ಸಂಜೆ 6ಕ್ಕೆ ಬಹುಮತ ಸಾಬೀತು ಬಹುತೇಕ ಡೌಟು?; ಅನುಮಾನ ಮೂಡಿಸಿದೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ರಾಜ್ಯಪಾಲರ ಅಧಿಕಾರದ ಕುರಿತು ಮಾಡಿರುವ ಟ್ವೀಟ್ ಮೂಲಕ ರಾಜ್ಯಪಾಲರ ಆದೇಶದಂತೆ ಇಂದೂ ಸಂಜೆ 6 ಗಂಟೆಗೂ ಸಹ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚಿಸುವುದಿಲ್ಲ ಎಂಬುದು ವೇದ್ಯವಾಗುತ್ತಿದೆ.

MAshok Kumar | news18
Updated:July 19, 2019, 5:39 PM IST
ಸಂಜೆ 6ಕ್ಕೆ ಬಹುಮತ ಸಾಬೀತು ಬಹುತೇಕ ಡೌಟು?; ಅನುಮಾನ ಮೂಡಿಸಿದೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್!
ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್
  • News18
  • Last Updated: July 19, 2019, 5:39 PM IST
  • Share this:
ಬೆಂಗಳೂರು (ಜುಲೈ.19); ಸದನಕ್ಕೆ ಸಂಬಂಧಿಸಿದ ವಿಚಾರದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳುವ ಮೂಲಕ ಇಂದೂ ಸಂಜೆ ಸಹ ಆಡಳಿತ ಪಕ್ಷ ವಿಶ್ವಾಸಮತ ಯಾಚಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಮಿಕವಾಗಿ ತಿಳಿಸಿದ್ದಾರೆ.

ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಮಂಡನೆಯ ನಿರ್ಣಯದ ಮೇಲೆ ಅಧಿವೇಶನದಲ್ಲಿ ಶುಕ್ರವಾರ ಎರಡನೇ ದಿನದ ಚರ್ಚೆ ನಡೆಯುತ್ತಿದೆ. ಈ ವೇಳೆ ರಾಜ್ಯ ಸರ್ಕಾರಕ್ಕೆ ಹೊಸ ಡೆಡ್​ಲೈನ್ ನೀಡಿದ್ದ ರಾಜ್ಯಪಾಲ ವಜುಭಾಯ್ ವಾಲಾ ಸಂಜೆ 6 ಗಂಟೆಯ ಒಳಗಾಗಿ ಬಹುಮತ ಸಾಬೀತುಪಡಿಸಬೇಕು ಎಂದು ನಿರ್ದೆಶನ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಸದನದಲ್ಲಿ ರಾಜ್ಯಪಾಲರ ಹಸ್ತಕ್ಷೇಪದ ಹಕ್ಕನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ವಿಶ್ವಾಸಮತ ಮಂಡನೆಯ ನಿರ್ಣಯವನ್ನು ಈಗಾಗಲೇ ಸದನದಲ್ಲಿ ಮಂಡಿಸಲಾಗಿದೆ. ಹಾಗಾಗಿ ಈ ವಿಚಾರ ಸದನದ ಸ್ವತ್ತು. ಸದನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾನ್ಯ ಸಭಾಧ್ಯಕ್ಷರೇ ಸರ್ವೋಚ್ಚರು. ಚರ್ಚೆ ಮತ್ತು ಅಭಿಪ್ರಾಯ ಮಂಡನೆ ಸೇರಿದಂತೆ ಇತರೆ ವಿಚಾರಗಳಲ್ಲಿ ಸಭಾಧ್ಯಕ್ಷರಿಗೆ ಸೂಚನೆ ನೀಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ” ಎಂದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಟ್ವೀಟ್ ಮೂಲಕ ರಾಜ್ಯಪಾಲರ ಆದೇಶದಂತೆ ಇಂದೂ ಸಂಜೆ 6 ಗಂಟೆಗೂ ಸಹ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚಿಸುವುದಿಲ್ಲ ಎಂಬುದು ವೇದ್ಯವಾಗುತ್ತಿದೆ. ರಾಜ್ಯಪಾಲ ವಜುಭಾಯ್ ವಾಲಾ ವಿಶ್ವಾಸಮತ ಯಾಚನೆಗೆ ಇಂದು ಮಧ್ಯಾಹ್ನ 1.30ಕ್ಕೆ ಮೊದಲ ಡೆಡ್​ಲೈನ್ ನೀಡಿದ್ದರು.

ಸದನದಲ್ಲಿ ಬಿಜೆಪಿಯ ಕರಾಳ ಮುಖದ ಅನಾವರಣವಾಗಿದೆ; ಸಿದ್ದರಾಮಯ್ಯ

ಶುಕ್ರವಾರದ ಅಧಿವೇಶನದಲ್ಲಿ ಬಿಜೆಪಿಯ ಇನ್ನೊಂದು ಕರಾಳ ಮುಖ ಅನಾವರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇಂದಿನ ಸದನದಲ್ಲಿ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ತನಗೂ ಸಹ ಬಿಜೆಪಿಯವರು ಆಮಿಷ ಒಡ್ಡಿದ್ದರು ಎಂದು ಆಪರೇಷನ್ ಕಮಲದ ಬಗ್ಗೆ ಪ್ರಸ್ತಾಪಿಸಿದ್ದರು.ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ಬಿಜೆಪಿಯ ಅಶ್ವಥ್ ನಾರಾಯಣ್, ಮಾಜಿ ಶಾಸಕ ಯೋಗೀಶ್ವರ್ ಹಾಗೂ ವಿಶ್ವನಾಥ್ ಅವರು ರೂ.5 ಕೋಟಿಯನ್ನು ನನ್ನ ಮನೆಗೆ ತಂದಿದ್ದರು. ಕೊನೆಗೆ ನಾನೇ ಅವರೆಲ್ಲರಿಗೂ ಬೈದು ಕಳುಹಿಸಿದೆ ಎಂದು ಸ್ವತಃ ಶ್ರೀನಿವಾಸ್ ಗೌಡ ಅವರೇ ಹೇಳಿದ್ದಾರೆ. ಇದರಿಂದ ಸದನದಲ್ಲೇ ಬಿಜೆಪಿಯ ಇನ್ನೊಂದು ಕರಾಳ ಮುಖದ ಅನಾವರಣವಾಗಿದೆ” ಎಂದು ಬಿಜೆಪಿ ನಾಯಕರು ಹಾಗೂ ಆಪರೇಷನ್ ಕಮಲವನ್ನು ಸಿದ್ದರಾಮಯ್ಯ ದೂರಿದ್ದಾರೆ.
First published: July 19, 2019, 5:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading