Petrol Price| ಮುಂದುವರೆದ ತೈಲ ಬೆಲೆ ಏರಿಕೆ ನಾಗಾಲೋಟ, 111 ರೂ. ಗಡಿ ದಾಟಿದ ಪೆಟ್ರೋಲ್; ಜನ ಸಾಮಾನ್ಯರು ಕಂಗಾಲು!

ಇಂದು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಸಾರ್ವಕಾಲಿಕ ದಾಖಲೆ ಬರೆದಿವೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ ಇಂದು 1 ಲೀಟರ್ ಪೆಟ್ರೋಲ್​ಗೆ 37 ಪೈಸೆ ಏರಿಸಿ 109.53 ರೂ ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಬೆಲೆಯಲ್ಲಿ 37 ಪೈಸೆ ಏರಿಸಿ 100.37 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ಬೆಂಗಳೂರು (ಅಕ್ಟೋಬರ್​ 18); ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ (Petrol and Diesel Price) ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಸೋಮವಾರವಾದ ಇಂದೂ ಸಹ ತೈಲ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ಬಡವರ ಕೈಗೆ ಎಟುಕದಂತಾಗಿದೆ. ಈಗಾಗಲೇ ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿರುವ ಜನ ದಿನನಿತ್ಯ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂದು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಸಾರ್ವಕಾಲಿಕ ದಾಖಲೆ ಬರೆದಿವೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Banglore) ಇಂದು 1 ಲೀಟರ್ ಪೆಟ್ರೋಲ್​ಗೆ 37 ಪೈಸೆ ಏರಿಸಿ 109.53 ರೂ ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಬೆಲೆಯಲ್ಲಿ 37 ಪೈಸೆ ಏರಿಸಿ 100.37 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ದಾವಣಗೆರೆಯಲ್ಲಿ (Davanagere) ಪೆಟ್ರೋಲ್ ಅನ್ನು 1 ಲೀಟರ್​ಗೆ 111.38 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ 111 ರೂ ಗಡಿ ಮುಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;

    ಬಾಗಲಕೋಟೆ - 110.23 ರೂ. (29 ಪೈಸೆ ಏರಿಕೆ)
    ಬೆಂಗಳೂರು - 109.53 ರೂ. (37 ಪೈಸೆ ಏರಿಕೆ)
    ಬೆಂಗಳೂರು ಗ್ರಾಮಾಂತರ -109.60ರೂ. (11 ಪೈಸೆ ಏರಿಕೆ)
    ಬೆಳಗಾವಿ - 110.17 ರೂ. (77 ಪೈಸೆ ಏರಿಕೆ)
    ಬಳ್ಳಾರಿ - 111.24 ರೂ. (67 ಪೈಸೆ ಏರಿಕೆ )
    ಬೀದರ್ - 110 ರೂ. (09 ಪೈಸೆ ಏರಿಕೆ)
    ಬಿಜಾಪುರ - 109.65 ರೂ. (36 ಪೈಸೆ ಏರಿಕೆ)
    ಚಾಮರಾಜನಗರ - 109.47- ರೂ. (18 ಪೈಸೆ ಏರಿಕೆ)
    ಚಿಕ್ಕಬಳ್ಳಾಪುರ - 110.01 ರೂ. (15 ಪೈಸೆ ಏರಿಕೆ)
    ಚಿಕ್ಕಮಗಳೂರು - 110.01 ರೂ. (05 ಪೈಸೆ ಏರಿಕೆ)
    ಚಿತ್ರದುರ್ಗ - 111.06 ರೂ. (17 ಪೈಸೆ ಏರಿಕೆ)
    ದಕ್ಷಿಣ ಕನ್ನಡ - 108.67 ರೂ. (07 ಪೈಸೆ ಏರಿಕೆ)
    ದಾವಣಗೆರೆ - 111.38 ರೂ. (45 ಪೈಸೆ ಏರಿಕೆ)
    ಧಾರವಾಡ - 109.27 ರೂ. (26 ಪೈಸೆ ಏರಿಕೆ)
    ಗದಗ – 109.83 ರೂ. (43 ಪೈಸೆ ಏರಿಕೆ)
    ಗುಲಬುರ್ಗ - 109.48 ರೂ. (49 ಪೈಸೆ ಏರಿಕೆ)
    ಹಾಸನ – 109.69 ರೂ. (77 ಪೈಸೆ ಏರಿಕೆ)
    ಹಾವೇರಿ - 110.61 ರೂ. (98 ಪೈಸೆ ಏರಿಕೆ)
    ಕೊಡಗು – 110.93 ರೂ. (37 ಪೈಸೆ ಏರಿಕೆ)
    ಕೋಲಾರ - 109.65 ರೂ. (17 ಪೈಸೆ ಏರಿಕೆ)
    ಕೊಪ್ಪಳ- 110.66 ರೂ. (30 ಪೈಸೆ ಏರಿಕೆ)
    ಮಂಡ್ಯ – 109.14 ರೂ. (10 ಪೈಸೆ ಇಳಿಕೆ)
    ಮೈಸೂರು – 109.33 ರೂ. (12 ಪೈಸೆ ಏರಿಕೆ )
    ರಾಯಚೂರು – 109.35 ರೂ. (36 ಪೈಸೆ ಏರಿಕೆ)
    ರಾಮನಗರ – 109.89 ರೂ. ( 26 ಪೈಸೆ ಏರಿಕೆ)
    ಶಿವಮೊಗ್ಗ – 111.22 ರೂ. (82 ಪೈಸೆ ಏರಿಕೆ)
    ತುಮಕೂರು – 110.44 ರೂ. (32 ಪೈಸೆ ಏರಿಕೆ)
    ಉಡುಪಿ - 108.95 ರೂ. (53 ಪೈಸೆ ಏರಿಕೆ)
    ಉತ್ತರಕನ್ನಡ – 110.97 ರೂ . (1.23 ರೂ. ಏರಿಕೆ)
    ಯಾದಗಿರಿ – 110.66 ರೂ. (36 ಪೈಸೆ ಏರಿಕೆ ).

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

    ಬಾಗಲಕೋಟೆ – 101.04
    ಬೆಂಗಳೂರು – 100.37
    ಬೆಂಗಳೂರು ಗ್ರಾಮಾಂತರ : 100.44
    ಬೆಳಗಾವಿ – 100.99
    ಬಳ್ಳಾರಿ – 101.97
    ಬೀದರ್ -100.83
    ಬಿಜಾಪುರ – 100.51

    ಚಾಮರಾಜನಗರ – 100.32
    ಚಿಕ್ಕಬಳ್ಳಾಪುರ – 100.82

    ಚಿಕ್ಕಮಗಳೂರು – 100.72
    ಚಿತ್ರದುರ್ಗ – 101.65
    ದಕ್ಷಿಣ ಕನ್ನಡ – 99.56
    ದಾವಣಗೆರೆ -101.95
    ಧಾರವಾಡ – 100.16
    ಗದಗ – 100.68
    ಗುಲಬರ್ಗ – 100.36
    ಹಾಸನ – 100.40
    ಹಾವೇರಿ – 101.38
    ಕೊಡಗು – 101.53
    ಕೋಲಾರ – 100.48
    ಕೊಪ್ಪಳ- 101.43
    ಮಂಡ್ಯ – 100.02
    ಮೈಸೂರು –100.19
    ರಾಯಚೂರು – 100.25
    ರಾಮನಗರ – 100.70
    ಶಿವಮೊಗ್ಗ – 101.85
    ತುಮಕೂರು –101.21
    ಉಡುಪಿ – 99.81
    ಉತ್ತರಕನ್ನಡ – 101.66
    ಯಾದಗಿರಿ – 101.43

    ಇದನ್ನೂ ಓದಿ: Pakistan Debt - ಇಮ್ರಾನ್ ಖಾನ್ ಸರ್ಕಾರಕ್ಕೆ ಸಾಲ ನೀಡಲ್ಲ ಎಂದ IMF - ಸಾಲ ಕೇಳಿದೆಷ್ಟು ಗೊತ್ತಾ?

    ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 103.01 ರೂ ಇದ್ದರೆ ಡೀಸೆಲ್​ ಬೆಲೆ 98.92 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 105.84 ರೂ ಮತ್ತು ಡೀಸೆಲ್ 97.33 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪೆಟ್ರೋಲ್ 111.43 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 102.15 ರೂ.ಗೆ ಮಾರಾಟ ಮಾಡಲಾಗುತ್ತಿದೆ.

    ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

    ಇದನ್ನೂ ಓದಿ: 13 Point Agenda for Punjab: ಸೋನಿಯಾ ಗಾಂಧಿಗೆ ಸಿಧು ಪತ್ರ; ಹೊಸ ಫಾರ್ಮುಲಾದೊಂದಿಗೆ ಸಿಎಂ ಚನ್ನಿ ವಿರುದ್ಧ ಅಸ್ತ್ರ

    ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.
    Published by:MAshok Kumar
    First published: