Kolara: ದಾಖಲೆ ಬೆಲೆಗೆ ಮಾರಾಟವಾದ ಟೊಮೇಟೋ, ಬೀನ್ಸ್ ಕೂಡಾ ಭಾರೀ ದುಬಾರಿ

ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಬೀನ್ಸ್ ಟೊಮೆಟೊ ಒಂದೇ ಸಮನೇ ಬೆಲೆ ಹೆಚ್ಚುತ್ತಿದೆ, ಕಳೆದ 15 ದಿನಗಳಿಂದ ಸುರಿದ ಮಳೆಯಿಂದಾಗಿ ಬೆಳೆಹಾನಿಯಾಗಿದ್ದು, ಇದೀಗ ಇಳುವರಿ ಕಡಿತವಾಗಿ ಬೆಲೆ ಏರಿಕೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಯಲುಸೀಮೆ ಕೋಲಾರದಲ್ಲಿ (Kolara) ಟೊಮೆಟೊ (Tomato) ಬೆಲೆ ಗಗನಕ್ಕೇರಿದೆ. 2022 ನೇ  ವರ್ಷದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಮೊತ್ತಕ್ಕೆ ಟೊಮೆಟೊ ಮಾರಾಟವಾಗುವ ಮೂಲಕ ಹೊಸ ದಾಖಲೆ  ನಿರ್ಮಾಣವಾಗಿದೆ. ಏಷ್ಯಾದಲ್ಲಿಯೇ (Asia) ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರುವ, ಕೋಲಾರದ ಮಾರುಕಟ್ಟೆಯಲ್ಲಿ (Market) ಕೆಂಪುಹಣ್ಣಿಗೆ ಭರ್ಜರಿ ಬೆಲೆ ಸಿಕ್ಕಿದೆ. ನೆನ್ನೆ ಭಾನುವಾರ  15 ಕೆಜಿ ತೂಕದ ಒಂದು ಬಾಕ್ಸ್ ಟೊಮೆಟೊ ಬೆಲೆ 1500 ರಿಂದ 1600  ರೂಪಾಯಿಗೆ ಮಾರಾಟವಾಗಿದೆ,  ಈ ಹಿಂದೆ 2021 ರಲ್ಲಿ 1400 ರೂಪಾಯಿಗೆ  ಟೊಮೆಟೊ ಮಾರಾಟವಾಗಿದ್ದು ಅಧಿಕ ಬೆಲೆಯಾಗಿತ್ತು. ಸದ್ಯ ಈಗ ಮಾರುಕಟ್ಟೆಯಲ್ಲಿ ನಾಟಿ ಟೊಮೆಟೊ, ಸೀಡ್ಸ್ ಟೊಮೆಟೊ ಎರಡಕ್ಕು ಬೇಡಿಕೆಯಿದ್ದರು, ಮಾರುಕಟ್ಟೆಗೆ ಬರುವ ಎಲ್ಲಾ ಟೊಮೆಟೊ ಗು ಇದೇ ಗರಿಷ್ಠ ಬೆಲೆ ಸಿಗುತ್ತಿಲ್ಲ. ಕನಿಷ್ಟ 700 ರಿಂದ 1600 ರೂಪಾಯಿ ವರೆಗು ಗುಣಮಟ್ಟದ ಆಧಾರದ ಮೇಲೆ, ಬಹಿರಂಗ ಹರಾಜಿನಲ್ಲಿ ದರ ನಿಗದಿಯಾಗುತ್ತಿದೆ.

ಟೊಮೆಟೊ ಜೊತೆಗೆ ಇತರ ತರಕಾರಿ ಬೆಲೆ ಏರಿಕೆ.

ಪೆಟ್ರೋಲ್ ಡೀಸೆಲ್ ದರ ಇಳಿಕೆಯಾದ ಸಂತಸದಲ್ಲಿದ್ದ ಗ್ರಾಹಕರಿಗೆ,  ದಿನಬಳಕೆಯ ತರಕಾರಿಯ ಬೆಲೆ ಏರಿಕೆ ಜೇಬು ಸುಡುತ್ತಿದೆ,  ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಮುಖ ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗ್ರಾಹಕರ ಕೈ ಸುಡುತ್ತಿದೆ, 15 ಕೆಜಿ ಒಂದು ಟೊಮೆಟೊ ಬಾಕ್ಸ್ ಬೆಲೆ 1500 ರೂಪಾಯಿ ಗಡಿ ದಾಟಿದ್ದು, ರಿಟೇಲ್ ದರದಲ್ಲಿ ಒಂದು ಕೆಜಿ ಟೊಮೆಟೊ 100 ರಿಂದ 110 ರೂಪಾಯಿ ವರೆಗು ಮಾರಾಟವಾಗ್ತಿದೆ.

ಇನ್ನು ಒಂದು ಕೆಜಿ ಬೀನ್ಸ್ ಬೆಲೆ 100 ರಿಂದ 120 ವರೆಗೂ ಮಾರಾಟ ವಾಗ್ತಿದೆ, ಕ್ಯಾಪ್ಸಿಕಂ 60 ರೂಪಾಯಿ, ಹೀರೇಕಾಯಿ 60 ರೂಪಾಯಿ, ಚಿಕ್ಕಡಿಕಾಯಿ 70 ರೂಪಾಯಿ, ಬೀಟ್ರೋಟ್ 40 ರೂಪಾಯಿ ಆಗಿದ್ದು, ನಿಧಾನವಾಗಿ ಉಳಿದ ತರಕಾರಿಗಳ ಬೆಲೆಯೂ ಏರಿಕೆಯಾಗುತ್ತಿದೆ.

ಇದನ್ನೂ ಓದಿ: SSLC Results: ಎರಡು ಬಿಬಿಎಂಪಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ: ಮುಖ್ಯೋಪಾಧ್ಯಯರಿಗೆ ಶೋಕಾಸ್ ನೋಟಿಸ್, ಶಿಕ್ಷಕರ ವಜಾ

ನೆರೆಯ ರಾಜ್ಯಗಳಿಂದ ಹೆಚ್ಚಿದ ಬೇಡಿಕೆ

ತರಕಾರಿಗಳ ಬೆಲೆ ದಿಢೀರ್ ಏರಿಕೆಯಾಗಲು ಪ್ರಮುಖ ನೀಡಿರುವ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ, ಮಳೆ ಹೊಡೆತಕ್ಕೆ ಸಿಲುಕಿ ಬೆಳೆ ನಾಶವಾಗಿದ್ದು, ಕಡಿಮೆ ಪ್ರಮಾಣದಲ್ಲಿ ಇಳುವರಿ ಬರುತ್ತಿರೊ ಕಾರಣ, ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಮುಂದಿನ 15 ದಿನಗಳ ಕಾಲ, ತರಕಾರಿಗಳ ಬೆಲೆ ಏರಿಕೆಯಲ್ಲಿ ಏರಿಳಿತ ಇರಲಿದೆ ಎಂದು ತಿಳಿಸಿದ್ದಾರೆ, ಟೊಮೆಟೊ ಬೆಲೆ ಏರಿಕೆ ಕುರಿತು ಮಾತನಾಡಿರೊ ಮಂಡಿ ಮಾಲೀಕರು ಆಂಧ್ರ, ಕೇರಳ ಹಾಗು ತಮಿಳುನಾಡು ರಾಜ್ಯದಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಿರೊ ಕಾರಣ ಉತ್ತಮ ಬೆಲೆ ಸಿಗ್ತಿದೆ ಎಂದಿದ್ದಾರೆ.

ಮಳೆ ಎಫೆಕ್ಟ್, ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ಬಾರದ ತರಕಾರಿ

ಕಳೆದ ಹಲವು ದಿನಗಳಿಂದ ಕೋಲಾರ ಸೇರಿ ಪಕ್ಕದ ಜಿಲ್ಲೆಗಳಲ್ಲು ಭರ್ಜರಿ ಮಳೆಯಾಗಿ ವಿವಿದ ತರಕಾರಿ ಬೆಳೆಗಳು ನೀರು ಪಾಲಾಗಿದೆ,  ನಿರಂತರ ಮಳೆಗೆ ಟೊಮೆಟೊ ಗಿಡಗಳಲ್ಲಿಯೇ ಹಾಳಾಗುವ ಭೀತಿಯು ಎದುರಾಗಿದೆ, ತರಕಾರಿಗಳು ಮಳೆಯಿಂದ ನಾಶವಾಗಿದ್ದು, ರೋಗಬಾದೆಯು ತರಕಾರಿಯನ್ನ ಕಾಡುತ್ತಿದೆ.

ಇದನ್ನೂ ಓದಿ: Dowry Caseನಲ್ಲಿ ಸಿಲುಕಿ ನರಳಾಡಿದ್ದ 80ರ ವೃದ್ಧೆ! ಕೊನೆಗೂ ಆಪಾದನೆಯಿಂದ ಅಜ್ಜಿಗೆ ಮುಕ್ತಿ

ಇವೆಲ್ಲದರ ಕಾರಣ ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ತರಕಾರಿ ಬರುತ್ತಿಲ್ಲ. ಹಾಗಾಗಿ ಸಹಜವಾಗಿ ಬೇಡಿಕೆ ಹೆಚ್ಚಾಗಿ ಬೆಲೆಯೂ ಹೆಚ್ಚಾಗಿದೆ. ಇನ್ನು 15 ದಿನಗಳಲ್ಲಿ ಟೊಮೆಟೊ ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಬಾರದೆ ಇದ್ದಲ್ಲಿ, ಕೆಂಪುಹಣ್ಣಿನ  ಬೆಲೆ 2 ಸಾವಿರ ಮುಟ್ಟುವ ಸಾಧ್ಯತೆಯಿದೆ.

ಏರುತ್ತಲೇ ಇದೆ ಬೆಲೆ

ಒಟ್ಟಿನಲ್ಲಿ ಕೋಲಾರದಲ್ಲಿ ಕೆಂಪುಹಣ್ಣು ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ 2 ಸಾವಿರದತ್ತ ಓಡುತ್ತಿದೆ, ಆದರೆ  ಗ್ರಾಹಕರು ಚಿಲ್ಲರೆ ಅಂಗಡಿಗಳಲ್ಲಿ  ಟೊಮೆಟೊ ಕೊಳ್ಳಲು ಯೋಚನೆ ಮಾಡುವ ಪರಿಸ್ತಿತಿ ಎದುರಾಗಿದ್ದು, ತರಕಾರಿಗಳ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗು ಕತ್ತರಿ ಬೀಳುತ್ತಿದೆ.
Published by:Divya D
First published: