Evening Digest: ಕಾಂಗ್ರೆಸ್ ನಾಯಕನ ರಾಸಲೀಲೆ ವಿಡಿಯೋ ವೈರಲ್: ರಹಸ್ಯ ಬಿಚ್ಚಿಟ್ಟ ನಟಿ ರಶ್ಮಿಕಾ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕಾಂಗ್ರೆಸ್​​ ನಾಯಕನ ರಾಸಲೀಲೆ ವಿಡಿಯೋ ವೈರಲ್: ಗುಜರಾತ್ ಕಾಂಗ್ರೆಸ್ ಹಿರಿಯ ನಾಯಕ (Bharat Singh Solanki) ತನ್ನ ಪತ್ನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮತ್ತೊಬ್ಬ ಮಹಿಳೆಯೊಂದಿಗೆ ಇದ್ದಾಗ ಪತ್ನಿ ಕಾದು ಇಬ್ಬರನ್ನೂ ಹಿಡಿದಿದ್ದಾಳೆ. ಕಾಂಗ್ರೆಸ್ ಹಿರಿಯ ನಾಯಕ ಭರತ್ ಸಿಂಗ್ ಸೋಲಂಕಿ ಮತ್ತೊಬ್ಬ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದಾರೆ. ಮಾಜಿ ಸಚಿವ ಬಂಗಲೆಯಲ್ಲಿ ಪತ್ನಿ ಎಂಟ್ರಿ ಕೊಟ್ಟಿದ್ದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.  ಆತ ಯುವತಿಯ ಮೇಲೆ ಹಲ್ಲೆ ನಡೆಸದಂತೆ ತಡೆದಿದ್ದಾಳೆ. ಪೊಲೀಸರಿಗೆ ದೂರು ನೀಡುವಂತೆ ಉಚಿತ ಸಲಹೆ ನೀಡಿದರು. ಸದ್ಯ ಈ ಕ್ಲಿಪ್ಪಿಂಗ್ ಗಳು ವೈರಲ್ ಆಗಿವೆ.ಗುಜರಾತ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಭರತ್ ಸಿಂಗ್ ಸೋಲಂಕಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಮಾಹಿತಿಯ ಪ್ರಕಾರ, ಮಾಜಿ ಕೇಂದ್ರ ಸಚಿವರ ಈ ವೀಡಿಯೊವನ್ನು ಅವರ ಪತ್ನಿ ರೇಷ್ಮಾ ಪಟೇಲ್ ಮಾಡಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Bharat Singh Solanki: ಯುವತಿಯೊಂದಿಗೆ ಇದ್ದಾಗ ಹೆಂಡತಿ ಕೈಗೆ ರೆಡ್​​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕಾಂಗ್ರೆಸ್ ಮುಖಂಡ, ವಿಡಿಯೋ ವೈರಲ್

ಸಿದ್ದರಾಮಯ್ಯ ಭೇಟಿ ಮಾಡಿದ ಜೆಡಿಎಸ್ ನಿಯೋಗ

ರಾಜ್ಯ ರಾಜಕಾರಣದಲ್ಲಿ ರಾಜ್ಯಸಭೆ ಚುನಾವಣೆಯ (Rajya Sabha Election) ಭರಾಟೆ ದಿನೇ ದಿನೇ ಬಿರುಸು ಪಡೆದುಕೊಂಡಿದೆ. ಜೆಡಿಎಸ್​ (JDS) ತನ್ನದೇ ರೀತಿಯಲ್ಲಿ ರಣತಂತ್ರ ರೂಪಿಸಿದೆ. ಇಂದು ಜೆಡಿಎಸ್ ನಿಯೋಗ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು (Siddaramaiah) ಭೇಟಿ ಮಾಡಿತು. ಟಿಎ ಶರವಣ ಹಾಗೂ ಬಿಎಂ ಫಾರೂಖ್ ನೇತೃತ್ವದ ನಿಯೋಗ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಬೆಂಬಲಿಸುವಂತೆ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದರು. ಭೇಟಿ ಬಳಿಕ ಮಾತನಾಡಿದ ಜೆಡಿಎಸ್​ ಮುಖಂಡ ಟಿಎ ಶರವಣ, ನಾವು ಹಾಗೂ ಕಾಂಗ್ರೆಸ್ ಕೋಮುವಾದಿ ಪಕ್ಷ ಅಧಿಕಾರದಿಂದ ದೂರ ಇಡಬೇಕು ಎಂಬ ಚಿಂತನೆ ಇಟ್ಟುಕೊಂಡಿದೆ. ಇನ್ನೂ ನಾಮಪತ್ರ ವಾಪಾಸ್ ತೆಗೆದುಕೊಳ್ಳಲು ಎರಡು ದಿನ ಇದೆ. ಸಿದ್ದರಾಮಯ್ಯನವರು ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ ಎಂದರು.

ಬೆಂಗಳೂರು ನಗರ DHO ವಿರುದ್ಧ ಲಂಚದ ಆರೋಪ

ಬೆಂಗಳೂರು ನಗರ  ಡಿಎಚ್ಓ ಡಾ.ಶ್ರೀನಿವಾಸ್ (DHO Dr Srinivas) ವಿರುದ್ಧ ಲಂಚ (Birbe) ಪಡೆದಿರುವ ಆರೋಪಗಳು ಕೇಳಿ ಬಂದಿವೆ.ಡಾ.ಶ್ರೀನಿವಾಸ್ ವಿರುದ್ಧ ಆರೋಪ ಮಾಡಿರುವ AAP ಕಾರ್ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದೆ. ಡಾ.ಶ್ರೀನಿವಾಸ್ ಅವರಿಗೆ ಬಿಳಿ ಬಣ್ಣದ ಕವರ್ ನಲ್ಲಿ 500 ರೂ.ಗಳ ನೋಟುಗಳನ್ನು (Money) ಇರಿಸಿ ಹಣ ನೀಡಲಾಗಿದೆ. ಆ ಹಣದ ಕವರ್ ಶ್ರೀನಿವಾಸ್ ಅವರ ಟೇಬಲ್ ಮೇಲಿತ್ತು ಎಂದು ಟಿವಿ 9 ಕನ್ನಡ ವರದಿ ಮಾಡಿದೆ. ಯಲಹಂಕ ಭಾಗದಲ್ಲಿರುವ ಮುಚ್ಚಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮರು ಆರಂಭಿಸಬೇಕು ಎಂದು ಮನವಿ ಸಲ್ಲಿಸಲು ಆಪ್ ಬೆಂಗಳೂರು ನಹರ ಕಾರ್ಯದರ್ಶಿ ಸುಹಾಸಿನಿ (AAP Leader Suhasini) ಅವರು ಡಿಎಚ್ಓ ಕಚೇರಿಗೆ ಬಂದಿದ್ದರು.

ರಹಸ್ಯ ಬಿಚ್ಚಿಟ್ಟ ನಟಿ ರಶ್ಮಿಕಾ

ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೂಲಕ ಯುವ ಪ್ರೇಕ್ಷಕರ ಮನ ಸೆಳೆದಿದ್ದಾರೆ. ಕ್ರಮೇಣ ಅವರು ಟಾಲಿವುಡ್‌ನ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿ ಖ್ಯಾತಿಯನ್ನು ಪಡೆದರು. ತನ್ನ ಮೋಡಿಯಿಂದ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೂಲಕ ಯುವ ಪ್ರೇಕ್ಷಕರ ಮನ ಸೆಳೆದಿದ್ದಾರೆ. ಕ್ರಮೇಣ ಅವರು ಟಾಲಿವುಡ್‌ನ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿ ಖ್ಯಾತಿಯನ್ನು ಪಡೆದರು. ತನ್ನ ಮೋಡಿಯಿಂದ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ರಶ್ಮಿಕಾ ಅವರು ತಮಿಳಿನ ನಟ ವಿಜಯ್​ ಅವರ ಮುಂದಿನ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇದರ ನಡುವೆ ರಶ್ಮಿಕಾ ಅವರು ವಿಜಯ್ ಕುರಿತು ಕುತೂಹಲಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Rashmika Mandanna: ಶಾಲಾ ದಿನಗಳಲ್ಲಿ ಈ ನಟನೆಂದರೆ ತುಂಬಾ ಇಷ್ಟವಾಗುತ್ತಿತ್ತು, ರಹಸ್ಯ ಬಿಚ್ಚಿಟ್ಟ ರಶ್ಮಿಕಾ

ಪಂಚೆ ಖರೀದಿಸಿದ ಸಿದ್ದರಾಮಯ್ಯ

ಮಾಜಿ ಸಿಎಂ, ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಂದೊಡನೆ ಕಣ್ಣ ಮುಂದೆ ಬರೋದು ಬಿಳಿ ಶರ್ಟ್​​, ಬಿಳಿ ಪಂಚೆ ತೊಟ್ಟ ಅವರ ನಿಲುವು. ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಓದಿದ್ದು ವಕೀಲಿಕೆ. ಆದ್ರೆ ಅವರು ಕರಿ ಕೋಟನ್ನು ಬಿಟ್ಟು ಬಿಳಿ ಪಂಚೆ ತೊಟ್ಟು ರಾಜ್ಯ ರಾಜಕಾರಣದಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅಂತಹ ಸಿದ್ದರಾಮಯ್ಯ ಇಂದು ಶಾಪಿಂಗ್​ ಮೂಡಿನಲ್ಲಿದ್ದರು. ಅವರ ಮಟ್ಟಿಗೆ ಶಾಪಿಂಗ್ ಅಂದ್ರೆ ಪಂಚೆ ಖರೀದಿ ಅಂತ ಹಿಂದೊಮ್ಮೆ ಅವರೇ ಹೇಳಿಕೊಂಡಿದ್ದರು. ಇಂದು ಕೂಡ ಸಿದ್ದರಾಮಯ್ಯ ಪಂಚೆ ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು. ಖಾದಿ ಭಂಡಾರದಲ್ಲಿ ಮಾಜಿ ಸಿಎಂ ಭರ್ಜರಿಯಾಗಿ ಬಿಳಿ ಪಂಚೆಗಳನ್ನು ಖರೀದಿಸಿದ್ರು. ವ್ಯಾಪಾರ ಮಾಡುವಾಗ ಅವರ ಶೈಲಿ ನಿಜಕ್ಕೂ ಪಕ್ಕಾ ಒಂದೊಳ್ಳೆ ಗ್ರಾಹಕನಂತೆ ಇತ್ತು ಎಂದರೆ ಹೊಗಳಿಕೆ ಅಲ್ಲ. ಬರೋಬ್ಬರಿ 30 ಪಂಚೆ ಕೊಂಡುಕೊಂಡ ಸಿದ್ದು, ಡಿಸ್ಕೌಂಟನ್ನೂ ಪಡೆದುಕೊಂಡ್ರು.
Published by:Kavya V
First published: