ಟಿಪ್ಪು ಇತಿಹಾಸವನ್ನು ಈ ವರ್ಷ ಪಠ್ಯ ಪುಸ್ತಕದಿಂದ ಕೈಬಿಡಲಾಗುವುದಿಲ್ಲ; ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

ಬಿಜೆಪಿ ನಾಯಕರು ಆರಂಭದಿಂದಲೂ ಟಿಪ್ಪು ಸುಲ್ತಾನ್ ವಿರುದ್ಧ ವಾದ ಮಂಡಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿ ವಿರುದ್ಧವಾಗಿ ದೊಡ್ಡ ಮಟ್ಟದ ಜನ ಹೋರಾಟವನ್ನೇ ರೂಪಿಸಿದ್ದರು. ಅಲ್ಲದೆ, ತಾವು ಅಧಿಕಾರಕ್ಕೆ ಬಂದರೆ ಶಾಲಾ ಪಠ್ಯದಿಂದ ಟಿಪ್ಪು ಇತಿಹಾಸವನ್ನು ಕೈಬಿಡುವುದಾಗಿಯೂ ತಿಳಿಸಿದ್ದರು.

ಶಿಕ್ಷಣ ಸಚಿವ ಸುರೇಶ್ ಕುಮಾರ್.

ಶಿಕ್ಷಣ ಸಚಿವ ಸುರೇಶ್ ಕುಮಾರ್.

  • Share this:
ಬೆಂಗಳೂರು (ಜನವರಿ 20); ಪ್ರಸ್ತುತ ವರ್ಷದ ಶಾಲಾ ಪಠ್ಯ ಪುಸ್ತಕದ ಟೆಂಡರ್ ಮುಗಿದಿದೆ. ಹೀಗಾಗಿ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಇತಿಹಾಸವನ್ನು ಕೈಬಿಡಲಾಗುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ನಾಯಕರು ಆರಂಭದಿಂದಲೂ ಟಿಪ್ಪು ಸುಲ್ತಾನ್ ವಿರುದ್ಧ ವಾದ ಮಂಡಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿ ವಿರುದ್ಧವಾಗಿ ದೊಡ್ಡ ಮಟ್ಟದ ಜನ ಹೋರಾಟವನ್ನೇ ರೂಪಿಸಿದ್ದರು. ಅಲ್ಲದೆ, ತಾವು ಅಧಿಕಾರಕ್ಕೆ ಬಂದರೆ ಶಾಲಾ ಪಠ್ಯದಿಂದ ಟಿಪ್ಪು ಇತಿಹಾಸವನ್ನು ಕೈಬಿಡುವುದಾಗಿಯೂ ತಿಳಿಸಿದ್ದರು.

ಈ ಕುರಿತು ಇಂದು ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, “ಶಾಸಕ ಅಪ್ಪಚ್ಚು ರಂಜನ್ ಮೂರು ತಿಂಗಳ ಹಿಂದೆಯೇ ಈ ಕುರಿತು ಬರೆದಿದ್ದರು. ಟಿಪ್ಪು ಬಗ್ಗೆ ಸಾಕಷ್ಟು ದಾಖಲೆಗಳನ್ನು ನೀಡಿದ್ದರು. ಡಿಎಸ್ಇಆರ್​ಟಿ ಅಧಿಕಾರಿಗಳ ಜೊತೆಗೂ ಸಭೆ ನಡೆಸಲಾಗಿದೆ. ಆದರೆ, ಈ ಬಾರಿ ಪಠ್ಯ ಪುಸ್ತಕದ ಟೆಂಡರ್ ಅವಧಿ ಮುಗಿದಿರುವ ಕಾರಣ ಈ ವರ್ಷ ಟಿಪ್ಪು ಇತಿಹಾಸ ಹಾಗೆಯೇ ಮುಂದುವರೆಯಲಿದೆ.

ಆದರೆ, ಮುಂದಿನ ವರ್ಷ ಪಠ್ಯದಲ್ಲಿ ಟಿಪ್ಪುವಿನ ಎರಡು ಮುಖಗಳನ್ನು ಮುದ್ರಿಸುವ ಬಗ್ಗೆ ಯೋಚಿಸುತ್ತೇವೆ. ಯಾವುದೇ ಪಾತ್ರದ ಬಗ್ಗೆ ಸಮತೋಲನ ಚಿತ್ರ ಇರಬೇಕು. ಹೀಗಾಗಿ ಈ ಕುರಿತು ಬದಲಾವಣೆ ಮಾಡಬೇಕೋ? ಬೇಡವೋ? ಎಂಬುದನ್ನು ಸಮಿತಿಗೆ ಬಿಟ್ಟಿದ್ದೇವೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣವನ್ನು ಶೀಘ್ರದಲ್ಲೇ ಬೇಧಿಸಲಾಗುವುದು; ಕಮಿಷನರ್ ಡಾ.ಹರ್ಷ ವಿಶ್ವಾಸ
First published: