Fastag: ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದ ಕೇಂದ್ರ, ಫಾಸ್ಟ್ಯಾಗ್ ಕಡ್ಡಾಯದ ನಂತರ ಟೋಲ್ ಶುಲ್ಕ ಹೆಚ್ಚಳ
ಎಲೆಕ್ಟ್ರಾನಿಕ್ ಮೋಡ್ ಮೂಲಕ ಟೋಲ್ ಸಂಗ್ರಹವು ಅನೇಕ ಪಟ್ಟು ಹೆಚ್ಚಾಗಿದೆ. ಎನ್ಎಚ್ಎಐ ಪ್ರಕಾರ, ಫಾಸ್ಟ್ಟ್ಯಾಗ್ಗಳು ತನ್ನ ದೈನಂದಿನ ಟೋಲ್ ಸಂಗ್ರಹವನ್ನು ₹ 104 ಕೋಟಿಗೆ ರೂಪಾಯಿ ಹೆಚ್ಚಿಸಲು ಸಹಾಯ ಮಾಡಿವೆ ಎನ್ನಲಾಗಿದೆ.
ಬೆಂಗಳೂರು: ಸುಗಮ ಸಂಚಾರ, ಇಂಧನ ಉಳಿತಾಯ ಹಾಗೂ ಡಿಜಿಟಲೀಕರಣದ ಉದ್ದೇಶದಿಂದ ಕೇಂದ್ರ ಫೆಬ್ರವರಿ 16 ರಿಂದ ಫಾಸ್ಟ್ಯಾಗ್ ವ್ಯವಸ್ಥೆಯನ್ನ ಜಾರಿಗೊಳಿಸಿತ್ತು, ಫಾಸ್ಟ್ಯಾಗ್ ಕಡ್ಡಾಯದ ಬೆನ್ನಲ್ಲೆ ಗಾಯದ ಮೇಲೆ ಬರೆ ಎಳೆದಂತೆ ಟೋಲ್ ಶುಲ್ಕ ಹೆಚ್ಚಳಕ್ಕೆ ಕೇಂದ್ರ ಹೆದ್ದಾರಿ ಸಚಿವಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ ಎನ್ನಲಾಗಿದೆ. ಈ ವರ್ಷ ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ಸ್ವಲ್ಪ ಹೆಚ್ಚು ದುಬಾರಿಯಾಗಬಹುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರವನ್ನು ಶೇ.5 ರಷ್ಟು ಹೆಚ್ಚಿಸಲು ಸಜ್ಜಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಅಲ್ಲದೇ ಮಾಸಿಕ ಪಾಸ್ ಅನ್ನು 10 ರಿಂದ 20 ರೂಪಾಯಿಗೆ ಹೆಚ್ಚಿಸುವ ನಿರೀಕ್ಷೆ ಇದೆ.
ಎನ್ಎಚ್ಎಐ ಪ್ರತಿ ಹಣಕಾಸು ವರ್ಷದಲ್ಲಿ ಟೋಲ್ ತೆರಿಗೆಯನ್ನು ಹೆಚ್ಚಿಸುತ್ತದೆ, ಫಾಸ್ಟಾಗ್ ಕಡ್ಡಾಯದ ನಂತರ ಟೋಲ್ ತೆರಿಗೆ ಹೆಚ್ಚಳವು ಸಾರಿಗೆದಾರರ ಜೊತೆಗೆ ಸಾಮಾನ್ಯ ಜನರ ಮೇಲೆ ಹೊರೆ ಹೆಚ್ಚಿಸುತ್ತದೆ. ಪ್ರತಿ ಹಣಕಾಸು ವರ್ಷದಲ್ಲಿ ಟೋಲ್ ತೆರಿಗೆ ಹೆಚ್ಚಾಗುತ್ತದೆ ಎಂದು ಎನ್ಎಚ್ಎಐ ಕರ್ನಾಟಕ ವಲಯದ ಯೋಜನಾ ನಿರ್ದೇಶಕ ಸೂರ್ಯವಂಶಿ ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಮೋಡ್ ಮೂಲಕ ಟೋಲ್ ಸಂಗ್ರಹವು ಅನೇಕ ಪಟ್ಟು ಹೆಚ್ಚಾಗಿದೆ. ಎನ್ಎಚ್ಎಐ ಪ್ರಕಾರ, ಫಾಸ್ಟ್ಟ್ಯಾಗ್ಗಳು ತನ್ನ ದೈನಂದಿನ ಟೋಲ್ ಸಂಗ್ರಹವನ್ನು ₹ 104 ಕೋಟಿಗೆ ರೂಪಾಯಿ ಹೆಚ್ಚಿಸಲು ಸಹಾಯ ಮಾಡಿವೆ ಎನ್ನಲಾಗಿದೆ. ಇದುವರೆಗೂ ರಾಜ್ಯದಲ್ಲಿ 93% ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಲಾಗಿದ್ದು ಇನ್ನೂ ಶೇ.7 ವಾಹನಗಳು ಫಾಸ್ಟ್ಯಾಗ್ ಅಳವಡಿಸಬೇಕಿದೆ.
ಇನ್ನೂ ಫಾಸ್ಟ್ಯಾಗ್ ಕಡ್ಡಾಯದ ನಂತರ ಟೋಲ್ ಶುಲ್ಕ ಹೆಚ್ಚಳ ಮಾಡುತ್ತಿರುವುದು ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ಪೆಟ್ರೋಲ್ ಡೀಸೆಲ್ ಬೆರೆ 100ರ ಗಡಿ ದಾಟುತ್ತಿದೆ. ಈ ನಡುವೆ ಟೋಲ್ ಶುಲ್ಕ ಹೆಚ್ಚಳ ಮಾಡಿರುವುದು ವಾಹನ ಸವಾರರ ಕೆಂಗಣಿಗೆ ಗುರಿಯಾಗಿದ್ದು, ಸರ್ಕಾರ ಕೂಡಲೇ ಈ ಬಗ್ಗೆ ಗಮನಹರಿಸೆ ಬೆಲೆ ಏರಿಕೆ ಆಗದಂತೆ ತಡಗಟ್ಟಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.
ಒಟ್ಟಾರೆ ಕೇಂದ್ರ ಜಾರಿಗೆ ತಂದಿದ್ದ ಫಾಸ್ಟ್ಯಾಗ್ ಯೋಜನೆ ವಾಹನ ಸವಾರರಿಗೆ ತಲೆ ಬಿಸಿಯಾಗಿತ್ತು, ಆದ್ರೆ ಸದ್ಯ ಟೋಲ್ ಶುಲ್ಕಹೆಚ್ಚಳದಿಂದ ಗಾಯದ ಮೇಲೆ ಬರೆ ಎಳದಂತಾಗಿದ್ದು ಟೋಲ್ ಶುಲ್ಕ ಹೆಚ್ಚಳವನ್ನ ಬಳಕೆದಾರರು ಯಾವ ರೀತಿ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ