ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ; ಪ್ರಮುಖ ವಿಷಯಗಳ ನಿರ್ಣಯ ಸಾಧ್ಯತೆ

ಬರ, ಪ್ರವಾಹ ಪರಿಸ್ಥಿತಿ ಮತ್ತು ನೈಸರ್ಗಿಕ ವಿಪತ್ತುಗಳಿಂದ ಉದ್ಭವಿಸುವ ಪರಿಸ್ಥಿತಿಗಳನ್ನು ಪರಾಮರ್ಶಿಸಲು ಉಪ ಸಚಿವ ಸಂಪುಟ ಸಮಿತಿ ರಚಿಸುವುದು, ಕೃಷಿ, ತೋಟಗಾರಿಕಾ ಉತ್ಪನ್ನಗಳ ಬೆಲೆ ಕುಸಿದಾಗ ಸ್ಥಿರೀಕರಣಕ್ಕಾಗಿ ಬೆಂಬಲ ಬೆಲೆ ನಿಗದಿ ಪಡಿಸುವುದಕ್ಕೆ ಪರಿಶೀಲಿಸಲು ಉಪ ಸಚಿವ ಸಂಪುಟ ರಚನೆ ಮುಂತಾದವುಗಳ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವಾಗುವ ಸಾಧ್ಯತೆಯಿದೆ. 

Sushma Chakre | news18-kannada
Updated:September 6, 2019, 11:46 AM IST
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ; ಪ್ರಮುಖ ವಿಷಯಗಳ ನಿರ್ಣಯ ಸಾಧ್ಯತೆ
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ
  • Share this:
ಬೆಂಗಳೂರು (ಸೆ.6): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಬೆಳಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಹಲವು ಮಹತ್ವದ ವಿಷಯಗಳ ಬಗ್ಗೆ ಇಂದು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ. 

ಬರ, ಪ್ರವಾಹ ಪರಿಸ್ಥಿತಿ ಮತ್ತು ನೈಸರ್ಗಿಕ ವಿಪತ್ತುಗಳಿಂದ ಉದ್ಭವಿಸುವ ಪರಿಸ್ಥಿತಿಗಳನ್ನು ಪರಾಮರ್ಶಿಸಲು ಉಪ ಸಚಿವ ಸಂಪುಟ ಸಮಿತಿ ರಚಿಸುವುದು, ಕೃಷಿ, ತೋಟಗಾರಿಕಾ ಉತ್ಪನ್ನಗಳ ಬೆಲೆ ಕುಸಿದಾಗ ಸ್ಥಿರೀಕರಣಕ್ಕಾಗಿ ಬೆಂಬಲ ಬೆಲೆ ನಿಗದಿ ಪಡಿಸುವುದಕ್ಕೆ ಪರಿಶೀಲಿಸಲು ಉಪ ಸಚಿವ ಸಂಪುಟ ರಚನೆ ಮುಂತಾದವುಗಳ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವಾಗುವ ಸಾಧ್ಯತೆಯಿದೆ.  ಸೌರ ನೀತಿ 2014-21 ತಿದ್ದುಪಡಿ ಮಾಡುವ ಕುರಿತು ಮಾತುಕತೆ ನಡೆಸಲಿದ್ದು, 6ನೇ ವೇತನ ಆಯೋಗ ಶಿಫಾರಸ್ಸಿನಂತೆ ಕೆಲವೊಂದು ವೃಂದದ ವೇತನ ಶ್ರೇಣಿಗಳನ್ನು ಪರಿಷ್ಕರಿಸುವ ಕುರಿತು ಆದೇಶ ಹೊರಡಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ. ಕೊಂಕಣ ರೈಲ್ವೆ ನಿಗಮ ನಿಯಮಿತಕ್ಕೆ ಎರಡನೇ ಹಕ್ಕುಗಳ ವಿತರಣೆಯ ವಂತಿಗೆಯಾಗಿ 29 ಕೋಟಿ ರೂ.ಗಳನ್ನು ಸರ್ಕಾರದಿಂದ ನೀಡುವ ಬಗ್ಗೆಯೂ ಸಿಎಂ ಸಚಿವರೊಂದಿಗೆ ಚರ್ಚಿಸಲಿದ್ದಾರೆ.

ಇಡಿ ಕಚೇರಿಯಲ್ಲಿ ಡಿಕೆಶಿ ಭೇಟಿಯಾದ ಕಾಂಗ್ರೆಸ್​ ನಾಯಕರು; ಯಾವ ಕಾಲದಲ್ಲೂ ಈ ವ್ಯವಸ್ಥೆ ಇರಲಿಲ್ಲ ಎಂದ ಮುನಿಯಪ್ಪ

ಕೊಪ್ಪಳ-ಗಿಣಿಗೇರಾ ರೈಲು ನಿಲ್ದಾಣ ಬರುವ ಎಲ್ ಸಿ ಸಂಖ್ಯೆ 66ರಲ್ಲಿ ಬರುವ 117/600-700ರಲ್ಲಿ ಮೇಲು ಸೇತುವೆ ನಿರ್ಮಾಣ ಕಾಮಗಾರಿಯನ್ನು 23.65 ಕೋಟಿ ರೂ. ಮೊತ್ತದಲ್ಲಿ ಕೈಗೆತ್ತಿಕೊಳ್ಳುವ ಬಗ್ಗೆ ಚರ್ಚಿಸಲಾಗುವುದು. ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ಪೈಕಿ ಒಬ್ಬ ಸದಸ್ಯರ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾಂತರಗೊಳಿಸುವ ಬಗ್ಗೆ, ಸಿಎಂಎ ನ್ಯಾಯಾಲಯದ ಬಹುಮಹಡಿ ವಾಹನ ನಿಲುಗಡೆಯ ಕಟ್ಟಡದ ಮೇಲ್ಬಾಗದಲ್ಲಿ 4ರಿಂದ 6ನೇ ಅಂತಸ್ತುಗಳಲ್ಲಿ ನ್ಯಾಯಾಲಯದ ಕೊಠಡಿಗಳನ್ನು ನಿರ್ಮಾಣ ಹಾಗೂ ಇತರ ಪೂರಕ ಕಾಮಗಾರಿಗಳಿಗೆ 35 ಕೋಟಿ ರೂ. ಅನುಮೋದನೆ ಪಡೆಯುವ ಬಗ್ಗೆ, ಬಿಬಿಎಂಪಿ ಹೊರತುಪಡಿಸಿ ಮಾದರಿ ಘನತಾಜ್ಯ ನಿರ್ವಹಣಾ ಉಪ ವಿಧಿಗಳು -2019ಕ್ಕೆ ಅನುಮೋದನೆ ಪಡೆಯುವ ಬಗ್ಗೆ, 2019-20ನೇ ಸಾಲಿನ ಐಈಬಿಆರ್ ಅಡಿಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಅವಧಿಗಳ ಸಾಲಗಳ ಮೂಲಕ 735 ಕೋಟಿ ರೂ.ಗಳ ಹಣ ಸಂಗ್ರಹಿಸಲು ಅನುಮೋದನೆ ನೀಡುವ ಬಗ್ಗೆ ಹಾಗೂ 2019-20ನೇ ಸಾಲಿಗೆ ಐಈಬಿಆರ್ ಅಡಿಯಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಅವಧಿಗಳ ಸಾಲಗಳ ಮೂಲಕ ಮೊದಲ ಕಂತಿನಲ್ಲಿ 250 ಕೋಟಿ ರೂ.ಗಳ ಹಣವನ್ನು ಸಂಗ್ರಹಿಸಲು ಅನುಮೋದನೆ ನೀಡುವ ಬಗ್ಗೆ ಚರ್ಚೆ ನಡೆಯಲಿದೆ.

(ವರದಿ: ಕೃಷ್ಣ ಜಿ.ವಿ)

 

First published:September 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading