ಇಂದು ದೆಹಲಿಯ ಇ.ಡಿ. ಮುಖ್ಯಕಚೇರಿಯಲ್ಲಿ ಡಿಕೆಶಿ ಮಗಳು ಐಶ್ವರ್ಯಾ ವಿಚಾರಣೆ

ಡಿಕೆಶಿ ಬೇನಾಮಿ ಆಸ್ತಿ ಮಾಡಿರಬಹುದೇ ಎಂಬ ಶಂಕೆಯ ಮೇಲೆ ಇ.ಡಿ. ಅಧಿಕಾರಿಗಳು ಸಚಿನ್ ನಾರಾಯಣ್ ಅವರನ್ನು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಸಚಿನ್​ ನಾರಾಯಣ್ ನೀಡಿದ ಹೇಳಿಕೆಗಳನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. 

HR Ramesh | news18-kannada
Updated:September 12, 2019, 7:32 AM IST
ಇಂದು ದೆಹಲಿಯ ಇ.ಡಿ. ಮುಖ್ಯಕಚೇರಿಯಲ್ಲಿ ಡಿಕೆಶಿ ಮಗಳು ಐಶ್ವರ್ಯಾ ವಿಚಾರಣೆ
ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ
  • Share this:
ನವದೆಹಲಿ(ಸೆ.12): ಹಣ ವರ್ಗಾವಣೆ ಹಾಗೂ ಬಂಡವಾಳ ಹೂಡಿಕೆ ವಿಚಾರವಾಗಿ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರ ಮಗಳು ಐಶ್ವರ್ಯಾ ಅವರನ್ನು ವಿಚಾರಣೆ ನಡೆಸಲಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಇ.ಡಿ.ಯಿಂದ ಸಮನ್ಸ್​ ಬಂದ ಬಳಿಕ ಐಶ್ವರ್ಯಾ ನೆನ್ನೆ ದೆಹಲಿಗೆ ಆಗಮಿಸಿದ್ದರು.

ದೆಹಲಿಯ ಇಡಿ ಮುಖ್ಯ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ. ಐಶ್ವರ್ಯಾಗೆ ಅಜ್ಜಿ ಗೌರಮ್ಮ ಕೊಟ್ಟಿದ್ದ ಆಸ್ತಿ-ಹಣದ ಬಗ್ಗೆ, 2001ರಲ್ಲಿ ಉತ್ತರಹಳ್ಳಿಯಲ್ಲಿ 3 ಎಕರೆ ಜಮೀನು ಗಿಫ್ಟ್​ ಡೀಡ್, 2002ರಲ್ಲಿ ಹೊಸಕೆರೆಹಳ್ಳಿಯಲ್ಲಿ 3 ಎಕರೆ ಜಮೀನು ಗಿಫ್ಟ್ ಡೀಡ್, 2018 ಜೂನ್​ನಲ್ಲಿ ಗೌರಮ್ಮ ಅಕೌಂಟ್​ನಿಂದ ಐಶ್ವರ್ಯಾ ಖಾತೆಗೆ 3 ಕೋಟಿ ರೂ. ಹಣ ವರ್ಗಾವಣೆ, ಸಿಂಗಲ್ ಟ್ರ್ಯಾಜಕ್ಷನ್ ಮೂಲಕ ಪ್ರತಿಷ್ಠಿತ ಬಿಲ್ಡರ್​ನಿಂದ ಐಶ್ವರ್ಯ ಖಾತೆಗೆ 193 ಕೋಟಿ ಹಣ ವರ್ಗಾವಣೆ, ಐಶ್ವರ್ಯಾ ಖಾತೆಯಿಂದ ಕೆಫೆ ಕಾಫಿ ಡೇಗೆ 20 ಕೋಟಿ ರೂ. ವರ್ಗಾವಣೆ, ಬಳಿಕ ಕೆಫೆ ಕಾಫಿ ಡೇಯಿಂದ ಐಶ್ವರ್ಯಾ ಖಾತೆಗೆ 20 ಕೋಟಿ ರೂ. ವಾಪಸ್ ಹೋಗಿರುವ ಎಲ್ಲ ವಿಚಾರವಾಗಿಯೂ ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ಇದನ್ನು ಓದಿ: ಡಿಕೆಶಿ ಬಂಧನ ವಿರೋಧಿಸಿ ಒಕ್ಕಲಿಗರ ಬೃಹತ್​ ಪ್ರತಿಭಟನೆಗೆ ಬೆಚ್ಚಿದ ಬಿಜೆಪಿ: ಹೈ ಕಮಾಂಡ್​ಗೆ ಮಾಹಿತಿ ರವಾನೆ

ಜೊತೆಗೆ ಶೋಭಾ ಡೆವಲಪರ್ಸ್​ನಲ್ಲಿ ಐಶ್ವರ್ಯಾ ಹೆಸರಿನಲ್ಲಿ ಬಂಡವಾಳ ಹೂಡಿಕೆ,  ಸಿಂಗಪುರ್​ನಲ್ಲಿ ಐಶ್ವರ್ಯಾ ಹೆಸರಲ್ಲಿ ಬಂಡವಾಳ ಹೂಡಿಕೆ, ಸೋಲ್ ಆ್ಯಂಡ್​ ಸ್ಪೇಸ್, ನ್ಯಾಷನಲ್ ಗ್ಲೋಬಲ್ ಕಾಲೇಜುಗಳಲ್ಲಿ ಹಣ ಹೂಡಿಕೆ ಬಗ್ಗೆಯೂ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ಸಚಿನ್ ನಾರಾಯಣ್ ವಿಚಾರಣೆ

ಡಿಕೆಶಿ ಬೇನಾಮಿ ಆಸ್ತಿ ಮಾಡಿರಬಹುದೇ ಎಂಬ ಶಂಕೆಯ ಮೇಲೆ ಇ.ಡಿ. ಅಧಿಕಾರಿಗಳು ಸಚಿನ್ ನಾರಾಯಣ್ ಅವರನ್ನು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಸಚಿನ್​ ನಾರಾಯಣ್ ನೀಡಿದ ಹೇಳಿಕೆಗಳನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ