ಒಲಿಂಪಿಕ್ಸ್ ಭಾರತದ ಹಾಕಿ ತಂಡದ ಸಹಾಯಕ ಕೋಚ್ ಅಂಕಿತಾಗೆ ಭವ್ಯ ಸ್ವಾಗತ

ನಮ್ಮ ಪ್ರಧಾನಿಯವರು ಎರಡೆರಡು ಬಾರಿ ನಮಗೆ ಕರೆ ಮಾಡಿ ಪ್ರೋತ್ಸಾಹಿಸಿದ್ದು, ನಮಗೆ ಇನ್ನಷ್ಟು ಧೈರ್ಯ ತುಂಬಿತು ಎಂದು ನೆನೆದರು.

ನಮ್ಮ ಪ್ರಧಾನಿಯವರು ಎರಡೆರಡು ಬಾರಿ ನಮಗೆ ಕರೆ ಮಾಡಿ ಪ್ರೋತ್ಸಾಹಿಸಿದ್ದು, ನಮಗೆ ಇನ್ನಷ್ಟು ಧೈರ್ಯ ತುಂಬಿತು ಎಂದು ನೆನೆದರು.

ನಮ್ಮ ಪ್ರಧಾನಿಯವರು ಎರಡೆರಡು ಬಾರಿ ನಮಗೆ ಕರೆ ಮಾಡಿ ಪ್ರೋತ್ಸಾಹಿಸಿದ್ದು, ನಮಗೆ ಇನ್ನಷ್ಟು ಧೈರ್ಯ ತುಂಬಿತು ಎಂದು ನೆನೆದರು.

  • Share this:
ಕೊಡಗು (ಆ. 11):  ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಭಾರತದ ಹಾಕಿ ತಂಡದ ಸಹಾಯಕ ಕೋಚ್ ಆಗಿದ್ದ ಕೊಡಗಿನ ಅಂಕಿತಾ ಅವರು ತವರಿಗೆ ಮರಳುತಿದ್ದಂತೆ ಜಿಲ್ಲೆಯ ಜನರು ಭವ್ಯ ಸ್ವಾಗತ ಕೋರಿದ್ದಾರೆ. ಕೊಡಗಿನ ಹೆಬ್ಬಾಗಿಲು ಕುಶಾಲನಗರ ಚೆಕ್‍ಪೋಸ್ಟ್ ನಲ್ಲಿ ಕುಶಾಲನಗರದ ನಾಗರಿಕರು ಮತ್ತು ನೂರಾರು ಕ್ರೀಡಾ ಪ್ರೇಮಿಗಳು ಆತ್ಮೀಯ ಮತ್ತು ಗೌರವಪೂರ್ವಕವಾಗಿ ಅವರನ್ನು ಸ್ವಾಗತಿಸಿ ಬರಮಾಡಿಕೊಂಡರು. ಈ ವೇಳೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಅವರು ಕೋಚ್ ಅಂಕಿತಾ ಅವರಿಗೆ ಪುಸ್ತಕವೊಂದರನ್ನು ಉಡುಗರೆಯಾಗಿ ನೀಡಿದರು. ಬಳಿಕ ನೆರೆದಿದ್ದ ನೂರಾರು ಜನರು ಅಂಕಿತಾ ಅವರಿಗೆ ಮತ್ತು ಹಾಕಿ ತಂಡದ ಎಲ್ಲಾ ಆಟಗಾರರಿಗೆ ಜೈಕಾರ ಕೂಗಿದರು. ಶಾಲು ಹೊದಿಸಿ ಪುಷ್ಪಮಾಲೆ ಹಾಕಿ ಬರಮಾಡಿಕೊಂಡರು. ಅವರ ಸಂಬಂಧಿಕರು ಪತಿ, ಅತ್ತೆ ಮಾವಂದಿರು ಕೂಡ ಸಳದಲ್ಲೇ ಜಮಾಯಿಸಿ ಸಂಭ್ರಮಿಸಿದರು. ಅಂಕಿತಾ ಅವರಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು.ಬಳಿಕ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದಲ್ಲೂ ನಾಗರಿಕರು, ಕ್ರೀಡಾ ಪ್ರೇಮಿಗಳು ನೂರಾರು ಸಂಖ್ಯೆಯಲ್ಲಿ ನೆರೆದು ಅಂಕಿತಾ ಅವರನ್ನು ಸಂಭ್ರಮದಿಂದ ಸ್ವಾಗತಿಸಿದರು. ಬಳಿಕ ತೆರೆದ ವಾಹನದಲ್ಲಿ ಸುಂಟಿಕೊಪ್ಪದ ಕನ್ನಡ ವೃತ್ತದವರೆಗೆ ಮೆರವಣಿಗೆ ಮಾಡಿದರು.  ಕನ್ನಡ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಜೊತೆಗೆ ಅವರ ಸ್ವಗ್ರಾಮ ಕಂಬಿಬಾಣೆಯಲ್ಲೂ ಅಂಕಿತಾ ಅವರನ್ನು ಬರಮಾಡಿಕೊಳ್ಳುವ ಸಂಭ್ರಮ ಸಡಗರ ಮುಗಿಲು ಮುಟ್ಟಿತು.

ಈ ಸಂಧರ್ಭ ಮಾತನಾಡಿರುವ ಸಹಾಯಕ ಕೋಚ್ ಅಂಕಿತಾ ಟೋಕಿಯೋದಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲೂ ರೋಚಕ ಆಟವನ್ನೇ ಆಡಿದೆವು. ಪ್ರತೀ ಆಟದ ಹಂತದಲ್ಲೂ ನಾವು ಇತಿಹಾಸ ಸೃಷ್ಟಿಸಬೇಕೆಂಬ ಛಲದಿಂದಲೇ ಆಟಗಾರರು ಆಡಿದರು. ಹೀಗಾಗಿ ಸೆಮಿಫೈನಲ್ ತಲುಪಿದೆವು. ನಮ್ಮ ಕಠಿಣವಾದ ಆಟದ ಮೂಲಕ ನಮ್ಮ ಎದುರಾಳಿ ದೇಶಗಳ ತಂಡಗಳು ಹೆದುರುವಂತೆ ಮಾಡಿದ್ದೆವು. ನಮ್ಮ ತಂಡದ ಪ್ರತೀ ಆಟಗಾರರು ಎದುರಾಳಿಗಳಿಗೆ ಟಫ್ ಫೈಟ್ ನೀಡಿದರು. ಆದರು ನಾವು ಕಂಚಿಗೆ ಸಮಾಧಾನ ಪಟ್ಟುಕೊಳ್ಳಬೇಕಾಯಿತು.ನಮ್ಮ ಪ್ರಧಾನಿಯವರು ಎರಡೆರಡು ಬಾರಿ ನಮಗೆ ಕರೆ ಮಾಡಿ ಪ್ರೋತ್ಸಾಹಿಸಿದ್ದು, ನಮಗೆ ಇನ್ನಷ್ಟು ಧೈರ್ಯ ತುಂಬಿತು ಎಂದು ನೆನೆದರು. ಸೈಮಿ ಫೈನಲ್ ಹಂತದಲ್ಲಿ ಸೋತಾಗ ಸಾಕಷ್ಟು ಬೇಸರವಾಯಿತು. ಆದರೆ ನಮ್ಮ ತಂಡ ಕಠಿಣ ಆಟವಾಡಿದರು ಹಂತ ಹಂತವಾಗಿ ನಮ್ಮ ಪಾಯಿಂಟ್ಸ್ ಕಡಿಮೆಯಾಗಿ ಸೋಲು ನಾವು ಅನುಭವಿಸಿದೆವು ಎಂದಿದ್ದಾರೆ. ಆದರೆ ಈ ಬಾರಿ ಪುರುಷ ಮತ್ತು ಮಹಿಳಾ ತಂಡಗಳುು ಸಾಧನೆ ಮಾಡಿವೆ. ಪ್ರತೀ ಮನೆಯಲ್ಲಿ ಹಾಕಿ ಎನ್ನುವಂತಾಗಿರುವುದು ಖುಷಿ ತಂದಿದೆ ಎಂದಿದ್ದಾರೆ.

ಕರ್ನಾಟಕದ ಯಾವೊಬ್ಬ ಆಟಗಾರ್ತಿ ಇಂಡಿಯಾ ಟೀಂನಲ್ಲಿ ಇರಲಿಲ್ಲ. ಅದು ಕೋವಿಡ್ ಕಾರಣದಿಂದಾಗಿ ಆಯ್ಕೆಯಾಗಲಿಲ್ಲ. ಮುಂದಿನ ದಿನಗಳಲ್ಲಿ ಆ ಅವಕಾಶಗಳು ದೊರೆಯಬಹುದು ಎಂದಿದ್ದಾರೆ. ಇನ್ನು ಭಾರತ ತಂಡದ ಆಟಗಾರ್ತಿ ವಂದನಾ ಕಠಾರಿಯಾ ಅವರನ್ನು ಜಾತಿ ಹೆಸರಿನಿಂದ ಹೀಯಾಳಿಸಿರುವವರನ್ನು ಅವರು ನಾನ್ಸೆಸ್ ಗಳು ಎಂದು ತಿರುಗೇಟು ನೀಡಿದ್ದಾರೆ. ಸಂಭ್ರಮದಲ್ಲಿ ಅಂಕಿತಾ ಅವರ ಪತಿ ಸುರೇಶ್ ಅವರು ಕೂಡ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದರು. ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: