ಪ್ರವಾಹ ಪೀಡಿತರ ನೆರವಿಗೆ ಮುಂದಾದ ಸಂಸದೆ ಸುಮಲತಾ; ಮಂಡ್ಯ ಜನರೊಂದಿಗೆ ಇಂದು ಸಂಪರ್ಕ ಸಭೆ

ಜನರ ಕಷ್ಟವನ್ನು ನೇರವಾಗಿ ಆಲಿಸಲು ಸಂಪರ್ಕ ಸಭೆ ಕೂಡ ಹಮ್ಮಿಕೊಳ್ಳಲಾಗಿದೆ. ನಂತರ ಈ ವಿಚಾರವನ್ನು ಅಧಿಕಾರಿಗಳ ಸಭೆಯಲ್ಲಿ ಸುಮಲತಾ ಚರ್ಚಿಸಲಿದ್ದಾರೆ.

Rajesh Duggumane | news18
Updated:August 14, 2019, 8:01 AM IST
ಪ್ರವಾಹ ಪೀಡಿತರ ನೆರವಿಗೆ ಮುಂದಾದ ಸಂಸದೆ ಸುಮಲತಾ; ಮಂಡ್ಯ ಜನರೊಂದಿಗೆ ಇಂದು ಸಂಪರ್ಕ ಸಭೆ
ಸುಮಲತಾ ಅಂಬರೀಶ್.
  • News18
  • Last Updated: August 14, 2019, 8:01 AM IST
  • Share this:
ಮಂಡ್ಯ (ಆ,14): 2019ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್​​ಡಿ ಕುಮಾರಸ್ವಾಮಿ ಮಗ ನಿಖಿಲ್​ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಗೆಲುವಿನ ನಂತರ ಅವರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅನೇಕ ಜೆಡಿಎಸ್​ ನಾಯಕರು ದೂರಿದ್ದರು. ಆದರೆ, ಇದು ಸುಳ್ಳು ಎಂಬುದನ್ನು ಸುಮಲತಾ ಪದೇಪದೆ ಸಾಬೀತು  ಮಾಡುತ್ತಿದ್ದಾರೆ. ಗೆಲುವಿನ ನಂತರ ಸಾಕಷ್ಟು ಬಾರಿ ಮಂಡ್ಯಕ್ಕೆ ಭೇಟಿ ನೀಡಿದ್ದ ಅವರು, ಈಗ ಈ ಭಾಗದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರ ಕಷ್ಟ ಆಲಿಸಲಿದ್ದಾರೆ.

ಭಾರೀ ಮಳೆ ಹಿನ್ನೆಲೆಯಲ್ಲಿ ಇಡೀ ರಾಜ್ಯ ಪ್ರವಾಹಕ್ಕೆ ತತ್ತರಿಸಿತ್ತು. ಬೆಳಗಾವಿ, ಕರಾವಳಿ, ಹಾಗೂ ಮಲೆನಾಡು ಭಾಗದಲ್ಲಿ ಆದಷ್ಟು ಹಾನಿ ಇಲ್ಲಿ ಆಗದಿದ್ದರೂ ಕಾವೇರಿ ನದಿ ಪಾತ್ರದ ಭಾಗಗಳು ನೆರೆಯಿಂದ ತತ್ತರಿಸಿದ್ದವು. ಕೆಆರ್​ಎಸ್​ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಸಂತೇಮಾಳ, ನಿಮಿಷಾಂಭ ದೇವಾಲಯ, ದೊಡ್ಡಪಾಳ್ಯ, ಎಣ್ಣೆಹೊಳೆಕೊಪ್ಪಲು ಮುಂತಾದ ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದವು. ಹಾಗಾಗಿ ಈ ಭಾಗಗಳಿಗೆ ಸುಮಲತಾ ಇಂದು ಭೇಟಿ ನೀಡಲಿದ್ದಾರೆ.

ಇನ್ನು, ಜನರ ಕಷ್ಟವನ್ನು ನೇರವಾಗಿ ಆಲಿಸಲು ಸಂಪರ್ಕ ಸಭೆ ಕೂಡ ಹಮ್ಮಿಕೊಳ್ಳಲಾಗಿದೆ. ನಂತರ ಈ ವಿಚಾರವನ್ನು ಅಧಿಕಾರಿಗಳ ಸಭೆಯಲ್ಲಿ ಸುಮಲತಾ ಚರ್ಚಿಸಲಿದ್ದಾರೆ. ಸುಮಲತಾ ಮಂಡ್ಯ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಹೀಗಾಗಿ, ಅವರು ಇಂದು ಭೇಟಿ ಮಾಡಿದ ನಂತರ ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಇದನ್ನೂ ಓದಿ: ದರ್ಶನ್ ಬರ್ತಿಲ್ಲ, ಯಶ್ ಬರ್ತಿಲ್ಲ ಅನ್ನೋದು ನಮಗೆ ಸಮಸ್ಯೆಯೇ ಅಲ್ಲ: ಸುಮಲತಾ ಅಂಬರೀಶ್​

ರಾಜ್ಯದಲ್ಲಿ 10 ದಿನಗಳ ಕಾಲ ನಡೆದ ಮಳೆ ಮತ್ತು ಪ್ರವಾಹಗಳ ಆರ್ಭಟಕ್ಕೆ ಈವರೆಗೆ 54 ಜನರು ಮೃತಪಟ್ಟಿದ್ದಾರೆ . 15 ಮಂದಿ ನಾಪತ್ತೆಯಾಗಿದ್ದಾರೆ. ಒಟ್ಟು 21 ಜಿಲ್ಲೆಗಳ 100 ತಾಲೂಕುಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

ಹಾಗೆಯೇ, ದೇಶಾದ್ಯಂತ ಮಳೆ ಮತ್ತು ಪ್ರವಾಹಗಳಿಗೆ ಬಲಿಯಾದವರ ಸಂಖ್ಯೆ 200ರ ಗಡಿ ದಾಟಿದೆ. ಕೇರಳದಲ್ಲೇ  100 ಮಂದಿ ಸಾವನ್ನಪ್ಪಿದ್ದಾರೆ. ಅದರ ನಂತರದ ಸ್ಥಾನ ಕರ್ನಾಟಕದ್ದಾಗಿದೆ. ಮಹಾರಾಷ್ಟ್ರದಲ್ಲೂ 40ಕ್ಕೂ ಹೆಚ್ಚು ಮಂದಿ ಮಳೆಯ ಆರ್ಭಟಕ್ಕೆ ಮೃತಪಟ್ಟಿದ್ದಾರೆ.

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ