• Home
 • »
 • News
 • »
 • state
 • »
 • ಇಂದು 71ನೇ ಗಣರಾಜ್ಯೋತ್ಸವ; ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಬರುವವರು ಈ ವಸ್ತುಗಳನ್ನು ತರುವಂತಿಲ್ಲ

ಇಂದು 71ನೇ ಗಣರಾಜ್ಯೋತ್ಸವ; ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಬರುವವರು ಈ ವಸ್ತುಗಳನ್ನು ತರುವಂತಿಲ್ಲ

ಮಾಣಿಕ್ ಷಾ (ಸಾಂದರ್ಭಿಕ ಚಿತ್ರ)

ಮಾಣಿಕ್ ಷಾ (ಸಾಂದರ್ಭಿಕ ಚಿತ್ರ)

ಗಣರಾಜ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಎಂಜಿ ರಸ್ತೆ ಹಾಗೂ ಕಬ್ಬನ್ ರಸ್ತೆ ಕೆಲ ಭಾಗ ಸಂಚಾರ ನಿರ್ಬಂಧಿಸಲಾಗಿದೆ. ಬೆಳಗ್ಗೆ 8ರಿಂದ 10.30ರವರೆಗೆ ಕಬ್ಬನ್‌ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೂ ಎರಡೂ ದಿಕ್ಕುಗಳಲ್ಲಿ ಸಂಚಾರ ನಿರ್ಬಂಧಿಸಿದ್ದು, ಪರ್ಯಾಯ ಮಾರ್ಗವನ್ನು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.

ಮುಂದೆ ಓದಿ ...
 • Share this:

  ಬೆಂಗಳೂರು: 71ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮೈದಾನಕ್ಕೆ ಬರೋರಿಗೆ ಮೊಬೈಲ್, ಹೆಲ್ಮೆಟ್, ಛತ್ರಿ, ಕ್ಯಾಮರಾ, ರೇಡಿಯೋ, ಮುಂತಾದ ವಸ್ತುಗಳನ್ನು ನಿಷೇಧಿಸಲಾಗಿದ್ದು, ಅಪ್ಪಿತಪ್ಪಿ ಈ ವಸ್ತುಗಳನ್ನು ತಂದರೆ ಮೈದಾನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗೂ ಬೆಳಗ್ಗೆ 8 ಗಂಟೆಯೊಳಗೆ ಮೈದಾನಕ್ಕೆ ಎಲ್ಲರೂ ಆಗಮಿಸಬೇಕು.


  ಗಣರಾಜ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಎಂಜಿ ರಸ್ತೆ ಹಾಗೂ ಕಬ್ಬನ್ ರಸ್ತೆ ಕೆಲ ಭಾಗ ಸಂಚಾರ ನಿರ್ಬಂಧಿಸಲಾಗಿದೆ. ಬೆಳಗ್ಗೆ 8ರಿಂದ 10.30ರವರೆಗೆ ಕಬ್ಬನ್‌ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೂ ಎರಡೂ ದಿಕ್ಕುಗಳಲ್ಲಿ ಸಂಚಾರ ನಿರ್ಬಂಧಿಸಿದ್ದು, ಪರ್ಯಾಯ ಮಾರ್ಗವನ್ನು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.


  ಕಬ್ಬನ್‌ ಪಾರ್ಕ್‌, ಬಿವಿಆರ್‌ ಜಂಕ್ಷನ್‌ ಕಡೆಯಿಂದ ಮಣಿಪಾಲ್‌ ಸೆಂಟರ್‌ ಕಡೆಗೆ ಸಂಚರಿಸುವ ವಾಹನಗಳು ಇನ್‌ಫೆಂಟ್ರಿ ರಸ್ತೆಗೆ ಬಂದು ಸಫೀನಾ ಪ್ಲಾಜಾದ ಬಳಿ ಎಡ ತಿರುವು ಪಡೆದು ಮೈನ್‌ಗಾರ್ಡ್‌ ರಸ್ತೆ, ಆಲೀಸ್‌ ಸರ್ಕಲ್‌, ಡಿಸ್ಪೆನ್ಸರಿ ರಸ್ತೆ, ಕಾಮರಾಜ ರಸ್ತೆ ಮತ್ತು ಡೆಕನ್‌ಸನ್‌ ರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ ಜಂಕ್ಷನ್ ಬಳಿ ಎಡಕ್ಕೆ ತಿರುವು ಪಡೆದು ಮನಿಪಾಲ್‌ ಸೆಂಟರ್‌ಗೆ ಹೋಗಬಹುದು.


  ಮಣಿಪಾಲ್‌ ಸೆಂಟರ್‌ ಕಡೆಯಿಂದ ಬಿಆರ್‌ವಿ ಜಂಕ್ಷನ್‌ ಕಡೆ ಹೋಗುವ ವಾಹನಗಳು ಎಂ.ಜಿ.ರಸ್ತೆಗೆ ತೆರಳಿ ಅನಿಲ್‌ಕುಂಬ್ಳೆ ವೃತ್ತದಲ್ಲಿ ಎಡಕ್ಕೆ ತಿರುವು ಪಡೆಯುವ ಮೂಲಕ ಸಾಗಬಹುದು. ಭದ್ರತಾ ದೃಷ್ಟಿ ಹಿನ್ನೆಲೆ ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಮಾಣಿಕ್ ಷಾ ಮೈದಾನ ಸುತ್ತ ವಾಹನ ನಿಲುಗಡೆ ನಿಷೇಧಿಸಲಾಗಿದೆ.


  ವಾಹನ ನಿಲುಗಡೆ ನಿಷೇಧಿಸಿದ ರಸ್ತೆಗಳು


  • ಸೆಂಟ್ರಲ್‌ ಸ್ಟ್ರೀಟ್‌, ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್‌ ನಿಲ್ದಾಣವರೆಗೆ.

  • ಕಬ್ಬನ್‌ ರಸ್ತೆ, ಸಿಟಿಒ ವೃತ್ತ, ಕೆ.ಆರ್‌.ರಸ್ತೆ.

  • ಎಂ.ಜಿ.ರಸ್ತೆ, ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ರಸ್ತೆವರೆಗೆ.

  • ಮಾಧ್ಯಮಗಳ ಓಬಿ ವ್ಯಾನ್​ಗಳು ಬೆಳಗ್ಗೆ 5.30ಯಿಂದ 6ಗಂಟೆಯೊಳಗೆ ಮೈದಾನದೊಳಗೆ ಪ್ರವೇಶಕ್ಕೆ ಅವಕಾಶ.


  ಕಾರ್ಯಕ್ರಮಕ್ಕೆ ಬರುವವರಿಗೆ 4 ಬಗೆಯ ಪಾಸ್ ವಿತರಣೆ

  • ಹಳದಿ - ಗೇಟ್ 1 ( ಪರೇಡ್ ಮೈದಾನದಲ್ಲಿ ಪಾರ್ಕಿಂಗ್)

  • ಬಿಳಿ- 2 ( ಪರೇಡ್ ಮೈದಾನ ಪಾರ್ಕಿಂಗ್)

  • ಪಿಂಕ್ -3 (ಸಫೀನಾ ಫ್ಲಾಜಾ, ಅರ್ಮಿ ಪಬ್ಲಿಕ್ ಸ್ಕೂಲ್ ಪಾರ್ಕಿಂಗ್)

  • ಹಸಿರು -4( ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್)


  ಭದ್ರತೆಗಾಗಿ 10 ಕೆಎಸ್​ಆರ್​ಪಿ ತುಕಡಿ, 2 ಡಿಸ್ವ್ಯಾಟ್ ತಂಡ, 1 ಕ್ಷಿಪ್ರ ಕಾರ್ಯಾಚರಣೆ ತಂಡ, ಗರುಡ ಪಡೆ, ಕಮಾಂಡ್ ಕಂಟ್ರೋಲ್ ವಾಹನ ನಿಯೋಜನೆ. 9 ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್​ಗೆ ವ್ಯವಸ್ಥೆ ಮಾಡಲಾಗಿದೆ. 150 ಅಧಿಕಾರಿಗಳು, 943 ಸಿಬ್ಬಂದಿ ಬಂದೋಬಸ್ತ್​ಗೆ ನಿಯೋಜಿಸಲಾಗಿದೆ. ಕಳೆದ 15 ದಿನಗಳಿಂದ ಮಾಣಿಕ್ ಷಾ ಮೈದಾನ 75 ಪೊಲೀಸರಿಂದ ನಿರಂತರ ಭದ್ರತೆಗೆ ಒಳಪಡಿಸಲಾಗಿದೆ. ಬೆಂಗಳೂರಲ್ಲಿ ಅನುಮಾನವಾಗಿ ವಾಸ್ತವ್ಯ ಹೂಡುವವರ ಮೇಲೆ ನಿಗಾ ವಹಿಸಲಾಗಿದೆ.  ಹೊಟೇಲ್, ಲಾಡ್ಜ್, ತಂಗುದಾಣಗಳಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ. ಪಥ ಸಂಕಲನದಲ್ಲಿ 34 ತುಕಡಿಗಳು ಭಾಗವಹಿಸುತ್ತಿವೆ. ಮೈದಾನ ಸುತ್ತ 85 ಸಿಸಿ ಕ್ಯಾಮರಾ ಅಳವಡಿಸಲಾಗಿದೆ.


  ಇದನ್ನು ಓದಿ: ಜ. 29ಕ್ಕೆ ಸಂಪುಟ ವಿಸ್ತರಣೆ ಬಹುತೇಕ ಖಚಿತ; ಹೈಕಮಾಂಡ್​ನಿಂದಲೂ ಗ್ರೀನ್ ಸಿಗ್ನಲ್


  ಮೈದಾನಕ್ಕೆ ಬರೋರಿಗೆ ಈ ವಸ್ತುಗಳು ನಿಷಿದ್ಧ


  ಸಿಗರೇಟ್, ಬೆಂಕಿ ಪೆಟ್ಡಿಗೆ, ಕರಪತ್ರಗಳು, ಹರಿತವಾದ ವಸ್ತು, ಚಾಕು ಚೂರಿಗಳು, ಕಪ್ಪು ಕರವಸ್ತ್ರ, ಬಣ್ಣದ ದ್ರಾವಣ, ವಿಡಿಯೋ, ಸ್ಟಿಲ್ ಕ್ಯಾಮರಾ, ನೀರಿನ ಬಾಟಲ್, ಕ್ಯಾನ್, ಶಸ್ತ್ರಾಸ್ತ್ರಗಳು, ಮದ್ಯದ ಬಾಟಲ್, ತಿಂಡಿ-ತಿನಿಸು, ಬಾವುಟಗಳು, ಪಟಾಕಿ, ಸ್ಫೋಟಕ ವಸ್ತುಗಳು ನಿಷೇಧ.

  Published by:HR Ramesh
  First published: