ಬಿಎಸ್​ವೈಗೆ ಸಂಪುಟ ವಿಸ್ತರಣೆ ಸಂಕಟ; ಹೈಕಮಾಂಡ್ ಭೇಟಿಗೆ ಅವಕಾಶ ಸಿಗದ ಕಾರಣ ಇಂದು, ನಾಳೆ ದೆಹಲಿ ಪ್ರವಾಸ ಇಲ್ಲ

ಒಂದು ತಿಂಗಳು ಧನುರ್ಮಾಸ ಇದ್ದ ಕಾರಣ ಈ ಅವಧಿಯಲ್ಲಿ ಸಂಪುಟ ವಿಸ್ತರಣೆ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಇದೀಗ ನಾಳೆಗೆ ಧನುರ್ಮಾಸ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗೆ ಸಿಎಂ ಮುಂದಾಗಿದ್ದರು. ಆದರೆ, ಹೈಕಮಾಂಡ್ ಅವರ ಭೇಟಿಗೆ ಅವಕಾಶ ನೀಡದಿರುವುದಿರಿಂದ ದೆಹಲಿಗೆ ತೆರಳುತ್ತಿಲ್ಲ.

news18-kannada
Updated:January 14, 2020, 7:11 AM IST
ಬಿಎಸ್​ವೈಗೆ ಸಂಪುಟ ವಿಸ್ತರಣೆ ಸಂಕಟ; ಹೈಕಮಾಂಡ್ ಭೇಟಿಗೆ ಅವಕಾಶ ಸಿಗದ ಕಾರಣ ಇಂದು, ನಾಳೆ ದೆಹಲಿ ಪ್ರವಾಸ ಇಲ್ಲ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಬೆಂಗಳೂರು: ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡ ತಿಂಗಳು ಕಳೆದರು ಸಂಪುಟ ವಿಸ್ತರಣೆ ಇನ್ನು ಸಾಧ್ಯವಾಗಿಲ್ಲ. ಅತ್ತ ಚುನಾವಣೆಯಲ್ಲಿ ಗೆದ್ದು ಅರ್ಹರಾಗಿರುವ ಶಾಸಕರು ಸಚಿವರಾಗಲು ತುದಿಗಾಲಲ್ಲಿ ನಿಂತಿದ್ದರೆ, ಇತ್ತ ತಮಗೂ ಸಚಿವ ಸ್ಥಾನ ಬೇಕು ಎಂದು ಪಕ್ಷದ ಹಿರಿಯ ಶಾಸಕರು ಹಠ ಹಿಡಿದಿದ್ದಾರೆ. ಆದರೆ, ಇವರಿಬ್ಬರ ಒತ್ತಡದ ನಡುವೆ ಸಂಪುಟ ವಿಸ್ತರಣೆ ಮಾಡಲು ಸಿಎಂ ಬಿ.ಎಸ್.ಯಡಿಯೂರಪ್ಪ ಸಿದ್ಧರಾಗಿದ್ದರೂ, ಹೈಕಮಾಂಡ್ ಮಾತ್ರ ಗ್ರೀನ್ ಸಿಗ್ನಲ್ ನೀಡಲು ತಡ ಮಾಡುತ್ತಿದೆ.

ಸಂಪುಟ ವಿಸ್ತರಣೆಗಾಗಿ ಇಂದು ಮತ್ತು ನಾಳೆ ಸಿಎಂ ಬಿಎಸ್​ವೈ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಹೈಕಮಾಂಡ್ ಭೇಟಿಗೆ ಅವಕಾಶ ಸಿಗದ ಕಾರಣ ದೆಹಲಿ ಪ್ರವಾಸವನ್ನು ರದ್ದುಗೊಳಿಸಿ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಈಗಾಗಲೇ ಹಲವು ಬಾರಿ ದೆಹಲಿಗೆ ತೆರಳಲು ಸಿಎಂ ಬಿಎಸ್​ವೈ ಸಿದ್ಧತೆ ಮಾಡಿಕೊಂಡಿದ್ದರೂ ಹೈಕಮಾಂಡ್ ಸಮಯದ ಅಭಾವದಿಂದ ಭೇಟಿಗೆ ಅವಕಾಶ ನೀಡಿಲ್ಲ. ಅಲ್ಲದೇ, ಒಂದು ತಿಂಗಳು ಧನುರ್ಮಾಸ ಇದ್ದ ಕಾರಣ ಈ ಅವಧಿಯಲ್ಲಿ ಸಂಪುಟ ವಿಸ್ತರಣೆ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಇದೀಗ ನಾಳೆಗೆ ಧನುರ್ಮಾಸ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗೆ ಸಿಎಂ ಮುಂದಾಗಿದ್ದರು. ಆದರೆ, ಹೈಕಮಾಂಡ್ ಅವರ ಭೇಟಿಗೆ ಅವಕಾಶ ನೀಡದಿರುವುದಿರಿಂದ ದೆಹಲಿಗೆ ತೆರಳುತ್ತಿಲ್ಲ.

ಇಂದು ಚಿಕ್ಕಮಗಳೂರಿಗೆ ಸಿಎಂ

ಚಿಕ್ಕಮಗಳೂರಿನ ಸೊಲ್ಲಾಪುರದಲ್ಲಿ ನಡೆಯಲಿರುವ ಗುರುಸಿದ್ದರಾಮ ಶಿವಯೋಗಿಗಳ 847ನೇ ಜಯಂತಿ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ನಂತರ ದಾವಣಗೆರೆಗೆ ತೆರಳಿ, ಅಲ್ಲಿಂದ ಹರಿಹರದಲ್ಲಿ ನಡೆಯಲಿರುವ ಬೆಳ್ಳಿ ಬೆಡಗು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಶಿಕಾರಿಪುರಕ್ಕೆ ತೆರಳಿ, ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಇದನ್ನು ಓದಿ: ನಾನು ಉಫ್ ಅಂತ ಊದಿದ್ದಕ್ಕೆ ಜಮೀರ್​ ಬೆಂಗಳೂರಿಗೆ ವಿಮಾನ ಹತ್ತಿದ್ದು; ಸೋಮಶೇಖರ ರೆಡ್ಡಿ ವ್ಯಂಗ್ಯ

ನಾಳೆ ಮತ್ತೆ ದಾವಣಗೆರೆಯ ಹರಿಹರಕ್ಕೆ ತೆರಳಲಿರುವ ಸಿಎಂ

ಆರೋಗ್ಯ ಮಾತೆಯ ಪುಣ್ಯಕ್ಷೇತ್ರವನ್ನು ಕಿರು ಬೆಸೆಲಿಕ ಎಂದು ಸಾರುವ ಸಾಂಭ್ರಮಿಕ ಘೋಷಣೆ ಹಾಗೂ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನಂತರ ಹಾವೇರಿಗೆ ತೆರಳಲಿದ್ದಾರೆ. ಹಾವೇರಿಯಲ್ಲಿ ನಡೆಯಲಿರುವ ಅಂಬಿಗ ಚೌಡಯ್ಯರ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂದು ಸಂಜೆ 5 ಗಂಟೆಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ