Tipu Sultan Vs Veer Savarkar: ಟಿಪ್ಪು V/s ಸಾವರ್ಕರ್ ಫೋಟೋ ಕಿಚ್ಚು; ಶಿವಮೊಗ್ಗದಲ್ಲಿ 144 ಸೆಕ್ಷನ್, ಶಾಲಾ-ಕಾಲೇಜುಗಳಿಗೆ ರಜೆ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದು, ಸಾರ್ವಕರ್ ಟೀಕೆ ಸರಿಯಲ್ಲ, ಇದು ರಾಷ್ಟ್ರ ವಿರೋಧಿ ಕೃತ್ಯ, ಶಿವಮೊಗ್ಗದಲ್ಲಿ ಯುವಕನ ಮೇಲೆ ಹಲ್ಲೆಯಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಅಂತ ಹೇಳಿದ್ರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಭಾವಚಿತ್ರ (Veer Savrkar Photo) ಇಡುವ ವಿಚಾರಕ್ಕೆ ಮತ್ತೆ ಘರ್ಷಣೆಯಾಗಿದೆ. ಅಮೀರ್ ಅಹಮದ್ ಸರ್ಕಲ್‌ನಲ್ಲಿ ಎರಡು ಕೋಮಿನ ನಡುವೆ ಜಟಾಪಟಿ ನಡೆದಿತ್ತು. ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ (Tipu Sultan Photo) ಇಡಲು ಒಂದು ಗುಂಪು ಮುಂದಾಗಿತ್ತು. ಪೊಲೀಸರು (Police) ಇದಕ್ಕೆ ಅವಕಾಶ ಕೊಡಲಿಲ್ಲ. ಈ ವೇಳೆ ಎರಡು ಕೋಮಿನ ನಡುವೆ ಜಟಾಪಟಿ ನಡೆಯಿತು. ಘರ್ಷಣೆಯಲ್ಲಿ ಓರ್ವ ಯುವಕನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವಕನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್‌ ಮಾಡಿದ್ರು. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ 144 ನಿಷೇದಾಜ್ಞೆ (Section 144) ಜಾರಿಗೊಳಿಸಲಾಗಿದೆ. ಇನ್ನು ಸ್ಥಳದಲ್ಲೇ ಪೊಲೀಸರು ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಡ್ತಿದ್ದಾರೆ. ಇನ್ನು ಮುಂಜಾಗ್ರತವಾಗಿ ಇಂದು ಶಿವಮೊಗ್ಗ, ಭದ್ರಾವತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮೆಗ್ಗಾನ್ ಆಸ್ಪತ್ರೆಗೆ ಸಚಿವರಾದ ನಾರಾಯಣಗೌಡ, ಆರಗ ಜ್ಞಾನೇಂದ್ರ ಭೇಟಿ ನೀಡಿ, ಚಾಕು ಇರಿತಕ್ಕೆ ಒಳಗಾದ ಯುವಕನ ಯೋಗಕ್ಷೇಮ ವಿಚಾರಿಸಿದ್ರು. ಈ ವೇಳೆ ಮಾತನಾಡಿದ ಸಚಿವ ನಾರಾಯಣಗೌಡ, ಗಲಾಟೆ ಆಗಿದ್ದೇ ಬೇರೆ ಕಡೆ, ಚಾಕು ಇರಿತವಾಗಿದ್ದೇ ಬೇರೆ ಕಡೆ. ಚಾಕು ಹಾಕಿಸಿಕೊಂಡ ವ್ಯಕ್ತಿಗೆ ಯಾವುದೇ ಪ್ರಾಣಾಪಾಯವಿಲ್ಲ. ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಅಂತ ಹೇಳಿದ್ರು. ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಜೀವಕ್ಕೆ ಯಾವುದೇ ತೊಂದರೆ ಇಲ್ಲ ಹೇಳಿದ್ರು.

ಚಾಕು ಇರಿತ ಪ್ರಕರಣ, ಇಬ್ಬರ ಬಂಧನ

ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಅಂತ ADGP ಅಲೋಕ್ ಕುಮಾರ್ ಹೇಳಿದ್ದಾರೆ. ಸಾವರ್ಕರ್ ಫೋಟೋ ವಿಚಾರವಾಗಿ ಗಲಾಟೆಯಾಗಿದೆ. ಘರ್ಷಣೆಯಲ್ಲಿ ಪ್ರೇಮ್ ಸಿಂಗ್‌ಗೆ ಚಾಕು ಇರಿಯಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮೂರು ದಿನ ಹಿಂಬದಿ ಸವಾರರಿಗೆ ಅವಕಾಶ ಇಲ್ಲ, ಪರಿಸ್ಥಿತಿ ನೋಡಿಕೊಂಡು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ರು.

Tipu Sultan Vs Veer Savarkar Section 144 imposed in Shivamogga city mrq
ಸಾಂದರ್ಭಿಕ ಚಿತ್ರ


ಫ್ಲೆಕ್ಸ್​ಗಳ ತೆರವು

ಶಿವಮೊಗ್ಗದಲ್ಲಿ ಫ್ಲೆಕ್ಸ್ ಹಾಕುವ ವಿಚಾರಕ್ಕೆ ಗಲಾಟೆ ನಡೀತಿತ್ತಂತೆ ಪಾಲಿಕೆ ಫುಲ್ ಅಲರ್ಟ್‌ ಆಗಿದೆ. ಗಲಾಟೆಯಿಂದ ಕೊನೆಗೂ ಎಚ್ಚೆತ್ತ ಶಿವಮೊಗ್ಗ ಮಹಾನಗರ ಪಾಲಿಕೆ, ಹಲವೆಡೆಗಳಲ್ಲಿ ಹಾಕಿದ್ದ ಫ್ಲೆಕ್ಸ್‌ಗಳ ತೆರವುಗೊಳಿಸಿದ್ರು. ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚನೆ ಮೇರೆಗೆ ಪಾಲಿಕೆಯ ಸುಮಾರು 80 ಸಿಬ್ಬಂದಿಗಳಿಂದ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೀತು. ಇನ್ನು ಸ್ಥಳದಲ್ಲೇ ನಿಂತು ಪಾಲಿಕೆ ಆಯುಕ್ತ ಮಾಯಣ್ಣಗೌಡ ಫ್ಲೆಕ್ಸ್ ತೆರವುಗೊಳಿಸಿದ್ರು.

ಚಾಕು ಇರಿತಕ್ಕೊಳಗಾದ ಯುವಕನ ಸ್ನೇಹಿತನ  ಹೇಳಿಕೆ

ಚಾಕು ಇರಿತಕ್ಕೆ ಒಳಗಾದ ಪ್ರೇಮ್ ಸಿಂಗ್ ಸ್ನೇಹಿತರ ಸರವಣ ನ್ಯೂಸ್‌18 ಜೊತೆಗೆ ಮಾತನಾಡಿದ್ದು, ಘಟನೆ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಶಿವಮೊಗ್ಗದಲ್ಲಿ ಗಲಾಟೆಯಾಗ್ತಿದ್ರಿಂದ ಮೂರು ಗಂಟೆಗೆ ಅಂಗಡಿ ಕ್ಲೋಸ್ ಮಾಡಿದ್ದೇವು. ಅಂಗಡಿ ಕ್ಲೋಸ್ ಮಾಡಿ ಮನೆಗೆ ಹೋಗುವಾಗ 8 ರಿಂದ 10 ಜನರ ತಂಡ ನಮ್ಮ ಮೇಲೆ ಅಟ್ಯಾಕ್‌ಮಾಡಿತು. ಮೊದಲು ನನ್ನ ಮೇಲೆ ಹಲ್ಲೆ ನಡೆಸಲಾರಂಭಿಸಿದರು.

ಆಗ ನಾನು ಅವರಿಂದ ತಪ್ಪಿಸಿಕೊಂಡು ಬಜಾರ್ ಕಡೆ ಓಡಿ ಹೋದೆ. ಬಳಿಕ ನನ್ನ ಹಿಂದೆ‌ ಬರುತ್ತಿದ್ದ ಪ್ರೇಮ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ರು. ನೋಡ ನೋಡುತಿದ್ದಂತೆಯೇ ಪ್ರೇಮ್‌ ಸಿಂಗ್‌ಗೆ ಚಾಕುವಿನಿಂದ ಇರಿದ್ರು. ನಾನು ಕೂಡಲೇ ಅಂಗಡಿ ಮಾಲೀಕರಿಗೆ ಫೋನ್ ಮಾಡಿದೆ. ಸ್ಥಳಕ್ಕೆ ಮಾಲೀಕರು ಬಂದು ಪ್ರೇಮ್ ಸಿಂಗ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ರು ಅಂತ ಹೇಳಿದ್ರು.

ಸಾವರ್ಕರ್ ಟೀಕೆ ಸರಿಯಲ್ಲ, ಇದು ರಾಷ್ಟ್ರ ವಿರೋಧಿ ಕೃತ್ಯ

ಶಿವಮೊಗ್ಗದಲ್ಲಿ ಓರ್ವನಿಗೆ ಚಾಕು ಇರಿತವಾಗಿದೆ. ಪ್ರಕರಣ ಸಂಬಂಧ ಹಲವರನ್ನು ಬಂಧಿಸಿ ವಿಚಾರಣೆ ಮಾಡಲಾಗ್ತಿದೆ ಅಂತ ಗೃಹ ಸಚಿವ ಆಗರ ಜ್ಞಾನೇಂದ್ರ ಹೇಳಿದ್ರು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದು, ಸಾರ್ವಕರ್ ಟೀಕೆ ಸರಿಯಲ್ಲ, ಇದು ರಾಷ್ಟ್ರ ವಿರೋಧಿ ಕೃತ್ಯ, ಶಿವಮೊಗ್ಗದಲ್ಲಿ ಯುವಕನ ಮೇಲೆ ಹಲ್ಲೆಯಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಅಂತ ಹೇಳಿದ್ರು.

ಇನ್ನು ಉಡುಪಿಯಲ್ಲಿ ಮಾತನಾಡಿದ ಸಚಿವ ಸುನಿಲ್ ಕುಮಾರ್, ಸಾವರ್ಕರ್ ಭಾವಚಿತ್ರಕ್ಕೆ ವಿರೋಧ ಪೂರ್ವ ನಿಯೋಜಿತ ಕೃತ್ಯ, ಸಣ್ಣ ಘಟನೆ ಇಟ್ಟುಕೊಂಡು ಅಶಾಂತಿ ಸೃಷ್ಟಿಸಲು ಪಿಎಫ್ಐ ಸಂಘಟನೆ ಯತ್ನಿಸುತ್ತಿದೆ ಅಂತ ಆರೋಪಿಸಿದ್ರು.

Tipu Sultan Vs Veer Savarkar Section 144 imposed in Shivamogga city mrq
ಸಾಂದರ್ಭಿಕ ಚಿತ್ರ


ಕಠಿಣ ಕ್ರಮಕ್ಕೆ ಸಿಎಂ ಬೊಮ್ಮಾಯಿ ಆದೇಶ

ಶಿವಮೊಗ್ಗ ಗಲಾಟೆ ಹಿಂದೆ ಪಿತೂರಿ ಇದೆ ಅಂತ ಬಿಜೆಪಿ ಎಂಎಲ್‌ಸಿ ರವಿ ಕುಮಾರ್ ಆರೋಪಿಸಿದ್ದಾರೆ. ಸರ್ದಾರ್ ಪಟೇಲ್ ನಂತರ ದೊಡ್ಡ ಸ್ವಾತಂತ್ರ್ಯ ವೀರ ಇದ್ದರೆ ಅದು ಸಾವರ್ಕರ್. ಮಹಾನ್ ಸ್ವಾತಂತ್ರ ಹೋರಾಟಗಾರನಿಗೆ ಅಪಮಾನ ಆಗಿದೆ. ಭಾವಚಿತ್ರ ಕಿತ್ತು ಹಾಕಿದ್ದಾರೆ. ಇದು ದೇಶದ್ರೋಹದ ಕೃತ್ಯ. ಕೂಡಲೇ ಆರೋಪಿಗಳನ್ನ ಬಂಧಿಸಬೇಕು ಅಂತ ರವಿ ಕುಮಾರ್ ಆಗ್ರಹಿಸಿದ್ರು. ಇನ್ನು ಸಿಎಂ ಬೊಮ್ಮಾಯಿ ರಿಯಾಕ್ಟ್‌ ಮಾಡಿದ್ದು, ಯಾರೇ ತಪ್ಪು ಮಾಡಿದ್ರೂ ಕಠಿಣ ಕ್ರಮ ಕೈಗೊಳ್ಳುವ ಆದೇಶ ಮಾಡಿದ್ದೇನೆ ಅಂತ ಹೇಳಿದ್ರು.

ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಶಿವಮೊಗ್ಗದಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಸಮಜಘಾತುಕ ಶಕ್ತಿಗಳಿಗೆ ಸರ್ಕಾರದ ಭಯವಿಲ್ಲ, ಕೋಮುವಾದಿಗಳ ಕೈಯಲ್ಲಿ ಸರ್ಕಾರವಿದೆ. ಈ ಗೃಹಮಂತ್ರಿ ಬಿಗಿ ಇಲ್ಲ, ಆಡಳಿತವೂ ಬಿಗಿ ಇಲ್ಲ, ಕಾನೂನು, ಪೊಲೀಸ್ ಇಲಾಖೆ ಭಯವಿಲ್ಲದೇ ಇರುವುದೇ ಇಂತಹ ಘಟನೆ ನಡೆಯಲು ಕಾರಣ ಅಂತ ಕಾಂಗ್ರೆಸ್ ನಾಯಕರು ಆರೋಪಿಸಿದ್ರು.
Published by:Mahmadrafik K
First published: