ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಪರ ಭರ್ಜರಿ ಕ್ಯಾಂಪೇನ್ (campaign) ನಡೆಸಿದ್ದ ನಟ ಕಿಚ್ಚ ಸುದೀಪ್ (Kichcha Sudeep), ಇದೀಗ ಮತ್ತೊಮ್ಮೆ ಮತಬೇಟೆಗೆ ಇಳಿಯಲಿದ್ದಾರೆ. ಇಂದು ಬಿಜೆಪಿ ಅಭ್ಯರ್ಥಿಗಳ (BJP candidates) ಪರ ಸುದೀಪ್ ಮತ್ತೊಮ್ಮೆ ಭರ್ಜರಿ ಕ್ಯಾಂಪೇನ್ ನಡೆಸಲಿದ್ದಾರೆ. ಚಿತ್ರದುರ್ಗ (Chitradurga), ದಾವಣಗೆರೆ (Davanagere), ಬಳ್ಳಾರಿ (Bellary) ಸೇರಿದಂತೆ 3 ಜಿಲ್ಲೆಗಳ 6 ವಿಧಾನಸಭಾ ಕ್ಷೇತ್ರಗಳಲ್ಲಿ, 6 ಬಿಜೆಪಿ ಅಭ್ಯರ್ಥಿಗಳ ಪರ ಅಭಿನಯ ಚಕ್ರವರ್ತಿ ಮತಯಾಚಿಸಲಿದ್ದಾರೆ.
ನಟ ಸುದೀಪ್ ಇಂದಿನ ಕ್ಯಾಂಪೇನ್ ವಿವರ
ಇಂದು ನಟ ಸುದೀಪ್ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ. ರೋಡ್ ಶೋ ಮೂಲಕ ಮತಯಾಚನೆ ಮಾಡಲಿರುವ ಸುದೀಪ್, ಅಲ್ಲಿ ಭರ್ಜರಿ ಮತಬೇಟೆ ನಡೆಸುತ್ತಾರೆ. ಬೆಳಗ್ಗೆ 9:30 ರಿಂದ 10:30 ವರೆಗೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ನಟ ಕಿಚ್ಚ ಸುದೀಪ್ ರೋಡ್ ಶೋ ಮಾಡಲಿದ್ದಾರೆ.
ದಾವಣಗೆರೆಯಲ್ಲಿ ಕಿಚ್ಚನ ಅಬ್ಬರದ ಪ್ರಚಾರ
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಸುದೀಪ್ ಪ್ರಚಾರ ನಡೆಸಲಿದ್ದಾರೆ. ಮಾಯಕೊಂಡ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಬಳಿಕ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಿಂದ ನೇರವಾಗಿ ಜಗಳೂರು ಕ್ಷೇತ್ರದತ್ತ ಹೆಲಿಕಾಪ್ಟರ್ ನಲ್ಲೇ ಪ್ರಯಾಣ ಮುಂದುವರೆಸುವ ಸುದೀಪ್ 12.30ಕ್ಕೆ ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಅವರ ಪರವಾಗಿ ರೋಡ್ ಶೋ ನಡೆಸಲಿದ್ದಾರೆ. ಒಂದು ಗಂಟೆಗೂ ಅಧಿಕ ಕಾಲ ಅವರು ರೋಡ್ ಶೋ ಮಾಡಲಿದ್ದಾರೆ.
ಬಳ್ಳಾರಿಯಲ್ಲೂ ಕಿಚ್ಚನ ಮತಯಾಚನೆ
ಬಳಿಕ ಸಂಡೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಸುದೀಪ್ ಪ್ರಚಾರ ಮಾಡಲಿದ್ದಾರೆ. ಇಂದು ಒಟ್ಟು 3 ಜಿಲ್ಲೆಗಳ 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಿಚ್ಚ ರೋಡ್ ಶೋ ಮೂಲಕ ಕ್ಯಾಂಪೇನ್ ಮಾಡಲಿದ್ದಾರೆ.
ಯಾರು ಯಾರ ಪರ ಕಿಚ್ಚನ ಮತಬೇಟೆ?
ಇಂದು ಒಟ್ಟು 6 ಕಡೆ ನಟ ಸುದೀಪ್ ಪ್ರಚಾರ ಮಾಡಲಿದ್ದಾರೆ. ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿ, ಜಗಳೂರು ಬಿಜೆಪಿ ಅಭ್ಯರ್ಥಿ ರಾಮಚಂದ್ರಪ್ಪ, ಮಾಯಕೊಂಡ ಜಗಳೂರು ಬಿಜೆಪಿ ಅಭ್ಯರ್ಥಿ ಎಂ. ಬಸವರಾಜ್, ಸಂಡೂರು ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ, ದಾವಣಗೆರೆ ಉತ್ತರ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜು ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಅಜಯ್ ಕುಮಾರ್ ಪರ ಕಿಚ್ಚ ಮತಯಾಚಿಸಲಿದ್ದಾರೆ.
ಕಿಚ್ಚನ ಪಾಲಿಟಿಕ್ಸ್ ಬಗ್ಗೆ ರಮ್ಯಾ ಕೊಟ್ರು ಸುಳಿವು
ಸಿಎಂ ಬಸವರಾಜ ಬೊಮ್ಮಾಯಿ ಮಾತಿಗೆ ಒಪ್ಪಿ ಬಿಜೆಪಿ ಪರ ಪ್ರಚಾರಕ್ಕಿಳಿದಿರುವ ನಟ ಸುದೀಪ್ ಬಗ್ಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ರಮ್ಯಾ ಮಾತಾಡಿದ್ದಾರೆ. ಸುದೀಪ್ ಹಾಗೂ ನಾನು ಒಳ್ಳೆಯ ಸ್ನೇಹಿತರು. ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸುವ ಮೊದಲು ಅವರು ನನ್ನೊಟ್ಟಿಗೂ ಕೂಡ ಚರ್ಚಿಸಿದ್ದರು ಎಂದು ರಮ್ಯಾ ಹೇಳಿದ್ದಾರೆ.
ಇದನ್ನೂ ಓದಿ: Kichcha Sudeep: ಕಿಚ್ಚನ ಸಿನಿಮಾ, ಜಾಹೀರಾತು, ಟಿವಿ ಶೋಗಳಿಗಿಲ್ಲ ಬ್ರೇಕ್! ಸುದೀಪ್‌ಗೆ ಚುನಾವಣಾ ಆಯೋಗದ ಗ್ರೀನ್ ಸಿಗ್ನಲ್
ಸಿಎಂ ಪರ ಪ್ರಚಾರ ಕಿಚ್ಚನ ವೈಯಕ್ತಿಕ ನಿರ್ಧಾರ
ಈ ಬಗ್ಗೆ ಚರ್ಚೆ ಮಾಡಿ ಇದು ಸರಿಯೋ ತಪ್ಪೊ ಎಂಬ ಚರ್ಚೆಯನ್ನು ಕೂಡ ಅವರು ಮಾಡಿದ್ದರು. ಬಿಜೆಪಿ ಅಷ್ಟೇ ಅಲ್ಲದೇ ಇತರೆ ಪಕ್ಷಗಳು ಕೂಡ ಸುದೀಪ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಸುದೀಪ್ ಕೂಡ ಬೇರೆ ಬೇರೆ ಪಕ್ಷಗಳ ಮುಖಂಡರ ಸಲಹೆ ಪಡೆದಿದ್ದರು. ಆದರೆ ಅವರಿಗೆ ಸಿಎಂ ಬೊಮ್ಮಾಯಿ ಅವರು ಬಹಳ ಆಪ್ತರು ಅವರನ್ನು ಬೊಮ್ಮಾಯಿ ಮಾಮ ಎಂದೇ ಸುದೀಪ್ ಕರೆಯುತ್ತಾರೆ. ಹಾಗಾಗಿ ಕೊನೆಗೆ ಸಿಎಂ ಪರವಾಗಿ ಅವರು ಪ್ರಚಾರಕ್ಕೆ ಇಳಿಯುವ ನಿರ್ಧಾರ ಮಾಡಿದರು. ಅದು ಅವರ ವೈಯಕ್ತಿಕ ನಿರ್ಧಾರವಾಗಿದೆ ಎಂದು ರಮ್ಯಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ