ಇಂದು ಕೂಡ ತಿಹಾರ್ ಜೈಲಿನಲ್ಲಿ ಡಿಕೆಶಿ ವಿಚಾರಣೆ; ಡಿ.ಕೆ.ಸುರೇಶ್ ಹೇಳಿಕೆ ಆಧರಿಸಿ ಪ್ರಶ್ನೆ ಕೇಳುವ ಸಾಧ್ಯತೆ

ಡಿಕೆಶಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಮತ್ತೊಬ್ಬ ಆರೋಪಿಯಾಗಿರುವ  ಸುನೀಲ್ ಶರ್ಮಾ ಅವರನ್ನು ಇಡಿ ಅಧಿಕಾರಿಗಳ ಇಂದು ವಿಚಾರಣೆ ನಡೆಸಲಿದ್ದಾರೆ.  ನಿನ್ನೆಯೂ ಸುನೀಲ್ ಶರ್ಮಾ ಅವರನ್ನು  ವಿಚಾರಣೆ ನಡೆಸಲಾಗಿತ್ತು. ಇಂದು ಬೆಳಿಗ್ಗೆ 11 ಗಂಟೆಗೆ ಮತ್ತೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಗಿದೆ.

HR Ramesh | news18-kannada
Updated:October 5, 2019, 7:21 AM IST
ಇಂದು ಕೂಡ ತಿಹಾರ್ ಜೈಲಿನಲ್ಲಿ ಡಿಕೆಶಿ ವಿಚಾರಣೆ; ಡಿ.ಕೆ.ಸುರೇಶ್ ಹೇಳಿಕೆ ಆಧರಿಸಿ ಪ್ರಶ್ನೆ ಕೇಳುವ ಸಾಧ್ಯತೆ
ಡಿ.ಕೆ. ಶಿವಕುಮಾರ್
  • Share this:
ನವದೆಹಲಿ: ದೆಹಲಿ ನಿವಾಸದಲ್ಲಿ ಪತ್ತೆಯಾದ ಅಕ್ರಮ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್​ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಕೂಡ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ನಿನ್ನೆಯೂ ಜೈಲಿನಲ್ಲೇ ಡಿಕೆಶಿ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ನಿನ್ನೆ ಮಗಳು ಐಶ್ವರ್ಯ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಆಧರಿಸಿ ಡಿಕೆಶಿ ವಿಚಾರಣೆ ಮಾಡಲಾಗಿದೆ. ಇಂದು ಡಿ‌‌.ಕೆ. ಸುರೇಶ್ ನೀಡಿರುವ ಹೇಳಿಕೆಗಳನ್ನು ಆಧರಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಜೈಲಿನಲ್ಲಿ ವಿಚಾರಣೆ ನಡೆಸಲು ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದಿದ್ದಾರೆ. ಅ. 1ರಂದು ಡಿಕೆಶಿ ನ್ಯಾಯಾಂಗ ಬಂಧನ ಅವಧಿ ಮುಗಿದ ವೇಳೆ ಮುಂದಿನ ನ್ಯಾಯಾಂಗ ಬಂಧನದ ಅವಧಿಯಲ್ಲಿ ಡಿಕೆಶಿಯನ್ನು ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದಕ್ಕೆ ಅಸ್ತು ಎಂದ ಕೋರ್ಟ್​. ಅ. 4 ಮತ್ತು 5ರಂದು ವಿಚಾರಣೆ ನಡೆಸಲು ಅನುಮತಿ ನೀಡಿತ್ತು. ಕೋರ್ಟ್ ಸೂಚನೆಯಂತೆ ನಿನ್ನೆಯಿಂದ ಅಧಿಕಾರಿಗಳು ಜೈಲಿನಲ್ಲೇ ಡಿಕೆಶಿ ವಿಚಾರಣೆ ಮಾಡುತ್ತಿದ್ದಾರೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ವಿಚಾರಣೆ ನಡೆಯಲಿದೆ.

ಇದನ್ನು ಓದಿ; ಡಿಕೆಶಿ ಪ್ರಕರಣ; ಸಂಸದ ಡಿ.ಕೆ ಸುರೇಶ್​​​ ಎರಡು ದಿನದ ಇಡಿ ವಿಚಾರಣೆ ಅಂತ್ಯ

ಸುನೀಲ್​ ಶರ್ಮಾಗೂ ಡ್ರಿಲ್​

ಡಿಕೆಶಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಮತ್ತೊಬ್ಬ ಆರೋಪಿಯಾಗಿರುವ  ಸುನೀಲ್ ಶರ್ಮಾ ಅವರನ್ನು ಇಡಿ ಅಧಿಕಾರಿಗಳ ಇಂದು ವಿಚಾರಣೆ ನಡೆಸಲಿದ್ದಾರೆ.  ನಿನ್ನೆಯೂ ಸುನೀಲ್ ಶರ್ಮಾ ಅವರನ್ನು  ವಿಚಾರಣೆ ನಡೆಸಲಾಗಿತ್ತು. ಇಂದು ಬೆಳಿಗ್ಗೆ 11 ಗಂಟೆಗೆ ಮತ್ತೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಗಿದೆ.

First published:October 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ