಿದ್ದು, ಒಂದು ಕೆಜಿ ಟೊಮೆಟೊ ಬೆಲೆ 70 ರೂ ದಾಟಿದೆ, ಟೊಮೆಟೊ ಕೊಳ್ಳಲು ಗ್ರಾಹಕರು ಮೂಗು ಮುರಿಯುತ್ತಿದ್ದು, ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿಸಿ ಇನ್ನು ಒಂದು ತಿಂಗಳ ಮುಂದುವರೆಯಲಿದೆ ಎಂದು ಮಾರುಕಟ್ಟೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ