ಬೆಂಗಳೂರು: ಮುಂದಿನ ರಾಜಕೀಯ ದಿಗ್ಸೂಚಿ ಎಂದು ಪರಿಗಣಿಸಲಾದ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಇದೇ ತಿಂಗಳಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆದಿದ್ದು, ಇಂದು (ಡಿ.30) ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ. ಸಂಜೆಯ ವೇಳೆಗೆ ಅಂತಿಮ ಫಲಿತಾಂಶ ಸಿಗುವ ನಿರೀಕ್ಷೆ ಇದೆ. ನಮ್ಮ ನ್ಯೂಸ್18 ಕನ್ನಡದ ವೆಬ್ಸೈಟ್ನಲ್ಲಿ ನೀವು ಕ್ಷಣಕ್ಷಣಕ್ಕೂ ಕರಾರುವಾಕ್ ಫಲಿತಾಂಶದ ವಿವರವನ್ನು ಪಡೆಯಬಹುದಾಗಿದೆ. ಹಾಗೆಯೇ, ಸರ್ಕಾರ ಮತ್ತು ಚುನಾವಣಾ ಆಯೋಗದ https://karsec.gov.in/Home.aspx ಮತ್ತು https://www.ceokarnataka.kar.nic.in/ ಅಧಿಕೃತ ಜಾಲತಾಣಗಳಲ್ಲೂ ವೀಕ್ಷಿಸಬಹುದಾಗಿದೆ.
ರಾಜ್ಯದ 72 ಸಾವಿರಕ್ಕೂ ಹೆಚ್ಚು ಗ್ರಾಮಗಳ 6,004 ಗ್ರಾಮ ಪಂಚಾಯಿತಿಗಳ ಪೈಕಿ 5,728 ಗ್ರಾ.ಪಂ.ಗಳ 82,616 ಸ್ಥಾನಗಳಿಗೆ ಡಿ. 22 ಮತ್ತು 27ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. 242 ಗ್ರಾ.ಪಂ.ಗಳಿಗೆ ಮತದಾನ ಬಹಿಷ್ಕಾರ ಮತ್ತಿತರ ಕಾರಣದಿಂದ ಚುನಾವಣೆ ನಡೆಯಲಿಲ್ಲ. ಸುಮಾರು 8,074 ಗ್ರಾಮಗಳಲ್ಲಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಆಯೋಗವು ಪಕ್ಷಾತೀತವಾಗಿ ಚುನಾವಣೆ ನಡೆಸಿದೆಯಾದರೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ವಿವಿಧ ಅಭ್ಯರ್ಥಿಗಳನ್ನ ಬೆಂಬಲಿಸಿರುವುದರಿಂದ ರಾಜಕೀಯ ಜಿದ್ದಾಜಿದ್ದಿ ಜೋರಾಗಿದೆ. ಹೀಗಾಗಿ, ಮೂರೂ ಪಕ್ಷಗಳಿಗೆ ಈ ಪಂಚಾಯಿತಿ ಚುನಾವಣೆ ಪ್ರತಿಷ್ಠೆಯ ಪಣವಾಗಿದೆ.
ಇದನ್ನು ಓದಿ: ಸಿದ್ಧರಾಮಯ್ಯ ಹಾದಿ ಬಿಟ್ಟಿದ್ದಾರೆ, ರಾಹುಲ್ ಗಾಂಧಿ ಸಂಸತ್ತಿನ ಮುಂದೆ ಕಾರು ಕಾಯಲು ಲಾಯಕ್ಕಿಲ್ಲ; ಯತ್ನಾಳ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ