• Home
  • »
  • News
  • »
  • state
  • »
  • Mangaluru: ಒಂದೇ ಮಳೆಗೆ ಮಾಯವಾಯ್ತು 30 ಕೋಟಿ ವೆಚ್ಚದ ರಸ್ತೆ; ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

Mangaluru: ಒಂದೇ ಮಳೆಗೆ ಮಾಯವಾಯ್ತು 30 ಕೋಟಿ ವೆಚ್ಚದ ರಸ್ತೆ; ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ರಸ್ತೆ

ರಸ್ತೆ

ಈ ವರ್ಷದ ಮೇ ತಿಂಗಳ ಕೊನೆಗೆ ಅಗಲೀಕರಣಗೊಳಿಸಿ, ಒಂದು ಲೇಯರ್ ಡಾಂಬರೀಕರಣವನ್ನೂ ಮಾಡಲಾಗಿತ್ತು. ಆದರೆ ಒಂದೇ ಮಳೆಗೆ ಹಾಕಲಾದ ಡಾಂಬರ್ ಜೊತೆಗೆ ರಸ್ತೆಯ ಬೆಡ್ಡಿಂಗ್ ಕೂಡಾ ನೀರಿನಲ್ಲಿ ಹರಿದು ಹೋಗಿದೆ.

  • Share this:

ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣಗೊಳ್ಳುತ್ತಿರುವ ರಸ್ತೆಯೊಂದು ಒಂದೇ ಮಳೆಗೆ (Rains) ಕೊಚ್ಚಿ ಹೋಗಿದೆ. ಮಂಗಳೂರು (Mangaluru) ಹೊರವಲಯದ ತೊಕ್ಕೋಟಿನಿಂದ ದೇರಳಕಟ್ಟೆ (Tokkuttu To Deralakatte) ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ (Four lane Road) ಅಭಿವೃದ್ಧಿ ಪಡಿಸಲಾಗಿತ್ತು. ರಸ್ತೆಯನ್ನು ಅಗಲೀಕರಣಗೊಳಿಸಿ ಒಂದು ಹಂತದ ಡಾಂಬರೀಕರಣವೂ ನಡೆದಿದ್ದು, ಇದೀಗ ರಸ್ತೆಯೇ ಮಾಯವಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಅತ್ಯಂತ ಜನ ಹಾಗೂ ವಾಹನ ಜಂಗುಳಿಯಿರುವ ರಸ್ತೆಯೆಂದೇ ಗುರುತಿಸಿಕೊಂಡಿರುವ ಮಂಗಳೂರು ಹೊರವಲಯದ ತೊಕ್ಕೋಟಿನಿಂದ ಮುಡಿಪು ಸಂಪರ್ಕಿಸುವ ರಸ್ತೆ ಇದೀಗ ಸಂಪೂರ್ಣ ಹದಗೆಟ್ಟು ಹೋಗಿದೆ. ಈ ರಸ್ತೆಯ ವಾಹನ ದಟ್ಟಣೆಯನ್ನು ಪರಿಗಣಿಸಿ ಇದನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಎರಡು ವರ್ಷಗಳ ಹಿಂದೆಯೇ ಕಾಮಗಾರಿಯನ್ನು ಆರಂಭಿಸಲಾಗಿತ್ತು.


ಕೊರೊನಾ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ತಡವಾಗಿ ಆರಂಭಗೊಂಡಿದ್ದ ಕಾಮಗಾರಿಯನ್ನು ಈ ವರ್ಷದ ಮೇ ತಿಂಗಳ ಕೊನೆಗೆ ಅಗಲೀಕರಣಗೊಳಿಸಿ, ಒಂದು ಲೇಯರ್ ಡಾಂಬರೀಕರಣವನ್ನೂ ಮಾಡಲಾಗಿತ್ತು. ಆದರೆ ಒಂದೇ ಮಳೆಗೆ ಹಾಕಲಾದ ಡಾಂಬರ್ ಜೊತೆಗೆ ರಸ್ತೆಯ ಬೆಡ್ಡಿಂಗ್ ಕೂಡಾ ನೀರಿನಲ್ಲಿ ಹರಿದು ಹೋಗಿದೆ.


ರಸ್ತೆಗೆ 30 ಕೋಟಿ ಅನುದಾನ


ಕೆಲವು ಕಡೆಗಳಲ್ಲಿ ರಸ್ತೆ ಜಮೀನಿನ ಒತ್ತುವರಿ ತೆರವು, ಇನ್ನು ಕೆಲವು ಕಡೆಗಳಲ್ಲಿ ಖಾಸಗಿ ಜಮೀನುಗಳ ಒತ್ತುವರಿ ಮಾಡಬೇಕಾದ ಹಿನ್ನೆಲೆಯಲ್ಲಿ ಕಾಮಗಾರಿ ನಿಧಾನಗತಿಯಿಂದ ಆರಂಭಗೊಂಡಿತ್ತು.


ತೊಕ್ಕೋಟಿನಿಂದ ದೇರಳಕಟ್ಟೆವರೆಗಿನ ಸುಮಾರು 2.5 ಕಿಲೋಮೀಟರ್ ಮತ್ತು ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ಕೋಟೇಕಾರ್ ವರೆಗಿನ ಎರಡು ರಸ್ತೆಗಳಿಗೆ 15 ಕೋಟಿ ರೂಪಾಯಿ ಹಾಗು ದೇರಳಕಟ್ಟೆಯಿಂದ ಮುಡಿಪುವರೆಗಿನ ಇನ್ನೊಂದು ಕಾಮಗಾರಿಗೆ 15 ಕೋಟಿ ಹೀಗೆ ಎರಡು ಪ್ಯಾಕೇಜು ಮೂಲಕ ಒಟ್ಟು 30 ಕೋಟಿ ರೂಪಾಯಿ ಅನುದಾನವನ್ನು ರಸ್ತೆಗಾಗಿ ಮೀಸಲಿಡಲಾಗಿದೆ.


ಇದನ್ನೂ ಓದಿ:  Recruitment Scam: ಸಹ ಶಿಕ್ಷಕರ ನೇಮಕಾತಿ ಅಕ್ರಮ; ಸಿಐಡಿ ಅಧಿಕಾರಿಗಳಿಂದ ಮತ್ತೆ ಐವರ ಬಂಧನ


ಜಲ್ಲಿಕಲ್ಲಿನ ಬೆಡ್ಡಿಂಗ್ ಸಹಿತ ಕಿತ್ತು ಹೋದ ರಸ್ತೆ


ತೊಕ್ಕೋಟಿನಿಂದ ದೇರಳಕಟ್ಟೆವರೆಗಿನ 2.5 ಕಿಲೋಮೀಟರ್ ರಸ್ತೆ ಕಾಮಗಾರಿ ಭಾಗಶಃ ಮುಗಿದಿದ್ದರೆ, ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ಕೋಟೆಕಾರು ವರೆಗಿನ ಕಾಮಗಾರಿ ಮುಗಿಸಲಾಗಿದೆ. ಆದರೆ ತೊಕ್ಕೋಟಿನಿಂದ ದೇರಳಕಟ್ಟೆವರೆಗಿನ 2.5 ಕಿಲೋಮೀಟರ್ ದೂರದ ರಸ್ತೆಯ ಚತುಷ್ಪಥ ಕಾಮಗಾರಿ ಕಳೆದ ಮೇ ತಿಂಗಳಿಗೆ ಜಲ್ಲಿಕಲ್ಲಿನ ಬೆಡ್ಡಿಂಗ್ ಸೇರಿದಂತೆ ಒಂದು ಹಂತದ ಡಾಂಬರೀಕರಣವೂ ನಡೆದಿತ್ತು.ಆದರೆ ಒಂದೇ ಮಳೆಗೆ ಬೆಡ್ಡಿಂಗ್ ಸಹಿತ ರಸ್ತೆ ನೀರಿನ ಜೊತೆಗೆ ಹರಿದಿರುವುದು ಕಳಪೆ ಕಾಮಗಾರಿಗೆ ನಿದರ್ಶನ ಎಂದು ಆರೋಪಿಸಿಲಾಗಿದೆ.


40 ಪರ್ಸೆಂಟ್ ಕಮಿಷನ್  ಸರಕಾರ ಎಂದು ಬಿಜೆಪಿಯನ್ನು (BJP) ದೂರುತ್ತಿದ್ದ ವಿಧಾನಸಭಾ ಪ್ರತಿಪಕ್ಷ ಉಪನಾಯಕ ಯು‌.ಟಿ.ಖಾದರ್ (UT Khader) ಕ್ಷೇತ್ರದ ವ್ಯಾಪ್ತಿಗೆ ಬರುವ ಈ ರಸ್ತೆಯಲ್ಲಿ 80 ಪರ್ಸೆಂಟ್ ಕಮಿಷನ್ ಹೊಡೆಯಲಾಗಿದೆ ಎಂದು ಬಿಜೆಪಿ ಆರೋಪಿಸುತ್ತಿದೆ.


ಯುಟಿ ಖಾದರ್ ವಿರುದ್ಧ ಬಿಜೆಪಿ ಕಿಡಿ


ರಸ್ತೆಯ ಕಾಮಗಾರಿಯನ್ನು ಶಾಸಕರ ಬೆಂಬಲಿಗರಿಗೇ ನೀಡಲಾಗಿದ್ದು, ಕಮಿಷನ್​​ಗೆ ತಕ್ಕಂತೆ ರಸ್ತೆ ಕಾಮಗಾರಿಯನ್ನೂ ನಡೆಸಲಾಗಿದೆ. ರಸ್ತೆಯ ದುರಸ್ತಿಯಿಂದ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಜಿತ್ ಕುಮಾರ್ ತೊಕ್ಕೋಟು ಆರೋಪಿಸುತ್ತಾರೆ.


ಇದನ್ನೂ ಓದಿ:  Karnataka Weather Report: ಗಮನಿಸಿ, ಇಂದು ಸಹ ರಾಜ್ಯದಲ್ಲಿ ಮಳೆ; ಇಲ್ಲಿದೆ ಹವಾಮಾನ ವರದಿ


ಶಾಸಕರು ಕೇವಲ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಬಿಟ್ಟು ಇಂಥಹ ಗಂಭೀರ ಸಮಸ್ಯೆಯತ್ತ ಇನ್ನಾದರೂ ಗಮನಹರಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.


ಬೆಳ್ಳಂಬೆಳಗ್ಗೆ ರಾಯಚೂರಿನಲ್ಲಿ ಜೋರು ಮಳೆ


ಸೋಮವಾರ ರಾಯಚೂರು (Raichur Rains) ಜಿಲ್ಲೆಯಲ್ಲಿ ಧಾರಾಕಾರ ಮಳೆ ಶುರುವಾಗಿದೆ. ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ 15 ದಿನಗಳಿಂದ ಮಳೆರಾಯ ರಾಯಚೂರು ಜಿಲ್ಲೆಯಲ್ಲಿ ಬ್ರೇಕ್ ನೀಡಿತ್ತು. ಬೆಳ್ಳಂಬೆಳಗ್ಗೆ ಸುರಿದ ಮಳೆಯಿಂದಾಗಿ ನಗರ ಭಾಗದ ಜನರ ಜೀವನ ಅಸ್ತವ್ಯಸ್ತ ಉಂಟಾಗಿತ್ತು. ಮಾರುಕಟ್ಟೆಯಲ್ಲಿಯೂ ವ್ಯಾಪಾರಿಗಳು ಪರದಾಡುವಂತಾಗಿದೆ.

Published by:Mahmadrafik K
First published: