Eshwarappa press meet: ಕೊನೆಗೂ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ, ನಾಳೆಯೇ ಸಿಎಂಗೆ ರಾಜೀನಾಮೆ ಪತ್ರ ಸಲ್ಲಿಕೆ

ನಾಳೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ನೀಡುತ್ತೇನೆ ಈ ಆರೋಪದಿಂದ ಮುಕ್ತನಾಗಿ ಬರುತ್ತೇನೆ.

ಸಚಿವ ಈಶ್ವರಪ್ಪ

ಸಚಿವ ಈಶ್ವರಪ್ಪ

  • Share this:
ಶಿವಮೊಗ್ಗ (ಏ.14): ಗುತ್ತಿಗೆದಾರ ಸಂತೋಷ್​ ಪಾಟೀಲ್ (Santhosh Patil)​ ಆತ್ಮಹತ್ಯೆ ವಿಚಾರವಾಗಿ 3 ದಿನ ಮಾತಾಡಲ್ಲ ಎಂದಿದ್ದ ಕೆ.ಎಸ್​ ಈಶ್ವರಪ್ಪ, ದಿಢೀರ್​ ಸುದ್ದಿಗೋಷ್ಠಿ ಕರೆದು ರಾಜೀನಾಮೆ ನೀಡೋದಾಗಿ ಘೋಷಣೆ ಮಾಡಿದ್ದಾರೆ. ನಾಳೆಯೇ ರಾಜೀನಾಮೆ (Resign) ನೀಡೋದಾಗಿ ಘೋಷಿಸಿದ್ದಾರೆ. ನಾಳೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸರ್ಕಾರಕ್ಕೆ ಇರಿಸುಮುರಿಸು ಆಗಬಾರದು. ಹೀಗಾಗಿ ನಾಳೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವೆ ಎಂದ್ರು  ಈ ಆರೋಪದಿಂದ ಮುಕ್ತನಾಗಿ ಬರುತ್ತೇನೆ. ಸಮಗ್ರ ತನಿಖೆ (Investigation) ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ತಾಯಿ ಚೌಡೇಶ್ವರಿ ನಿರ್ದೋಷಿಯಾಗಿ ಮಾಡುತ್ತಾಳೆಂದು ನಂಬಿಕೆ ಇಟ್ಟುಕೊಂಡಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ. 

ನಾಳೆಯೇ ಸಿಎಂಗೆ ರಾಜೀನಾಮೆ ಪತ್ರ ನೀಡುವೆ

ಸುದ್ದಿಗೋಷ್ಠಿಗೂ ಮುನ್ನ ಸಿಎಂ ಜೊತೆ ಚರ್ಚಿಸಿ ಈಶ್ವರಪ್ಪ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ್ರು. ಬಿಜೆಪಿಯ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಇವತ್ತಿನವರೆಗೂ ಕೆಲಸ ಮಾಡಿದ್ದೇನೆ. ನಾನು ತೀರ್ಮಾನ ಮಾಡಿದ್ದೇನೆ. ನಾಳೆ ನಾನು ರಾಜೀನಾಮೆ ಕೊಡ್ತೇನೆ. ನಾಳೆ ಸಂಜೆ ಬೆಂಗಳೂರಿನಲ್ಲಿ ರಾಜಿನಾಮೆ ನೀಡುತ್ತೇನೆ ಎಂದಿದ್ದಾರೆ. ಬಿಜೆಪಿಯವರು ನನ್ನನ್ನು ಇಲ್ಲಿವರೆಗೂ ಬೆಳೆಸಿದ್ದಾರೆ. ಅವರಿಗೆ ಇರಿಸು ಮುರಿಸು ಅಗಬಾರದು ಎಂಬ ಒಂದೇ ಕಾರಣಕ್ಕೆ ನಾನು ರಾಜೀನಾಮೆ ಕೊಡ್ತಾ ಇದ್ದೇನೆ.

ಈ ಎಪಿಸೋಡ್ ನಲ್ಲಿ ನನ್ನ ಪಾತ್ರ ಇಲ್ಲ

ಬೊಮ್ಮಾಯಿ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ನಾಳೆ ಸಂಜೆ ಬೆಂಗಳೂರಿಗೆ ಹೋಗಿ ಸಿಎಂ ಅವರಿಗೆಗೆ ರಾಜೀನಾಮೆ ಕೊಡ್ತೇನೆ. ಈ ಎಪಿಸೋಡ್ ನಲ್ಲಿ ನನ್ನ ಪಾತ್ರ ಇಲ್ಲ. ಇದರಲ್ಲಿ ನನ್ನ ಪಾತ್ರ 1 ಪರ್ಸೆಂಟ್ ಇದ್ದರೂ, ದೇವರೇ ನನಗೆ ಶಿಕ್ಷೆ ಕೊಡಲಿ. ನನ್ನ ಪಾತ್ರ ಇಲ್ಲ. ಮುಕ್ತನಾಗಿ ಹೊರಗೆ ಬರ್ತೇನೆ ಎಂದು ಹೇಳಿದ್ದಾರೆ

ಇದನ್ನೂ ಓದಿ: KS Eshwarappa ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿ, ಬಂಧಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ; ಕಾಂಗ್ರೆಸ್​​

ಹೈಕಮಾಂಡ್​ನಿಂದ ಯಾವುದೇ ಒತ್ತಡ ಇಲ್ಲ

ಸಚಿವ ಸ್ಥಾನಕ್ಕೆ ಕೆ.ಎಸ್ ಈಶ್ವರಪ್ಪ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನನ್ನ ಬಳಿ ಸಂಜೆ ಮಾತನಾಡಿದ್ರು ಬಹಳಷ್ಟು ಯೋಚನೆ ಮಾಡಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ವಿರೋಧ ಪಕ್ಷ ಇದನ್ನೇ ಅಸ್ತ್ರ ಮಾಡಿಕೊಳ್ತಾರೆ ಅದಕ್ಕೆ ಅವಕಾಶ ಕೊಡೊದು ಬೇಡ ಅಂತ ಅವರೇ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದ್ರು. ಹೈಕಮಾಂಡ್ ನಿಂದ ಯಾವುದೇ ಒತ್ತಡ ಇರಲಿಲ್ಲ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಪ್ರಾಥಮಿಕ ತನಿಖೆ ನಡೀತಿದೆ.  ಪ್ರಾಥಮಿಕ ತನಿಖೆ ನಡೆದ ಬಳಿಕ ಉನ್ನತ ತನಿಖೆ ಬಗ್ಗೆ ಯೋಚನೆ ಮಾಡೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈಶ್ವರಪ್ಪ ಮೇಲಿನ ಗಂಭೀರ ಆರೋಪ

 ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​.ಈಶ್ವರಪ್ಪ ವಿರುದ್ದ ಶೇಕಡಾ 40ರಷ್ಟು ಕಮಿಷನ್‌ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಭಾರೀ ಸುದ್ದಿಯಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಏಪ್ರಿಲ್​ 12 ರಂದು ಆತ್ಮಹತ್ಯೆ ಮಾಡಿಕೊಂಡ್ರು.  ನನ್ನ ಸಾವಿಗೆ ಗ್ರಾಮೀಂಣ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಬರೆದಿಟ್ಟು ಸಾವಿಗೆ ಶರಣಾಗಿದ್ದರು.

ಇದನ್ನು ಓದಿ:  ದೇಶದಲ್ಲಿ ಭ್ರಷ್ಟಾಚಾರ ಹುಟ್ಟಿದ್ದೇ ಕಾಂಗ್ರೆಸ್​ನವ್ರಿಂದ, 'ಕೈ' ನಾಯಕರ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿ

ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಇಂದು ಏಪ್ರಿಲ್ 12ರಂದು ಮಂಗಳವಾರ ಆತ್ಮಹತ್ಯೆಗೆ  ಮಾಡಿಕೊಂಡಿರೋ ಸ್ಥಿತಿಯಲ್ಲಿ ಅವರ ಮೃತದೇಹ ಸಿಕ್ಕಿತ್ತು. ಅಲ್ಲದೆ ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪನವರೇ ಕಾರಣ ಎಂದು ವಾಟ್ಸಾಪ್ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಮಾಧ್ಯಮಗಳಿಗೂ ಕಳುಹಿಸಿದ್ದು, ನನ್ನ ಪತ್ನಿ ಮಕ್ಕಳಿಗೆ ಸಹಾಯ ಮಾಡಿ ಎಂದು ಪ್ರಧಾನಿ ಮೋದಿ ಹಾಗೂ ಬಿ ಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡಿದ್ದಾರೆ.
Published by:Pavana HS
First published: