MLC Election: ಪರಿಷತ್​​ನ 25 ಸ್ಥಾನಗಳಿಗೆ ಇಂದು ಚುನಾವಣೆ: ಜಿಲ್ಲಾವಾರು ಸಂಪೂರ್ಣ ಮಾಹಿತಿ ಇಲ್ಲಿದೆ

council elections 2021: 25 ವಿಧಾನ ಪರಿಷತ್ ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Election) ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
MLC Election 2021: ಇಂದು ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್​ (Karnataka Legislative Council) ಚುನಾವಣೆ. 2022ರ ಜನವರಿ 5ರಂದು 25 ಪರಿಷತ್​ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Election) ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ. ಚುನಾವಣೆ ಘೋಷಣೆಯಾದಗಿನಿಂದ ಮೂರು ಪಕ್ಷಗಳ ಘಟಾನುಘಟಿ ನಾಯಕರು ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಕೆಲವು ಕಡೆ ಬಿಜೆಪಿಗೆ ಜೆಡಿಎಸ್​ ಬೆಂಬಲಿಸಲಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್​.ಯಡಿಯೂರಪ್ಪ, ಎಚ್​ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ನಾವು ಯಾರ ಬೆಂಬಲ ಇಲ್ಲದೆ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿರೋದಾಗಿ ಕಾಂಗ್ರೆಸ್​ ಹೇಳಿಕೊಂಡಿದೆ.

ಇಂದಿನ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜನಪ್ರತಿನಿಧಿಗಳು ಮತ ಚಲಾಯಿಸುವುದರಿಂದ ಯಾವುದೇ ಗೊಂದಲಗಳಿಲ್ಲದೆ ವ್ಯವಸ್ಥಿತವಾಗಿ ಮತದಾನ ನಡೆಯಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಮತಗಟ್ಟೆಗಳು? ಯಾರೆಲ್ಲಾ ಚುನಾವಣಾ ಕಣದಲ್ಲಿದ್ದಾರೆ ಎಂಬ ಎಲ್ಲಾ ಮಾಹಿತಿಗಳನ್ನು ಜಿಲ್ಲಾವಾರು ನೋಡೋದಾದರೆ ವಿವರಗಳು ಹೀಗಿವೆ..

 ಬೆಂಗಳೂರು ಗ್ರಾಮಾಂತರ

  • ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಿಂದ ಒಟ್ಟು 228 ಮತಗಟ್ಟೆಗಳು

  • ಬೆಂಗಳೂರು ಗ್ರಾಮಾಂತರ  ೧೦೨ ಮತಗಟ್ಟೆಗಳು.

  • ರಾಮನಗರ ಒಟ್ಟು ೧೨೬ ಮತಗಟ್ಟೆಗಳು.

  • ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 1864 ಮತದಾರರಿದ್ದಾರೆ.

  • ಪುರುಷರು 902 ಮತ್ತು ಮಹಿಳೆಯರು 962 ಮತದಾರರಿದ್ದಾರೆ.

  • ರಾಮನಗರದಲ್ಲಿ ಒಟ್ಟು 2059 ಮತದಾರರಿದ್ದು

  • ಪುರುಷರು 960 ಮತ್ತು ಮಹಿಳೆಯರು 1099 ಮಹಿಳಾ ಮತದಾರರಿದ್ದಾರೆ.


 ಆನೇಕಲ್

  •  ಒಟ್ಟು 31 ಮತಕೇಂದ್ರ

  • ಒಟ್ಟು 849 ಮತದಾರರು

  • ಮಹಿಳೆಯರು 425, ಪುರುಷರು 423, ಇತರೆ 01

  • ಪ್ರತಿ ಮತಗಟ್ಟೆಯಲ್ಲಿ ಐದು ಜನ ಸಿಬ್ಬಂದಿ ನಿಯೋಜನೆ


ಮೈಸೂರು

  •  ಒಟ್ಟು 6792 ಮತದಾರರು

  • ಪುರುಷ ಮತದಾರರು 3175- ಮಹಿಳಾ ಮತದಾರರು 3517.

  • ಎರಡು ಜಿಲ್ಲೆಗಳ ಜಿ.ಪಂ. 279, ನಗರಸಭೆ 4, ಪುರಸಭಾ 6, ಪಟ್ಟಣ ಪಂಚಾಯತಿ 3 ಎಂಸಿಸಿ1

  • ಒಟ್ಟು 393 ಮತಗಟ್ಟೆಗಳ ಸ್ಥಾಪನೆ (ಮೈಸೂರು-259, ಚಾಮರಾಜನಗರ-134).

  • ಮತದಾನ ಕಾರ್ಯಕ್ಕೆ 1809 ಸಿಬ್ಬಂದಿ ಬಳಕೆ.



  1.  *ಕಾಂಗ್ರೆಸ್  ಅಭ್ಯರ್ಥಿ: ಡಾ.ಡಿ.ತಿಮ್ಮಯ್ಯ

  2.  *ಬಿಜೆಪಿ ಅಭ್ಯರ್ಥಿ: ಆರ್.ರಘು ಕೌಟಿಲ್ಯ

  3.  *ಜೆ.ಡಿ.ಎಸ್. ಅಭ್ಯರ್ಥಿ: ಸಿ.ಎನ್. ಮಂಜೇಗೌಡ

  4.  *ಪಕ್ಷೇತರ ಅಭ್ಯರ್ಥಿ: ವಾಟಾಳ್ ನಾಗರಾಜ್


ಬೀದರ್

  • ಒಟ್ಟು ಮತದಾರರು 3,453 ಮತದಾರರು

  • ಜಿಲ್ಲೆಯಲ್ಲಿ ಒಟ್ಟು 192 ಮತಗಟ್ಟೆಗಳಸ್ಥಾಪನೆ

  • ಪುರುಷರು ಮತದಾರರು-1659

  • ಮಹಿಳಾ ಮತದಾರರು -1794


ಮಂಡ್ಯ   

  • ಒಟ್ಟು ಮತದಾರರ ಸಂಖ್ಯೆ-4032

  • ಮಹಿಳೆಯರು-2102

  • ಪುರುಷರು-1930


ಕಣದಲ್ಲಿರುವ ಅಭ್ಯರ್ಥಿಗಳು

  1. ಬೂಕಳ್ಳಿ ಮಂಜು - ಬಿಜೆಪಿ ಅಭ್ಯರ್ಥಿ

  2. ದಿನೇಶ್ ಗೂಳಿಗೌಡ - ಕಾಂಗ್ರೆಸ್ ಅಭ್ಯರ್ಥಿ

  3. ಅಪ್ಪಾಜಿಗೌಡ - ಜೆಡಿಎಸ್ ಅಭ್ಯರ್ಥಿ

  4. ಮಂಜುನಾಥ್ - ಪಕ್ಷೇತರ ಅಭ್ಯರ್ಥಿ


ಮಂಗಳೂರು

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡ ದ್ವಿಸದಸ್ಯ ಕ್ಷೇತ್ರ

ಒಟ್ಟು ಮತಗಳು : 6040

ದಕ್ಷಿಣ ಕನ್ನಡ

  • ಒಟ್ಟು  ಮತಗಳು- 3535

  • ಪುರುಷರು - 1710

  • ಮಹಿಳೆಯರು - 1825


ಉಡುಪಿ

  • ಒಟ್ಟು  ಮತಗಳು- 2505

  • ಪುರುಷರು- 1207

  • ಮಹಿಳೆಯರು- 1298


ಅಭ್ಯರ್ಥಿಗಳು :

  •  ಕೋಟ ಶ್ರೀನಿವಾಸ್ ಪೂಜಾರಿ( ಬಿಜೆಪಿ )

  • ಮಂಜುನಾಥ್ ಭಂಡಾರಿ ( ಕಾಂಗ್ರೆಸ್ )

  • ಶಾಫಿ ಬೆಳ್ಳಾರೆ ( ಎಸ್ ಡಿ ಪಿ ಐ)


 ತುಮಕೂರು

  •  338 ಮತಗಟ್ಟೆ ಸ್ಥಾಪನೆ

  • ಪ್ರತಿ ಮತದಾನ ಕೇಂದ್ರಕ್ಕೆ ಪಿಆರ್‌ ಒ ಮತ್ತು ಎಪಿಆರ್‌ ನೇಮಕ

  • 144 ಮತಗಟ್ಟೆಗಳು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಳೆಂದು ಗುರುತು

  • 95 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳು

  • 49 ಅತಿ ಸೂಕ್ಷ್ಮ ಮತಗಟ್ಟೆ

  • ಪ್ರತಿ ಮತಗಟ್ಟೆಯಲ್ಲಿ ವಿಡಿಯೋಗ್ರಾಫಿ ಮಾಡಲಾಗುವುದು


ಚಿತ್ರದುರ್ಗ-ದಾವಣಗೆರೆ

  • 284 ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ

  • ಒಟ್ಟು ಮತದಾರರು - 5073

  • ಮಹಳೆಯರು -2689

  • ಪುರುಷರು- 2384

  • ಬಿಜೆಪಿ ಅಭ್ಯರ್ಥಿ - ಕೆಎಸ್ ನವೀನ್

  • ಕಾಂಗ್ರೆಸ್ ಅಭ್ಯರ್ಥಿ - ಬಿ. ಸೋಮಶೇಖರ್


ರಾಮನಗರ

  • ಒಟ್ಟು 227 ಮತಗಟ್ಟೆಗಳ ಸ್ಥಾಪನೆ

  • ಒಟ್ಟು ಮತದಾರರ ಸಂಖ್ಯೆ- 3,898

  • ಮಹಿಳೆಯರು- 2,036

  • ಪುರುಷರು- 1,862

  • ಎಸ್.ರವಿ - ಕಾಂಗ್ರೆಸ್

  • ರಮೇಶ್ ಗೌಡ - ಜೆಡಿಎಸ್

  • ನಾರಾಯಣಸ್ವಾಮಿ - ಬಿಜೆಪಿ


ಕೊಪ್ಪಳ

  • ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 157  ಮತಗಟ್ಟೆಗಳಲ್ಲಿ ಚುನಾವಣೆ

  • ಒಟ್ಟು 2876 ಮತದಾರರು ಮತ ಚಲಾಯಿಸಲಿದ್ದಾರೆ

  • ಒಟ್ಟು 519 ಮತಗಟ್ಟೆ ಸಿಬ್ಬಂದಿ ನೇಮಕ

  • 157 ಮತಗಟ್ಟೆಗಳಲ್ಲಿ 32 ಅತಿಸೂಕ್ಷ್ಮ, 52 ಸೂಕ್ಷ್ಮ 73 ಸಾಮಾನ್ಯ ಮತಗಟ್ಟೆಗಳಿವೆ

  • 235 ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ

  • 42 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ


ಹುಬ್ಬಳ್ಳಿ- ಧಾರವಾಡ

  • ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ಮತದಾನ

  • ಗದಗ, ಹಾವೇರಿ ಮತ್ತು ಧಾರವಾಡ ಸೇರಿ ಒಟ್ಟು 504 ಮತಗಟ್ಟೆಗಳ ಸ್ಥಾಪನೆ

  • ಧಾರವಾಡ ಜಿಲ್ಲೆಯಲ್ಲಿ 2165 ( 1054 ಪುರುಷರು , 1111 ಮಹಿಳೆಯರು )

  • ಗದಗ ಜಿಲ್ಲೆಯಲ್ಲಿ 1969 ( 969 ಪುರುಷರು, 1000 ಮಹಿಳೆಯರು)

  • ಹಾವೇರಿ ಜಿಲ್ಲೆಯಲ್ಲಿ 3360 ( 1636 ಪುರುಷರು, 1733 ಮಹಿಳೆಯರು)


ಧಾರವಾಡ  

  1. ಸ್ಥಳೀಯ ಸಂಸ್ಥೆಗಳಿಂದ ಧಾರವಾಡದಲ್ಲಿ ಎರಡು ಸ್ಥಾನಗಳಿಗೆ ಮತದಾನ

  2.  ಒಟ್ಟು ಮತದಾರರ ಸಂಖ್ಯೆ 7501, ಪುರುಷರು 3657, ಮಹಿಳೆಯರು 3844

  3. ಧಾರವಾಡ ಜಿಲ್ಲೆಯಲ್ಲಿ ಒಟ್ಟು 2165 ಮತದಾರರು (ಪುರುಷರು 1054, ಮಹಿಳೆಯರು 1111)

  4. ಗದಗ ಜಿಲ್ಲೆಯಲ್ಲಿ ಒಟ್ಟು  1967 ಮತದಾರರು (ಪುರುಷರು 967, ಮಹಿಳೆಯರು 1000)

  5. ಹಾವೇರಿ ಜಿಲ್ಲೆಯಲ್ಲಿ ಒಟ್ಟು 3369 ಮತದಾರರು (ಪುರುಷರು 1636, ಮಹಿಳೆಯರು 1733)


 ಬಳ್ಳಾರಿ -ವಿಜಯನಗರ

  • ಒಟ್ಟು ಮತಗಳು: 4663

  • ಪುರುಷರು - 2194

  • ಮಹಿಳೆಯರು - 2468

  • 247 ಮತಗಟ್ಟೆಗಳು


ಮೈಸೂರು  

  • ಮಹಿಳಾ ಮತದಾರರು 1187

  • ಪುರುಷ ಮತದಾರರು  1082

  • ಒಟ್ಟು ಮತದಾರರು  2269


ಮೈಸೂರು ಅಭ್ಯರ್ಥಿಗಳು

  1. ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್

  2. ಸಿ.ಎನ್ ಮಂಜೇಗೌಡ ಜೆಡಿಎಸ್

  3. ಆರ್ ರಘು, ಬಿಜೆಪಿ

  4. ವಾಟಾಳ್ ನಾಗರಾಜ್, ಕನ್ನಡ ಚಳವಳಿ ವಾಟಾಳ್ ಪಕ್ಷ

  5. ಕೆ.ಸಿ.ಬಸವರಾಜು, ಪಕ್ಷೇತರ

  6. ಗುರುಲಿಂಗಯ್ಯ ಪಕ್ಷೇತರ

  7. ಆರ್ ಮಂಜುನಾಥ್ ಪಕ್ಷೇತರ


ವಿಜಯಪುರ-ಬಾಗಲಕೋಟೆ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆ

  • ಒಟ್ಟು 203 ಮತಗಟ್ಟೆಗಳಲ್ಲಿ ಮತದಾನ

  • ನಗರ ಪ್ರದೇಶದ ಮತದಾರರ ಸಂಖ್ಯೆ 346

  • ಗ್ರಾಮೀಣ ಪ್ರದೇಶದ ಮತದಾರರ ಸಂಖ್ಯೆ 3082

  • ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 3428


ಹಾವೇರಿ

  • ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 3369

  • ಪುರುಷ ಮತದಾರರು:-1649

  • ಮಹಿಳಾ ಮತದಾರರು:-1720


 ವಿಜಯಪುರ

1864 ಪುರುಷ ಹಾಗೂ 2078 ಮಹಿಳಾ ಮತದಾರರು ಸೇರಿದಂತೆ 3940 ಮತದಾರರಿದ್ದಾರೆ.

ಬಾಗಲಕೋಟೆ

1674 ಪುರುಷ ಹಾಗೂ 1776 ಮಹಿಳಾ ಮತದಾರರು ಸೇರಿದಂತೆ 4350 ಮತದಾರರಿದ್ದಾರೆ.

ಕೋಲಾರ-ಚಿಕ್ಕಬಳ್ಳಾಪುರ

  • ‌ಒಟ್ಟು 321 ಮತಗಟ್ಟೆಗಳು

  • ಜಿಲ್ಲೆಯಲ್ಲಿ 105 ಮತಗಟ್ಟೆಗಳು ಸೂಕ್ಷ್ಮ , 73 ಮತಗಟ್ಟೆಗಳು ಅತೀ‌ಸೂಕ್ಷ್ಮ,

  • ಎರಡು ಜಿಲ್ಲೆಯಲ್ಲಿ ಒಟ್ಟು 5,600 ಮತದಾರರು

  • ಪುರುಷರು - 2,675

  • ಮಹಿಳೆಯರು - 2925



  1. ಕಾಂಗ್ರೆಸ್ - ಎಮ್ ಎಲ್ ಅನಿಲ್ ಕುಮಾರ್

  2. ಜೆಡಿಎಸ್ - ವಿ.ಇ ರಾಮಚಂದ್ರ ( ವಕ್ಕಲೇರಿ ರಾಮು )

  3. ಬಿಜೆಪಿ - ಕೆಎನ್ ವೇಣುಗೋಪಾಲ್

  4. ಪಕ್ಷೇತರ - ಎಂಪಿ ಅನಿಲ್ ಕುಮಾರ್


ಚಿಕ್ಕಮಗಳೂರು

  • ಮತದಾರರ ಸಂಖ್ಯೆ : 2423

  • ಪುರಷ ಮತದಾರರು : 1139

  • ಮಹಿಳಾ ಮತದಾರರು : 1284


ಕೊಡಗು

  • ಒಟ್ಟು 108 ಮತಗಟ್ಟೆಗಳು

  • ಜಿಲ್ಲೆಯಲ್ಲಿ ಒಟ್ಟು 1329 ಮತದಾರರು

  • 642 ಪುರುಷರು ಮತದಾರರು

  • 687 ಮಹಿಳಾ ಮತದಾರರು

Published by:Kavya V
First published: