ಟಿಪ್ಪು ಓರ್ವ ದೇಶಭಕ್ತ, ವೀರ ಸೇನಾನಿ ಎಂದು ಹೆಚ್‌. ವಿಶ್ವನಾಥ್ ಸತ್ಯವನ್ನೇ ಹೇಳಿದ್ದಾರೆ; ಈಶ್ವರ ಖಂಡ್ರೆ

ರಾಜ್ಯ ಬಿಜೆಪಿ ಸರ್ಕಾರ ಇತ್ತೀಚೆಗೆ ಶಾಲಾ-ಕಾಲೇಜು ಪಠ್ಯದಿಂದ ಟಿಪ್ಪು ಸುಲ್ತಾನ್‌ ಕುರಿತು ಪಾಠಕ್ರಮಗಳನ್ನು ತೆಗೆಯಲು ಮುಂದಾಗಿದೆ. ಆದರೆ, ಇದೇ ವೇಳೆ ಸ್ವತಃ ಬಿಜೆಪಿ ನಾಯಕ ಹೆಚ್‌. ವಿಶ್ವನಾಥ್‌, ಟಿಪ್ಪು ಓರ್ವ ಅಪ್ರತಿಮ ದೇಶಭಕ್ತ ಎಂದು ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಮತ್ತೆ ಟಿಪ್ಪು ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

news18-kannada
Updated:August 26, 2020, 3:11 PM IST
ಟಿಪ್ಪು ಓರ್ವ ದೇಶಭಕ್ತ, ವೀರ ಸೇನಾನಿ ಎಂದು ಹೆಚ್‌. ವಿಶ್ವನಾಥ್ ಸತ್ಯವನ್ನೇ ಹೇಳಿದ್ದಾರೆ; ಈಶ್ವರ ಖಂಡ್ರೆ
ಈಶ್ವರ ಖಂಡ್ರೆ.
  • Share this:
ಬೆಂಗಳೂರು (ಆಗಸ್ಟ್‌ 26); ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್‌ ವೀರ ಸೇನಾನಿ, ಬ್ರಿಟೀಷರ ವಿರುದ್ಧ ಹೋರಾಡಿದ ಅಪ್ರತಿಮ ಸ್ವತಂತ್ಯ್ರ ಹೋರಾಟಗಾರ. ಆದರೆ, ಬಿಜೆಪಿ ಸರ್ಕಾರ ಇತಿಹಾಸ ತಿರುಚುವ ಕೆಲಸಕ್ಕೆ ಮುಂದಾಗಿದೆ. ಈ ನಡುವೆ ಹೆಚ್‌. ವಿಶ್ವನಾಥ್‌ ಕೊನೆಗೂ ಟಿಪ್ಪು ಕುರಿತು ಸತ್ಯವನ್ನೇ ಹೇಳಿದ್ದಾರೆ. ಹೀಗಾಗಿ ಅವರ ಮಾತಿಗೆ ನನ್ನ ಬೆಂಬಲ ಇದೆ ಎಂದು ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಇತ್ತೀಚೆಗೆ ಶಾಲಾ-ಕಾಲೇಜು ಪಠ್ಯದಿಂದ ಟಿಪ್ಪು ಸುಲ್ತಾನ್‌ ಕುರಿತು ಪಾಠಕ್ರಮಗಳನ್ನು ತೆಗೆಯಲು ಮುಂದಾಗಿದೆ. ಆದರೆ, ಇದೇ ವೇಳೆ ಸ್ವತಃ ಬಿಜೆಪಿ ನಾಯಕ ಹೆಚ್‌. ವಿಶ್ವನಾಥ್‌, "ಟಿಪ್ಪು ಓರ್ವ ಅಪ್ರತಿಮ ದೇಶಭಕ್ತ" ಎಂದು ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಮತ್ತೆ ಟಿಪ್ಪು ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಮಾತನಾಡಿರುವ ಈಶ್ವರ ಖಂಡ್ರೆ, "ವಿಶ್ವನಾಥ್ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಬಿಜೆಪಿಯವರು ಸತ್ಯ ಮರೆಮಾಚುವ ಕೆಲಸವನ್ನು ಮಾಡುತ್ತಿದ್ದಾರೆ. ಟಿಪ್ಪು ಒಬ್ಬ ದೇಶ ಭಕ್ತ , ವೀರ ಸೇನಾನಿ. ಟಿಪ್ಪು ನಿರ್ಮಾಣ ಮಾಡಿರುವ ದೇವಸ್ಥಾನ ಮತ್ತು ಕೋಟೆಗಳನ್ನುಗಳನ್ನು ನಾಶಮಾಡಲು ಆಗುತ್ತಾ? ಬ್ರಿಟೀಷರ ವಿರುದ್ಧ ಅವರು ಹೋರಾಡಿದ್ದನ್ನು ಸುಳ್ಳು ಎಂದು ಹೇಳಲಾಗುತ್ತದೆಯೇ? ಬಿಜೆಪಿ ನಾಯಕರು ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ, ವಿಶ್ವನಾಥ್ ಸತ್ಯವನ್ನು ಹೇಳಿದ್ದಾರೆ ಹಾಗಾಗಿ ನಾನು ವಿಶ್ವನಾಥ್ ಹೇಳಿಕೆಯನ್ನು ಬೆಂಬಲಿಸುವೆ" ಎಂದಿದ್ದಾರೆ.

ಇದನ್ನೂ ಓದಿ : ಡಿಜೆ ಹಳ್ಳಿ ಗಲಭೆ ಪ್ರಕರಣ; 9 ಕೇಸ್ ಗಳ ಪೈಕಿ 2 ಕೇಸ್ ಸಿಸಿಬಿ ಪೊಲೀಸರಿಗೆ ಹಸ್ತಾಂತರ

ಇದೇ ಸಂದರ್ಭದಲ್ಲಿ ಡಿ.ಜೆ. ಹಳ್ಳಿ ಗಲಭೆ ಪ್ರಕರಣವನ್ನೂ ಉಲ್ಲೇಖಿಸಿರುವ ಈಶ್ವರ ಖಂಡ್ರೆ, "ಈ ಗಲಭೆಯ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು.  ಗಲಾಟೆಯಿಂದ ಯಾರಿಗೆ ಲಾಭವಾಗುತ್ತದೆ ಎಂಬುದರ ಕುರಿತು ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು. ಎಸ್ ಡಿಪಿಐ ಬಿಜೆಪಿಯ ಒಂದು ಬಿ- ಟೀಂನಂತೆ ವರ್ತಿಸುತ್ತಿದೆ. ಹೀಗಾಗಿ ಈ ಗಲಭೆಯ ತನಿಖೆ ನಡೆದು ಸತ್ಯ ಹೊರಬರಬೇಕು" ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್​​ ಶಾಸಕ ಅಖಂಡ ಶ್ರೀನಿವಾಸ್‌ ಸಂಬಂಧಿ ನವೀನ್‌ ಎಂಬಾತ ಫೇಸ್​​ಬುಕ್​​ನಲ್ಲಿ ಮುಸ್ಲಿಂ ಸಮುದಾಯ ವಿರೋದ್ದವಾಗಿ ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರ ಕುರಿತು ಅಶ್ಲೀಲಕರವಾದ ಪೋಸ್ಟ್ ಒಂದನ್ನು​​ ಹಾಕಿದ್ದರು. ಇದರಿಂದ ಕ್ಲೇಷಗೊಂಡಿದ್ದ ಕಿಡಿಗೇಡಿಗಳ ಗುಂಪೊಂದು ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಕಳೆದ ಆಗಸ್ಟ್‌ 11ರ ಮಂಗಳವಾರ ತಡರಾತ್ರಿ ಗಲಭೆ ನಡೆಸಿತ್ತು. ಅಲ್ಲದೆ, ಈ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮತ್ತು ನವೀನ್‌‌ ಮನೆಗಳಿಗೆ ಬೆಂಕಿ ಹಾಕಲಾಗಿತ್ತು. ಈ ಪ್ರಕರಣದ ತನಿಖೆ ಪ್ರಸ್ತುತ ಪ್ರಗತಿಯಲ್ಲಿದೆ.
Published by: MAshok Kumar
First published: August 26, 2020, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading