ಈ ಸರ್ಕಾರಿ ಶಾಲೆಯಲ್ಲಿ ಶೌಚಾಲಯವೇ ಇಲ್ಲ: ಬಯಲನ್ನೇ ಆಶ್ರಯಿಸಿದ್ದಾರೆ ಮಕ್ಕಳು, ಶಿಕ್ಷಕರು!


Updated:September 6, 2018, 4:33 PM IST
ಈ ಸರ್ಕಾರಿ ಶಾಲೆಯಲ್ಲಿ ಶೌಚಾಲಯವೇ ಇಲ್ಲ: ಬಯಲನ್ನೇ ಆಶ್ರಯಿಸಿದ್ದಾರೆ ಮಕ್ಕಳು, ಶಿಕ್ಷಕರು!

Updated: September 6, 2018, 4:33 PM IST
ರಾಘವೇಂದ್ರ ಗಂಜಾಮ್, ನ್ಯೂಸ್ 18 ಕನ್ನಡ

ಮಂಡ್ಯ(ಸೆ.06): ಈ ಸರ್ಕಾರಿ ಶಾಲೆಯಲ್ಲಿನ ಒಂದು ಸಮಸ್ಯೆ ಇಲ್ಲಿ ಓದುತ್ತಿರೋ ಹೆಣ್ಣು‌ ಮಕ್ಕಳಿಗೆ ಮುಳುವಾಗಿದೆ.‌ ಈ ವಿದ್ಯಾರ್ಥಿನಿಯರ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಈ ಸಮಸ್ಯೆಯಿಂದ ಶಾಲೆ ಬಿಡಿಸಲು ನಿರ್ಧರಿಸಿದ್ದಾರೆ. ಇದರಿಂದ ಈ ಶಾಲೆಯ ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ. ಅಷ್ಟಕ್ಕೂ ಇಲ್ಲಿನ ಸಮಸ್ಯೆ ಏನು? ಇಲ್ಲಿದೆ ವಿವರ

ಮಂಡ್ಯ ಜಿಲ್ಲೆಯ ಕೆ. ಆರ್‌ ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ಪ್ರಾಥಮಿಕ‌ ಪಾಠ ಶಾಲೆಯಲ್ಲಿ ಸುಮಾರು 95 ಮಕ್ಕಳು‌ ವ್ಯಾಸಂಗ ಮಾಡುತ್ತಿದ್ದು ಈ ಶಾಲೆಯಲ್ಲಿನ ‌ಮೂಲಭೂತ ಸೌಕರ್ಯದ ಸಮಸ್ಯೆಯಿಂದ ಕೆಂಗೆಟ್ಟು ಹೋಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಶೌಚಾಲಯದಲ್ಲಿನ ಸ್ವಚ್ಚತೆ ಕೊರತೆಯಿಂದ ಪ್ರತಿದಿನ‌ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು‌ ಸೇರಿದಂತೆ ಶಿಕ್ಷಕರು ಕೂಡ ಶೌಚಕ್ಕಾಗಿ ಬಯಲಿಗೆ ಹೋಗಬೇಕಾದ ಸ್ಥಿತಿ ಬಂದಿದೆ. ಸಮಸ್ಯೆ ಬಗೆ ಹರಿಸುವಂತೆ ಹಲವು ಬಾರಿ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ರು ಯಾರು ಸ್ಪಂದಿಸದಿರುವ ಕಾರಣದಿಂದ ಈ ಶಾಲೆಯ ಹೆಣ್ಣು‌ ಮಕ್ಕಳ ಪೋಷಕರು ಇದೀಗ ಈ ಶಾಲೆಯಲ್ಲಿ ಓದುತ್ತಿರೋ ಹೆಣ್ಣು ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದ ಈ ಶಾಲೆಯ ವಿದ್ಯಾರ್ಥಿನಿಯರು ಇದೀಗ ಕಂಗಾಲಾಗಿದ್ದು ಸರ್ಕಾರಕ್ಕೆ‌ ಶೌಚಾಲಯ ಕಟ್ಟಿಸಿಕೊಟ್ಟು ನಮ್ಮ ಭವಿಷ್ಯ ಉಳಿಸಿ ಅಂತಾ‌ ಮನವಿ ಮಾಡಿದ್ದಾರೆ.

ಇನ್ನು ಈ ಶಾಲೆಯಲ್ಲಿ ಸಮಸ್ಯೆಗಳೆ ಹೊದ್ದು ಮಲಗಿವೆ. ಈ ಶಾಲೆಯ ಕುಡಿಯುವ ನೀರಿನ‌ ಸೌಕರ್ಯವಿಲ್ಲದೆ ಎಲ್ಲರು ಪರದಾಡುತ್ತಿದ್ದಾರೆ. ಬಿಸಿಯೂಟ, ಕುಡಿಯುವ ನೀರು ಮತ್ತು ಶೌಚಾಲಯ ಬಳಕೆಗಾಗಿ ೧೦೦ ಮೀ ದೂರದ ಬೋರ್ವೆಲ್ ನಿಂದ ವಿದ್ಯಾರ್ಥಿಗಳು ನೀರು ಹೊತ್ತು ತರಬೇಕಾಗಿದೆ. ಅಲ್ದೆ ಶಾಲೆಗೆ ಬರೋ‌ ಮಕ್ಕಳು ಬಾಟಲ್ ಮೂಲಕ ನೀರು ತರುವ ಅನಿವಾರ್ಯತೆ ಎದುರಾಗಿದೆ. ಇದರ ಜೊತೆಗೆ ಈ ಶಾಲೆಯಲ್ಲಿನ‌ ಅಡಿಗೆಯವರ ಸಮಸ್ಯೆಯಿಂದ ಬಿಸಿಯೂಟ ಯೋಜನೆ ಕೂಡ ಸಮರ್ಪಕವಾಗಿ ಜಾರಿ‌ ಆಗಿಲ್ಲ‌. ಈ‌ ಎಲ್ಲಾ ಸಮಸ್ಯೆ ಬಗೆ ಹರಿಸುವಂತೆ ಶಾಲೆಯ ಎಸ್​ಡಿಎಂಸಿ ಸದಸ್ಯರು‌ ಆಗ್ರಹಿಸಿದ್ರೆ, ಶಿಕ್ಷಣ ಇಲಾಖೆ ಮೇಲಧಿಕಾರಿಗಳು ಮಾತ್ರ ಹಾರಿಕೆಯ ಉತ್ತರ ನೀಡುತ್ತಾ, ಅದೇನು ಸಮಸ್ಯೆ ಇದೆ ಅದನ್ನ ಬಗೆಹರಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾನೆ ವರದಿ ಬಂದ ನಂತ ನೋಡೋಣ ಅಂತಿದ್ದಾರೆ‌.

ಒಟ್ಟಾರೆ ಸಂತೇಬಾಚಹಳ್ಳಿ ಸರ್ಕಾರಿ‌ ಶಾಲೆಯ ಸಮಸ್ಯೆಯಿಂದ ಈ ಶಾಲೆಯ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಕಂಟಕವಾಗುವಂತಿದೆ. ಸಮಸ್ಯೆ ಮತ್ತಷ್ಟು ಗಂಭೀರವಾಗುವ ಮುಂಚೆಯೇ ಅಧಿಕಾರಿಗಳು‌ ಎಚ್ಚೆತ್ತು ಸಮಸ್ಯೆ ಬಗೆ ಹರಿಸುವ ಕೆಲಸ ಮಾಡಬೇಕಿದೆ.

 
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...