ಬೆಂಗಳೂರು: ಬಿಬಿಎಂಪಿ (BBMP) ಆಟದ ಮೈದಾನಕ್ಕಾಗಿ (Play Ground) ಕರೆ ನೀಡಿದ್ದ ಚಾಮರಾಜಪೇಟೆ ಬಂದ್ (Chamarajpet Bandh) ಯಶಸ್ವಿಯಾಗಿದೆ. ಈದ್ಗಾ ಮೈದಾನದ (Eidgah Maidan) ಒಡೆತನಕ್ಕೆ (Ownership) ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳು ಇಂದು ಕರೆ ನೀಡಿದ್ದ ಚಾಮರಾಜಪೇಟೆ ಬಂದ್ ಗೆ ವ್ಯಾಪಕ ಬೆಂಬಲ ಸಿಕ್ಕಿದ್ದು ಬಹುತೇಕ ಯಶಸ್ವಿಯಾಗಿದೆ. ಬೆಳಗ್ಗೆಯಿಂದಲೇ (Morning) ಸ್ವಯಂಪ್ರೇರಿತವಾಗಿ ಅಂಗಡಿ (Shop) ಮುಂಗಟ್ಟು ಬಂದ್ ಆಗಿದ್ದವು. ಮೈದಾನದಲ್ಲಿ ಪ್ರತಿಭಟನಾಕಾರರ ಹೈಡ್ರಾಮವೇ (High Drama) ನಡೆಯಿತು. ಆನಂತರ ಪೊಲೀಸರು (Police) ಅವರನ್ನು ವಶಕ್ಕೂ ಪಡೆದರು. ಅಷ್ಟಕ್ಕೂ ಇಂದು ಕರೆ ನೀಡಿದ್ದ ಬಂದ್ ಹೇಗಿತ್ತು? ಏನೇನಾಯಿತು? ಎನ್ನುವ ಕುತೂಹಲ ನಿಮಗಿದ್ದರೆ ಈ ಸ್ಟೋರಿ ಓದಿ…
ಬಂದ್‌ವರೆಗೆ ತಲುಪಿದ ಈದ್ಗಾ ಮೈದಾನ ವಿವಾದ
ದಿನೇ ದಿನೆ ತಾರಕಕ್ಕೇರುತ್ತಿರುವ ಚಾಮರಾಜನಗರ ಈದ್ಗಾ ಮೈದಾನ ವಿವಾದ ಇದೀಗ ಬಂದ್ ವರೆಗೆ ಬಂದು ತಲುಪಿದೆ. ಈದ್ಗಾ ಮೈದಾನವನ್ನು ಬಿಬಿಎಂಪಿ ಆಟದ ಮೈದಾನವನ್ನಾಗಿಯೇ ಉಳಿಸಿಕೊಳ್ಳಲು ಇಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಚಾಮರಾಜಪೇಟೆ ಬಂದ್ ಗೆ ನಾಗರಿಕ ಒಕ್ಕೂಟ ಕರೆ ನೀಡಿತ್ತು. ಈದ್ಗಾ ಮೈದಾನ ವಿವಾದದ ಒಡೆತನಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳು ಇಂದು ಕರೆ ನೀಡಿದ್ದ ಚಾಮರಾಜಪೇಟೆ ಬಂದ್ ಗೆ ವ್ಯಾಪಕ ಬೆಂಬಲ ಸಿಕ್ಕಿದ್ದು ಬಹುತೇಕ ಯಶಸ್ವಿಯಾಗಿದೆ.
ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಪ್ರಮುಖ ಬೇಡಿಕೆ ಏನು?
ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಬೇಕು. ಮೈದಾನವನ್ನ ಆಟದ ಮೈದಾನವನ್ನಾಗಿಯೇ ಉಳಿಸಬೇಕು. ಚಾಮರಾಜಪೇಟೆ ಮೈದಾನಕ್ಕೆ ಜಯಚಾಮರಾಜೇಂದ್ರ ಮೈದಾನ ಎಂದು ನಾಮಕರಣ ಮಾಡಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ. ಯಾವುದೇ ಕಾರಣಕ್ಕೂ ವಕ್ಫ್ ಬೋರ್ಡ್ ಗೆ ವಹಿಸಬಾರದು. ಜೊತೆಗೆ ಮೈದಾನ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಡಲು ಸಮಿತಿ ರಚನೆಯಾಗಬೇಕು, ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ, ಕನ್ನಡ ರಾಜ್ಯೋತ್ಸವ, ಶಿವರಾತ್ರಿ, ನಾಡಹಬ್ಬ ದಸರಾ ಸೇರಿದಂತೆ ಹಿಂದೂ ಹಬ್ಬಗಳ ಆಚರಣೆಗೆ ಅನುಮತಿ ನೀಡಬೇಕು ಎಂದು ಬೇಡಿಕೆ ಇಟ್ಟಿವೆ.
ಇದನ್ನೂ ಓದಿ: Eidgah Maidan: ಈದ್ಗಾ ಮೈದಾನ ಎಂದರೇನು ಗೊತ್ತಾ? ಚಾಮರಾಜಪೇಟೆಯಲ್ಲಿ ವಿವಾದ ಉಂಟಾಗಿದ್ದೇಕೆ?
ಶಾಸಕರ ಬೆಂಬಲಿಗರು, ಪ್ರತಿಭಟನಾಕಾರರ ಘರ್ಷಣೆ
ಇನ್ನು ಬೆಳ್ಳಂಬೆಳಗ್ಗೆಯೇ ಬಂದ್ ಗೆ ಕರೆಕೊಟ್ಟ ಹೋರಾಟಗಾರರು ಬೀದಿಗಿಳಿದು ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶವನ್ನ ಹೊರಹಾಕಿದ್ರು. ಬಿಬಿಎಂಪಿ ಕಟ್ಟಡದಲ್ಲಿರುವ ಶಾಸಕ ಜಮೀರ್ ಕಚೇರಿ ಬಳಿ ಜ್ಯೂಸ್ ಶಾಪ್ ತೆರೆದಿತ್ತು. ಆಗ ಬಂದ್ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯ ಮಾಡಿದರು. ಆಗ ಕೆಲ ಹೊತ್ತು ಜಮೀರ್ ಆಪ್ತ ಗೌಸ್ ಹಾಗೂ ಹೋರಾಟಗಾರರ ನಡುವೆ ಹೈಡ್ರಾಮಾ ನಡೆಯಿತು.
ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ
ಈ ವೇಳೆ ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ ಶುರುವಾಗಿತ್ತು. ಗಲಾಟೆ ತಾರರಕ್ಕೆ ಏರುತ್ತಿದ್ದಂತೆ ಕೆಲ ಹೋರಾಟಗಾರರು ಮೈದಾನಕ್ಕೆ ಎಂಟ್ರಿಕೊಡಲು ಪ್ರಯತ್ನಿಸಿದರು. ಆಗ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಯಿತು.
ಬೆಳಗ್ಗೆಯಿಂದಲೇ ವ್ಯಾಪಾರ ವಹಿವಾಟು ಸ್ತಬ್ಧ
ಇನ್ನು ಬೆಳಗ್ಗೆಯಿಂದಲೇ ಇಲ್ಲಿನ ಬಹುತೇಕ ಜನರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ಸೂಚಿಸಿದ್ದರು. ಜನಸಂಚಾರ, ವಾಹನ ಸಂಚಾರ ಎಂದಿನಂತೆ ಇರದೆ ವಿರಳವಾಗಿತ್ತು. ಚಾಮರಾಜಪೇಟೆ ಸುತ್ತಮುತ್ತ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಜಾದ್ ನಗರ, ಗೋರಿಪಾಳ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದ್ರೆ ಇನ್ನುಳಿದಂತೆ ಭಾಗದಲ್ಲಿ ಈದ್ಗಾ ಮೈದಾನ ನಮ್ಮದು ಎಂಬ ಘೋಷಣೆಗಳು ಕೇಳಿ ಬಂದ್ವು. ಬಂದ್ ಯಶಸ್ವಿಗೊಂಡಿದೆ. ಹೋರಾಟ ಮುಂದುವರೆಯಲಿದೆ ಎಂದು ನಾಗರಿಕ ಒಕ್ಕೂಟ ವೇದಿಕೆ ಕಾರ್ಯದರ್ಶಿ ರುಕ್ಮಾಂಗದ ತಿಳಿಸಿದರು.
ಇದನ್ನೂ ಓದಿ: YouTube: ಜೈಲಿಂದ ಬಂದವ ಯೂಟ್ಯೂಬ್ ನೋಡಿ ಕಳ್ಳತನ ಕಲಿತ, ದುಬಾರಿ ಕಾರು ಕದ್ದು ಮತ್ತೆ ಜೈಲು ಸೇರಿದ!
ಬಂದ್ ಗೆ ಯಾರ ಬೆಂಬಲವಿಲ್ಲವೆಂದಿದ್ದ ಸ್ಥಳೀಯ ಶಾಸಕ ಜಮೀರ್ ಗೆ ಬಂದ್ ಯಶಸ್ವಿಯಾಗಿರುವುದು ಇರಿಸುಮುರಿಸಿಗೆ ಕಾರಣವಾಗಿದೆ. ಬಂದ್ ಬಳಿಕ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳದೆ ಇದ್ರೆ ಮುಂದಿನ ಹೋರಾಟದ ರೂಪುರೇಷೆ ಸಿದ್ದಗೊಳಿಸಲು ಒಕ್ಕೂಟ ಮುಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ