ಟೋಕಿಯೋ ಒಲಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತೀಯರ 120 ವರ್ಷಗಳ ಕನಸನ್ನು ಸಕಾರ ಮಾಡಿದ್ದಾರೆ. ಅಥ್ಲೆಟಿಕ್ ವಿಭಾಗದಲ್ಲಿ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಅವರ ಈ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಎಲ್ಲಾ ವಾಸಿಗಳು ನೀರಜ್ ಚೋಪ್ರಾ ಈ ಸಾಧನೆಗೆ ಶ್ಲಾಘಿಸಿದ್ದಾರೆ. ಭಾರತೀಯ ಸೇನೆಯ ಕಿರಿಯ ನಿಯೋಜಿತ ಅಧಿಕಾರಿಯಾಗಿರುವ ನೀರಜ್ ಚೋಪ್ರಾಗೆ ವಿದೇಶಿ ತರಬೇತುದಾರ ಯುವೆ ಹೋನ್ ತರಬೇತಿ ನೀಡಿದ್ದಾರೆ. ಯುವೆ ಹೋನ್ಗೂ ಮೊದಲು ನೀರಜ್ ಚೋಪ್ರಾಗೆ ತರಬೇತಿ ನೀಡಿದ್ದವರು ನಮ್ಮ ರಾಜ್ಯದ ಉತ್ತರ ಕನ್ನಡದ ಶಿರಸಿಯ ಕಾಶಿನಾಥ ನಾಯ್ಕ ಅವರು ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ಶಿರಸಿಯ ಬೆಂಗಳೆ ಗ್ರಾಮದ ಕಾಶಿನಾಥ ನಾಯ್ಕ ಚಿನ್ನದ ಹುಡುಗ ನೀರಜ್ ಚೋಪ್ರಾ ಸೇರಿದಂತೆ ಒಲಂಪಿಕ್ಸ್ನಲ್ಲಿ ಭಾಗಿಯಾದ ಮತ್ತಿಬ್ಬರು ಅಭ್ಯರ್ಥಿಗಳಾದ ಶಿವಪಾಲ್ ಮತ್ತು ಅನುರಾಣಿ ಅವರಿಗೆ ಜಾವಲಿನ್ ಥ್ರೋ ಪಾಠ ಹೇಳಿಕೊಟ್ಟವರಾಗಿದ್ದಾರೆ.
ಈ ಕುರಿತು ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಕಾಶಿನಾಥ ನಾಯ್ಕ, ಕಾರ್ಗಿಲ್ ಯುದ್ದ ಸಂದರ್ಭದಲ್ಲಿ ದೇಶ ಸೇವೆ ಮಾಡುವ ಉದ್ದೇಶದಿಂದ ಸೇನೆಗೆ ಸೇರಿದೆ. ಸೇನೆಗೆ ಸೇರಿದ ಬಳಿಕ ಕ್ರೀಡೆ ಬಗ್ಗೆ ಆಸಕ್ತಿ ಹೊಂದಿ ಅನೇಕ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾದೆ. 2010ರ ಕಾಮನ್ ವೇಲ್ತ್ ಗೇಮ್ನಲ್ಲಿ ಕಂಚಿನ ಪದಕ ಗೆದ್ದೆ. ಏಷಿಯನ್ ಚಾಪಿಂಯನ್ ಶಿಪ್ ಬೆಳ್ಳಿ ಪದಕ, ಸೌತ್ ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಸೇರಿದಂತೆ ಹಲವು ಪ್ರಶಸ್ತಿ ಬಂದಿದೆ. 14 ಬಾರಿ ನ್ಯಾಷನಲ್ ಚಾಂಪಿಯನ್ ಆಗಿದ್ದಾರೆ. ಸದ್ಯ ಸುಬೇದುದಾರ ಹುದ್ದೆಯಲ್ಲಿರುವ ಅವರು, ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸಿಟಿಟ್ಯೂಟ್ನಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರತಿಭಾನ್ವಿತ ಹುಡುಗ ನೀರಜ್ ಚೋಪ್ರಾ
2013-19 ವರೆಗೂ ಇಂಡಿಯಾ ಟೀ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೆ. ಭಾರತಾದ್ಯಂತ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಾವಂತ ಕ್ರೀಡಾ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ 2015ರಲ್ಲಿ ನೀರಜ್ ಚೋಪ್ರಾ ನಮ್ಮ ಕ್ಯಾಂಪ್ ಆಯ್ಕೆ ಮಾಡಿದ್ದೇವು. ಹರಿಯಾಣದ ಪಾಣಿಪತ್ ಬಳಿಯ ಖಂಡ್ರಾ ಹಳ್ಳಿ ನೀರಜ್ ಅತ್ಯಂತ ಪ್ರತಿಭಾನ್ವಿತ ಹುಡುಗ. ಎರಡು ವರ್ಷಗಳ ಕಾಲ ಅಂದರೆ, 2017ರವೆಗೂ ನನ್ನ ಅಡಿಯಲ್ಲಿಯೇ ತರುಬೇತು ನೀಡಿದೆ. 2016ರಲ್ಲಿ ಕ್ಯಾರಿ ಕವರ್ಟ್ ಎಂಬ ವಿದೇಶಿ ಕೋಚ್ ಕೂಡ ನನ್ನ ಜೊತೆ ನೀರಜ್ಗೆ ತರಬೇತಿ ನೀಡಿದರು. 2016ರಲ್ಲಿ ಪೋಲ್ಯಾಂಡ್‍ನಲ್ಲಿ ನಡೆದ ಐಎಎಎಫ್ ವಿಶ್ವ ಯು20 ಚಾಂಪಿಯನ್‍ಶಿಪ್ ಗೆದ್ದ ಬಳಿಕ ನೀರಜ್ಗೆ ಸೇನೆ ಸೇರುವಂತೆ ನಾವು ಸಲಹೆ ನೀಡಿದೆವು. ಅದರಂತೆ ಅವರು ನೇರವಾಗಿ ಭಾರತೀಯ ಸೇನೆಯು ಕಿರಿಯ ನಿಯೋಜಿತ ಅಧಿಕಾರಿಯಾಗಿ ನೇಮಕವಾಯಿತು ಎಂದರು.
ಇದನ್ನು ಓದಿ: ಒಲಿಪಿಂಕ್ಸ್ನಲ್ಲಿ ಭಾರತಕ್ಕೆ ಐತಿಹಾಸಿಕ ದಿನ: ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ
ಅತ್ಯುತ್ತಮ ವೈಯುಕ್ತಿಕ ಸಾಧನೆ
ಜಕಾರ್ತದಲ್ಲಿ 2018ರಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಅವರು ಚಿನ್ನದ ಪದಕ ಗೆದ್ದು, 88.06ಮೀ ಭಾರತೀಯ ಹೊಸ ದಾಖಲೆ ಸೃಷ್ಟಿಸಿದ್ದರು. 2021ರಲ್ಲಿ ಇಂಡಿಯನ್ ಗ್ರಾಂಡ್ ಪ್ರಿಕ್ಸ್‍ನಲ್ಲಿ 88.07ಮೀ ಎಸೆತದ ಮೂಲಕ ತಾವೇ ತಮ್ಮ ದಾಖಲೆಯನ್ನು ಮುರಿದಿದ್ದರು. ಗೋಲ್ಡ್ ಕೋಸ್ಟ್ 2018 ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು 2016ರ ಐಎಎಎಫ್ ವಿಶ್ವ ಯು20ನಲ್ಲಿ 86.48ಮೀ ಎಸೆತದ ಮೂಲಕ ವಿಶ್ವ ಜೂನಿಯರ್ ದಾಖಲೆ ನಿರ್ಮಿಸಿದ ವಿಶ್ವ ಚಾಂಪಿಯನ್ ಕೂಡ.
ಭಾರತೀಯ ಸೇನೆಯ ನಿಯೋಜಿತ ಅಧಿಕಾರಿ
ನೀರಜ್ ಚೋಪ್ರಾ ಭಾರತೀಯ ಸೇನೆಗೆ ಸೇರಿದ್ದಾರೆ, ಅವರನ್ನು ಭಾರತೀಯ ಸೇನೆಯು ಕಿರಿಯ ನಿಯೋಜಿತ ಅಧಿಕಾರಿಯಾಗಿ ನೇಮಿಸಿದೆ. ವಿಶ್ವದ ಅತ್ಯಂತ ಪ್ರಸಿದ್ಧ ತರಬೇತುದಾರರಾದಜ್ಞ‘ ಯುವೆ ಹೋನ್ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ