ಸಂಪುಟ ವಿಸ್ತರಣೆ ಚರ್ಚೆಗಾಗಿ ಇಂದು ದೆಹಲಿಗೆ ಸಿಎಂ ಬಿಎಸ್​ವೈ; ಚುನಾವಣೆ ಕಾರಣ ಶಾ, ನಡ್ಡಾ ಭೇಟಿ ಕಷ್ಟಸಾಧ್ಯ

ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ನಾಯಕರನ್ನು ಸಿಎಂ ಬಿಎಸ್​ವೈ ತಡರಾತ್ರಿ ಭೇಟಿಗೆ ಪ್ರಯತ್ನಿಸುವ ಸಾಧ್ಯತೆ ಇದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಮರುದಿನ ಭೇಟಿಗೆ ಯತ್ನಿಸಲಿದ್ದಾರೆ. ಇದೇ ಕಾರಣದಿಂದ ಸಿಎಂ ಬಿಎಸ್​ವೈ ಬೆಂಗಳೂರಿಗೆ ಹಿಂದಿರುಗುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

news18-kannada
Updated:January 30, 2020, 7:20 AM IST
ಸಂಪುಟ ವಿಸ್ತರಣೆ ಚರ್ಚೆಗಾಗಿ ಇಂದು ದೆಹಲಿಗೆ ಸಿಎಂ ಬಿಎಸ್​ವೈ; ಚುನಾವಣೆ ಕಾರಣ ಶಾ, ನಡ್ಡಾ ಭೇಟಿ ಕಷ್ಟಸಾಧ್ಯ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ನವದೆಹಲಿ: ಬಿಜೆಪಿ ಸರ್ಕಾರ ರಚನೆಯಾಗಿ 6 ತಿಂಗಳು ಕಳೆದರೂ ಪೂರ್ಣ ಪ್ರಮಾಣದ ಸಂಪುಟ ರಚನೆ ಈವರೆಗೂ ಸಾಧ್ಯವಾಗಿಲ್ಲ. ಉಪಚುನಾವಣೆ ಬಳಿಕವೂ ಸಂಪುಟ ವಿಸ್ತರಣೆ ಸಿಎಂ ಬಿಎಸ್​ವೈ ಕಗ್ಗಂಟಾಗಿ ಪರಿಣಮಿಸಿದೆ.  ಸಚಿವಾಕಾಂಕ್ಷಿಗಳ ಒತ್ತಡ ಒಂದೆಡೆಯಾದರೆ, ವಿರೋಧ ಪಕ್ಷಗಳ ಟೀಕೆಗಳು ಬಿಎಸ್​ವೈ ಅವರನ್ನು ಹೈರಾಣಾಗಿಸಿದೆ. ಇಂತಹ ಸಂದಿಗ್ನ ಪರಿಸ್ಥಿತಿಯಲ್ಲೂ ಬಿಜೆಪಿ ಹೈಕಮಾಂಡ್ ಮಾತ್ರ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರುತ್ತಿಲ್ಲ. ಆದರೂ ಪ್ರಯತ್ನ ಬಿಡದ ಸಿಎಂ ಬಿಎಸ್​ವೈ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲು ಇಂದು ದೆಹಲಿಗೆ ಆಗಮಿಸುತ್ತಿದ್ದಾರೆ. ಆದರೆ, ಅವರ ಈ ಭೇಟಿ ಕೂಡ ಫಲ ಕೊಡುವ ನಿರೀಕ್ಷೆಗಳಿಲ್ಲ.

ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಒಪ್ಪಿಗೆ ಪಡೆಯಲು ಸಿಎಂ ಬಿಎಸ್​ವೈ ಇಂದು ದೆಹಲಿಗೆ ಆಗಮಿಸುತ್ತಿದ್ದಾರೆ. ಆದರೆ ದೆಹಲಿ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡಾ ಹಾಗೂ ಅಮಿತ್ ಶಾ  ಅವರ ಭೇಟಿ ಆಗುವುದು ಅನುಮಾನವಾಗಿದೆ.

ಮಧ್ಯಾಹ್ನ 2.15ಕ್ಕೆ ಸಿಎಂ ಬಿಎಸ್​ವೈ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.  ಆದರೆ ಸಂಜೆ 4ಕ್ಕೆ ಜೆ.ಪಿ. ನಡ್ಡಾ ಅವರು ದೆಹಲಿಯ ನಂಗೋಲಿಯ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಂಜೆ 5.30ಕ್ಕೆ ಮಂಗೋಲ್ಪುರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಲಿದ್ದಾರೆ. ಸಂಜೆ‌ 7ಕ್ಕೆ ರೋಹಿಣಿಯಲ್ಲಿ ಚುನಾವಣಾ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ಇಂದು ನಡ್ಡಾ ಮತ್ತು ಯಡಿಯೂರಪ್ಪ ಭೇಟಿ ಬಹುತೇಕ ಅನುಮಾನವಾಗಿದೆ. 

ಇದನ್ನು ಓದಿ: ಯಾವುದೇ ಖಾತೆ ಕೊಟ್ಟರೂ ನಿರ್ವಹಿಸುತ್ತೇನೆ - ಇಂತಹುದೇ ಖಾತೆ ಬೇಕಂತ ಬೇಡಿಕೆಯಿಟ್ಟಿಲ್ಲ ; ಉಮೇಶ್ ಕತ್ತಿ

ಅಮಿತ್ ಶಾ ವಿಷಯದಲ್ಲೂ ಸಹ ಇದೇ ಕತೆ. ಮಧ್ಯಾಹ್ನ 3.30ಕ್ಕೆ ಛತರ್​ಪುರದಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ 5.30ಕ್ಕೆ ಕಸ್ತೂರ ಬಾ ನಗರದಲ್ಲಿ ರೋಡ್ ಶೋ, ಬಳಿಕ ಸಂಜೆ 7ಕ್ಕೆ ಆರ್.ಕೆ. ಪುರಂನಲ್ಲಿ ಚುನಾವಣಾ ಪ್ರಚಾರ, ಬಳಿಕ ರಾತ್ರಿ 8.30ಕ್ಕೆ ಮಾಳ್ವಿಯಾ ನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಶಾ ಭಾಗಿಯಾಗಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳ ಬಳಿಕವಷ್ಟೇ ಅಮಿತ್ ಶಾ ಬಿಡುವಾಗಲಿದ್ದಾರೆ. ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ನಾಯಕರನ್ನು ಸಿಎಂ ಬಿಎಸ್​ವೈ ತಡರಾತ್ರಿ ಭೇಟಿಗೆ ಪ್ರಯತ್ನಿಸುವ ಸಾಧ್ಯತೆ ಇದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಮರುದಿನ ಭೇಟಿಗೆ ಯತ್ನಿಸಲಿದ್ದಾರೆ. ಇದೇ ಕಾರಣದಿಂದ ಸಿಎಂ ಬಿಎಸ್​ವೈ ಬೆಂಗಳೂರಿಗೆ ಹಿಂದಿರುಗುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.
First published: January 30, 2020, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading