ಆರ್ಥಿಕ ಹಿಂಜರಿತ ಮರೆಮಾಚಲು ಮಾಜಿ ಸಚಿವ ಡಿಕೆ ಶಿವಕುಮಾರ್ ಬಲಿ ; ಮಾಜಿ ಸಂಸದ ಉಗ್ರಪ್ಪ ಕಿಡಿ

ಸಚಿವ ಕೆ.ಎಸ್. ಈಶ್ವರಪ್ಪ ಪ್ರವಾಹ ಸಂತ್ರಸ್ಥರಿಗೆ 10 ಸಾವಿರ ಕೊಟ್ಟಿದ್ದೇ ಹೆಚ್ಚಾಯ್ತು ಅಂತಾರೆ. ಆದರೆ ಮಖ್ಯಮಂತ್ರಿ ಯಡಿಯೂರಪ್ಪ ಅವರು ನಿಧಾನವಾಗಿ ನಷ್ಟದ ವರದಿ ಮಾಡಿ ಅಂತಾರೆ. ಇದೆಲ್ಲವನ್ನು ನೋಡಿದ್ರೆ. ರಾಜ್ಯದಲ್ಲಿ ಸರ್ಕಾರ ಇದೆಯಾ ಎನ್ನುವ ಪ್ರಶ್ನೆ ಮೂಡುತ್ತದೆ

G Hareeshkumar | news18
Updated:September 14, 2019, 4:11 PM IST
ಆರ್ಥಿಕ ಹಿಂಜರಿತ ಮರೆಮಾಚಲು ಮಾಜಿ ಸಚಿವ ಡಿಕೆ ಶಿವಕುಮಾರ್ ಬಲಿ ; ಮಾಜಿ ಸಂಸದ ಉಗ್ರಪ್ಪ ಕಿಡಿ
ಮಾಜಿ ಸಂಸದ ವಿ. ಎಸ್ ಉಗ್ರಪ್ಪ
  • News18
  • Last Updated: September 14, 2019, 4:11 PM IST
  • Share this:
ಬಳ್ಳಾರಿ(ಸೆ. 14): ದೇಶದಲ್ಲಿ ಆರ್ಥಿಕ ಹಿಂಜರಿತ ಮರೆಮಾಚಲು ಡಿಕೆ ಶಿವಕುಮಾರ್ ಅವರನ್ನ ಬಲಿ ಕೊಡುತ್ತಿದ್ದಾರೆ. ವಿಚಾರಣೆಗೆ ಕೇವಲ ಎಂಟು ದಿನ ಸಾಕು. ಆದರೂ ಇನ್ನಷ್ಟು ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ನ್ಯಾಯ ಸಿಗುವ ವಿಶ್ವಾಸವಿದ್ದು, ಇದಕ್ಕೆ ಜನತಾ ನ್ಯಾಯಾಲವೇ ಮುಂದಿನ ದಿನಗಳಲ್ಲಿ ಉತ್ತರಿಸಲಿದೆ‌ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಹೇಳಿದರು.

ರಾಷ್ಟ್ರದಲ್ಲಿ ಸೇಡಿನ ರಾಜಕಾರಣ ನಡೆಯುತ್ತಾ ಇದೆ. ಮಾಜಿ ಸಚಿವ  ಡಿಕೆ ಶಿವಕುಮಾರ್ ಅವರ ಸಂಪತ್ತನ್ನ ಮೊದಲು 8 ಕೋಟಿ ಅಂದ್ರು. ಈಗ 800 ಕೋಟಿ ಎನ್ನುತ್ತಿದ್ದಾರೆ. ಕೇಂದ್ರ ಸಚಿವರಾದ ಅಮಿತ್ ಷಾ ಹಾಗೂ ನಿತಿನ್ ಗಡ್ಕರಿ ಅವರ ಮಕ್ಕಳ ಆಸ್ತಿ ಎಷ್ಟು ಪಟ್ಟು ಹೆಚ್ಚಾಯಿತು ಅಂತಾ ಇಡಿ ಗೆ ಮಾಹಿತಿ ಇಲ್ವಾ ಎಂದು ವಿಎಸ್ ಉಗ್ರಪ್ಪ ಪ್ರಶ್ನೆ ಮಾಡಿದರು.

ಸಚಿವ ಕೆ.ಎಸ್. ಈಶ್ವರಪ್ಪ ಪ್ರವಾಹ ಸಂತ್ರಸ್ಥರಿಗೆ 10 ಸಾವಿರ ಕೊಟ್ಟಿದ್ದೇ ಹೆಚ್ಚಾಯ್ತು ಅಂತಾರೆ. ಆದರೆ ಮಖ್ಯಮಂತ್ರಿ ಯಡಿಯೂರಪ್ಪ ಅವರು ನಿಧಾನವಾಗಿ ನಷ್ಟದ ವರದಿ ಮಾಡಿ ಅಂತಾರೆ. ಇದೆಲ್ಲವನ್ನು ನೋಡಿದ್ರೆ. ರಾಜ್ಯದಲ್ಲಿ ಸರ್ಕಾರ ಇದೆಯಾ ಎನ್ನುವ ಪ್ರಶ್ನೆ ಮೂಡುತ್ತದೆ ಎಂದು ಸರ್ಕಾರದ ವಿರುದ್ದ ಮಾಜಿ ಸಂಸದ ವಿಎಸ್​ ಉಗ್ರಪ್ಪ ಗುಡುಗಿದರು.

ರಾಜ್ಯದಲ್ಲಿ ಆಡಳಿತ ಹಳಿತಪ್ಪಿದೆ. ಒಂದು ಕಡೆ ಪ್ರವಾಹ ಮತ್ತೊಂಡೆ ಬರ ಇದೆ. 88 ಜನ ಬಲಿಯಾಗಿದ್ದಾರೆ. ರಾಜ್ಯ ಸರ್ಕಾರ 38,500 ಕೋಟಿ ಅಂದಾಜು ನಷ್ಟ ವರದಿ ಮಾಡಿದೆ ಆದರೆ ಕೇಂದ್ರವನ್ನ ಕೇಳಿರೋದು 3,800 ಕೋಟಿ ಮಾತ್ರ. ಇಲ್ಲಿವರೆಗೂ ಸರಕಾರ 374 ಕೋಟಿ ರೂ ಮಾತ್ರ ಬಿಡುಗಡೆ ಮಾಡಿದ್ದು, ಅದರಲ್ಲಿ ಕೇಂದ್ರ ಸರ್ಕಾರ 203 ಕೋಟಿ ರಿಲೀಸ್ ಮಾಡಿದೆ ಎಂದರು.

ಇದನ್ನೂ ಓದಿ :  ಅಕ್ರಮ ಅದಿರು ನಾಪತ್ತೆ ಪ್ರಕರಣ ; ಗಣಿನಾಡಿನ ಮಾಜಿ, ಹಾಲಿ ಶಾಸಕರಿಗೆ ಬಿಗ್ ರಿಲೀಫ್...!

ನೂರು ಕೋಟಿ ಕೊಟ್ಟರೆ ಬಿಜೆಪಿ ಪಕ್ಷದಲ್ಲಿ ಮಂತ್ರಿಯಾಗಬಹುದು. ಬಿಜೆಪಿಯಲ್ಲಿ ಮಂತ್ರಿ ಸ್ಥಾನ, ಡಿಸಿಎಂ ಸ್ಥಾನ ವ್ಯಾಪಾರಕ್ಕಿದೆ. ಇದನ್ನ ಬಿಜೆಪಿಯವರೇ ಹೇಳುತ್ತಿದ್ದಾರೆ ಎಂದು ಉಗ್ರಪ್ಪ ಆರೋಪಿಸಿದರು.

ಪ್ರಧಾನಿ ನರೇಂದ್ರ  ಮೋದಿ ಅವರು ಕರ್ನಾಟಕಕ್ಕೆ ಭೇಟಿ ಮಾಡಿದರೂ ಅವರ ಬಳಿ ಪರಿಹಾರ ಕೇಳೋದಕ್ಕೆ ರಾಜ್ಯದ ನಾಯಕರಿಂದ ಆಗಲಿಲ್ಲ. ನಿಮ್ಮ ಕೈಯ್ಯಲ್ಲಿ ಆಗಲ್ಲ ಅಂದ್ರೆ ನಮಗೆ ಭೇಟಿ ಮಾಡಿಸಿ ಎಂದು ಹೇಳಿದರೆ, ಅದನ್ನೂ ಮಾಡಿಲ್ಲ. ಮಾಧ್ಯಮದವರನ್ನೂ ಭೇಟಿ ಮಾಡಿಸಿಲ್ಲ ಬಿಜೆಪಿ ಜನರ ಬದುಕಿನ ಜತೆ ಚಲ್ಲಾಟವಾಡುತ್ತದೆ ಎಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಹರಿಹಾಯ್ದರು.
First published:September 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ