• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Petrol Price| ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೈಲ ಬೆಲೆ ಅಲ್ಪ ಇಳಿಕೆ; ಉತ್ತರ ಕನ್ನಡದಲ್ಲಿ 1 ಲೀಟರ್ ಪೆಟ್ರೋಲ್ 95 ಪೈಸೆ ಅಗ್ಗ!

Petrol Price| ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೈಲ ಬೆಲೆ ಅಲ್ಪ ಇಳಿಕೆ; ಉತ್ತರ ಕನ್ನಡದಲ್ಲಿ 1 ಲೀಟರ್ ಪೆಟ್ರೋಲ್ 95 ಪೈಸೆ ಅಗ್ಗ!

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಬಳ್ಳಾರಿ ಜಿಲ್ಲೆಯಲ್ಲಿ ಪೆಟ್ರೋಲ್ ಅನ್ನು ಅತ್ಯಧಿಕ 106.54 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್​ಗೆ ಅತ್ಯಧಿಕ 96 ಪೈಸೆ ಇಳಿಸಿದ್ದು, 105.58 ರೂ.ಗೆ ಮಾರಾಟ ಮಾಡಲಾಗುತ್ತಿದೆ.

  • Share this:

ಬೆಂಗಳೂರು (ಸೆಪ್ಟೆಂಬರ್​ 26); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Banglore) ಕಳೆದ ಎರಡು ವಾರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ (Petrol-Diesel Price) ಯಾವುದೇ ಬದಲಾವಣೆ ಇಲ್ಲ. ಆದರೆ, ತೆರಿಗೆಯಲ್ಲಿನ ವ್ಯತ್ಯಾಸ ಮತ್ತು ಇನ್ನಿತರೆ ಕಾರಣಗಳಿಂದಾಗಿ ರಾಜ್ಯ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮಾತ್ರ ಅಲ್ಪ ಬದಲಾವಣೆ ಉಂಟಾಗಿದೆ. ಬೆಂಗಳೂರಿನಲ್ಲಿ ಒಂದು ಲಿಟರ್​ ಪೆಟ್ರೋಲ್ ಅನ್ನು 104.70 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ 94.04 ರೂ.ಗೆ ಮಾರಾಟ ಮಾಡಲಾ ಗುತ್ತಿದೆ. ಆದರೆ, ಬಳ್ಳಾರಿ (Bellary) ಜಿಲ್ಲೆಯಲ್ಲಿ ಪೆಟ್ರೋಲ್ ಅನ್ನು ಅತ್ಯಧಿಕ 106.54 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಇಂದು ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್​ಗೆ ಅತ್ಯಧಿಕ 96 ಪೈಸೆ ಇಳಿಸಿದ್ದು, 105.58 ರೂ.ಗೆ ಮಾರಾಟ ಮಾಡಲಾಗುತ್ತಿದೆ.


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;


ಬಾಗಲಕೋಟೆ - 104.98 ರೂ. (38 ಪೈಸೆ ಇಳಿಕೆ)
ಬೆಂಗಳೂರು - 104.70 ರೂ. (00)
ಬೆಂಗಳೂರು ಗ್ರಾಮಾಂತರ -104.70ರೂ. (37 ಪೈಸೆ ಏರಿಕೆ)
ಬೆಳಗಾವಿ - 105.14 ರೂ. (11 ಪೈಸೆ ಏರಿಕೆ)
ಬಳ್ಳಾರಿ - 106.54 ರೂ. (55 ಪೈಸೆ ಏರಿಕೆ)
ಬೀದರ್ - 106.03 ರೂ. (13 ಪೈಸೆ ಏರಿಕೆ)
ಬಿಜಾಪುರ - 104.63 ರೂ. (19 ಪೈಸೆ ಏರಿಕೆ)
ಚಾಮರಾಜನಗರ - 105.01 ರೂ. (23 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - 105.17 ರೂ. (18 ಪೈಸೆ ಏರಿಕೆ)
ಚಿಕ್ಕಮಗಳೂರು - 105.64ರೂ. (96 ಪೈಸೆ ಇಳಿಕೆ)
ಚಿತ್ರದುರ್ಗ - 105.74 ರೂ. (68 ಪೈಸೆ ಇಳಿಕೆ)
ದಕ್ಷಿಣ ಕನ್ನಡ - 104.11ರೂ. (27 ಪೈಸೆ ಏರಿಕೆ)
ದಾವಣಗೆರೆ - 106.51 ರೂ. (15 ಪೈಸೆ ಏರಿಕೆ)
ಧಾರವಾಡ - 104.80 ರೂ. (36 ಪೈಸೆ ಇಳಿಕೆ)
ಗದಗ - 104.89 ರೂ. (11 ಪೈಸೆ ಇಳಿಕೆ)
ಗುಲಬರ್ಗ - 105.06 ರೂ. (08 ಪೈಸೆ ಏರಿಕೆ)
ಹಾಸನ – 105.09 ರೂ. (48 ಪೈಸೆ ಏರಿಕೆ)
ಹಾವೇರಿ - 105.52 ರೂ. (53 ಪೈಸೆ ಏರಿಕೆ)
ಕೊಡಗು – 105.95 ರೂ. (27 ಪೈಸೆ ಇಳಿಕೆ)
ಕೋಲಾರ - 104.56 ರೂ. (26 ಪೈಸೆ ಇಳಿಕೆ)
ಕೊಪ್ಪಳ- 105.83 ರೂ. (23 ಪೈಸೆ ಏರಿಕೆ)
ಮಂಡ್ಯ – 104.19 ರೂ. (46 ಪೈಸೆ ಇಳಿಕೆ)
ಮೈಸೂರು – 104.19 ರೂ. (00)
ರಾಯಚೂರು – 105.55 ರೂ. (56 ಪೈಸೆ ಇಳಿಕೆ)
ರಾಮನಗರ – 105.29 ರೂ. (47 ಪೈಸೆ ಏರಿಕೆ)
ಶಿವಮೊಗ್ಗ – 105.77 ರೂ. (40 ಪೈಸೆ ಇಳಿಕೆ)
ತುಮಕೂರು – 105.49 ರೂ. (40 ಪೈಸೆ ಇಳಿಕೆ)
ಉಡುಪಿ - 104.29 ರೂ. (34 ಪೈಸೆ ಇಳಿಕೆ)
ಉತ್ತರಕನ್ನಡ – 105.58 ರೂ . (95 ಪೈಸೆ ಇಳಿಕೆ)
ಯಾದಗಿರಿ – 105.54 ರೂ. (16 ಪೈಸೆ ಏರಿಕೆ).


ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 98.96 ರೂ ಇದ್ದರೆ ಡೀಸೆಲ್​ ಬೆಲೆ 93.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ 87.24 ರೂ ಆಗಿದ್ದರೆ, ಡೀಸೆಲ್​ ಬೆಲೆ 80.21 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ನೋಡ್ಡಾದಲ್ಲಿ ಒಂದು ಲೀಟರ್​ ಪೆಟ್ರೋಲ್ ಬೆಲೆ 98.52 ರೂ ಆಗಿದ್ದರೆ, ದೆಹಲಿಯಲ್ಲಿ 101.62 ರೂ ಮತ್ತು ಮಹಾರಾಷ್ಟ್ರದಲ್ಲಿ 107.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ರಾಜಸ್ಥಾನದ ಜೈಪುರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 108.56 ರೂ ಇದೆ. ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಎಂದು ಗುರುತಿಸಿಕೊಂಡಿದೆ.


ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.


ಇದನ್ನೂ ಓದಿ: Bank Holidays in October 2021: ಅಕ್ಟೋಬರ್ ತಿಂಗಳಲ್ಲಿ ಬರೋಬ್ಬರಿ 21 ದಿನ ಬ್ಯಾಂಕ್​ ರಜೆ..!


ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

top videos
    First published: