ರಮೇಶ್​ ಜಾರಕಿಹೊಳಿ ಜೊತೆ ಇಂದು ಸಿದ್ದರಾಮಯ್ಯ ಚರ್ಚೆ; ಮನವೊಲಿಕೆಯಲ್ಲಿ ಯಶಸ್ವಿಯಾಗುತ್ತಾರಾ ಮಾಜಿ ಸಿಎಂ

ರಮೇಶ್​  ಕಾಂಗ್ರೆಸ್ಸಿಗ. ಆದ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದು, ಅವರ ಜೊತೆ ಇಂದು ಮಾತುಕತೆಗೆ ಮುಂದಾಗಿದ್ದಾರೆ.

ರಮೇಶ್​ ಜಾರಕಿಹೊಳಿ- ಸಿದ್ದರಾಮಯ್ಯ

ರಮೇಶ್​ ಜಾರಕಿಹೊಳಿ- ಸಿದ್ದರಾಮಯ್ಯ

  • News18
  • Last Updated :
  • Share this:
ಶ್ರೀನಿವಾಸ್​ ಹಳಕಟ್ಟಿ

ಬೆಂಗಳೂರು (ಡಿ.25): ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಆಕ್ರೋಶಗೊಂಡಿರುವ ರಮೇಶ್​ ಜಾರಕಿಹೊಳಿ ತಮ್ಮ ಮುಂದಿನ ನಡೆ ಏನು ಎಂಬ ಬಗ್ಗೆ ಇನ್ನು ನಾಲ್ಕು ದಿನಗಳಲ್ಲಿ ತಿಳಿಸುತ್ತೇನೆ ಎಂದಿದ್ದಾರೆ. ಪಕ್ಷದಲ್ಲಿಯೇ ಇರುವುದೋ ಅಥವಾ ತೊರೆಯುವುದ ಎಂಬ ಬಗ್ಗೆ ಮಾತುಕತೆ ನಡೆಸಲು ಇಂದು ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಲು ಸಿದ್ದರಾಗಿದ್ದಾರೆ.

ರಮೇಶ್​ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಕೂಡ ಈ ಬಗ್ಗೆ ಆತುರದ ನಿರ್ಧಾರ ಬೇಡ. ಸಿದ್ದರಾಮಯ್ಯ ಹಿರಿಯ ನಾಯಕರಾಗಿದ್ದಾರೆ. ಅವರನ್ನು ಈ ಬಗ್ಗೆ ಒಮ್ಮೆ ಸಮಲೋಚನೆ ನಡೆಸುವುದು ಒಳಿತು ಎಂದಿದ್ದಾರೆ. ಇನ್ನು ಸಿದ್ದರಾಮಯ್ಯ ಕೂಡ ರಮೇಶ್​ ಜೊತೆ ಮಾತುಕತೆಗೆ ಮುಂದಾಗಿದ್ದಾರೆ. ರಮೇಶ್​  ಕಾಂಗ್ರೆಸ್ಸಿಗ. ಆದ ಪಕ್ಷ ಬಿಟ್ಟು ಹೋಗುವುದಿಲ್ಲ. ಒಂದೆರಡು ದಿನ ಈ ರೀತಿ ವದಂತಿ ಹಬ್ಬಿರುತ್ತದೆ. ಅವರ ಜೊತೆ ಈ ಬಗ್ಗೆ ಮಾತನಾಡಲಾಗುವುದು ಎಂದಿದ್ದಾರೆ.

ರಮೇಶ್​ ಕೋಪ ಶಮನಕ್ಕೆ ಎಐಸಿಸಿ ಕಾರ್ಯಾಧ್ಯಕ್ಷ ಅಥವಾ ಲೋಕಸಭಾ ಟಿಕೆಟ್​ ನೀಡುವ ಕುರಿತು ಪಕ್ಷದಲ್ಲಿ ಮಾತುಕತೆ ನಡೆದಿದ್ದು, ಈ ಕುರಿತು ಕೂಡ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಲಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದರು ಅದಕ್ಕೆ ಪರ್ಯಾಯ ಹುದ್ದೆಯನ್ನು ನೀಡುವ ಮೂಲಕ ಅವರನ್ನು ಶಾಂತಗೊಳಿಸುವ ಪ್ರಯತ್ನಕ್ಕೆ ಅವರು ಮುಂದಾಗಲಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಆಪ್ತರಾಗಿರುವ ರಮೇಶ್​ , ಅವರ ಮಾತಿಗೆ ಬೆಲೆಕೊಡುತ್ತಾರೆ. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಕೂಡ ಅವರೊಂದಿಗೆ ಮಾತನಾಡಿ ಮನವೊಲಿಸುವ ಮೂಲಕ ರಮೇಶ್​ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.

ಇದನ್ನು ಓದಿ: ರಮೇಶ್​ ಜಾರಕಿಹೊಳಿ ಕೋಪ ಶಮನಕ್ಕೆ ಕಾಂಗ್ರೆಸ್ ಮಾಸ್ಟರ್​ ಪ್ಲಾನ್​; ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರಾ ಬಂಡಾಯ ಶಾಸಕ?

ಸಚಿವ ಸ್ಥಾನ ಸಿಗದ ಹಿನ್ನಲೆ ಅಸಮಾಧಾನಗೊಂಡಿರುವ ಶಾಸಕರೊಂದಿಗೆ ಕಾಂಗ್ರೆಸ್​ ಉಸ್ತುವಾರಿ ಕೆಸಿ ವೇಣುಗೋಪಾಲ್​ ಕೂಡ ಮಾತುಕತೆ ನಡೆಸಲು ಮುಂದಾಗಿದ್ದಾರೆ. ನಾಳೆ ಸಿದ್ದರಾಮಯ್ಯ ನೇತೃತ್ವದಲ್ಲಿ ಜಾರಕಿಹೊಳಿ ಹಾಗೂ ರಾಮಲಿಂಗಾ ರೆಡ್ಡಿ ಜೊತೆ ಮಾತುಕತೆ ನಡೆಸಲಿದ್ದಾರೆ.

First published: