ಇಂದು ಸಂಜೆ ಸಿಬಿಐ ವಿಚಾರಣೆಗೆ ಹಾಜರಾಗಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕಳೆದ ಆಕ್ಟೋಬರ್ 5 ರಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸೋದರ ಮತ್ತು ಸಂಸದ ಡಿ.ಕೆ. ಸುರೇಶ್ ಬೆಂಗಳೂರಿನ ನಿವಾಸ ಜೊತೆಗೆ, ಡಿಕೆಶಿ ಅಪ್ತರು, ಸ್ನೇಹಿತರು ಮನೆ, ಕಚೇರಿಗಳ  ಮೇಲೆ ಸಿಬಿಐ ದಾಳಿ ನಡೆದಿತ್ತು. ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿದ್ದ ಅಧಿಕಾರಿಗಳು ಅದರ ಆಧಾರದ ಮೇಲೆ ಇಂದು ಶಿವಕುಮಾರ್ ವಿಚಾರಣೆ ನಡೆಸಲಿದ್ದಾರೆ.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ಬೆಂಗಳೂರು: ಸಿಬಿಐ ಅಧಿಕಾರಿಗಳಿಂದ ನೋಟಿಸ್ ಬಂದಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ವಿಚಾರಣೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಜರಾಗಲಿದ್ದಾರೆ. ಈ ಮೊದಲು ನವೆಂಬರ್ 19ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿತ್ತು. ಆದರೆ, ಅದೇ ದಿನ ಡಿಕೆಶಿ ಮಗಳು ಐಶ್ವರ್ಯಾ ಮಗಳು ನಿಶ್ಚಿತಾರ್ಥ ಕಾರ್ಯಕ್ರಮ ಇದ್ದುದ್ದರಿಂದ ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ.

ನ. 23ರಂದು ದಿಲ್ಲಿಯ ಸಿಬಿಐ ಕೇಂದ್ರ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ತಿಳಿಸಲಾಗಿತ್ತು. ಆದರೆ ಇದಕ್ಕಿಂತಲೂ ಮುಂಚಿತವಾಗಿಯೇ ನಿಗದಿಯಾಗಿದ್ದ ರಾಜ್ಯ ಪ್ರವಾಸವನ್ನು ನ.21 ರಿಂದ 24ರವರೆಗೆ ನಿಗದಿಪಡಿಸಿಕೊಂಡಿದ್ದ ಕಾರಣ ಶಿವಕುಮಾರ್ ಸಿಬಿಐ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು, ನ. 23 ರ ಬದಲು  ನ.25ರಂದು ವಿಚಾರಣೆಗೆ ಹಾಜರಾಗುವುದಾಗಿ ಕೋರಿದ್ದರು. ಅಲ್ಲದೇ ವಿಚಾರಣೆಗೆ ದಿಲ್ಲಿಯ ಬದಲು ಬೆಂಗಳೂರಿನ ಸಿಬಿಐ ಕಚೇರಿಗೆ ಆಗಮಿಸುವುದಾಗಿ ಕೇಳಿಕೊಂಡಿದ್ದರು. ಇದಕ್ಕೆ ಸಿಬಿಐ ಅಧಿಕಾರಿಗಳು ಒಪ್ಪಿಗೆ ನೀಡಿದ್ದರು.

ಇದನ್ನು ಓದಿ: Ahmed Patel Passes Away - ಕಾಂಗ್ರೆಸ್ ಹಿರಿಯ ನಾಯಕ ಅಹಮದ್ ಪಟೇಲ್ ಇನ್ನಿಲ್ಲ

ಇನ್ನು ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದ ಶಿವಕುಮಾರ್ ಇಂದು ಬೆಳಿಗ್ಗೆ ತಮ್ಮ ಸದಾಶಿವನಗರ ನಿವಾಸಕ್ಕೆ ಆಗಮಿಸಿದ್ದು, ಸಂಜೆಯವರೆಗೆ ವಿಶ್ರಾಂತಿ ಪಡೆದು ಸಂಜೆ ನಾಲ್ಕು ಗಂಟೆ ನಂತರ ಸಿಬಿಐ ವಿಚಾರಣೆಗೆ ಹಾಜರಾಗಲಿದ್ದಾರೆ.

ಕಳೆದ ಆಕ್ಟೋಬರ್ 5 ರಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸೋದರ ಮತ್ತು ಸಂಸದ ಡಿ.ಕೆ. ಸುರೇಶ್ ಬೆಂಗಳೂರಿನ ನಿವಾಸ ಜೊತೆಗೆ, ಡಿಕೆಶಿ ಅಪ್ತರು, ಸ್ನೇಹಿತರು ಮನೆ, ಕಚೇರಿಗಳ  ಮೇಲೆ ಸಿಬಿಐ ದಾಳಿ ನಡೆದಿತ್ತು. ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿದ್ದ ಅಧಿಕಾರಿಗಳು ಅದರ ಆಧಾರದ ಮೇಲೆ ಇಂದು ಶಿವಕುಮಾರ್ ವಿಚಾರಣೆ ನಡೆಸಲಿದ್ದಾರೆ.
Published by:HR Ramesh
First published: