Mandya Politics: ಅಂದು ಸುಮಲತಾ, ಇಂದು ಮಂಜುನಾಥ್: ಮತ್ತೇ ಹಳೆ ತಂತ್ರ ಪ್ರಯೋಗ ಮಾಡ್ತಾ ಜೆಡಿಎಸ್?

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇಳಿ ಬಂದ ಡೂಪ್ಲಿಕೆಟ್ ಸುಮಲತಾ ರೀತಿಯಲ್ಲೆ ಈ ಬಾರಿ ಎಂಎಲ್‌ಸಿ ಚುನಾವಣೆಯಲ್ಲಿ ಕೂಡ ಜೆಡಿಎಸ್ ಪಕ್ಷೇತರ ಅಭ್ಯರ್ಥಿಯೊಬ್ಭರನ್ನ ಕಣಕ್ಕಿಳಿಸಿದ್ದು, ಅದು ಬಿಜೆಪಿ ಅಭ್ಯರ್ಥಿಗೆ ಟಕ್ಕರ್ ಕೊಡಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ. 

ಸಂಸೆದೆ ಸುಮಲತಾ ಅಂಬರೀಷ್

ಸಂಸೆದೆ ಸುಮಲತಾ ಅಂಬರೀಷ್

  • Share this:
ಚುನಾವಣೆ (Election) ಬಂತು ಅಂದ್ರೆ ಸಾಕು ಸಕ್ಕರೆ ನಾಡು ಮಂಡ್ಯ  (Mandya) ಇಡೀ ರಾಜ್ಯದಲ್ಲೇ ಸದ್ದು ಮಾಡುತ್ತೆ. ಇದಕ್ಕೆ ಕಾರಣ ಇಲ್ಲಿನ ರಾಜಕಾರಣಿಗಳು ಶತಾಯ ಗತಾಯ ಗೆಲ್ಲಲೇ ಬೇಕು ಅಂತ ತಮ್ಮದೆ ಆದ ವಿನೂತ ರಣತಂತ್ರಗಳ ಮೂಲಕ ಮತದಾರರ ದಿಕ್ಕು ತಪ್ಪಿಸಲು ನೋಡ್ತಾರೆ. ಅದೇ ರೀತಿ ಈ ಬಾರಿ ಎಂಎಲ್‌ಸಿ ಚುನಾವಣೆಯಲ್ಲೂ (MLC Election)  ಕೂಡ ಮತದಾರರಿಗೆ (Voters) ದಿಕ್ಕು ತಪ್ಪಿಸಲು ಒಂದೆ ಹಸರಿನ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿಯನ್ನ ಸೃಷ್ಟಿಸಿದ್ದಾರೆ ಅಂತ ಆರೋಪ ಕೇಳಿ ಬಂದಿದೆ.  ಕಳೆದ ಮಂಡ್ಯ ಲೋಕಸಭಾ ಚುನಾವಣೆ (Loksabha Election)  ದೇಶಾದ್ಯಂತ ಸದ್ದು ಮಾಡಿತ್ತು. ಇದಕ್ಕೆ ಕಾರಣ ಅಂದು ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿ (HD Kumaraswamy)  ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಜೆಡಿಎಸ್ ಅಭ್ಯರ್ಥಿ (JDS) ಆಗಿ ಕಣಕ್ಕಿಳಿದಿದ್ರೆ. ಮತ್ತೊಂದು ಕಡೆ ಸುಮಲತಾ ಅಂಬರೀಶ್ (Sumalatha Ambareesh) ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ರು. ಹಿಗಾಗಿ ಈ ಎರಡು ಅಭ್ಯರ್ಥಿಗಳ ನಡುವೆ ಒಂದು ರಾಜಕೀಯ ಯುದ್ದವೆ ನಿರ್ಮಾಣವಾಗಿತ್ತು.

ಒಂದು ಕಡೆ ಜೆಡಿಎಸ್ ಗೆಲುವು ಕುಮಾರಸ್ವಾಮಿ ಅವರಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದ್ರೆ. ಮತ್ತೊಂದು ಕಡೆ ಸುಮಲತಾ ಅವರದ್ದು ಮಂಡ್ಯ ಜನರ ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಹಿಗಾಗಿ ಅಂದಿನ ಚುನಾವಣೆಯಲ್ಲಿ ತಂತ್ರ ಕುತಂತ್ರಗಳು ನಡೆದು ಸುಮಲತಾ ವಿರುದ್ದ ಮೂರು ಜನ ಡೂಪ್ಲಿಕೆಟ್ ಸುಮಲತಾರನ್ನ ಕಣಕ್ಕಿಳಿಸಲಾಗಿತ್ತು. ಇದು ಸಾಕಷ್ಟು ವಿವಾದಕ್ಕೆ ಕಾರಣ ಕೂಡ ಆಗಿತ್ತು..

ಹಳೆ ಪ್ಲಾನ್ ಅನುಸರಿಸಿತಾ ಜೆಡಿಎಸ್ .?

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇಳಿ ಬಂದ ಡೂಪ್ಲಿಕೆಟ್ ಸುಮಲತಾ ರೀತಿಯಲ್ಲೆ ಈ ಬಾರಿ ಎಂಎಲ್‌ಸಿ ಚುನಾವಣೆಯಲ್ಲಿ ಕೂಡ ಜೆಡಿಎಸ್ ಪಕ್ಷೇತರ ಅಭ್ಯರ್ಥಿಯೊಬ್ಭರನ್ನ ಕಣಕ್ಕಿಳಿಸಿದ್ದು, ಅದು ಬಿಜೆಪಿ ಅಭ್ಯರ್ಥಿಗೆ ಟಕ್ಕರ್ ಕೊಡಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ:  ತಮಾಷೆಗೆ ಹೇಳಿದ ಮಾತನ್ನು ನಾರಾಯಣ ಗೌಡರು ನಿಜ ಮಾಡಿದ್ರು: ಸಚಿವ ST Somashekhar

ಈ ಬಗ್ಗೆ ಆರೋಪಿಸಿರುವ  ಸಚಿವ ನಾರಾಯಣಗೌಡರು (Minister Narayangowda), ಮಂಡ್ಯ ಬಿಜೆಪಿ ಅಭ್ಯರ್ಥಿ ಬೂಕಳ್ಳಿ ಮಂಜು ಹೆಸರಿನ ಮತ್ತೊಬ್ಬ ಮಂಜುವನ್ನ ಜೆಡಿಎಸ್ ನವರು ತಂದು ನಿಲ್ಲಿಸಿದ್ದಾರೆ. ಇದು ಜೆಡಿಎಸ್ ಪಕ್ಷದ ಕುತಂತ್ರವಾಗಿದೆ. ಆದ್ರೆ ಈ ಕುತಂತ್ರಕ್ಕೆ ನಮ್ಮ ಮತದಾರರು ತಕ್ಕ ಉತ್ತರ ನೀಡ್ತಾರೆ ಅಂತ ನಾರಾಯಣಗೌಡ ಕಿಡಿಕಾರಿದ್ದಾರೆ.

ಅಭ್ಯರ್ಥಿಗಳ ಹೆಸರು


ಸುಮಲತಾ ವಿರುದ್ದ ಕುತಂತ್ರ ನಡೆಸಿದ್ದು ನಿಜಾ ನಾನು ಆಗ ಜೆಡಿಎಸ್ ಲ್ಲಿದ್ದೆ.

ಸುಮಲತಾ ಅವರ ಚುನಾವಣೆಯಲ್ಲಿ ಅವರ ಹೆಸರಿನ ಬೇರೆ ಬೇರೆ ಸುಮಲತಾರನ್ನ ಜೆಡಿಎಸ್ ನಿಲ್ಲಿಸಿದ್ದು ನಿಜಾ‌. ಆಗ ನಾನು ಜೆಡಿಎಸ್ ಪಕ್ಷದಲ್ಲೆ ಇದ್ದೆ. ಆ ಸಂದರ್ಭ ನಾನು ಎಲ್ಲರಿಗೂ ಹೇಳಿದೆ ಆ ರೀತಿ ಮಾಡೋದು ಬೇಡ ಅಂತ. ಆದ್ರೆ ನನ್ನ ಮಾತಿಗೆ ಬೆಲೆ ಕೊಡದೇ ನನ್ನ ಜೊತೆ ಇದ್ದ ದಯಾ ಎಂಬ ಹುಡುಗನ ಮೂಲಕ ಕೆ.ಆರ್ ಪೇಟೆ ತಾಲೂಕಿನ ಗೊರವಿ ಗ್ರಾಮದ ಸುಮಲತಾ ಎಂಬ ಮಹಿಳೆಗೆ ಹಣದ ಆಸೆ ತೋರಿಸಿ ಚುನಾವಣೆಗೆ ನಿಲ್ಲಿಸಲಾಗಿತ್ತು. ಆದ್ರೆ ಇವತ್ತಿಗೂ ಆ ಮಹಿಳೆಗೆ ನಯಾ ಪೈಸೆ ನೀಡದೇ ವಂಚಿಸಲಾಗಿದೆ.

ಇದನ್ನೂ ಓದಿ:  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ JDS ಸಿಂಗಲ್ ಡಿಜಿಟ್ ಅಷ್ಟೇ ಗೆಲ್ಲುವುದು: Zameer Ahmed Khan

ಈ ರೀತಿ ಕುತಂತ್ರಗಳನ್ನ ಮಾಡೋದ್ರಲ್ಲಿ ಮಂಡ್ಯ ಜೆಡಿಎಸ್ ಜಿಲ್ಲಾಧ್ಯಕ್ಷರು ನಿಸ್ಸಿಮರು. ಆದ್ರೆ ಮತದಾರರು ಮಂಗರಲ್ಲ ಇವರಿಗೆ ಸರಿಯಾಗಿ ಪಾಠ ಕಲಿಸುತ್ತಾರೆ ಅಂತ ಸಚಿವ ನಾರಾಯಣಗೌಡ ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯ ಬಿಜೆಪಿ ಅಭ್ಯರ್ಥಿ ಹೇಳಿದ್ದೇನು?

ಇನ್ನು ಮಂಡ್ಯ ಬಿಜೆಪಿ ಅಭ್ಯರ್ಥಿ ಬೂಕಳ್ಳಿ ಮಂಜು ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಇದು ಎದುರಾಳಿಗಳ ಕುತಂತ್ರ, ಕುತಂತ್ರಕ್ಕೆ ಬೆಲೆ ಸಿಗಲ್ಲ. ನಾನು ಮತದಾರರ ಮನೆಗಳಿಗೆ ನೇರ ಪರಿಚಯ ಇದ್ದೇನೆ. ಹಿಗಾಗಿ ಅವರ ಗಿಮಿಕ್ ನೋಡಿದ್ರೆ ಬಿಜೆಪಿ ಮೇಲಿನ ಅವರಿಗಿರುವ ಭಯ ಗೊತ್ತಗುತ್ತದೆ. ಅಲ್ಲದೆ ಮತದಾರರು ಬುದ್ದಿವಂತರು, ಇಂತ ಕುತಂತ್ರಗಳಿಗೆ ಬಲಿಯಾಗಲ್ಲ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವ ನಾರಾಯಣ ಗೌಡ


ಒಟ್ಟಾರೆ, ಎಲ್ಲಾ ಚುನಾವಣೆಗಳಂತೆ ಈ ಬಾರಿಯ ಎಂಎಲ್‌ಸಿ ಚುನಾವಣೆ ಕೂಡ ಮಂಡ್ಯದಲ್ಲಿ ರಂಗೇರಿದ್ದು, ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ನಾನಾ ರೀತಿಯ ತಂತ್ರಗಳನ್ನ ರೂಪಿಸುತ್ತಿವೆ. ಸದ್ಯ ಮಂಡ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಡಿಸೆಂಬರ್ 14 ಬಳಿಕ ಅಭ್ಯರ್ಥಿಗಳ ಹಣೆಬರಹ ಗೊತ್ತಾಗಲಿದೆ.

ವರದಿ - ಸುನೀಲ್ ಗೌಡ, ಮಂಡ್ಯ.
Published by:Mahmadrafik K
First published: