ಪರಸತಿ, ಪರಧನ, ಪರದೇಶಿ ಮಧ್ಯೆ ರಾಜಕಾರಣ ಓಡಾಡುತ್ತಿದೆ, ಈಗಿನ ರಾಜಕಾರಣಿಗಳು ಹೈಬ್ರಿಡ್‌ ತಳಿಗಳು: ಸಿ.ಎಂ.ಇಬ್ರಾಹಿಂ

ನಾನು ಡೆಲ್ಲಿಗೆ ಪದೆ ಪದೆ ಹೋಗೋಲ್ಲ. ಕುದುರೆ ಚೆನ್ನಾಗಿದ್ರೆ ಖರೀದಿ ಮಾಡೋರು ಮನೆಗೆ ಬರ್ತಾರೆ ಅನ್ನೋರು ನಾವು‌. ಹಾಗಾಗಿ ಅವರು ಯಾವಾಗಾ ಕರಿತಾರೆ ಅವಾಗ ಹೋಗ್ತಿನಿ ಅಂತ ಕಾಂಗ್ರೆಸ್‌ನಲ್ಲೆ ಉಳಿಯುವ ಬಗ್ಗೆ ಸಿ.ಎಂ.ಇಬ್ರಾಹಿಂ ಸ್ಪಷ್ಟನೆ ನೀಡಿದರು.

ಸಿ.ಎಂ. ಇಬ್ರಾಹಿಂ

ಸಿ.ಎಂ. ಇಬ್ರಾಹಿಂ

  • Share this:
ಮೈಸೂರು: ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಘಟನೆಯನ್ನ ವ್ಯಂಗ್ಯವಾಗಿ ವಿಮರ್ಶಿಸಿದ ಹಿರಿಯ ಕಾಂಗ್ರೆಸ್‌ ಮುಖಂಡ ಸಿ.ಎಂ.ಇಬ್ರಾಹಿಂ, ಪರಸತಿ, ಪರಧನ, ಪರದೇಶಿ ಮಧ್ಯೆ ರಾಜಕಾರಣ ಓಡಾಟ ಮಾಡ್ತಿದೆ. ರಾಸಲೀಲೆ, ರಸಲೀಲೆ, ಕರ್ಮಕಾಂಡಗಳ ನಡುವೆ ಇಂದಿನ ರಾಜಕಾರಣ ಇದೆ. ನತದೃಷ್ಟ ಮುಖ್ಯಮಂತ್ರಿ ಸಿಕ್ಕಿರೋದು ರಾಜ್ಯಕ್ಕೆ ದುರ್ದೈವ, ಸಿಎಂಗೆ ತಕ್ಕನಾದ ಸಮಪಾಠಿನ ಮಂತ್ರಿ ಅದಕ್ಕೊಂದು ಪಾರ್ಟಿ ಬೇರೆ, ಇವರ ಮಧ್ಯೆ ಸಿಲುಕಿ ಕೇಶವಕೃಪ, ಬಸವ ಕೃಪ ಒದ್ದಾಡುತ್ತಿವೆ ಅಂತ ವ್ಯಂಗ್ಯವಾಡಿದ್ದಾರೆ.

ಇದು ದಿಕ್ಕತಪ್ಪಿನ ರಾಜಕಾರಣ ಹಿಂದಿನ ಕಾಲದಲ್ಲಿ ಜನ ಓಟು ಕೊಡಬೇಕಾದ್ರೆ ಕುಲ ಕಸಬು ನೋಡೋರು. ನಾವು ಸಹ ಒಂದು ಎತ್ತು ತಗೋಬೇಕಾದ್ರು ಅದರ ತಳಿ ಯಾವುದು ಅಂತ ನೋಡ್ತಿವಿ. ರೇಸ್‌ನಲ್ಲಿ ಈ ಕುದುರೆಗೆ ದುಡ್ಡು ಕಟ್ಟೋಕು ಮುನ್ನ ಅದರ ಅಪ್ಪ ಅಮ್ಮ ಎಷ್ಟು ರೇಸ್ ಗೆದ್ದಿವೆ ಅಂತ ನೋಡ್ತಿವಿ. ಆದ್ರೆ ಈಗೀನ ರೇಸ್‌ಗಳು ಎಷ್ಟು ದುಡ್ಡು ತಂದಿದ್ದಾರೆ ಅಂತ ಮಾತ್ರ ನೋಡ್ತಾರೆ. ಈಗಿನ ರಾಜಕಾರಣ ಹಾಳಾಗೋಗೋದೆ. ಇದು ಸರಿಯಾಗುತ್ತೆ ಅನ್ನೊ ನಂಬಿಕೆ ಇಲ್ಲ. ಆದ್ರೆ ಇದಕ್ಕಾಗಿ ಒಂದು ದೊಡ್ಡ ಕ್ರಾಂತಿ ಆಗಬೇಕಿದೆ. ಆ ಕ್ರಾಂತಿ ಆಗುತ್ತೆ ಅನ್ನೋ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಿನ ರಾಜಕಾರಣಿಗಳು ಹೈಬ್ರಿಡ್‌ ತಳಿಗಳಾಗಿದ್ದಾರೆ. ನಾಟಿ ತಳಿಗಳು ಈಗ ಸಿಕ್ತಾ ಇಲ್ಲ. ರಾಜಕಾರಣದಲ್ಲಿ ಮರ್ಯಾದಸ್ಥರು ಸಿಗೋದು ಈಗ ವಿರಳವಾಗಿದೆ. ವೀರೇಂದ್ರ ಪಾಟೀಲ್, ದೇವೇಗೌಡ. ಜೆ.ಹಚ್.ಪಟೇಲ್‌ರಂತಹ ತಳಿಗಳು ಉಳಿಯಬೇಕು ಎಂದು ತಮ್ಮ ಅನುಭವ ಹಂಚಿಕೊಂಡರು. ತನ್ವೀರ್ ಸೇಠ್, ಹ್ಯಾರೀಸ್‌ರಿಂದ ಸಿ.ಎಂ ಇಬ್ರಾಹಿಂ ಭೇಟಿ ವಿಚಾರಕ್ಕೆ ಸ್ಪಷ್ಟನೆ ನೀಡಿದ ಇಬ್ರಾಹಿಂ. ಮೇಯರ್ ಮೈತ್ರಿ ವಿಚಾರದ ಸಂಬಂಧ ಅವರನ್ನು ಕರೆದಿದ್ದೆ. ಇದೊಂದು ಸಣ್ಣ ವಿಚಾರ ಯಾಕೆ ಇಷ್ಟು ದೊಡ್ಡದು ಮಾಡಿಕೊಂಡಿದ್ದೀರ ಎಂದು ಬುದ್ದಿಮಾತು ಹೇಳಿದೆ. ಅವರ ಜೊತೆಗಿನ ವಿಶ್ವಾಸದಿಂದ ಮಾತುಕತೆ ನಡೆಸಿದ್ದೇನೆ. ಅದೇ ರೀತಿ ಜಿಟಿ ದೇವೇಗೌಡ ಪಕ್ಷ ಬಿಡ್ತಿನಿ ಅಂದ್ರೆ ಬೇಡ ಕಣ್ಣಯ್ಯ ಇಲ್ಲೇ ಇರು ಅಂತೀನಿ, ಪಕ್ಷವನ್ನು ಬಿಟ್ಟು ನಾನು ಕೆಲವರೊಂದಿಗೆ ವಿಶ್ವಾಸ ಬೆಳೆಸಿಕೊಂಡಿದ್ದೇನೆ. ಹಾಗಾಗಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.

ಇದನ್ನು ಓದಿ: Ramesh Jarkiholi Case: ಕುಟುಂಬದ ರಾಜಕೀಯ ಮಹತ್ವಾಕಾಂಕ್ಷೆಗೆ ದೊಡ್ಡ ಪೆಟ್ಟು ಕೊಟ್ಟ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ!

ಇನ್ನು ನಾನು ಕಾಂಗ್ರೆಸ್‌ನಲ್ಲಿ ಉಳಿಯೋಕೆ ಒಂದೇ ಡಿಮ್ಯಾಂಡ್ ಇದೆ, ಕಾಂಗ್ರೆಸ್‌ನಲ್ಲಿ ಸಜ್ಜನರಿಗೆ ಅವಕಾಶ ಕೊಡಬೇಕು. ನಿರ್ಧಾರ ಕೈಗೊಳ್ಳಲು ಸಜ್ಜನರಿಗೆ ಅಧಿಕಾರ ಕೊಡಬೇಕು ಅನ್ನೊದಷ್ಟೆ ನನ್ನ ಡಿಮ್ಯಾಂಡ್. ನಾನು ಅಧಿಕಾರದ ಆಸೆಯಲ್ಲಿಲ್ಲ. ಒಂದು ವರ್ಷ ಆದ್ಮೇಲೆ‌ ಸಿದ್ದರಾಮಯ್ಯ ನಾವು ಭೇಟಿಯಾಗಿದ್ದೇವು. ದೆಹಲಿಗೆ ಹೋಗಿ ಮೇಡಂ ಅವರನ್ನ ಭೇಟಿ ಮಾಡಿ ಬರ್ತಿನಿ. ಆ ನಂತರ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದೇನೆ. ನಾನು ಸಿದ್ದರಾಮಯ್ಯ ರಾಜಕೀಯ ವಿಚಾರ ಮಾತ್ರ ಮಾತನಾಡಿದ್ದೇವೆ. ನಮ್ಮಿಬ್ಬರ ಮಧ್ಯೆ ಯಾವುದೇ ವ್ಯಾಪಾರ ಇಲ್ಲ. ನಾನು ದೇವೇಗೌಡರನ್ನು ಭೇಟಿ ಮಾಡಿದ್ದೆ, ಅಡ್ವಾಣಿ ಮನೆಗು ಹೋಗಿದ್ದೆ. ವಿಶ್ವಾಸಕ್ಕೆ ಜಾತಿ ಪಕ್ಷ ಇಲ್ಲ. ಆರ್‌ಎಸ್‌ಎಸ್‌‌ನಲ್ಲು ನನಗೆ ಸ್ನೇಹಿತರಿದ್ದಾರೆ. ಆದ್ರೆ ಅವರ ವಿಚಾರಧಾರೆ ಬೇರೆ ನಮ್ಮದೆ ಬೇರೆ ಇರುತ್ತೆ. ದೇಶಕ್ಕೆ ಒಳ್ಳೆಯದಾಗಬೇಕು ಅನ್ನೋದೆ ನಮ್ಮ ಉದ್ದೇಶ ಎಂದರು.

ಕಾಂಗ್ರೆಸ್ ನಲ್ಲಿ ಉಳಿಯೋದು ಕಾಲಯ ತಸ್ಮೈ ನಮಃ. ನಮಗೂ ಸಿದ್ದರಾಮಯ್ಯನವರಿಗು ಸ್ನೇಹ ಸಂಬಂಧ ಇದ್ದೆ ಇರುತ್ತೆ. ರಾಜಕೀಯ ನಡೆಗಳನ್ನ ಮುಂದೆ ನೋಡೋಣ. ಆದ್ರೆ ಸದ್ಯಕ್ಕೆ ಮೂರು ಪಕ್ಷಗಳ ಕಥೆ ಹಾಗೇಯೆ ಇದೆ. ಯಾವ ರೀತಿ ಅಂದ್ರೆ ಸಿನಿಮಾ ಟಾಕಿಸ್‌‌ನಲ್ಲಿ ಕರೆಂಟ್ ಹೋದಾಗ ಪ್ರೇಕ್ಷಕರ ಸ್ಥಿತಿ ರೀತಿ.  ನಾನು ಡೆಲ್ಲಿಗೆ ಪದೆ ಪದೆ ಹೋಗೋಲ್ಲ. ಕುದುರೆ ಚೆನ್ನಾಗಿದ್ರೆ ಖರೀದಿ ಮಾಡೋರು ಮನೆಗೆ ಬರ್ತಾರೆ ಅನ್ನೋರು ನಾವು‌. ಹಾಗಾಗಿ ಅವರು ಯಾವಾಗಾ ಕರಿತಾರೆ ಅವಾಗ ಹೋಗ್ತಿನಿ ಅಂತ ಕಾಂಗ್ರೆಸ್‌ನಲ್ಲೆ ಉಳಿಯುವ ಬಗ್ಗೆ ಸಿ.ಎಂ.ಇಬ್ರಾಹಿಂ ಸ್ಪಷ್ಟನೆ ನೀಡಿದರು.
Published by:HR Ramesh
First published: