Petrol Price| ಬೆಂಗಳೂರಿನಲ್ಲಿ ತೈಲ ಬೆಲೆ ಸ್ಥಿರ, ಜಿಲ್ಲೆಗಳಲ್ಲಿ ಏರಿಳಿತ; ಇಲ್ಲಿದೆ ನಿಮ್ಮ ನಗರದ ಪೆಟ್ರೋಲ್-ಡೀಸೆಲ್ ಬೆಲೆ ವಿವರ!

ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ ಇಂದು 1 ಲೀಟರ್ ಪೆಟ್ರೋಲ್ ಅನ್ನು 108.08 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 98.89 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಚಿತ್ರದುರ್ಗದಲ್ಲಿ ಪೆಟ್ರೋಲ್ ಬೆಲೆ ಇಂದು ಏರಿಕೆ ಕಾಣದಿದ್ದರೂ ಸಹ ಅತ್ಯಧಿಕ 110.40 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ಬೆಂಗಳೂರು (ಅಕ್ಟೋಬರ್​ 13); ದೇಶದಲ್ಲಿ ಕಳೆದ 15 ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ತೈಲ ಬೆಲೆ ಇಂದು ಸ್ಥಿರವಾಗಿದೆ. ಆದರೆ, ತೆರಿಗೆಯಲ್ಲಿನ ವ್ಯತ್ಯಾಸ ಮತ್ತು ಇತರೆ ಕಾರಣಗಳಿಂದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್-ಡೀಸೆಲ್​ (Petrol-Diesel Rate) ಬೆಲೆಯಲ್ಲಿ ಅಲ್ಪ ಬದಲಾವಣೆಯಾಗಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Banglore) ಇಂದು 1 ಲೀಟರ್ ಪೆಟ್ರೋಲ್ ಅನ್ನು 108.08 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 98.89 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಚಿತ್ರದುರ್ಗದಲ್ಲಿ (Chitradurga) ಪೆಟ್ರೋಲ್ ಬೆಲೆ ಇಂದು ಏರಿಕೆ ಕಾಣದಿದ್ದರೂ ಸಹ ಅತ್ಯಧಿಕ 110.40 ರೂ.ಗೆ ಮಾರಾಟ ಮಾಡಲಾಗುತ್ತಿದೆ. ದಾವಣಗೆರೆಯಲ್ಲಿ (Davanagere) ಡೀಸೆಲ್​ ಅನ್ನು 100.76 ರೂ.ಗೆ ಮಾರಾಟ ಮಾಡಲಾಗುತ್ತಿದೆ.

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;

    ಬಾಗಲಕೋಟೆ - 108.59 ರೂ. (12 ಪೈಸೆ ಇಳಿಕೆ)
    ಬೆಂಗಳೂರು - 108.08 ರೂ. (00)
    ಬೆಂಗಳೂರು ಗ್ರಾಮಾಂತರ -108.08ರೂ. (16 ಪೈಸೆ ಏರಿಕೆ)
    ಬೆಳಗಾವಿ - 108.14 ರೂ. (31 ಪೈಸೆ ಏರಿಕೆ)
    ಬಳ್ಳಾರಿ - 109.46 ರೂ. (64 ಪೈಸೆ ಏರಿಕೆ )
    ಬೀದರ್ - 108.96 ರೂ. (08 ಪೈಸೆ ಇಳಿಕೆ)
    ಬಿಜಾಪುರ - 108.14 ರೂ. (35 ಪೈಸೆ ಇಳಿಕೆ)
    ಚಾಮರಾಜನಗರ - 108.08 ರೂ. (08 ಪೈಸೆ ಇಳಿಕೆ)
    ಚಿಕ್ಕಬಳ್ಳಾಪುರ - 108.08 ರೂ. (29 ಪೈಸೆ ಇಳಿಕೆ)
    ಚಿಕ್ಕಮಗಳೂರು - 109.76ರೂ. (86 ಪೈಸೆ ಏರಿಕೆ)
    ಚಿತ್ರದುರ್ಗ - 110.40 ರೂ. (00)
    ದಕ್ಷಿಣ ಕನ್ನಡ - 107.58 ರೂ. (00)
    ದಾವಣಗೆರೆ - 110.26 ರೂ. (61 ಪೈಸೆ ಏರಿಕೆ)
    ಧಾರವಾಡ - 107.82 ರೂ. (14 ಪೈಸೆ ಇಳಿಕೆ)
    ಗದಗ – 108.57 ರೂ. (26 ಪೈಸೆ ಇಳಿಕೆ)
    ಗುಲಬುರ್ಗ - 108.55 ರೂ. (1.33 ರೂ. ಏರಿಕೆ)
    ಹಾಸನ – 108.24 ರೂ. (25 ಪೈಸೆ ಏರಿಕೆ)
    ಹಾವೇರಿ - 109.10 ರೂ. (30 ಪೈಸೆ ಏರಿಕೆ)
    ಕೊಡಗು – 109.35 ರೂ. (03 ಪೈಸೆ ಏರಿಕೆ)
    ಕೋಲಾರ - 107.76 ರೂ. (18 ಪೈಸೆ ಇಳಿಕೆ)
    ಕೊಪ್ಪಳ- 109.27 ರೂ. (29 ಪೈಸೆ ಏರಿಕೆ)
    ಮಂಡ್ಯ – 108.03 ರೂ. (04 ಪೈಸೆ ಇಳಿಕೆ)
    ಮೈಸೂರು – 107.65 ರೂ. (17 ಪೈಸೆ ಇಳಿಕೆ )
    ರಾಯಚೂರು – 108.77 ರೂ. (87 ಪೈಸೆ ಏರಿಕೆ)
    ರಾಮನಗರ – 108.44 ರೂ. (24 ಪೈಸೆ ಏರಿಕೆ)
    ಶಿವಮೊಗ್ಗ – 109.71 ರೂ. (16 ಪೈಸೆ ಏರಿಕೆ)
    ತುಮಕೂರು – 109.13 ರೂ. (46 ಪೈಸೆ ಇಳಿಕೆ)
    ಉಡುಪಿ - 107.95 ರೂ. (01 ಪೈಸೆ ಏರಿಕೆ)
    ಉತ್ತರಕನ್ನಡ – 109.47 ರೂ . (53 ಪೈಸೆ ಇಳಿಕೆ)
    ಯಾದಗಿರಿ – 108.42 ರೂ. (47 ಪೈಸೆ ಇಳಿಕೆ ).

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

    ಬಾಗಲಕೋಟೆ – 99.39
    ಬೆಂಗಳೂರು – 98.89
    ಬೆಂಗಳೂರು ಗ್ರಾಮಾಂತರ : 98.89
    ಬೆಳಗಾವಿ – 98.98
    ಬಳ್ಳಾರಿ – 100.17
    ಬೀದರ್ -99.72
    ಬಿಜಾಪುರ – 98.97

    ಚಾಮರಾಜನಗರ – 98.88
    ಚಿಕ್ಕಬಳ್ಳಾಪುರ – 98.89
    ಚಿಕ್ಕಮಗಳೂರು – 100.34
    ಚಿತ್ರದುರ್ಗ – 100.90
    ದಕ್ಷಿಣ ಕನ್ನಡ – 98.40
    ದಾವಣಗೆರೆ -100.76
    ಧಾರವಾಡ – 98.68
    ಗದಗ – 99.36
    ಗುಲಬರ್ಗ – 99.35
    ಹಾಸನ – 98.92
    ಹಾವೇರಿ – 99.85

    ಕೊಡಗು – 99.93
    ಕೋಲಾರ – 98.60
    ಕೊಪ್ಪಳ- 100
    ಮಂಡ್ಯ – 98.84
    ಮೈಸೂರು –98.50
    ರಾಯಚೂರು – 99.56
    ರಾಮನಗರ – 99.22
    ಶಿವಮೊಗ್ಗ – 100.31
    ತುಮಕೂರು –99.73
    ಉಡುಪಿ – 98.74
    ಉತ್ತರಕನ್ನಡ – 100.13
    ಯಾದಗಿರಿ – 99.23

    ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.02 ರೂ ಇದ್ದರೆ ಡೀಸೆಲ್​ ಬೆಲೆ 96.60 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ 109.76 ರೂ ಆಗಿದ್ದರೆ, ಡೀಸೆಲ್​ ಬೆಲೆ 101.24 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 103.84 ರೂ ಮತ್ತು ಡೀಸೆಲ್ 92.12 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪೆಟ್ರೋಲ್ 109.83 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 99.92 ರೂ.ಗೆ ಮಾರಾಟ ಮಾಡಲಾಗುತ್ತಿದೆ.

    ಇದನ್ನೂ ಓದಿ: Bihar- ಹೆಣ್ಮಗು ಆಯಿತೆಂದು ಪತ್ನಿ, ಮಗುವನ್ನು ಮನೆಗೆ ಸೇರಿಸದ ಗಂಡ

    ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

    ಇದನ್ನೂ ಓದಿ:WhatsApp, Gmail ಬಳಸುತ್ತಿರುವ ಮುಸ್ಲಿಂ ಮಹಿಳೆಯರನ್ನ ವಶಕ್ಕೆ ಪಡೆಯುತ್ತಿರುವ ಚೀನಾ ಪೊಲೀಸರು

    ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.
    Published by:MAshok Kumar
    First published: