ಬುಧವಾರ ಕಾಂಗ್ರೆಸ್ ಪಕ್ಷ ಮಾಡಿದ್ದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುಣ್ಯತಿಥಿಯ ನೆನಪಿನ ಟ್ವೀಟ್ ವಿರುದ್ದ ಪಶ್ಚಿಮ ಬಂಗಾಳದ ಆಡಳಿತಾರೂ ತೃಣಮೂಲ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪೋಸ್ಟ್ ಅನ್ನು ಟ್ಯಾಗ್ ಮಾಡಿರುವ, ಟಿಎಂಸಿ ನಾಯಕ ಕುನಾಲ್ ಘೋಷ್ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದುಕೊಂಡಿದ್ದು, ನೇತಾಜಿ ಸಾವಿನ ದಿನಾಂಕ ತಿಳಿದಿಲ್ಲ, ಆದರೂ ಕಾಂಗ್ರೆಸ್ ಅವರು ಹುತಾತ್ಮರಾದ ದಿನ ಬರೆದು ಅವಮಾನ ಮಾಡಿದೆ ಎಂದು ಹೇಳಿದ್ದಾರೆ.
1940 ರ ಡಿಸೆಂಬರ್ನಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಜನವರಿ 16, 1941 ರಂದು, ಬ್ರಿಟಿಷರು ಕೋಲ್ಕತ್ತಾದಲ್ಲಿ ನೇತಾಜಿ ಅವರನ್ನು ಗೃಹಬಂಧನದಲ್ಲಿ ಇರಿಸಿದ್ದರು. ಅಂದು ಬೋಸ್ ರಾತ್ರಿ ವೇಳೆ ತಪ್ಪಿಸಿಕೊಂಡವರು ಎಂದಿಗೂ ಹಿಂತಿರುಗಲಿಲ್ಲ. ನೇತಾಜಿಯ ಕಣ್ಮರೆಯ ಕುರಿತು ಮೂರು ವರ್ಷಗಳಿಂದ ಮೂರು ಮುಖ್ಯ ಸಿದ್ಧಾಂತಗಳು ಮುನ್ನೆಲೆಯಲ್ಲಿ ಚರ್ಚೆಗೆ ಬಂದಿವೆ: 1945 ರಲ್ಲಿ ತೈವಾನ್ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅವರ ಸಾವು, ರಷ್ಯಾದಲ್ಲಿ ಅವರ ಸಾವು ಮತ್ತು 1970 ರ ದಶಕದಲ್ಲಿ ಉತ್ತರ ಪ್ರದೇಶದ ಫೈಜಾಬಾದ್ನಲ್ಲಿ ಒಬ್ಬ ಸನ್ಯಾಸಿಯಾದ ಗುಮ್ನಾಮಿ ಬಾಬಾ ಎಂದು ಕರೆಯಲಾಗುತ್ತಿದ್ದ, ಬೋಸ್ ವೇಷದಾರಿ ಎಂದು ಹೇಳಲಾಗುತ್ತಿತ್ತು.
ಭಾರತ ಸರ್ಕಾರವು ಮೂರು ವಿಚಾರಣಾ ಆಯೋಗಗಳನ್ನು ಬೋಸ್ ಸಾವಿನ ಕುರಿತು ನಿಯೋಜಿಸಿತ್ತು: 1956 ರ ಶಾ ನವಾಜ್ ವಿಚಾರಣಾ ಸಮಿತಿ, 1974 ರ ಖೋಸ್ಲಾ ಆಯೋಗ ಮತ್ತು 2005 ರ ನ್ಯಾಯಮೂರ್ತಿ ಮುಖರ್ಜಿ ಆಯೋಗದ ತನಿಖೆ (ಜೆಎಂಸಿಐ). ಮೊದಲ ಇಬ್ಬರು ಬೋಸ್ ತೈಹೋಕುವಿನ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ತೀರ್ಮಾನಿಸಿದ್ದರು. ಆಗಸ್ಟ್ 18, 1945 ರಂದು ತೈವಾನ್ನಿಂದ ಪ್ರಯಾಣಿಸುತ್ತಿದ್ದ ಜಪಾನಿನ ಸೇನಾ ವಿಮಾನವನ್ನು ಟೇಕ್-ಆಫ್ ಮಾಡುವಾಗ ಆದ ಅಪಘಾತದ ಪರಿಣಾಮವಾಗಿ ಸಾವಿಗೀಡಾದರು ಎಂದು ಹೇಳಲಾಯಿತು. ಟೋಕಿಯೊದ ರೆಂಕೋಜಿ ದೇವಸ್ಥಾನದಲ್ಲಿ ಇರಿಸಲಾಗಿರುವ ಪಾರ್ಥಿವ ಶರೀರವು ಅವರದೇ ಎಂದು ಅವರು ಹೇಳಿದ್ದರು.
ನ್ಯಾಯಮೂರ್ತಿ ಮುಖರ್ಜಿ ಆಯೋಗವು ನೇತಾಜಿ "ವಿಮಾನ ಅಪಘಾತದಲ್ಲಿ ಸಾಯಲಿಲ್ಲ" ಮತ್ತು "ಜಪಾನಿನ ದೇವಸ್ಥಾನದಲ್ಲಿನ ಚಿತಾಭಸ್ಮ ನೇತಾಜಿಯವರದ್ದಲ್ಲ" ಎಂದು ತೀರ್ಮಾನಿಸಿತು. ಆದಾಗ್ಯೂ, "ನೇತಾಜಿ ಸುಭಾಷ್ ಚಂದ್ರ ಬೋಸ್ ಸತ್ತಿದ್ದಾರೆ" ಎಂದು ಹೇಳಿತು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತ 60 ವರ್ಷದ ಜಪಾನಿನ ಸರ್ಕಾರಿ ದಾಖಲೆಯು 2016 ರಲ್ಲಿ ಸಾರ್ವಜನಿಕವಾಗಿ ಪ್ರಕಟವಾಯಿತು, ಅಧಿಕೃತ ಆವೃತ್ತಿಯ ಪ್ರಕಾರ ಆಗಸ್ಟ್ 18, 1945 ರಂದು ತೈವಾನ್ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಈ ಸ್ವಾತಂತ್ರ್ಯ ಹೋರಾಟಗಾರ ಸಾವನ್ನಪ್ಪಿದ್ದಾರೆ. ಜಪಾನ್ನಲ್ಲಿ ಇರುವ ಏಳು ಪುಟಗಳ ವರದಿ ಮತ್ತು ಇಂಗ್ಲಿಷ್ಗೆ ಅನುವಾದಗೊಂಡ 10 ಪುಟಗಳ ವರದಿಯು ನೇತಾಜಿ ಆಗಸ್ಟ್ 18, 1945 ರಂದು ವಿಮಾನ ಅಪಘಾತಕ್ಕೀಡಾಯಿತು ಮತ್ತು ಅದೇ ದಿನ ಸಂಜೆ ತೈಪೆ ಆಸ್ಪತ್ರೆಯಲ್ಲಿ ನಿಧನರಾದರು ಎಂಬ ತೀರ್ಮಾನಕ್ಕೆ ಬಂದಿದೆ.
"ಟೇಕ್ ಆಫ್ ಆದ ತಕ್ಷಣ, ಆತ (ಬೋಸ್) ಸವಾರಿ ಮಾಡುತ್ತಿದ್ದ ವಿಮಾನ ನೆಲಕ್ಕೆ ಉರುಳಿತು, ಮತ್ತು ಅವರು ಗಾಯಗೊಂಡರು" ಎಂದು ವರದಿಯು ತನ್ನ 'ತನಿಖೆಯ ಫಲಿತಾಂಶ' ದಲ್ಲಿ ಉಲ್ಲೇಖಿಸಿದೆ. "ಸುಮಾರು 3.00 ಗಂಟೆಗೆ ಅವರು ತೈಪೆ ಸೇನಾ ಆಸ್ಪತ್ರೆಯ ನ್ಯಾನ್ಮೊನ್ ಶಾಖೆಗೆ ದಾಖಲಿಸಲಾಯಿತು "; ಮತ್ತು "ಸಾಯಂಕಾಲ ಸುಮಾರು 7.00 ಗಂಟೆಗೆ ಅವರು ನಿಧನರಾದರು." ಸಂಶೋಧನೆಗಳು ಹೇಳಿವೆ "ಆಗಸ್ಟ್ 22 ರಂದು, (ತೈಪೆ ಮುನ್ಸಿಪಲ್ ಶ್ಮಶಾನದಲ್ಲಿ) ಅಂತ್ಯಕ್ರಿಯೆ ಮಾಡಲಾಯಿತು" ಎಂದೂ ತಿಳಿಸಲಾಗಿದೆ.
ಘಟನೆಯ ಬಗ್ಗೆ ವಿವರವಾದ ವಿವರಣೆ ನೀಡಿದ್ದು, "ವಿಮಾನವು ಹಾರಾಟ ಪ್ರಾರಂಭಿಸಿದ ತಕ್ಷಣ ನೆಲದಿಂದ ಸುಮಾರು 20 ಮೀಟರ್ ಎತ್ತರಕ್ಕೆ ಏರಿದ ನಂತರ, ಎಡಪಕ್ಕದ ಮೂರು ರೆಕ್ಕೆಗಳ ಪ್ರೊಪೆಲ್ಲರ್ನ ಒಂದು ರೆಕ್ಕೆ ಇದ್ದಕ್ಕಿದ್ದಂತೆ ಮುರಿದು, ಇಂಜಿನ್ ಬಿದ್ದುಹೋಯಿತು. ತರುವಾಯ ಸಮತೋಲನ ತಪ್ಪಿದ ವಿಮಾನವು ವಿಮಾನ ನಿಲ್ದಾಣದ ಸ್ಟ್ರಿಪ್ ಪಕ್ಕದಲ್ಲಿ ನಿಲುಭಾರದ ರಾಶಿಗಳ ಮೇಲೆ ಅಪ್ಪಳಿಸಿತು ಮತ್ತು ಕ್ಷಣಾರ್ಧದಲ್ಲಿ ಜ್ವಾಲೆಯಿಂದ ಉರಿದು ಹೋಯಿತು. ಶ್ರೀ ಬೋಸ್ ಬೆಂಕಿಗೆ ಆಹುತಿಯಾದರು ಹಾಗೂ ವಿಮಾನದಿಂದ ಇಳಿದರು; ಅಡ್ಜುಟಂಟ್ ರಹಮಿನ್ (ಕರ್ನಲ್ ಹಬೀಬರ್ ರೆಹಮಾನ್) ಮತ್ತು ಇತರ ಪ್ರಯಾಣಿಕರು ಅವರ ಬಟ್ಟೆಗಳನ್ನು ತೆಗೆಯಲು ಶ್ರಮಿಸಿದರು. ಅವರ ಇಡೀ ದೇಹವು ಸುಟ್ಟಗಾಯಗಳಿಂದ ಗಂಭೀರವಾಗಿ ಗಾಯಗೊಂಡಿತು.
ಕೇಂದ್ರ ಸರ್ಕಾರವು 2016 ರಲ್ಲಿ ಬೋಸ್ಗೆ ಸಂಬಂಧಿಸಿದ ಹಲವಾರು ಕಡತಗಳನ್ನು ಬಹಿರಂಗ ಮಾಡಿತ್ತು, ಮತ್ತು 2017 ರಲ್ಲಿ ಮಾಹಿತಿ ಹಕ್ಕು (ಆರ್ಟಿಐ) ಪ್ರತಿಕ್ರಿಯೆಯಲ್ಲಿ ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ದೃಪಡಿಸಿದೆ.
2019 ರಲ್ಲಿ, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಆಗಸ್ಟ್ 18 ಅನ್ನು ನೇತಾಜಿಯವರ ಸಾವಿನ ದಿನಾಂಕವೆಂದು ಘೋಷಿಸಿತು ಆದರೆ ಅದನ್ನೂ ವಿರೋಧಿಸಲಾಯಿತು. ಪ್ರತಿಭಟನೆಯ ನಂತರ ಪಿಐಬಿ ಟ್ವೀಟ್ ಅನ್ನು ಹಿಂಪಡೆಯಬೇಕಾಯಿತು.
ಬೋಸ್ ಕುಟುಂಬದ ಒಂದಷ್ಟು ಜನ ಸದಸ್ಯರು ಆಗಸ್ಟ್ 18, 1945 ರಂದು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು ಎಂದು ನಂಬಿದ್ದಾರೆ, ಒಂದಷ್ಟು ಜನ ಕುಟುಂಬಸ್ಥರು ಇದನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಹೆಚ್ಚಿನ ವಿಚಾರಣೆಗೆ ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ