HOME » NEWS » State » TODAY PARLIAMENTARY MEETING HELD AT VIDHAN SOUDHA SIDDARAMAIAH SPEAKER KAGERI BS YEDIYURAPPA SCT

ರಾಜ್ಯದ ಪ್ರಮುಖ ರಾಜಕಾರಣಿಗಳ ಜೊತೆ ಕಾಗೇರಿ ಸಭೆ; ಸ್ಪೀಕರ್​ ಸರ್ವಾಧಿಕಾರ ಸೇರಿ ಹಲವು ವಿಚಾರಗಳ ಚರ್ಚೆ

ಇಂದು ಬೆಳಗ್ಗೆ ರಾಜ್ಯದ 25 ರಾಜಕಾರಣಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.

news18-kannada
Updated:May 28, 2020, 8:55 PM IST
ರಾಜ್ಯದ ಪ್ರಮುಖ ರಾಜಕಾರಣಿಗಳ ಜೊತೆ ಕಾಗೇರಿ ಸಭೆ; ಸ್ಪೀಕರ್​ ಸರ್ವಾಧಿಕಾರ ಸೇರಿ ಹಲವು ವಿಚಾರಗಳ ಚರ್ಚೆ
ವಿಶ್ವೇಶ್ವರ ಹೆಗಡೆ ಕಾಗೇರಿ
  • Share this:
ಬೆಂಗಳೂರು (ಮೇ 28): ಪಕ್ಷಾಂತರ ನಿಷೇಧ ಕಾಯ್ದೆಯ 10ನೇ ಶೆಡ್ಯೂಲ್ ಸಂಬಂಧ ನಡೆದ ಕರ್ನಾಟಕದ ರಾಜಕೀಯ ಗಣ್ಯರ ಸಭೆಯಲ್ಲಿ ಅನರ್ಹತೆ ಸಂಬಂಧ ಸ್ಪೀಕರ್ ಗೆ ಸರ್ವಾಧಿಕಾರ ನೀಡಬೇಕು ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸೌಧದಲ್ಲಿ ತಿಳಿಸಿದ್ದಾರೆ.

ಇಂದು ಬೆಳಗ್ಗೆ ರಾಜ್ಯದ 25 ರಾಜಕಾರಣಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು. ಪ್ರಸಕ್ತ ರಾಜಕೀಯ ಪರಿಸ್ಥಿತಿಗಳು, ರಾಜಕೀಯ ಪಕ್ಷಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಸಭೆಯಲ್ಲಿ ಚುನಾವಣಾ ಆಯೋಗದ ಬಗ್ಗೆ, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಭಿಪ್ರಾಯ ನೀಡಿದ್ದಾರೆ. ಶಾಸಕಾಂಗದ ಘನತೆ, ಗೌರವವನ್ನು ಕಾಪಾಡುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ. ಜೊತೆಗೆ, ಸ್ಪೀಕರ್ ಗೆ ಅನರ್ಹತೆ ಸಂಬಂಧ ಪರಮೋಚ್ಛ ಅಧಿಕಾರ ಇರಬೇಕು.  ಕಾಲಮಿತಿಯೊಳಗೆ ಈ ಅನರ್ಹತೆಯ ಪ್ರಕರಣ ವಿಚಾರಣೆ ಮುಕ್ತಾಯ ಆಗಬೇಕು. ರಾಜೀನಾಮೆ ನೀಡಿದ ಶಾಸಕರಿಗೆ ಮರುಚುನಾವಣೆಗೆ ನಿಲ್ಲಲು ಅವಕಾಶ ನೀಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹೊಸ ಕ್ವಾರಂಟೈನ್ ನಿಯಮ; 7 ದಿನಗಳಲ್ಲಿ ರೋಗಲಕ್ಷಣ ಕಂಡುಬರದಿದ್ದರೆ ಮನೆಗೆ ಹೋಗಬಹುದು

ಅನರ್ಹ ಶಾಸಕರ ಕುಟುಂಬ ವರ್ಗದವರು ಸ್ಪರ್ಧಿಸದಂತೆ ತಿದ್ದುಪಡಿ ತರಬೇಕು ಎಂಬ ಬಗ್ಗೆ ಅಭಿಪ್ರಾಯ ನೀಡಿದ್ದಾರೆ. ಚುನಾವಣೋತ್ತರ ಮೈತ್ರಿಗೂ ಅವಕಾಶವನ್ನೂ ನೀಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅನರ್ಹತೆ ವಿಚಾರವಾಗಿ ನ್ಯಾಯಾಂಗದ ಹಸ್ತಕ್ಷೇಪ ಮಾಡಬಾರದು. ಸ್ಪೀಕರ್​ಗೇ ಎಲ್ಲ ಸರ್ವಾಧಿಕಾರ ಇರಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ ಎಂದರು. ಜೂನ್ 10ರ ಒಳಗೆ ಸಾರ್ವಜನಿಕರು ವಿಧಾನಸಭೆ ಕಾರ್ಯದರ್ಶಿಗೆ ತಮ್ಮ ಅಭಿಪ್ರಾಯ ‌ನೀಡಬೇಕು. ವಿಧಾನಪರಿಷತ್ ಸದಸ್ಯರ ಜೊತೆನೂ ಚರ್ಚೆ ಮಾಡುತ್ತೇನೆ. ಜೂನ್ 5ರಂದು ಪರಿಷತ್ ಸದಸ್ಯರ ಜೊತೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ಕಾಗೇರಿ ತಿಳಿಸಿದ್ದಾರೆ.
First published: May 28, 2020, 8:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories