ವಿಶ್ವಪ್ರಸಿದ್ಧ ಬೆಂಗಳೂರು ಕರಗ ಪ್ರಾರಂಭ; ಕಳೆಗಟ್ಟಲಿದೆ ಉದ್ಯಾನನಗರಿ

ಚಿಕ್ಕಪೇಟೆಯ ತಿಗಳಪೇಟೆಯಲ್ಲಿರೋ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕರಗ ಮಹೋತ್ಸವ ಸಂಭ್ರಮ ಸಡಗರ ಮುಗಿಲುಮುಟ್ಟಿದೆ

G Hareeshkumar | news18
Updated:April 19, 2019, 10:54 PM IST
ವಿಶ್ವಪ್ರಸಿದ್ಧ ಬೆಂಗಳೂರು ಕರಗ ಪ್ರಾರಂಭ; ಕಳೆಗಟ್ಟಲಿದೆ ಉದ್ಯಾನನಗರಿ
ಬೆಂಗಳೂರು ಕರಗ
G Hareeshkumar | news18
Updated: April 19, 2019, 10:54 PM IST
ಬೆಂಗಳೂರು (ಏ.19) :  ವಿಶ್ವಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವ ಅದ್ಧೂರಿಯಿಂದ ನಡೀತಿದೆ. ಕರಗ ಶಕ್ತೋತ್ಸವ ನೋಡಲು ಜನರ ಕಾತುರದಿಂದ ಕಾಯ್ತಿದ್ದಾರೆ. ಇಡೀ ರಾತ್ರಿ ನಡೆಯೋ ಕರಗ ಉತ್ಸವ ನೋಡಲು ಭಕ್ತಸಾಗರವೇ ಹರಿದು ಬರ್ತಿದೆ. ರಾತ್ರಿ 12:30ಕ್ಕೆ ಪ್ರಾರಂಭವಾಗಲಿದೆ.

ಚಿಕ್ಕಪೇಟೆಯ ತಿಗಳಪೇಟೆಯಲ್ಲಿರೋ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕರಗ ಮಹೋತ್ಸವ ಸಂಭ್ರಮ ಸಡಗರ ಮುಗಿಲುಮುಟ್ಟಿದೆ. ಚೈತ್ರ ಪೌರ್ಣಮಿಯಂದು ಕರಗ ಶಕ್ತೋತ್ಸವ ನಡೆಯಲಿದ್ದು, ಮೊದಲ ಬಾರಿಗೆ ಪೂಜಾರಿ ಅಭಿಮನ್ಯು ಶಿಷ್ಯ ಮನು ಎಂಬುವರು ಬೆಂಗಳೂರು ಕರಗ ಹೊತ್ತು ನಗರ ಪ್ರದಕ್ಷಿಣಿ ಮಾಡಲಿದ್ದಾರೆ.

ಮಲ್ಲಿಗೆ ಹೂವೇ ಪ್ರಧಾನ ಆಕರ್ಷಣೆ

ವಹ್ನಿಕುಲ ಕ್ಷತ್ರಿಯರ ಪವಿತ್ರ ಕರಗೋತ್ಸವಕ್ಕೆ ಮಲ್ಲಿಗೆ ಹೂವೇ ಪ್ರಧಾನ ಆಕರ್ಷಣೆಯಾಗಿದೆ. ತಮಿಳುನಾಡಿನ ಸೇಲಮ್ ನಿಂದ 3 ಟನ್ ಗೂ ಅಧಿಕ ಮಲ್ಲಿಗೆ ಹೂವು ಕರಗ ಉತ್ಸವಕ್ಕೆ ಬಳಕೆ ಮಾಡಲಾಗಿದೆ. ಮೂರು ಸಾವಿರ ಮಂದಿ ವೀರಕುಮಾರರಿಗೆ ಮಲ್ಲಿಗೆ ಹಾರ. ಗೌಡರು, ಗಣಾಚಾರಿ, ಗಂಟೆ ಪೂಜಾರಿ, ಧರ್ಮದರ್ಶಿಗಳು, ಅತಿ ಮುಖ್ಯ ಗಣ್ಯರಿಗೆ ಒಂದೊಂದು ರೀತಿಯ ಹೂವಿನ ಹಾರ ಬಳಕೆ ಮಾಡಲಾಗಿದೆ.



ಚಂದ್ರ ನಡುನೆತ್ತಿಗೆ ಬಂದ ಕೂಡಲೇ ಕರಗವನ್ನು ಶಿರದಲ್ಲಿ ಧರಿಸಿದ ಕರಗಕರ್ತ ಪೂಜಾರಿಯು ಗರ್ಭಗುಡಿಯಿಂದ ಹೊರಬಂದು ದೇವಳದ ಆವರಣದಲ್ಲಿ ಪ್ರದಕ್ಷಿಣೆ ಹಾಕಿ ಶಕ್ತಿ ಮಹಾಗಣಪತಿ ಮತ್ತು ಮುತ್ಯಾಲಮ್ಮ ದೇವಿ ಗುಡಿಯಲ್ಲಿ ಬಳಿಕ ಹಲಸೂರು ಗೇಟ್‌ ಆಂಜನೇಯಸ್ವಾಮಿ, ಶ್ರೀ ರಾಮ ದೇವಾಲಯ ಮತ್ತು ಜಲಕಂಠೇಶ್ವರ ದೇವಾಲಯಗಳಿಗೆ ತೆರಳಿ ಪೂಜೆ ಸ್ವೀಕರಿಸಲಿದ್ದಾರೆ. ಬಳಿಕ ಕರಗವು ದೇವಾಲಯ ಹಾಗೂ ಮಹಾರಥಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಅತಿಥಿ ಗಣ್ಯರಿಗೆ ನಿಂಬೆಹಣ್ಣಿನ ಪ್ರಸಾದ ನೀಡಿ ವೀರಕುಮಾರರೊಂದಿಗೆ ಭಕ್ತಾದಿಗಳಿಗೆ ದರ್ಶನ ನೀಡುತ್ತ ನಗರ ಪ್ರದಕ್ಷಿಣೆ ಸಾಗಲಿದೆ
Loading...

ಬೆಂಗಳೂರಿನ ಕರಗ ನೋಡಲು ರಾತ್ರಿಯಿಡಿ ಜನರು ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ಕರಗ ಮಹೋತ್ಸವವನ್ನ ಕಣ್ತುಂಬಿಕೊಳ್ತಾರೆ. ಕೆಂಪೇಗೌಡ ಕಟ್ಟಿರೋ ಕೋಟೆ ಸರಹದ್ದಿನಲ್ಲಿ ಸಾಗೋ ಕರಗ, ಅವೆನ್ಯೂ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ರಾಣಾಸಿಂಗ್ ಪೇಟೆ, ಕಾಟನ್ ಪೇಟೆ, ಮಸ್ತಾನ್ ಸಾಬ್ ದರ್ಗಾ ಮಾರ್ಗವಾಗಿ ಸಾಗಿ ಬೆಳಗಿನ ಜಾವ ಧರ್ಮರಾಯ ದೇವಾಲಯವನ್ನ ತಲುಪಲಿದೆ

ಕರಗ ಮಹೋತ್ಸವಕ್ಕೆ ಬಿಗಿ ಭದ್ರತೆ

ಕೇಂದ್ರ ವಲಯ ಡಿಸಿಪಿ ದೇವರಾಜ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.  5 ಎಸಿಪಿ, 20 ಇನ್ಸ್‌ಪೆಕ್ಟರ್, 3 ಕೆಎಸ್ಆರ್​​ಪಿ ತುಕಡಿ, ಸಂಚಾರಿ ಪೊಲೀಸರು ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು,  ಮುಂಜಾಗೃತ ಕ್ರಮವಾಗಿ ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ನಿಯೋಜನೆ. ಕರಗ ಸಾಗುವ ಮಾರ್ಗದುದ್ದಕ್ಕೂ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ಇದನ್ನೂ ಓದಿ : ಅದ್ಧೂರಿಯಾಗಿ ನಡೆದ ಬೆಂಗಳೂರು ಕರಗ: ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆ

ಕರಗ ಮಹೋತ್ಸವ ಪ್ರಯುಕ್ತ ಎಸ್​​ ಪಿ ರಸೆ, ಪೈಲ್ವಾನ್ ಕೃಷ್ಣಪ್ಪ ರಸ್ತೆ, ಒಟಿಸಿ ರಸ್ತೆ, ನಗತರಪೇಟೆ ಮುಖ್ಯ ರಸ್ತೆಯಲ್ಲಿ ಸಂಚಾರ ಹಾಗೂ ಪಾರ್ಕಿಂಗ್  ಹಾಗೂ ಸಂಚಾರವನ್ನು ನಿರ್ಬಂಧಿಸಲಾಗಿದೆ.

First published:April 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626