Mysuru Dasara 2021: ಇಂದು ನಾಡಹಬ್ಬ ದಸರಾ ಉದ್ಘಾಟನೆ; ಇಂದಿನಿಂದ 9 ದಿನಗಳ ಕಾಲ ಮೈಸೂರಿನಲ್ಲಿ ಸಡಗರ- ಸಂಭ್ರಮ!

ಮೈಸೂರಿಗೆ ತೆರಳಿ ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ವಿಶ್ವವಿಖ್ಯಾತ ಮೈಸೂರು ದಸರಾ 2021 ಅನ್ನು ಕೊರೋನಾ ಹಿನ್ನಲೆಯಲ್ಲಿ ಸರಳ ದಸರಾ ಆಚರಣೆ ಮಾಡುತ್ತಿರೋದು ನೋವಿದೆ. ಸರಳ ದಸರಾ ಆಚರಣೆ ಮಾಡೋದ್ರಿಂದ ನಾಡಹಬ್ಬ ಆಗೋದಿಲ್ಲ‌. ರಾಜ್ಯದ ಉತ್ತರ ಕರ್ನಾಟಕದಿಂದ ಮಂದಿ ಬರಬೇಕು, ಬೇರೆ ಬೇರೆ ಜಿಲ್ಲೆಗಳಿಂದ ಜನ ಬರಬೇಕು ಅದು ಖುಷಿ ಎಂದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು: ನಾಡಹಬ್ಬ ದಸರಾ 2021 (Mysuru Dasara 2021) ಇಂದು ಉದ್ಘಾಟನೆಯಾಗಲಿದೆ. ಹಿರಿಯ ರಾಜಕಾರಣಿ ಎಸ್​.ಎಂ. ಕೃಷ್ಣ (SM Krishna) ಅವರು ಈ ಬಾರಿಯ ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, (CM Basavaraja Bommai)  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್, ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ. ಅಕ್ಟೋಬರ್ 7 ರಿಂದ 15ವರೆಗೆ ದಸರಾ ನಡೆಯಲಿದ್ದು, ಈಗಾಗಲೇ ಭರದಿಂದ ಸಿದ್ದತೆಗಳು ನಡೆಯುತ್ತಿವೆ.  ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಹಾಗೆಯೆ ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ಸಹ ಸಿದ್ಧತೆ ನಡೆಯುತ್ತಿದೆ. ಇನ್ನು ಕಳೆದ ಬಾರಿಯಂತೆಯೆ ಈ ಬಾರಿ ಸಹ ಸರಳವಾಗಿ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಮಾರ್ಗಸೂಚಿಗಳನ್ನು(Dasara Guidelines) ಬಿಡುಗಡೆ ಮಾಡಲಾಗಿದೆ.

  ಮೈಸೂರು ದಸರಾ ಉದ್ಘಾಟನೆ ಸಂಬಂಧ ಬುಧವಾರ ಬೆಂಗಳೂರಿನ ಶಕ್ತಿ ಭವನದಲ್ಲಿ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು, ನಾನು ದಸರಾ ಉದ್ಘಾಟನೆಯಲ್ಲಿ ಭಾಗವಹಿಸುತ್ತೇನೆ. ಎಸ್ ಎಂ ಕೃಷ್ಣ ಅವರು ದಸರಾ ಉದ್ಘಾಟನೆ ಮಾಡಲಿದ್ದಾರೆ. ನಂತರ ರಾಷ್ಟ್ರಪತಿಗಳನ್ನು ಬರಮಾಡಿಕೊಂಡು ಚಾಮರಾಜನಗರಕ್ಕೆ ಹೋಗುತ್ತೇನೆ. ಚಾಮರಾಜನಗರದಲ್ಲಿ ಆಸ್ಪತ್ತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದರು.

  ಬಳಿಕ ಮೈಸೂರಿಗೆ ತೆರಳಿ ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ವಿಶ್ವವಿಖ್ಯಾತ ಮೈಸೂರು ದಸರಾ 2021 ಅನ್ನು ಕೊರೋನಾ ಹಿನ್ನಲೆಯಲ್ಲಿ ಸರಳ ದಸರಾ ಆಚರಣೆ ಮಾಡುತ್ತಿರೋದು ನೋವಿದೆ. ಸರಳ ದಸರಾ ಆಚರಣೆ ಮಾಡೋದ್ರಿಂದ ನಾಡಹಬ್ಬ ಆಗೋದಿಲ್ಲ‌. ರಾಜ್ಯದ ಉತ್ತರ ಕರ್ನಾಟಕದಿಂದ ಮಂದಿ ಬರಬೇಕು, ಬೇರೆ ಬೇರೆ ಜಿಲ್ಲೆಗಳಿಂದ ಜನ ಬರಬೇಕು ಅದು ಖುಷಿ. ನಾಡ ಹಬ್ಬ ದಸರಾದಲ್ಲಿ ನಾನು ಸಾಮಾನ್ಯನಾಗಿ ಭಾಗವಹಿಸುವುದು ಖುಷಿ ತಂದಿದೆ‌. ಕೊರೋನಾ ಸಂದರ್ಭದಲ್ಲಿಯೂ ಯಾವುದೇ ಸಂಪ್ರದಾಯ, ಪರಂಪರೆಗೆ ದಕ್ಕೆಯಾಗದ ರೀತಿ ಆಚರಣೆ ಮಾಡಲಾಗುತ್ತಿದೆ. ನಾಡು ಸುಭಿಕ್ಷವಾಗಿ ಇರಬೇಕು ಎಂದು ನಾಡ ದೇವಿಯಲ್ಲಿ ನಮ್ಮ ಪ್ರಾರ್ಥನೆ. ಮುಂದಿನ ವರ್ಷ ಅದ್ದೂರಿ ವಿಜೃಂಭಣೆಯಿಂದ ದಸರಾ ಆಚರಿಸುವಂತಾಗಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

  ಸರ್ಕಾರದ ಮಾರ್ಗಸೂಚಿಯಲ್ಲಿ ಹೇಳಿರುವುದೇನು?

  ಕೊರೊನಾ ಸೋಂಕು ಇರುವ ಕಾರಣ ಸರಳವಾಗಿ ಹಬ್ವನ್ನು ಆಚರಣೆ ಮಾಡಬೇಕು.

  ಮೈಸೂರು ದಸರಾ ಬಿಟ್ಟು ರಾಜ್ಯದ ಯಾವುದೇ ಭಾಗದಲ್ಲಿ ಒಮ್ಮೆಲೆ 400 ಜನ ಸೇರುವಂತಿಲ್ಲ.

  ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ.

  ಆಯಾ ಜಿಲ್ಲೆಯ ಜಿಲ್ಲಾಡಳಿತ ಯಾವುದೇ ನಿಯಮಗಳನ್ನು ವಿಧಿಸುವ ಮುನ್ನ ಅದರ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ನೀಡಿರಬೇಕು.

  ಸಾಮಾಜಿಕ ಅಂತರವಿಲ್ಲದೆ ಯಾವುದೇ ಕಾರ್ಯಕ್ರಮ ನಡೆಯುತ್ತಿರುವುದನ್ನ ಕಂಡು ಬಂದಲ್ಲಿ ಅದನ್ನು ನಿಷೇಧಿಸಲಾಗುತ್ತದೆ.

  ಸರ್ಕಾರ ಹೊರಡಿಸಿರುವ ಕೊರೊನಾ ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕು.

  ಯಾವುದೇ ರೀತಿಯ ಕಾನೂನು ಭಂಗ ಮಾಡದೇ ಶಾಂತಿಯಿಂದ ಹಬ್ಬ ಆಚರಣೆ ಮಾಡಬೇಕು.

  ಇದನ್ನು ಓದಿ: Karnataka Rain News: ರಾಜ್ಯಾದ್ಯಂತ ಮುಂದಿನ 5 ದಿನಗಳ ಕಾಲ ಭರ್ಜರಿ ಮಳೆ; ಬೆಂಗಳೂರಲ್ಲಿ ಹೇಗಿರಲಿದೆ?

  ಮೈಸೂರಿನಲ್ಲಿ ಪ್ರತ್ಯೇಕ ಮಾರ್ಗಸೂಚಿ

  ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿಸಾಮಾಜಿಕ ಅಂತರ ಮತ್ತು ಮಾಸ್ಕ್ ಹಾಗು ಸ್ಯಾನಿಟೈಸರ್ ಕಡ್ಡಾಯ.

  ಈ ಎಲ್ಲ ದಸರಾ ಸಮಾರಂಭಗಳಿಗೆ ಕೊರೋನಾ ಸೋಂಕು ಹರಡುವ ಭಯದಲ್ಲಿ ಹೆಚ್ಚಿನ ಜನರಿಗೆ ಅವಕಾಶ ನೀಡದ ಕಾರಣ ಈ ಬಾರಿ ಸಹ ಕಳೆದ ಬಾರಿಯಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಭ್ರಮ ನೋಡಲು ಅನುವು ಮಾಡಬೇಕು.

  ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಠಾಟನೆಗೆ ಕೇವಲ 100 ಜನರಿಗೆ ಮಾತ್ರ ಅವಕಾಶ

  ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೇವಲ 2 ಗಂಟೆ ಅವಕಾಶ

  ಈ ಕಾರ್ಯಕ್ರಮಗಳಿಗೆ 500 ಜನರಿಗಿಂತ ಹೆಚ್ಚಿನ ಜನರು ಸೇರಬಾರದು.

  ದೀಪಾಲಂಕಾರ ನೋಡಲು ಸಂಜೆ ಸಂಜೆ 7 ರಿಂದ 9 ರವರೆಗೆ ಮಾತ್ರ ಅವಕಾಶ

  ಜಂಬೂಸವಾರಿಯಂದೂ ಸಹ ಕೇವಲ 500 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

  ಪ್ರತಿಯೊಂದು ಸಂದರ್ಭದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯ.

  ಪೊಲೀಸ್ , ಕಲಾವಿದರು ಮತ್ತು ವಾದ್ಯ ವೃಂದವರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ
  Published by:HR Ramesh
  First published: