Tomato Price: ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆಗಿಂತಲೂ ದುಬಾರಿಯಾಯಿತು ಟೊಮೆಟೊ ಬೆಲೆ

Tomato price Hike :ಸದ್ಯ ಕರ್ನಾಟಕದಲ್ಲಿ ಒಂದು ಲೀ. ಪೆಟ್ರೋಲ್ ಬೆಲೆಗೆ 100 ರೂಪಾಯಿ ಬೆಲೆ ಇದೆ. ಆದರೆ ಇದನ್ನು ಮೀರಿಸುವಂತೆ ಪ್ರಸ್ತುತ ಕರ್ನಾಟಕದಲ್ಲಿ ಟೊಮೆಟೊ ಬೆಲೆ 145 ರೂಪಾಯಿಯಾಗಿದೆ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮನೆಯಲ್ಲಿ(Home) ಪ್ರತಿನಿತ್ಯ ಅಡುಗೆ(Food) ಮಾಡಬೇಕು ಅಂತ ಅಂದ್ರೆ ಟೊಮೆಟೊ(Tomato)ಇರಲೇಬೇಕು.. ಟೊಮ್ಯಾಟೋ ಬಳಸಿ ಮಾಡದ ಅಡುಗೆಗಳು ಇಲ್ಲ.. ಆದ್ರೆ ಈಗ ಪೆಟ್ರೋಲ್(Petrol) ಹಾಗೂ ಡೀಸೆಲ್(Diesel) ಬೆಲೆಗಿಂತಲೂ(Price) ಅಧಿಕವಾಗಿರುವ ಟೊಮೆಟೊ ಬೆಳಗಿಂದ ಮನೆಯಲ್ಲಿ ಹೇಗಪ್ಪ ಅಡಿಗೆ ಮಾಡೋದು ಅನ್ನು ಚಿಂತೆ ಗ್ರಾಹಕರನ್ನ ಕಾಡುತ್ತಿದೆ. ಆದ್ರೆ ಟೊಮೇಟೊ ಬೆಳೆದ ರೈತರ ಮೊಗದಲ್ಲಿ ಮಾತ್ರ ಈ ಬಾರಿ ಉತ್ತಮ ಲಾಭ ಪಡೆಯುವ ನಿರೀಕ್ಷೆಯ ಸಂತಸ ಮಾಡಿದೆ..

  ಟೊಮೆಟೊ ಬೆಲೆ ಹೆಚ್ಚಳಕ್ಕೆ ಕಾರಣ ಏನು..?

  ಕಳೆದ ಎರಡು ವಾರಗಳಿಂದ ಕರ್ನಾಟಕ ಆಂಧ್ರಪ್ರದೇಶ ಕೇರಳ ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ...ಇದರಿಂದಾಗಿ ಹಲವಾರು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿ ರೈತರ ಜಮೀನುಗಳು ಜಲಾವೃತವಾಗಿವೆ..ಆಂಧ್ರಪ್ರದೇಶ ಒಂದರಲ್ಲಿಯೇ 58 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆ ಬೆಳೆಯಲಾಗುತ್ತಿತ್ತು.. ಆದರೆ ಪ್ರವಾಹದಿಂದಾಗಿ 26.67 ಲಕ್ಷ ಹೆಕ್ಟೇರ್ ಮೀಟರ್ನಷ್ಟು ಬೆಳೆ ನಾಶವಾಗಿದೆ.. ಅದರಲ್ಲೂ ಹೆಚ್ಚು ಟಮೊಟೊ ಬೆಳೆ ಬೆಳೆಯುತ್ತಿದ್ದ ಮದನಪಲ್ಲಿ ಹಾಗೂ ಚಿತ್ತೂರು ಜಿಲ್ಲೆಗಳಲ್ಲಿ ಹೆಚ್ಚು ಹಾನಿ ಉಂಟಾಗಿದೆ ಹೀಗಾಗಿ ಚಿತ್ತೂರು ಹಾಗು ಅನಂತಪುರ ಹಾಗೂ ಕರ್ನಾಟಕದ ಚಿಕ್ಕಬಳ್ಳಾಪುರ ಮತ್ತು ಮಹಾರಾಷ್ಟ್ರದ ಸೋಲಾಪುರ, ಕೇರಳ ಸೇರಿ ಕೇವಲ ಕೆಲವು ರಾಜ್ಯಗಳಿಂದ ಮಾತ್ರ ಟೊಮೆಟೊ ಬೆಳೆ ದೇಶದ ಮೂಲೆ ಮೂಲೆಗೂ ರಫ್ತಾಗುತ್ತಿದೆ ಪರಿಣಾಮ ಟೊಮೊಟೊ ಬೆಲೆ ಸೇರಿ ಹಲವಾರು ತರಕಾರಿಗಳು ಬೆಳೆ ನಷ್ಟವಾಗಿದೆ..

  ಇನ್ನು ಟೊಮೆಟೊ ಬೆಳೆಗೆ ಭಾರಿ ಬೇಡಿಕೆ ಬಂದಿದೆ.. ಸದ್ಯ ಒಂದು ಕಡೆ ಟಮೋಟೊ ಬೆಳೆದು ಮಾರುಕಟ್ಟೆಗೆ ತರುತ್ತಿರುವ ರೈತರಿಗೆ, ಚಿನ್ನದಂತ ಲಾಭ ಸಿಕ್ತಾ ಇದ್ರೆ, ಇನ್ನು ಕೆಲವು ರೈತರು ಬೆಳೆ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ.. ಇತ್ತ ಪ್ರತಿನಿತ್ಯ ಅಡುಗೆಗೆ ಬೇಕಾದ ಟೊಮೆಟೊ ಬೆಲೆ ಗಗನಕ್ಕೆ ಏರಿರುವುದರಿಂದ, ಗ್ರಾಹಕರು ತಲೆ ಬಿಸಿ ಮಾಡಿಕೊಂಡಿದ್ದಾರೆ...

  ಇದನ್ನೂ ಓದಿ :ಕೋಲಾರದಲ್ಲಿ 1 ಸಾವಿರ ರೂ. ದಾಟಿದ ಟೊಮೆಟೊ ಬೆಲೆ, ಏರಿಕೆಯಾದರೂ ಕೋಲಾರದ ರೈತರಿಗೆ ಭಾರೀ ನಿರಾಸೆ

  ಪೆಟ್ರೋಲ್ ಡೀಸೆಲ್ ಗಿಂತಲೂ ದುಬಾರಿಯಾಗುತ್ತಿದೆ ಟಮೋಟೊ ಬೆಲೆ

  ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಕೆಜಿ ಟೊಮೆಟೊಗೆ ಕೇವಲ 30ರಿಂದ 40 ರೂಪಾಯಿ ಬೆಲೆ ಇತ್ತು.. ಆದರೆ ಕಳೆದೊಂದು ವಾರದಿಂದ ಟೊಮೆಟೊ ಬೆಲೆ ಏರಿಕೆಯಾಗುತ್ತಿದೆ.. ಪೆಟ್ರೋಲ್ ಡೀಸೆಲ್ ಲೀ. ಗೆ 100 ರೂಪಾಯಿ ಇದ್ರೆ, 1ಕೆಜಿ ಸೇಬಿನ ಹಣ್ಣಿನ ಬೆಲೆ 180 ರೂಪಾಯಿ ಇದ್ದು, ಟೊಮೆಟೋ ಹಣ್ಣು ಇದರ ದರವನ್ನು ಮೀರಿಸುತ್ತಿದೆ.. ಕೆಲವು ಕಡೆ ಒಂದು ಕೆಜಿ ಟಮೊಟೊ ಹಣ್ಣಿಗೆ 200 ರೂಪಾಯಿಗಳಿಗಿಂತಲೂ ಅಧಿಕವಾದ ಬೆಲೆ ಇದೆ.. ಹೀಗಾಗಿ ವಾರದ ಹಿಂದೆ ಎಲ್ಲಾ ಅಂಗಡಿಗಳಲ್ಲೂ ಸುಲಭವಾಗಿ ಸಿಗುತ್ತಿದ್ದ ಟೊಮೇಟೊ ಈಗ ಬಹುತೇಕ ಅಂಗಡಿಗಳಲ್ಲಿ ಲಭ್ಯವಾಗುತ್ತಿಲ್ಲ..

  ಕರ್ನಾಟಕದಲ್ಲಿ 150ರ ಗಡಿಗೆ ಬಂದು ತಲುಪಿದ ಟೊಮೇಟೊ..

  ಸದ್ಯ ಕರ್ನಾಟಕದಲ್ಲಿ ಒಂದು ಲೀ. ಪೆಟ್ರೋಲ್ ಬೆಲೆಗೆ 100 ರೂಪಾಯಿ ಬೆಲೆ ಇದೆ. ಆದರೆ ಇದನ್ನು ಮೀರಿಸುವಂತೆ ಪ್ರಸ್ತುತ ಕರ್ನಾಟಕದಲ್ಲಿ ಟೊಮೆಟೊ ಬೆಲೆ 145 ರೂಪಾಯಿಯಾಗಿದೆ.. ಇನ್ನು ಚೆನ್ನೈನಲ್ಲಿ ಒಂದು ಕೆಜಿ ಟೊಮೊಟೊ ಬೆಲೆ 140 ರಿಂದ 160 ರೂಪಾಯಿಗಳಿಗೆ ಬಂದು ತಲುಪಿದೆ.. ಭೂಪಾಲ್ ಮಾರುಕಟ್ಟೆಗಳಲ್ಲಿ 1ಕೆಜಿ ಟೊಮೆಟೊ ಬೆಲೆ 80 ಯಾಗಿದೆ..ಇನ್ನು ಆಂಧ್ರಪ್ರದೇಶದಲ್ಲಿ ಕೆಜಿ ಟೊಮೆಟೊ ಬೆಲೆ 130 ರೂಪಾಯಿ ಇದ್ದು ವಿಜಯವಾಡ, ಕಿತ್ತೂರು ಸೇರಿದಂತೆ ಹಲವು ಕಡೆ ಟೊಮೆಟೊ ಬೆಲೆ 150 ರೂಪಾಯಿ ಸಮೀಪಿಸಿದೆ..

  ಇದನ್ನೂ ಓದಿ :ಕೋಲಾರದಲ್ಲಿ ಟೊಮೆಟೊ ಬೆಲೆ ಏರಿಳಿತಕ್ಕೆ ರೈತರು ಕಂಗಾಲು; ಪ್ರತಿನಿತ್ಯ ಬೆಳೆ ಕಟಾವು ಮಾಡುವ ಬೆಳೆಗಾರರ ಸ್ಥಿತಿ ಅಯೋಮಯ!

  ಕೊಯಂಬತ್ತೂರಿನಲ್ಲಿ ಕುಸಿತ ಕಂಡ ಟೊಮೆಟೊ ಬೆಲೆ

  ದೇಶದ ಹಲವು ಭಾಗಗಳಲ್ಲಿ ಟೊಮೆಟೊ ಬೆಲೆ ಏರಿಕೆಯಾಗುತ್ತಿದ್ರೆ,ಕೊಯಮತ್ತೂರಿನ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಕುಸಿತವಾಗಿದೆ.. 25 ಕೆಜಿ ಟೊಮೆಟೊಗೆ 2300 ರೂಪಾಯಿ ಇದ್ದ ಬೆಲೆ 1600 ರೂಪಾಯಿಗಳಿಗೆ ಕುಸಿತ ಕಂಡಿದೆ
  Published by:ranjumbkgowda1 ranjumbkgowda1
  First published: