ಕಾರವಾರ (ಆ. 24): ಟೋಕಿಯೋ ಒಲಂಪಿಕ್ಸ್ನಲ್ಲಿ (Tokyo Olympics) ಈಟಿ ಎಸೆತದ (javelin throw) ಮೂಲಕ ಚಿನ್ನದ ಪದಕ ಗಳಿಸಿ ದೇಶಕ್ಕೆ ಹೆಸರು ತಂದ ನೀರಜ್ ಚೋಪ್ರಾ (neeraj chopra). ಅವರರು ತಮ್ಮ ಮಾಜಿ ಕೋಚ್ ಕಾಶಿನಾಥ್ (kashinath) ಅವರನ್ನು ಭೇಟಿಯಾಗಿ ಗಮನ ಸೆಳೆದಿದ್ದಾರೆ. ಪುಣೆಯಲ್ಲಿನ ಅವರ ಮನೆಗೆ ಭೇಟಿ ನೀಡಿ ಕುಟುಂಬದೊಂದಿಗೆ ಕಾಲ ಕಳೆದಿದ್ದಾರೆ. ಈ ಮೂಲಕ ಕಾಶಿನಾಥ್ ಚಿನ್ನದ ಹುಡುಗ ನೀರಜ್ ಚೋಪ್ರಾ ಗುರುವಲ್ಲ ಎಂದವರಿಗೆ ಉತ್ತರ ನೀಡಿದ್ದಾರೆ. ಟೋಕಿಯೋ ಒಲಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಬಂಗಾರದ ಪದಕ ಗೆಲ್ಲುತ್ತಿದ್ದಂತೆ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬೆಂಗಳೆ ಗ್ರಾಮದ ಕಾಶೀನಾಥ ನಾಯ್ಕ ಹೆಸರು ಪ್ರಖ್ಯಾತಿಗೊಂಡಿತು. ನೀರಜ್ ಚೋಪ್ರಾಗೆ ಕಾಶಿನಾಥ್ ಕೂಡ ಈ ಹಿಂದೆ ತರಬೇತಿ ನೀಡಿದ್ದಾಗಿ ತಿಳಿಸಿದ್ದು, ಅವರೊಂದಿಗಿನ ಒಡನಾಟವನ್ನು ಕೂಡ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು. ಚಿನ್ನದ ಹುಡುಗನ ಪರಿಶ್ರಮದ ಹಿಂದೆ ರಾಜ್ಯದ ಗುರುವಿನ ಪಾತ್ರಕ್ಕೆ ಮೆಚ್ಚು ರಾಜ್ಯ ಸರ್ಕಾರ ಕೂಡ ಕೋಚ್ ಕಾಶಿನಾಥ್ಗೆ 10 ಲಕ್ಷ ಬಹುಮಾನ ಪ್ರಶಸ್ತಿ ಘೋಷಿಸಿತು.
ಯಾವಾಗ ರಾಜ್ಯ ಸರ್ಕಾರ ಕಾಶಿನಾಥ್ಗೆ ನಗದು ಬಹುಮಾನ ಘೋಷಸಿತು. ಅದರ ಬೆನ್ನಲ್ಲೇ ಕಾಶಿನಾಥ್ ನೀರಜ್ ಚೋಪ್ರಾ ಕೋಚ್ ಅಲ್ಲ ಎನ್ನುವ ಮೂಲಕ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಹೇಳಿಕೆ ರಾಜ್ಯದಲ್ಲಿ ಬಹು ಚರ್ಚೆಯಾಯಿತು. ಈ ಹಿನ್ನಲೆ ಕಾಶಿನಾಥ್ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪ ಕೂಡ ಕೇಳಿ ಬಂದಿತು.
ಆದರೆ, ಇದಕ್ಕೆ ತಿರುಗೇಟು ನೀಡಿದ್ದ ಕಾಶೀನಾಥ್ ನೀರಜ್ಗೆ ತರಬೇತಿ ಎರಡು ವರ್ಷ ತರಬೇತಿ ನೀಡಿದ್ದು, 2013-19 ವರೆಗೂ ಇಂಡಿಯಾ ಟೀ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೆ ಎಂಬುದಕ್ಕೆ ಸಾಕ್ಷಿ ನೀಡಲು ಸಿದ್ಧನಿದ್ದೇನೆ ಎಂಬುದಾಗಿ ಸವಾಲು ಕೂಡ ಹಾಕಿದ್ದರು.
ಇದನ್ನು ಓದಿ: ಚಿನ್ನದ ಹುಡುಗ ನೀರಜ್ಗೆ ತರಬೇತಿ ನೀಡಿದ್ದ ಕನ್ನಡಿಗ ಕಾಶಿನಾಥ್ ನಾಯ್ಕ್ಗೆ ರಾಜ್ಯ ಸರ್ಕಾರದಿಂದ 10 ಲಕ್ಷ ಬಹುಮಾನ ಘೋಷಣೆ
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ನೀರಜ್ ಚೋಪ್ರಾ ನೇರವಾಗಿ ಶಿರಸಿಯ ತಮ್ಮ ಗುರುಗಳ ಮನೆಗೆ ಭೇಟಿ ನೀಡಿ, ಸಮಯ ಕಳೆದಿದ್ದಾರೆ. ಈ ಮೂಲಕ ಎಲ್ಲಾ ವಾದ- ವಿವಾದಗಳಿಗೆ ತೆರೆ ಏಳೆದಿದ್ದು, ತಾವು ಕನ್ನಡಿಗ ಕಾಶೀನಾಥ್ ಅವರ ಅಡಿಯಲ್ಲಿ ತರಬೇತಿ ಪಡೆದಿದ್ದು ಸತ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಇದನ್ನು ಓದಿ: ಬಂಗಾರದ ಹುಡುಗ ನೀರಜ್ಗೆ ತರಬೇತಿ ನೀಡಿದ್ದ ಶಿರಸಿಯ ಕೋಚ್
ಟೋಕಿಯೋ ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆದು ಬಂದ ನೀರಜ್ ಚೋಪ್ರಾ ಸೇರಿದಂತೆ ಉಳಿದ ಸ್ಪರ್ಧಿಗಳಿಗೆ ಪ್ರಧಾನ ಮಂತ್ರಿ ವಿಶೇಷ ಆಹ್ವಾನ ನೀಡಿ ಮಾತು ಕತೆ ನಡೆಸಿದ್ದರು. ಈ ವೇಳೆ ನೀರಜ್ ಚೋಪ್ರಾಗೆ ಇಷ್ಟವಾದ ಚೂರ್ಮವನ್ನು ಅವರೊಟ್ಟಿಗೆ ಸೇವಿಸಿದ್ದರು. ಇದಾದ ಬಳಿಕ ಉತ್ತರ ಪ್ರದೇಶ ಸಿಎಂ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದರು
ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನೀರಜ್ ಚೋಪ್ರಾ ಈಗ ಗುಣಮುಖರಾಗಿದ್ದು, ಮತ್ತೆ ತರಬೇತಿಗೆ ಮರಳಿದ್ದಾರೆ. ಈ ವೇಳೆ ತಮ್ಮ ತರಬೇತಿಯ ಆರಂಭದ ದಿನಗಳಲ್ಲಿ ಕೋಚ್ ಆಗಿದ್ದ ಕಾಶೀನಾಥ್ ಅವರನ್ನು ಹುಡುಕಿಕೊಂಡು ಬಂದು ಅವರ ಕಟುಂಬದ ಜೊತೆ ಕಾಲ ಕಳೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ