Assembly: ಈಶ್ವರಪ್ಪ ವಿರುದ್ಧ ಮುಗಿಬಿದ್ದ 'ಕೈ' ಪಡೆ, ರಾಜೀನಾಮೆಗೆ ಪಟ್ಟು! ಸದನದಲ್ಲಿ ಕೋಲಾಹಲ

ಸಿಟ್ಟಾದ ಡಿಕೆಶಿ, ಆವೇಶದಲ್ಲಿ ಈಶ್ವರಪ್ಪ ಎದುರೇ ನಡೆದು ಬಿಟ್ರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆಯೇ ಮಾರ್ಷಲ್‌ಗಳು ಸ್ಥಳಕ್ಕೆ ಎಂಟ್ರಿ ಕೊಟ್ರು. ತೀವ್ರ ಗದ್ದಲ, ಕೋಲಾಹಲವಾಗ್ತಿದ್ದಂತೆ ಸದನವನ್ನು ಮುಂದೂಡಿ ಸ್ಪೀಕರ್ ಆದೇಶಿಸಿದ್ರು.

ಸಚಿವ ಕೆ.ಎಸ್.ಈಶ್ವರಪ್ಪ

ಸಚಿವ ಕೆ.ಎಸ್.ಈಶ್ವರಪ್ಪ

  • Share this:
ವಿಧಾನಸಭೆ: ಸಚಿವ (Minister) ಕೆ.ಎಸ್.ಈಶ್ವರಪ್ಪ (K.S.Eshwarappa) ವಿರುದ್ಧ ಇಂದು ಕಾಂಗ್ರೆಸ್ (Congress) ನಾಯಕರು ತಿರುಗಿ ಬಿದ್ದಿದ್ದರು. ಕೆಂಪು ಕೋಟೆಯ (Red Port) ಮೇಲೆ ಭಗವಾಧ್ವಜ ಒಂದಲ್ಲಾ ಒಂದು ದಿನ ಹಾರಾಡಬಹುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದರು. ಇದು ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು. ಇಂದು ಬೆಳಗ್ಗೆ ವಿಧಾನಸಭೆ ಕಲಾಪ (Session) ಆರಂಭದಿಂದಲೇ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ರು. ಈಶ್ವರಪ್ಪ ಅವರ ಹೇಳಿಕೆ ವಿರುದ್ಧ ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡೂ ಕಡೆ ವಿರೋಧ ವ್ಯಕ್ತಪಡಿಸುವಂತೆ ಕಾಂಗ್ರೆಸ್ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆಯೇ ಇಂದು ಕಲಾಪದಲ್ಲಿ ಇಡೀ ಕಾಂಗ್ರೆಸ್ ಪಡೆ ಈಶ್ವರಪ್ಪ ವಿರುದ್ಧ ಮುಗಿಬಿದ್ದಿತು. ಕೊನೆ ಕೊನೆಗೆ ಇದು ಏಕ ವಚನಕ್ಕೆ ತಿರುಗಿ, ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವಿನ ವಾಗ್ವಾದಕ್ಕೂ ಕಾರಣವಾಯ್ತು.

ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು

ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಸ್ಥಳದಲ್ಲಿ ಮುಂದೆ ಭಗವಾಧ್ವಜ ಹಾರಾಡುತ್ತೆ ಅಂತ  ಈಶ್ವರಪ್ಪ ಹೇಳಿದ್ದು ರಾಷ್ಟ್ರದ್ರೋಹ ಅಂತ ಕಾಂಗ್ರೆಸ್ ಸದಸ್ಯರು ಗುಡುಗಿದ್ರು. ಸಚಿವ ಈಶ್ವರಪ್ಪ ಈ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದರು.

ಡಿ.ಕೆ.ಶಿವಕುಮಾರ್ – ಈಶ್ವರಪ್ಪ ಜಟಾಪಟಿ

ಆರೋಪ-ಪ್ರತ್ಯಾರೋಪ ಜೋರಾಗುತ್ತಿದ್ದಂತೆ ಕಲಾಪದಲ್ಲಿ ಗದ್ದಲ, ಕೋಲಾಹಲ ಉಂಟಾಯಿತು. ಆಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಈಶ್ವರಪ್ಪ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದರು, ಉಭಯ ನಾಯಕರು ಪರಸ್ಪರ ಏಕವಚನದಲ್ಲೇ ಬೈಯ್ದಾಡಿಕೊಂಡರು.

ಇದನ್ನೂ ಓದಿ: Mandya: ಅನಾರೋಗ್ಯದಿಂದ ಮಾಜಿ ಶಾಸಕ ಡಾ.ಹೆಚ್.ಡಿ.ಚೌಡಯ್ಯ ನಿಧನ- ಸಂತಾಪ ಸೂಚಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

“ನೀನು ದೇಶದ್ರೋಹಿ’ ಎಂದು ಆರೋಪಿಸಿದ ನಾಯಕರು

ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಈಶ್ವರಪ್ಪ ಪರಸ್ಪರ ಏಕವಚನದಲ್ಲೇ ಜಟಾಪಟಿ ನಡೆಸಿದ್ರು. ರಾಷ್ಟ್ರಧ್ವಜದ ಬಗ್ಗೆ ಲಘು ಹೇಳಿಕೆ ನೀಡಿರುವ ನೀನು ದೇಶದ್ರೋಹಿ ಅಂತ ಡಿಕೆಶಿ ಜರಿದರು. ಇದಕ್ಕೆ ಆಕ್ರೋಶಗೊಂಡ ಈಶ್ವರಪ್ಪ, ನಾನಲ್ಲ ರಾಷ್ಟ್ರದ್ರೋಹಿ .... ನೀನು ಅಂತ ಪ್ರತ್ಯಾರೋಪ ಮಾಡಿದ್ರು.

“ಮತ್ತೆ ಯಾವಾಗ ಜೈಲ್‌ಗೆ ಹೋಗುತ್ತೀಯ?”

ಇಬ್ಬರ ನಡುವಿನ ಮಾತು ಜೋರಾಗುತ್ತಿದ್ದಂತೆ, ಈಶ್ವರಪ್ಪ ಮತ್ತಷ್ಟು ಗರಂ ಆದ್ರು. “ನೀನು ಬೇಲ್ ನಲ್ಲಿ ಇದ್ದೀಯ. ಮತ್ತೆ ಯಾವಾಗ ನೀನು ಜೈಲಿಗೆ ಹೋಗ್ತೀಯಾ ಗೊತ್ತಿಲ್ಲ” ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ರು. ಈ ವೇಳೆ ಪ್ರತ್ಯುತ್ತರ ನೀಡಿದ ಡಿಕೆಶಿ,  ನನ್ನ ಏನು ಮಾಡೋಕೆ ಆಗಲ್ಲ ಅಂತ  ತಿರುಗೇಟು ಕೊಟ್ರು.

ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋದ ಪರಿಸ್ಥಿತಿ

ಇಷ್ಟಾಗುತ್ತಿದ್ದಂತೆ ಇಬ್ಬರ ನಡುವೆ ವಾಗ್ವಾದ ಮತ್ತಷ್ಟು ಜೋರಾಯಿತು. ಈ ವೇಳೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು. ಈ ಕೂಡಲೇ ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕು ಅಂತ ಆಕ್ರೋಶ ಹೊರಹಾಕಿದ್ರು. ಇದಕ್ಕೆ ಈಶ್ವರಪ್ಪ ಸಹ ತಿರುಗೇಟು ಕೊಟ್ರು.

ಬಳಿಕ ಸಿಟ್ಟಾದ ಡಿಕೆಶಿ, ಆವೇಶದಲ್ಲಿ ಈಶ್ವರಪ್ಪ ಎದುರೇ ನಡೆದು ಬಿಟ್ರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆಯೇ ಮಾರ್ಷಲ್‌ಗಳು ಸ್ಥಳಕ್ಕೆ ಎಂಟ್ರಿ ಕೊಟ್ರು. ತೀವ್ರ ಗದ್ದಲ, ಕೋಲಾಹಲವಾಗ್ತಿದ್ದಂತೆ ಸದನವನ್ನು ಮುಂದೂಡಿ ಸ್ಪೀಕರ್ ಆದೇಶಿಸಿದ್ರು.

ಇದನ್ನೂ ಓದಿ: Hijab Controversy: ಶಾಲಾ ಕಾಲೇಜುಗಳ ಸುತ್ತ ಮುಂದುವರೆದ ನಿಷೇಧಾಜ್ಞೆ, ನಿಲ್ಲದ ವಿದ್ಯಾರ್ಥಿನಿಯರ ಪರ-ವಿರೋಧ ನಿಲುವು

ಕಾಂಗ್ರೆಸ್ ಸದಸ್ಯರ ಸಮಾಧಾನಿಸಲು ಬಂದ ಯಡಿಯೂರಪ್ಪ

ಸದನ ಮುಂದೂಡಿದ್ರೂ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ಮುಂದುವರೆಯಿತು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ಸದಸ್ಯರ ಬಳಿ ಬಂದು, ಸಮಾಧಾನದ ಮಾತನ್ನಾಡಿದ್ರು. ಬಳಿಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸದಸ್ಯರನ್ನು ಹೊರಕ್ಕೆ ಕರೆದುಕೊಂಡು ಬಂದ್ರು.

ಸಿಎಂ ನೇತೃತ್ವದಲ್ಲಿ ಬಿಜೆಪಿ ಸಭೆ

ಇತ್ತ ಸಿಎಂ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸಭೆ ನಡೆಸಿದರು. ಸದನದಲ್ಲಿ ಉಂಟಾದ ಗದ್ದಲ, ಕಾಂಗ್ರೆಸ್ ದಾಳಿ ಎದುರಿಸುವ ಸಂಬಂಧ ಮಹತ್ವದ ಸಮಾಲೋಚನೆ ನಡೆಸಿದರು. ಮಧ್ಯಾಹ್ನ ಮತ್ತೆ ಕಲಾಪ ಆರಂಭವಾಗಲಿದ್ದು, ಇನ್ನಷ್ಟು ಗದ್ದಲ, ಕೋಲಾಹಲ ನಡೆಯೋದು ನಿಶ್ಚಿತ.
Published by:Annappa Achari
First published: