• Home
  • »
  • News
  • »
  • state
  • »
  • Corona Alert: ಮತ್ತೊಮ್ಮೆ ಜಾರಿಯಾಗುತ್ತಾ ಟಫ್ ರೂಲ್ಸ್? ಸಂಜೆ ತಜ್ಞರೊಂದಿಗೆ ಮಹತ್ವದ ಸಭೆ

Corona Alert: ಮತ್ತೊಮ್ಮೆ ಜಾರಿಯಾಗುತ್ತಾ ಟಫ್ ರೂಲ್ಸ್? ಸಂಜೆ ತಜ್ಞರೊಂದಿಗೆ ಮಹತ್ವದ ಸಭೆ

ಕೋವಿಡ್‌ ಎಚ್ಚರಿಕೆಯ ಸಂಗ್ರಹ ಫಲಕ

ಕೋವಿಡ್‌ ಎಚ್ಚರಿಕೆಯ ಸಂಗ್ರಹ ಫಲಕ

ರಾಜ್ಯದಲ್ಲಿ ಕೋವಿಡ್ ಸೋಂಕು ಏರಿಕೆಯಾಗುತ್ತಿದೆ. ಹೀಗಾಗಿ 4ನೇ ಅಲೆ ಅಬ್ಬರ ಎದುರಿಸಲು ಈಗಲಿಂದಲೇ ತಯಾರಿ ಶುರುವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯು ಕೋವಿಡ್ ತಾಂತ್ರಿಕ ಸಲಹಾ ಸಭೆ ಕರೆದಿದ್ದು, ಇಂದಿನ ಸಭೆ ಭಾರೀ ಮಹತ್ವ ಪಡೆದಿದೆ.

  • Share this:

ಬೆಂಗಳೂರು: ಕೊರೋನ ವೈರಸ್ (Corona Virus) ಅಬ್ಬರ ಮತ್ತೆ ಜಾಸ್ತಿಯಾಗುತ್ತಿದೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಕೋವಿಡ್ (Covid) ಮಹಾಮಾರಿ ಅಬ್ಬರಿಸುತ್ತಿದೆ. ಇತ್ತ ಭಾರತದಲ್ಲೂ (India) ಕೋವಿಡ್ ಅಬ್ಬರ ಜೋರಾಗಿದೆ. ದೆಹಲಿ (Delhi), ಪಂಜಾಬ್ (Punjab), ಕೇರಳ (Kerala), ತಮಿಳುನಾಡು (Tamil Nadu) ಸೇರಿದಂತೆ ಹಲವೆಡೆ ಸೋಂಕು (Infection) ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅತ್ತ ಕೇಂದ್ರ ಸರ್ಕಾರ (Central Government) ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಈ ರಾಜ್ಯಗಳಲ್ಲಿ ಕೋವಿಡ್  ಸೋಂಕು ಹೆಚ್ಚುವ ಸಾಧ್ಯತೆ ಇದ್ದು, ಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ. ಇನ್ನು ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಏರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸಂಜೆ ಕೋವಿಡ್ ಟಾಸ್ಕ್ ಪೋರ್ಸ್ನ (Covid Task Force) ಜೊತೆ ಮಹತ್ವದ ಸಭೆ (Meeting) ನಡೆಯಲಿದೆ.


ಸಂಜೆ ಟಾಸ್ಕ್ ಫೋರ್ಸ್ ಜೊತೆ ಮಹತ್ವದ ಸಭೆ


ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿವೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ಆರೋಗ್ಯ ಇಲಾಖೆ ಇಂದು ಮಹತ್ವದ ಸಭೆ ನಡೆಸುತ್ತಿದೆ. 4ನೇ ಅಲೆ ಭೀತಿ ಹಿನ್ನೆಲೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮೊರೆ ಹೋಗಿರುವ ಆರೋಗ್ಯ ಇಲಾಖೆ ಇಂದು ಸಂಜೆ 7 ಗಂಟೆಗೆ ಟಾಸ್ಕ್ ಫೋರ್ಸ್ ಜತೆ ಮಹತ್ವದ ಸಭೆ ನಡೆಯಲಿದೆ.


ರಾಜ್ಯಕ್ಕೆ ಕಂಟಕವಾಗಲಿದೆಯಾ ಕೋವಿಡ್ 4ನೇ ಅಲೆ?


ದೇಶಾದ್ಯಂತ ಕೋವಿಡ್ 4 ಅಲೆ ಅಬ್ಬರ ಹೆಚ್ಚಾಗುತ್ತಿದೆ. ರಾಜ್ಯದಲ್ಲೂ ಕೋವಿಡ್ ಸೋಂಕು ಏರಿಕೆಯಾಗುತ್ತಿದೆ. ಹೀಗಾಗಿ 4ನೇ ಅಲೆ ಅಬ್ಬರ ಎದುರಿಸಲು ಈಗಲಿಂದಲೇ ತಯಾರಿ ಶುರುವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯು ಕೋವಿಡ್ ತಾಂತ್ರಿಕ ಸಲಹಾ ಸಭೆ ಕರೆದಿದ್ದು, ಇಂದಿನ ಸಭೆ ಭಾರೀ ಮಹತ್ವ ಪಡೆದಿದೆ.


ಇದನ್ನೂ ಓದಿ: Covid-19: ಭಾರತದಲ್ಲಿ ಮತ್ತೆ ಶುರುವಾಯ್ತಾ ಕೋವಿಡ್ ನಾಲ್ಕನೇ ಅಲೆ? ಈ 5 ರಾಜ್ಯಗಳಲ್ಲಿ ಮತ್ತೆ ಪ್ರಕರಣಗಳು ಹೆಚ್ಚಳ


ಇಂದಿನ ಸಭೆಯಲ್ಲಿ ಏನೇನು ಚರ್ಚೆಯಾಗಲಿದೆ?


ಇಂದು ಟಾಸ್ಕ್ ಫೋರ್ಸ್ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಲಿವೆ. ನೆರೆಯ ರಾಜ್ಯಗಳ ಕೋವಿಡ್ ಸ್ಥಿತಿ ಗತಿ ಚರ್ಚೆ, ರಾಜ್ಯದಲ್ಲಿ ಮತ್ತೆ ಜಿನೋಮಿಕ್ ಸೀಕ್ವೆನ್ಸ್ ಹೆಚ್ಚಳದ ಬಗ್ಗೆ ಸಲಹೆ, ಕೋವಿಡ್ ಟೆಸ್ಟಿಂಗ್ ರೇಟ್ ಹೆಚ್ಚಳಕ್ಕೆ ಸೂಚನೆ ನೀಡುಲ ಸಾಧ್ಯತೆ ಇದೆ. ಇನ್ನು ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲು ಸೂಚನೆ ನೀಡಲು ಸಾಧ್ಯತೆಯೂ ಇದೆ.


ರಾಜ್ಯದಲ್ಲಿ ಮತ್ತೆ ಜಾರಿಯಾಗಲಿದ್ಯಾ ಟಫ್ ರೂಲ್ಸ್?


ಇನ್ನು ಇಂದಿನ ಸಭೆಯಲ್ಲಿ ಕೋವಿಡ್ ರೂಲ್ಸ್ ಜಾರಿ ಬಗ್ಗೆ ತಜ್ಞರು ಸಲಹೆ ನೀಡುವ ಸಾಧ್ಯತೆ ಇದೆ. ಐಐಎಸ್ ಸಿ ವರದಿ ಕುರಿತು ಚರ್ಚೆ ಸಾಧ್ಯತೆ ಇದ್ದು, ಕಡ್ಡಾಯ ಮಾಸ್ಕ್ ರೂಲ್ಸ್ ಜಾರಿ ಬಗ್ಗೆ ಚಿಂತನೆ ನಡೆಸಲಾಗಿದೆ. ಕೋವಿಡ್ ಕ್ಲಸ್ಟರ್ ನಲ್ಲಿ ಸೋಂಕು ಹರಡುವಿಕೆ, ಹೊಸ ವೇರಿಯೆಂಟ್ ಬಗ್ಗೆ ಚರ್ಚೆ ಸಾಧ್ಯತೆ ಇದೆ. ನಾಲ್ಕನೇ ಅಲೆ ರಾಜ್ಯಕ್ಕೆ ಯಾವಾಗ ಕಾಲಿಡಲಿದೆ ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಮತ್ತೊಮ್ಮೆ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಮಾಡಲು ಸಲಹೆ ನೀಡುವ ಸಾಧ್ಯತೆಯೂ ಇದೆ.


ಇದನ್ನೂ ಓದಿ: Explained: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚುತ್ತಿರೋದೇಕೇ? 4ನೇ ಅಲೆ ಬಗ್ಗೆ ಆತಂಕಪಡಬೇಕೆ?


ನಿನ್ನೆ ರಾಜ್ಯಾದ್ಯಂತ 301 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 39,53,359 ಕ್ಕೆ ಏರಿಕೆಯಾಗಿದೆ. ಇನ್ನು ನಿನ್ನೆ ಕೊರೋನಾ ಸೋಂಕಿನಿಂದಾಗಿ ಓರ್ವ ಸೋಂಕಿತ ಸಾವನ್ನಪ್ಪಿದ್ದು, 146 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಬೆಂಗಳೂರಿನಲ್ಲಿ 291 ಕೊರೋನಾ ಕೇಸ್ ದಾಖಲಾಗಿದ್ದು,  ರಾಜ್ಯದ ಪಾಸಿಟಿವಿಟಿ ರೇಟ್ 1.40%ರಷ್ಟಿದೆ.

Published by:Annappa Achari
First published: